- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ರಾವಣನ ಕೊಂದು ವಾಪಸು ಅಯೋಧ್ಯೆಗೆ ಬಪ್ಪಗ ರಾಮಸೀತೆಲಕ್ಷ್ಮಣರು ಕಿಷ್ಕಿಂಧೆಗೆ ಬಂದವಡ. ಅಲ್ಯಣ ಹೆಣ್ಣು ಮಂಗಂಗೊಕ್ಕೆ ತ್ರಿಲೋಕಸುಂದರಿ ಸೀತೆಯ ನೋಡುವ ತವಕ. ಸೀತೆಯ ನೋಡಿ ಅಪ್ಪಗ ಅವರ ಮನಸ್ಸಿಗೆ ಬಂದ ಭಾವನೆಗೊ ಹೀಂಗಿತ್ತಡ:
ಗೌರೀತನುರ್ನಯನಮಾಯತಮುನ್ನತಾ ಚ
ನಾಸಾ ಕಟೀ ಪೃಥುತಟೀ ಚ ಪಟೀ ವಿಚಿತ್ರಾ।
ಅಂಗಾನಿ ರೋಮರಹಿತಾನಿ ಹಿತಾಯ ಭರ್ತುಃ
ಪುಚ್ಛಂ ನ ತುಚ್ಛಮಪೀತಿ ಕಿಮತ್ರ ಸಾಧು।।
ಆಹಾ ಈ ಸೀತೆಯ ಮೈ ನಮ್ಮ ಹಾಂಗೆ ಕಪ್ಪಲ್ಲ ಬಿಳಿ!
ನಮ್ಮ ಹಾಂಗೆ ಸಣ್ಣ ಉರುಟು ಕಣ್ಣಲ್ಲ ಚಂದದ ದೊಡ್ಡ ಕಣ್ಣು
ಮೂಗು ಎತ್ತರ! ಸಣ್ಣ ಸೊಂಟ. ವಿಚಿತ್ರ ನಾರುಡೆ!
ಮೈಮೇಲೆ ರೋಮವೇ ಇಲ್ಲೆ. ಇದರ ಗಂಡಂಗೇನೋ ಖುಷಿ ಅಕ್ಕು.
ಆದರೆಂತ!!
ಸಣ್ಣದಾದರೂ ಸೊಂಟಲ್ಲಿ ಒಂದು ಬೀಲ ಇಲ್ಲದ್ದರೆ ಇದೆಂತರ ಸೌಂದರ್ಯ! !
🌴🌴🌴🌴🌴🌴🌴🌴🌴🌴🌴🌴🌴🌴🌴
ಚಂದ ಕೊಳಕು ಎಲ್ಲಾ ನೋಡುವವನ ಮನೋಭಾವ ಹೊಂದಿಕೊಂಡು ಬೇರೆ ಬೇರೆ ಇರ್ತು
ತನ್ನಂತೆ ಪರರ ಬಗೆದಡೆ….
ಅವರವರ ಕಣ್ಣು ಅವರವರ ಮನಸ್ಸು!