ವಿಷುಕಣಿ
-ಪಂಕಜರಾಮ್
ಅಂದೆಲ್ಲಾ ಹಳ್ಳಿಲಿ ವಿಷುವಿನ
ಸಂಭ್ರಮ ಉದಿಯಪ್ಪಗಳೇ
ಎದ್ದು ಮೀಯಣ
ಮನೆಸುತ್ತುಮುತ್ತಲಿನ compra orologi replica
ಹಣ್ಣುಹೂಗು ದೇವರ ಕೋಣೆಲಿ
ಮಣೆ ಮೇಲೆ ಮಡುಗಿ
ಚಂದಕ್ಕೆ ಸುತ್ತೆಲ್ಲ ರಂಗೋಲಿ
ಹಾಕಿ. ಅಪ್ಪಯ್ಯ ತಂದ
ಹೊಸಅಂಗಿ ಮುಟ್ಟಿ ನೋಡಿ
ಆಳುಗ ಎಲ್ಲಾ ತಪ್ಪ ಕಣಿ ನೋಡಿ
ದೇವರ ಕೋಣೆಲಿ ಅದರ
ಸಾಲಾಗಿ ಮಡುಗಿ
ದೇವರು ಹಿರಿಯರಿಂಗೆ ಹೊಡಾಡಿ
ಅಪ್ಪ ಕೊಟ್ಟ ಹೊಸ ಅಂಗಿ
ಹಾಕಿ ಊರಿಡಿ ಕುಶಿಲಿ ತಿರುಗಿ
ಅಮ್ಮಮಾಡಿದ ಬೀಜಪಾಯಸ
ತಿಂದು ಅಪ್ಪಚ್ಚಿ ಒಟ್ಟಿಂಗೆ
ಸಂತೆ ತಿರುಗಿ ಕುಶಿಲಿ ದಿನ ಕಳುದ ನೆಂಪು
ಈಗ ಎಲ್ಲಿದ್ದು ಅಷ್ಟೆಲ್ಲಾ ಸಂಭ್ರಮ
ಹೊಸ ವಸ್ತ್ರಕ್ಕೆ ವಿಶುವಿನ ಕಾವಲಿಲ್ಲೇ
ಬೇಕಪ್ಪಗ ಅಂಗಡಿಗೆ ನುಗ್ಗಿ
ತೆಗದು ಸುತ್ತಿ ಆತು
ಪಾಯಸ ಈಗ ಆರಿಂಗೂ
ಬೇಡ ಹೆಚ್ಚಿನೋರಿಂಗೆ
ಇದ್ದು ಸೀವು ರೋಗ
ಹಾಂಗಾಗಿ ವಿಷು ಕಣಿ
ಆಚರಣೆ ಅಪರೂಪಆತು
ಹೋಟೆಲಿಲಿ ಹೋಗಿ ತಿಂದು ಬಂದರಾತು
-ಪಂಕಜರಾಮ್
ಇವರ ಮೂಲ ನಮ್ಮ ಬೈಲಿನ ಹಳೆಮನೆಲಿ ಆದರೂ, ಇಪ್ಪದು ಕೊಡೆಯಾಲಲ್ಲಿ!
ಅಂದೇ ಕೊಡೆಯಾಲಕ್ಕೆ ಹೋಗಿ ಹೊಸಾಮನೆ ಕಟ್ಟಿ ಕೂದರುದೇ, ಕೆಲವು ಜೆನ ಇವರ ಹಳೆಮನೆಅಪ್ಪಚ್ಚಿ ಹೇಳಿಯೇ ಹೇಳುದು, ಪಾಪ! ಹಾಂಗಾಗಿ ಎಂಗೊ – ಬೈಲಿನವು ಎಲ್ಲ ಶರ್ಮಪ್ಪಚ್ಚಿ ಹೇಳುದು..
ಆರಿಂಗೂ ಬೇಜಾರಪ್ಪಲಾಗ ಅಲ್ಲದೋ! 😉
ಕೊಡೆಯಾಲಲ್ಲಿ ಹೊಸಮನೆ ಕಟ್ಟಿ, ನೆಮ್ಮದಿಯ ಜೀವನ ಮಾಡ್ತಾ ಇದ್ದವು.
ಈಗ ಬೆಂಗುಳೂರಿಲಿ ಮಗಳ ಮನೆ ಇದ್ದಿದಾ, ನೆಂಪಪ್ಪಗ ಅಲ್ಲಿಗೆ ಹೋಗಿರ್ತವು.
ಎಲ್ಯಾರು ಹೆರ ಹೋಪಗ – ಬಪ್ಪಗ ಕಿಸೆಲಿ ಒಂದು ಕೆಮರ ಮಡಿಕ್ಕೊಂಬ ಅಬ್ಯಾಸ ಅವಕ್ಕೆ – ಹಳೆಮನೆಯ ನೀರಿಲೇ ಕೆಮರದ ಗುಣ ಇದ್ದೋ – ಉಮ್ಮಪ್ಪ!
ಹಾಂಗೆ, ಈ ಸರ್ತಿ – ಹೋಪಗ ಟಿಕೇಟು ಸಿಕ್ಕಿದ್ದಿಲ್ಲೆಡ – ಬಂದದು ರೈಲಿಲಿ, ಒಚ್ಚಿಯೋಂಡು!
ಚೋಲಿಪ್ಪ ಕಡ್ಳೆ ತಿಂಬದರ ಎಡೇಡೆಲಿ ಕೆಲವು ಚೆಂದದ ಪಟಂಗಳನ್ನುದೇ ತೆಗದ್ದವು.
ನಮ್ಮ ಬೈಲಿಂಗೆ ಕಳುಸಿಕೊಟ್ಟು – ಎಲ್ಲರೂ ನೋಡಲಿ ಹೇಳಿದವು.ಕೆಲಾವು ಶುದ್ದಿಗೊಕ್ಕೆ ಒಪ್ಪಕೊಟ್ಟೋಂಡು ನಮ್ಮ ಬೈಲಿಂಗೆ ಪರಿಚಯ ಆದ್ದಲ್ಲದ್ದೇ, ಶುದ್ದಿಯನ್ನುದೇ ಹೇಳಿ ಬೈಲಿನ ಸಾಹಿತ್ಯ ಕೃಶಿಲಿ ಭಾಗಿ ಆಯಿದವು.
ಇನ್ನು ಮುಂದೆಯೂ ಶುದ್ದಿಗಳ ಹೇಳಿಗೊಂಡಿಪ್ಪ ವಿಶ್ವಾಸ ಅವರದ್ದು.
ಅವು ಹೇಳ್ತ ಶುದ್ದಿಗಳ ಕೇಳಿ, ಆ ಶುದ್ದಿಗೊಕ್ಕೆ ಒಪ್ಪ ಕೊಟ್ಟು, ಅವರ ಉತ್ಸಾಹವ ಪ್ರೋತ್ಸಾಹಿಸೆಕ್ಕು ಹೇಳ್ತದು ಒಪ್ಪಣ್ಣನ ಕೋರಿಕೆ.
Latest posts by ಶರ್ಮಪ್ಪಚ್ಚಿ
(see all)
ಲಾಯಿಕಆಯಿದು
ಆ ಕಾಲಲ್ಲಿ ಎಷ್ಟು ಜೆನ ಮಕ್ಕೊಗೆ ಹೇಳಿ ಹೊಸ ಅಂಗಿ ತಪ್ಪಲೆ ಎಡಿಗು?