- ಸಣ್ಣ ಸಂಗತಿ - February 13, 2018
- ದೇಶಸೇವೆ - August 15, 2017
- ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ - August 15, 2017
ಮೊನ್ನೆ ಆಕಾಶವಾಣಿಲಿ ರಾಜ್ ಕುಮಾರ್ ಭಾರತಿ ಹಾಡಿದ ಆಡಿಸಿದಳೆಶೋದೆ…ಪದ್ಯ ಸುಶ್ರಾವ್ಯವಾಗಿ ಕೇಳಿಕೊಂಡಿತ್ತಿದ್ದು.ಎಷ್ಟೋ ಸರ್ತಿ ಕೇಳಿದ ಪದ್ಯ.ಹೊಸತ್ತಲ್ಲ.ಆದರೆ ಮತ್ತೆ ಮತ್ತೆ ಕೇಳೆಕ್ಕು ಹೇಳುವ ಆಸಕ್ತಿ ಮೂಡಿಸುವ ಪದ್ಯ.
ಕರ್ನಾಟಕ ಸಂಗೀತದ ಪಿತಾಮಹ ಪುರಂದರ ದಾಸರ ಪದ್ಯ ಇದು.
ದಾಸರ ಪದಲ್ಲಿ ಭಕ್ತಿ ಪ್ರಧಾನ.
ಹೆಚ್ಚಿನ ಸಂಗೀತ ಪದಂಗಳೂ ಭಕ್ತಿಗೀತೆಗಳೆ.
ಆದರೆ ಸಂಗೀತಗಾರರು ಸಾಹಿತ್ಯಕ್ಕೆ ಗಮನ ಜಾಸ್ತಿ ಕೊಡುತ್ತವಿಲ್ಲೆ.ಅವಕ್ಕೆ ರಾಗ,ಲಯ,ಭಾವ ಇವ್ವೇ ಮುಖ್ಯ.
ಒಳ್ಳೆ ಸಾಹಿತ್ಯವೂ ಕೂಡಾ ಇದ್ದ ಪದ್ಯ ಆದರೆ ಚಿನ್ನದ ಹೂಗಿಂಗೆ ಪರಿಮಳ ಬಂದ ಹಾಂಗೆ!
ಈಗ ಈ ಪದ್ಯ ಅತಿ ಕಡಿಮೆ ಶಬ್ದಂಗೊ ಇಪ್ಪ ಪದ್ಯ.ತುಂಬಾ ಪದ್ಯಲ್ಲಿ ದೇವರ ಸೊಬಗು,ಸೌಂದರ್ಯ,ಕಾಂತಿ-ಇತ್ಯಾದಿಗಳನ್ನೇ ವರ್ಣಿಸಿಕೊಂಡಿರುತ್ತು.ಇದು ಹಾಂಗಲ್ಲ.
ಇಲ್ಲಿ ತೋರಿಸಿದ ಕೃಷ್ಣ ಒಬ್ಬ ಮಗು. ಅವ ಎಂತವ ಹೇಳಿ ಅವನ ಸಾಕುತಾಯಿ ಯಶೋದೆಗೆ ಗೊಂತಿಲ್ಲೆ.ಅದು ಪಾಪ-ಜಗತ್ತನ್ನೇ ಉದ್ಧಾರ ಮಾಡುವ ದೇವರನ್ನೇ ಮಗು ಹೇಳಿ ತಿಳ್ಕೊಂಡಿದು!ಇದರಲ್ಲಿ ಅದರ ಭಾಗ್ಯವ ದಾಸರು ತೋರಿಸುತ್ತವು.ಅದೇ ರೀತಿ ಅದರ ಮುಗ್ಧತೆಯನ್ನೂ ,ವ್ಯಂಗ್ಯ ಇಲ್ಲದ್ದೆ ಹೊಗಳಿದ್ದವು.[ಆಡಿಸಿದಳೆಶೋದಾ-ಜಗದೋದ್ಧಾರನ…..]ಆಡಿಸಿದಳ್+ಯಶೋದಾ….=ಆಡಿಸಿದಳೆಶೋದಾ ಆಯಿದು,ರಾಗಕ್ಕೆ,ತಾಳಕ್ಕೆ ಬೇಕಾಗಿ.
ಕೃಷ್ಣ ಸಣ್ಣ ಮಗು -ಅವನ ಸಾಮರ್ಥ್ಯ,ಸದ್ಗುಣ ಅವನಲ್ಲಿ ಸುಪ್ತವಾಗಿದ್ದು.ಯಶೋದೆಯ ಲಾಲನೆ-ಪಾಲನೆಲಿ ಬೆಳವದು ಅವಂಗೂ ಇಷ್ಟ[ಸುಗುಣಾಂತರಂಗನ….]
ವೇದ ತಿಳಿದವಕ್ಕೂ ಕೃಷ್ಣ ಸಿಕ್ಕುದು,ಅವನ ಅರ್ಥ ಮಾಡಿಕೊಂಬದು ಕಷ್ಟ-ಅವನ ಮಹಿಮೆ ಲೆಕ್ಕಕ್ಕೇ ಸಿಕ್ಕ.[ನಿಗಮಕೆ ಸಿಲುಕದ ಅಗಣಿತ ಮಹಿಮನ…..]
ಅವ ಎಂಥವ? ಮಕ್ಕಳಲ್ಲಿ ಮಾಣಿಕ್ಯದ ಹಾಂಗೆ ಇರುತ್ತವ.ಮಾಣಿಕ್ಯ ಒಂದು ಬೆಲೆಬಾಳುವ,ಅಪರೂಪದ ರತ್ನ. ಅದು ವಜ್ರದ ಹಾಂಗೆ ಕಠಿಣ ಅಲ್ಲ.ಮೊದಲಾಣ ಸಾಲಿಲಿ ಹೇಳಿದ ಹಾಂಗೆ ವೇದಕ್ಕೆ ಸಿಕ್ಕದ್ದ ಒಂದು ಅಪರೂಪದ ರತ್ನ ಈಗ ಯಶೋದೆಯ ಕೈಗೆ ಬೈಂದು.ಅದಕ್ಕೆ ಪಾಪ,ಮಗನ ಮಹಿಮೆಯ ಅರಿವಿಲ್ಲೆ….[ಮಗುಗಳ ಮಾಣಿಕ್ಯನ….]ದಾಸರು ತಮ್ಮ ಮಾತುಗಳ ಸಮರ್ಥಿಸುವ ರೀತಿಯ ನೋಡಿ.
ಭಗವಂತ ಎಲ್ಲದರಲ್ಲೂ ಇಪ್ಪವ.ಅಣುವಿಂದಲೂ ಅಣು ರೂಪಲ್ಲಿ ಇಪ್ಪವ.[ಅಣೋರಣೀಯನಾ..]ಭಗವಂತ ಎಲ್ಲರನ್ನೂ ಒಳಗೊಂಡವ.ಅವನಲ್ಲಿ ಇಲ್ಲದ್ದು ಬೇರೆಲ್ಲಿಯೂ ಇಲ್ಲೆ. ಅವ ದೊಡ್ದದರಲ್ಲಿಯೂ ದೊಡ್ದವ.[ಮಹತೋಮಹೀಯನ…]ಅವಂಗೆ ಅವನೇ ಹೋಲಿಕೆ.[ಅಪ್ರಮೇಯನ…]ಅಂತಾ ಮಹಾಮಹಿಮನ ಯಶೋದೆ ಆಡಿಸುತ್ತಾ ಇದ್ದು-ದಾಸರಿಂಗೆ ಅದೇ ಆಶ್ಚರ್ಯ!
ಕೃಷ್ಣ ಈ ಲೋಕದ ಆದಿಯ ವಿರಾಟ್ ಪುರುಷ,ಮಹಾವಿಷ್ಣು.ಪುರುಷಸೂಕ್ತಲ್ಲಿ ಹೇಳಿದ ಹಾಂಗೆ..ಸಹಸ್ರಶೀರ್ಷಾ, ಸಹಸ್ರಾಕ್ಷ,ಸಹಸ್ರಪಾತ್…ಅವ ತನ್ನ ಅವತಾರಲ್ಲಿ ಕೆಲವು ಸರ್ತಿ ಅದರ ತೋರಿಸಿದ್ದ[ಪರಮಪುರುಷನ]
ಅವ ವಸುದೇವನ ಮಗ ಆದ ಕಾರಣ ವಾಸುದೇವ-ಅಷ್ಟೆ ಅಲ್ಲ,ಮಹಾವಿಷ್ಣುಗೂ ವಾಸುದೇವ,ಪರ ವಾಸುದೇವ ಹೇಳುವ ಹೆಸರಿದ್ದು.ಧ್ರುವನ ಕತೆಲಿ ನೋಡಿ-ಋಷಿಗೊ ಧ್ರುವಂಗೆ’ಓಂ ನಮೋ ಭಗವತೇ ವಾಸುದೇವಾಯ’ ಹೇಳಿ ಮಂತ್ರ ಹೇಳಿ ಕೊಡುತ್ತವು-ಆ ಮಾಣಿ ಅದರಿಂದಲೇ ಸಿದ್ಧಿ ಹೊಂದುತ್ತ.[ಪರ ವಾಸುದೇವನ..]
ಪುರಂದರ ವಿಠಲ ಪುರಂದರ ದಾಸರ ಇಷ್ಟ ದೇವತೆ. ಅಂಕಿತ ಕೂಡ.[ಪುರಂದರ ವಿಠಲನ…]
ಹೀಂಗೆ ಅಪ್ರತಿಮವಾದ ಕಾವ್ಯಗುಣ ಇಪ್ಪ ಈ ಪದ್ಯ ‘ಕಿರಿದರೊಳ್ ಪಿರಿದರ್ಥ’ ಹೊಂದಿದ್ದು.ಇಷ್ಟೆಲ್ಲ ವಿಷಯವ ಬಹಳ ಕೆಲವೇ ಶಬ್ದಲ್ಲಿ ಹೇಳಿದ ಪುರಂದರದಾಸರ ಎಷ್ಟು ಮೆಚ್ಚಿದರೂ ಕಮ್ಮಿಯೇ.
ಚೆ೦ಬೈ ವೈದ್ಯನಾಥ ಭಾಗವತರು ಹಾಡಿದ ” ಜಗದೋದ್ಧಾರನಾ” ನಿತ್ಯನೂತನ.
ಒಳ್ಳೆ ವಿವರಣೆ, ಧನ್ಯವಾದ ಗೋಪಾಲಣ್ಣ.
ಗೋಪಾಲಣ್ಣಾ,
ಕತೆಯ ಮಾಂತ್ರ ಅಲ್ಲ, ಪದ್ಯವನ್ನುದೇ ತುಂಬಾ ಲಾಯ್ಕಲ್ಲಿ ವಿವರ್ಸಿದ್ದಿ. ಪ್ರತಿಯೊಂದು ಸಾಲಿನ ವಿವರಣೆ, ಅದರ ಹಿಂದೆ ಇಪ್ಪ ತತ್ವದ ವಿವರಣೆ ಲಾಯ್ಕಾಯಿದು. ಒಟ್ಟಿಂಗೆ ಹಾಡು ಬಂದಿದ್ದರೆ ಇನ್ನುದೇ ಶೋಕಾವುತ್ತಿತ್ತು. ನಿಂಗಳ ವಿವರಣೆಯ ಒಟ್ಟಿಂಗೆ ಹಾಡು ಕೇಳುಲಕ್ಕು ಹೇಳಿ…
ಇನ್ನುದೇ ಹೀಂಗಿಪ್ಪ ವಿವರಣೆಗೋ ಬರಲಿ ಬೈಲಿಲಿ.. ಧನ್ಯವಾದಂಗೋ.
ಎಂತ ಮಾಡುದಕ್ಕಾ,ಕಂಪ್ಯೂಟರ್ ನ ವಿಷಯ ಎನಗೆ ಸರಿಯಾಗಿ ಬತ್ತಿಲ್ಲೆ.
ಜಗದೋದ್ಧಾರನ ಆಡಿಸಿದಳೆಶೋದಾ…ಆಹಾ…ಈ ಪದ್ಯವ ಯೆಷ್ಟು ಸರ್ತಿ ಕೇಳಿರೂ ಬೊಡಿಯ..ಪ್ರತಿ ಸರ್ತಿ ಕೇಳುವಾಗಳು ಅಪ್ಪ ಖುಶಿಯೇ ಬೇರೆ. ಅದು ಇಷ್ಟು ಲಾಯಿಕದ ಸಾಹಿತ್ಯ೦ದಾಗಿಯೊ ಅಥವ ಕಾಪಿ ರಾಗಕ್ಕೆ ಇದರ ಜೋಡುಸಿದ ಚೆ೦ದವೋ… ಎ೦ತರ೦ದ ಹೇಳಿ ಎನಗೆ ಗೊ೦ತಾವ್ತಿಲ್ಲೆ
ಅರ್ಥವ ವಿವರ್ಸಿದ್ದು ಲಾಯಿಕಾಯಿದು ಮಾವ
ಬರದ್ದದು ಒಪ್ಪ ಆಯಿದು ಗೋಪಾಲಣ್ಣಾ,
ಖುಶಿ ಆತು ಲಾಯ್ಕ ಆಯಿದು.
ಇದುವರೆಗೆ ಅಂತೆ ಕೇಳಿಕೊಂಡಿದ್ದ ಪದ್ಯದ ಅರ್ಥ ತಿಳುಸಿದ್ದಕ್ಕೆ ಧನ್ಯವಾದ..
ಮಾಹಿತಿ ಪೂರ್ಣ ಲೇಖನಕ್ಕೆ ತುಂಬ ತುಂಬ ಧನ್ಯವಾದಂಗೊ ಮಾವ…
[‘ಕಿರಿದರೊಳ್ ಪಿರಿದರ್ಥ’]- ಆ ಅರ್ಥವ ಸೊಗಸಾಗಿ ವಿವರಿಸಿದ್ದು ತುಂಬಾ ಲಾಯಿಕ ಆಯಿದು. ಕೀರ್ತನೆಯ ಪ್ರತಿಯೊಂದು ಶಬ್ದಂಗೊಕ್ಕೆ ಕೊಟ್ಟ ವ್ಯಾಖ್ಯಾನ ಕೊಶಿ ಕೊಟ್ಟತ್ತು.
ಆ ಪದ್ಯ ಕೇಳಿದಷ್ಟೇ ಖುಶೀ ಆತು ನಿಂಗಳ ಈ ಶುದ್ದಿ. ಭಾವಪೂರ್ಣವಾಗಿ ಹಾಡುವ ರಾಜ್ ಕುಮಾರ್ ಭಾರತಿ ಹಾಡುಗಾರಿಕೆ ಭಾರೀ ಲಾಯಕ್ಕ ಆವ್ತು ಕೇಳ್ಳೆ. ಹಾಡೆಕ್ಕಾರೆ ಮದಲೆ ಸಾಹಿತ್ಯ ತಿಳುದು ಅರ್ಥೈಸಿ, ಅರ್ಥವತ್ತಾಗಿ ಭಾವ ಪೂರ್ಣವಾಗಿ ಹಾಡುವದು ರಾ.ಭಾರತಿಯ ವಿಶೇಷ ಗುಣ ಎನಗೆ ಮೆಚ್ಚುಗೆ ಅಪ್ಪದು. ದಾಸರ ಈ ಪದ ವರ್ಣನೆಯ ಗೋಪಾಲಣ್ಣನ ಈ ಶುದ್ದಿಗೊಂದು ಒಪ್ಪ,
ಒಳ್ಳೆದೊಂದು ದಾಸರ ಪದಕ್ಕ್ಕೆ ಒಳ್ಳೆ ಅರ್ಥ ವಿವರಣೆ. ಧನ್ಯವಾದ.
ಧನ್ಯವಾದ೦ಗೊ ಗೋಪಾಲಣ್ಣ. ಲೇಖನ ಓದುತ್ತಾ ಹೋದ ಹಾ೦ಗೆ ಆ ಪದ್ಯದ ಒ೦ದೊ೦ದು ಸಾಲುದೆ ಕೆಮಿಯೊಳ ಅನುರಣಿಸಿತ್ತು.
ಒಂದೊಳ್ಳೆ ಪದ್ಯವ ಅರ್ಥ ಸಹಿತ ವಿವರುಸಿದ ಗೋಪಾಲಣ್ಣಂಗೆ ಧನ್ಯವಾದಂಗೊ. ಕನ್ನಡ ಮಾಶ್ಟ್ರು ವಿವರುಸಿದಷ್ಟೆ ಸೊಗಸಾಯಿದು. ಇಂತಾದ್ದು ನಮ್ಮ ಬೈಲಿಲ್ಲಿ ಕಂಡಿತ ಬೇಕು.
ಆಪ್ಪು ಗೋಪಾಲಣ್ಣ
ಆಡಿಸಿದಳ್ ಯಶೋದಾ ಜಗದೋದ್ದಾರನಾ ಹೇಳುವ ಪದ್ಯ ಕೆ ಜೆ ಯೆಸುದಾಸನೂ ಹೇಳಿದ್ದವು ಲಾಯಕಲ್ಲಿ. ಹಾ೦ಗೆ ಬಾ೦ಬೆ ಜಯಶ್ರೀ ಹೇಳುವ ಗಾಯಕಿ ಕೂಡಾ ಹೇಳಿದ್ದವು. ಪದ್ಯ ಕೇಳುವಗ ಮನಸ್ಸಿ೦ಗೆ ಅಪ್ಪ ಆನ೦ದ ಹೇಳುಲೆ ಎಡಿಯ
ಸಾಧಾರಣ ಇದೆ ನಮೂನೆಯ ಪದ್ಯ ಒ೦ದು ತಮಿಳಿಲ್ಲೂ ಇದ್ದು
“ಏನ್ನ ತವಮ್ ಸೆಯಿದನೆ , ಯಶೋದ, ಎ೦ಗುಮ್ ನಿರಯ್ ಪರಬ್ರಹ್ಮ ಅಮ್ಮಾ ಎನ್ರಲೈಕ್ಕ” ಹೇಳಿ
ಅದರ ಅರ್ಥ “ಆದೆ೦ತ ಪುಣ್ಯ ಮಾಡಿದೆ ಯಶೋದಾ, ಸರ್ವಾ೦ತರ್ಯಾಮಿ ಪದ್ಮನಾಭನ ಕೈ೦ದ ಅಮ್ಮಾ ಹೇಳಿ ದಿನುಗೇಳುಸಿಗೊ೦ಬಲೆ” ಹೇಳಿ
ಆಮ್ಮ ಮಗುವಿನ ಪ್ರೀತಿಯ ಲಾಲಿತ್ಯದೊಟ್ಟಿ೦ಗೆ ಭಕ್ತಿಯೂ ಮಿಳಿತವಾಗಿಪ್ಪ ಪದ್ಯ ಕೇಳುವಗ ಅಪ್ಪ ಆನ೦ದ ಅನಿರ್ವಚನೀಯ
ಯಶೋದೆ,ಕೃಷ್ಣನ ಬಗ್ಗೆ ಚೆಂದಕೆ ವಿವರಣೆ ಕೊಟ್ಟಿದಿ.ಪದ್ಯ ಕೇಳುವಾಗ ಭಕ್ತಿ ಉಕ್ಕಿ ಬತ್ತು.