ಬರದೋರು :   ಶರ್ಮಪ್ಪಚ್ಚಿ    on   17/01/2018    2 ಒಪ್ಪಂಗೊ

ಪಂಕಜ ರಾಮ ಭಟ್
ಪಂಕಜ ರಾಮ ಭಟ್
ತೋಡು

 

ಎನ್ನ ಅಪ್ಪನ ಮನೆ 
ಕೊಡಕ್ಕಲ್ಲು ಅದರ 
ತೋಟದ  ಮಧ್ಯಲ್ಲಿ
ಇದ್ದೊಂದು  ತೋಡು

 ಮಳೆಗಾಲಲ್ಲಿ ತುಂಬಿ
ಹರಿಯುತ್ತು ಅದು
ಹರಿವ ನೀರಿನ ಒಟ್ಟಿಂಗೆ  
ತೇಲಿ ಹೋಪ ಅಡಕೆ ತೆಂಗು 

ನೋಡಿಗೊಂಡಿದ್ದರೆ
ತಲೆ ತಿರುಗುತ್ತು
ಅದಕ್ಕೆ ಹಾಕಿದಅಡಕ್ಕೆ
ಮರದ  ಸಂಕ

ಅದರಲ್ಲಿ  ನಡಕೊಂಡು
ಹೋಪದೊಂದು ಸರ್ಕಸ್
ಬೇಕು ನಡವಗ ಬ್ಯಾಲೆನ್ಸ್
ತಪ್ಪಿದರೆ ಬಿದ್ದು ಕೊಚ್ಚಿ ಹೋಕು

ಪೇಟೆ  ಜನಕ್ಕದರಲ್ಲಿ
ಹೋಪಲೆಡಿಯ
ಅವು ನಡಗದರಲ್ಲಿ 
ನಾಕು ಕಾಲಿನ ಪ್ರಾಣಿಯ ಹಾಂಗೆ

ಹರಿವ ನೀರಿಲಿ ಕಾಲು
ಮಡುಗುವ ಚಂದ
ಸಣ್ಣ ಸಣ್ಣ  ಮೀನುಗ
ಹೋಪ ಚೆಂದ

ಕಾಲಿಂಗೆ  ಅವು ಕಚ್ಚುವಗ
ಅಪ್ಪ ಕಚಗುಳಿಯ ಆನಂದ
ಈಗಿಲ್ಲೆ ಆ ಎಲ್ಲ  ಚಂದ
ಮಳೆಯ ಕೊರತೆಂದ

~~~~***~~~~

-ಪಂಕಜರಾಮ್

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ತೋಡು

  1. ಅಂದಿಂಗೆ ಅದುವೇ ಚೆಂದ
    ಅದರ ನೆಂಪು ಕೊಡುತ್ತು
    ಇಂದು ಆನಂದ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×