Oppanna.com

ಎನ್ನ ಕ್ಷೇತ್ರ ಎನಗೆ ಇಷ್ಟ :)

ಬರದೋರು :   ಅಕ್ಷರ°    on   16/05/2011    10 ಒಪ್ಪಂಗೊ

ಅಕ್ಷರ°
ತುಂಬಾ ದಿನಂಗಳ ಮತ್ತೆ ಬೈಲಿಂಗೆ ಬತ್ತಾ ಇದ್ದೆ. ಪರೀಕ್ಷೆಗಳ ತಲೆಬಿಸಿ ಒಂದರಿಗೆ ಮುಗುತ್ತು. ಇದರೆಡೆಲ್ಲಿ ಒಂದು ದಿನ ಒಬ್ರು ಸ್ಟಾಟಿಸ್ಟಿಕ್ಸ್‍ನ ಮಾಷ್ಟ್ರು ಸಿಕ್ಕಿತ್ತವು. ಹೀಂಗೇ ಮಾತಾಡ್ವಾಗ “ಸ್ಟಾಟಿಸ್ಟಿಕ್ಸ್ ಮತ್ತೆ ಮ್ಯಾತ್ಸ್ ಬೇಕು ಮಾರಾಯ ಲೈಫ್‍ನಲ್ಲಿ. ಇಲ್ಲದಿದ್ರೆ ವೇಸ್ಟ್” ಹೇಳಿ ಹೇಳಿದವು. ಆನು ಚರ್ಚೆ ಮಾಡ್ಳೆ ಹೋಯ್ದಿಲ್ಲೆ. ಆಗಷ್ಟೇ ಗುರ್ತ ಆದ್ದು. ಅಷ್ಟಪ್ಪಗಳೇ ವಾದ ಮಾಡುದು ಬೇಡ ಹೇಳಿ ಕಂಡತ್ತು. ಹಾಂಗಾಗಿ “ಹೌದು ಸರ್” ಹೇಳಿ ಒಪ್ಪಿಕೊಂಡು ಕಳ್ಸಿದೆ.  ಅವು ಹೋದ ಮೇಲೆ ಎನ್ನಷ್ಟಕ್ಕೇ ಸುಮ್ಮನೇ ಆಲೋಚನೆ ಮಾಡಿಕೊಂಡಿತ್ತಿದೆ. ಗಣಿತ ಕಲಿಯದ್ದೇ ಬದುಕಿದವ್ವೇ ಇಲ್ಯಾ? ಹಾಂಗಿಪ್ಪಗ ಇವ ಎಂತಕೆ “ಲೈಫೇ ವೇಸ್ಟ್” ಹೇಳಿ ಹೇಳಿದಪ್ಪಾ ಹೇಳಿ ಆತು. ಆದರೆ ಮತ್ತೆ ಕಂಡತ್ತು. ಪ್ರತಿಯೊಂದು ವಿಷಯಕ್ಕೂ ಅದರದ್ದೇ ಆದ ಪ್ರಾಮುಖ್ಯ ಇದ್ದು. ಇಲ್ಲದ್ದೆ ಇದ್ದರೆ ಆ ವಿಷಯಂಗಳೇ ಅಪ್ರಸ್ತುತ ಆಗಿ ಅದರ ಕಲಿವವ್ವೇ ಯಾರೂ ಇರ್ತಿತ್ತವಿಲ್ಲೆನ್ನೇ ಹೇಳಿ ಮನವರಿಕೆ ಆತು. ಗಣಿತಕ್ಕೆ ಅದರದ್ದೇ ಆದ ಮಹತ್ವ ಇದ್ದು. ಇನ್ಯಾವುದೋ ಸಬ್‍ಜೆಕ್ಟಿಂಗೆ ಅದರದ್ದೇ ಆದ ವಿಶೇಷತೆ ಇದ್ದು. ಉದಾಹರಣೆಗೆ ಆನು ಕಲ್ತ ಬಯೋಟೆಕ್ನೊಲೆಜಿಯಿಂದಾಗಿ ಸುಮಾರು ಬಗೆಲ್ಲಿ ಲೋಕಕ್ಕೆ ಉಪಕಾರ ಆಯ್ದು. ಹೊಸ ಹೊಸ ನಮುನೆಯ ತಳಿಯ ಸಸ್ಯಂಗೊ, ಪ್ರಾಣಿಗೊ, ಬೇರೆ ಬೇರೆ ನಮುನೆಯ ರೋಗಕ್ಕೆ ಅಲರ್ಜಿ ಎಲ್ಲ ಆಗದ್ದ ಹಾಂಗಿಪ್ಪ ಮದ್ದುಗೊ, ಹಾರ್ಮೋನುಗೊ, ಹೊಸ ರೀತಿಲ್ಲಿ ಕಾಯಿಲೆ ವಾಸಿ ಮಾಡುವ ವಿಧಾನಂಗೊ, ಪರಿಸರ ಮಾಲಿನ್ಯವ ತಡೆಗಟ್ಟುಲೆ ವಿವಿಧ ಅನ್ವೇಷಣೆಗೊ ಹೀಂಗೇ ಇತ್ತೀಚಿನ ದಿನಂಗಳಲ್ಲಿ ಹಲವಾರು ರೀತಿಲ್ಲಿ ನಮಗೆ ಗೊಂತೇ ಇಲ್ಲದ್ದ ಹಾಂಗೆ ಬಯೋಟೆಕ್ನೊಲೊಜಿ ವ್ಯಾಪಿಸಿಕೊಂಡಿದು.
ಅವಕ್ಕವಕ್ಕೆ ಅವರವರ ಕ್ಷೇತ್ರವೇ ಮುಖ್ಯ ಹೇಳಿ ಕಾಂಬದರ್‍ಲಿ ತಪ್ಪೆಂತ?! ನಮ್ಮ ಕ್ಶೇತ್ರದ ಮಹತ್ವವ ಇನ್ನೊಬ್ಬರಿಂಗೆ ಹೇಳುದರ್‍ಲಿ ಖುಷಿ ಇರ್‍ತು. ಹೀಂಗೆ ಹೇಳುವುದರಿಂದ ಉಳುದವಕ್ಕೂ ನಮ್ಮ ಕ್ಷೇತ್ರದ ಬಗ್ಗೆ ಗೌರವ ಬತ್ತು. ಬೇರೆಯವರ ಕ್ಷೇತ್ರವ ತೆಗಳುವವಕ್ಕೆ ಒಂದು ಉತ್ತರವೂ ಆವ್ತು!!!
ಹೇಂಗೆ? ನಿಂಗಳ ಕ್ಷೇತ್ರದ ವಿಶೇಷತೆಗಳ ಬಗ್ಗೆ ಎಲ್ಲೋರತ್ರೆ ಹಂಚಿಕೊಂಬಲೆ ರಜ್ಜ ಪುರುಸೊತ್ತು ಮಾಡ್ತಿರಾ?

10 thoughts on “ಎನ್ನ ಕ್ಷೇತ್ರ ಎನಗೆ ಇಷ್ಟ :)

    1. ಹ್ಮ್… ಅಪ್ಪು… ಎನಗುದೇ ಹಾಂಗೆಯೇ ಕಂಡತ್ತು. ಇನ್ನುದೇ ಮೆಚುರಿಟಿ ಇಲ್ಲದ್ದ ಹಾಂಗೆ ಅನ್ಸಿತ್ತು. ಅದಕ್ಕೆ ಆನು ಚರ್ಚೆಗೆ ಹೋಯ್ದಿಲ್ಲೆ….

  1. ಅವರವರ ಕಾರ್ಯ ಕ್ಷೇತ್ರ ಅವಕ್ಕವಕ್ಕೆ ಇಷ್ಟ ಇರಲೇ ಬೇಕು ಇಲ್ಲದ್ದರೆ ದಕ್ಷತೆ ಬಾರ,ಶ್ರದ್ಧೆ ಬಾರ.
    ಅದೇರೀತಿ ಇನ್ನೊಬ್ಬರದ್ದೂ ಮುಖ್ಯ ಹೇಳುವ ವಿಚಾರವೂ ಬೇಕು!

  2. uttama lekhana.. ella kshetravuu, subjectuu samjalli agathyave… Bare 90percent mele markt tegadava matra talented heludu ati dodda moorkatana. Ella subjectuu agathyave..

  3. ಖ೦ಡಿತ ಅಕ್ಷರ, ನಿ೦ಗೊ ಹೇಳಿದ್ದು ಸರಿ, ಪ್ರತಿಯೊ೦ದು ಕ್ಷೇತ್ರಕ್ಕೂ ಅದರದ್ದೇ ಆದ ಮಹತ್ವ ಇದ್ದು.
    ನಿ೦ಗಳ ಹತ್ರೆ ಲೈಫೇ ವೇಸ್ಟು ಹೇಳಿದ ಮಾಷ್ಟ್ರು ಹಾ೦ಗೆ ಹೇಳ್ಳೂ ಕಾರಣ ಇದ್ದು. ಸುರು ಸುರುವಿ೦ಗೆ ಅವಕ್ಕೆ ಹಾ೦ಗೆ ಅನಿಸಿರ, ಆದರೆ ನಮ್ಮ ನಮ್ಮ ಕ್ಷೇತ್ರಲ್ಲಿ ನಾವು ಆಳವಾಗಿ ತೊಡಗಿಸಿಯೊ೦ಡಪ್ಪಗ, ನವಗೆ ಅದರ ಅನುಭವಿಸುಲೆ ಎಡಿತ್ತು, ಎ೦ಜೋಯ್ ಮಾಡ್ಲೆ ಎಡಿತ್ತು, ಅಷ್ಟಪ್ಪಗ ನಮ್ಮ ಜೀವನದ ನಿತ್ಯದ ಆಗುಹೋಗುಗಳಲ್ಲಿ ನಮ್ಮ ಕ್ಷೇತ್ರದ ವಿಷಯ೦ಗಳ ಪ್ರಭಾವ ಅನುಭವಕ್ಕೆ ಬತ್ತು. ಈ ಮಟ್ಟಕ್ಕೆ ಬ೦ದರೆ ಮಾ೦ತ್ರ ಇದರ ಅನುಭವಿಸುಲೆ ಎಡಿಗಷ್ಟೆ, ಅಲ್ಲದ್ರೆ ಮೇಲ೦ದ ಮೇಲೆ ಇ೦ತಿ೦ಥಾ ವಿಷಯ೦ಗೊ ಇ೦ತಿ೦ಥಾ ಉಪಯೋಗಕ್ಕೆ ಬತ್ತು ಹೇಳಿ ಹೇಳ್ಳೆಡಿಗಷ್ಟೆ. ಆದರೆ ಯಾವಗ ನಾವು ನಮ್ಮ ಕ್ಷೇತ್ರವ ಎ೦ಜೋಯ್ ಮಾಡ್ಲೆ ಸುರು ಮಾಡ್ತೋ ಅಷ್ಟಪ್ಪಗ ನವಗೆ ಅದು ನಿಜವಾದ ಅನುಭವಕ್ಕೆ ಬತ್ತು, ಉದಾಹರಣೆಗೆ – ನಾವು ಬಾಗಿಲಿನ ತೆಗವಗ ಬಾಗಿಲಿನ ಹಿಡಿ ಇಪ್ಪಲ್ಲಿ ಹಿಡುದು ದೂಡಿರೆ ಸುಲಾಭಲ್ಲಿ ತೆಗವಲೆ ಎಡಿತ್ತು, ಅದರ ಬದಲು, ಬಿಜಾಗಿರಿ ಇಪ್ಪ ಹೊಡೆಲಿ ಹಿಡುದು ದೂಡಿರೆ ಹೆಚ್ಚು ಶಕ್ತಿ ಉಪಯೋಗಿಸೆಕಾಗಿ ಬತ್ತು, ಒ೦ದು ಕೊತ್ತಳಿ೦ಕೆಯ ಮಧ್ಯಲ್ಲಿ ಹಿಡುದು ನೆಗ್ಗಲೆ ಸುಲಭ, ಆದರೆ ಅದರನ್ನೆ ಒ೦ದು ಕೊಡಿ / ಕಡೆಲಿ ಮಾ೦ತ್ರ ಹಿಡುದು ನೆಗ್ಗುತ್ತರೆ ಎಷ್ಟು ಕಷ್ಟ!!? ಇದರ ಹಿ೦ದಿಕೆ ಇಪ್ಪ ತತ್ವ ಇ೦ಜಿನಿಯರಿ೦ಗಿಲ್ಲಿ ಕಲಿವಲೆ ಇದ್ದು. ಸಾಮಾನ್ಯವಾಗಿ ಅರ್ಥ ಮಾಡದ್ದೆ, ಬಾಯಿಪಾಠ ಮಾಡಿ ಕಲ್ತರೆ ಇ ದು ಗೊ೦ತಾಗ, ಇದು ಗೊ೦ತಪ್ಪ ಮಟ್ಟಕ್ಕೆ ಬ೦ದಪ್ಪಗ ನಮ್ಮ ಕ್ಷೇತ್ರದ ಮಹತ್ವ ನವಗೆ ಗೊ೦ತಕ್ಕು. ಹಾ೦ಗಿಪ್ಪ ಸ೦ದರ್ಭಲ್ಲಿ ಆಗಿಕ್ಕು ಅವು ಹಾ೦ಗೆ ಹೇಳಿದ್ದದು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×