ನೀರ್ಕಜೆ ಅಪ್ಪಚ್ಚಿಯ ಗುರ್ತ ಆತಾ?ಆಗಿರ ನಿಂಗೊಗೆ, ಎಂತಕೇಳಿರೆ – ಅವು ಈಗ ನೀರ್ಕಜೆಲಿ ಇಪ್ಪದಲ್ಲ, ಬೆಂಗುಳೂರಿಲಿ. ಊರಿಲಿ ಚೆಂಬರ್ಪು ಮಾಷ್ಟ್ರಣ್ಣನ ನೆರೆಕರೆ, ಬೆಂಗುಳೂರಿಲಿ ಪೆರ್ಲದಣ್ಣನ ನೆರೆಕರೆ!ರಾಮಜ್ಜನ ಕೋಲೇಜಿಲಿ ಕಲ್ತು, ಕೊಡೆಯಾಲದ ದೊಡ್ಡಕೋಲೇಜಿಲಿ ದೊಡ್ಡದರ ಕಲ್ತು, ಬೆಂಗುಳೂರಿಲಿ ಇಂಜಿನಿಯರು ಆಗಿ ಸೇರಿದ್ದವಡ ಮದಲಿಂಗೇ! ಅಂದೇ ಬೆಂಗುಳೂರಿಲಿ ಕೆಲಸ ಮಾಡ್ತರೂ, ಎಲ್ಲೋರ ಹಾಂಗೆ ಸೊಂತದ್ದು ಹೇಳಿಗೊಂಡು ಜಾಗೆ – ಮನೆ ಇನ್ನೂ ಮಾಡಿದ್ದವಿಲ್ಲೆ. ಮಾಡ್ತವೂ ಇಲ್ಲೆಡ – ಎಂತಕೇಳಿರೆ, ಅವಕ್ಕೆ ಪೇಟೆ ಜೀವನ ಇಷ್ಟವೇ ಇಲ್ಲೆ!ಹಳ್ಳಿಗೆ ಹೋಯೇಕು, ದೊಡ್ಡ ಕೃಷಿಭೂಮಿ ಮಾಡೇಕು, ತೋಟ ಮಾಡಿ ನೆಮ್ಮದಿಯ ಅಶನ ಉಣ್ಣೇಕು, ದನ, ಕಂಜಿ, ಶುದ್ಧ ಹಾಲು, ಶುದ್ಧ ನೀರು, ಶುದ್ಧ ಅಳತ್ತೊಂಡೆ, ಚೆಕ್ಕರ್ಪೆ – ತರಕಾರಿಗೊ ಎಲ್ಲ ತಿಂದುಗೊಂಡು ಮನೆ-ಮಕ್ಕಳ ಬೆಳೆಶೇಕು ಹೇಳಿಯೇ ಅವರ ಯೋಜನೆ! ಕೊಶೀ ಆತು ಒಪ್ಪಣ್ಣಂಗೆ ಅದರ ಕೇಳಿ! ಈಗ ಆಪೀಸಿಲಿ ಕೂದಂಡು ಕೆಲಸ ಮಾಡುವಗ ಹಳ್ಳಿ ಜೀವನವೇ ನೆಂಪಪ್ಪದು. ಆಪೀಸಿನ ಮೆಟ್ಳು ಹತ್ತುವಗ ಉಪ್ಪರಿಗೆ ಮೇಲಾಣ ಪತ್ತಾಯಕ್ಕೆ ಹತ್ತಿದ ಹಾಂಗೆ ಆವುತ್ತು! ಆಣು ಬಂದು ಕಾಪಿ ಕೊಡುವಗ ಅಕ್ಕಚ್ಚು ಕೊಟ್ಟಹಾಂಗೆ ಆವುತ್ತು. ಕಂಪ್ಯೂಟರು ಕುಟ್ಟುವಗ ಬತ್ತ ಮೆರುದ ಹಾಂಗೆ ಆವುತ್ತು. ಬೋಸು (Boss) ದಿನಿಗೆಳಿರೆ ಗೋಣ ಕೆಲದ ಹಾಂಗೆ ಆವುತ್ತು! ಒಟ್ಟಿಲಿ ಈ ಪೇಟೆ ಜೀವನ ಬೇಡ್ಳೇ-ಬೇಡ ಹೇಳಿ ಅನುಸುತ್ತು!!ಅವರ ಯೆಜಮಾಂತಿ – ನೀರ್ಕಜೆ ಚಿಕ್ಕಮ್ಮಂದೇ ಅದೇ ಮನಸ್ಸಿನವು ಅಡ. ಗಣಿತ ಕಲ್ತು ಕೋಲೇಜು ಮುಗುಶಿದ್ದವು, ಈ ಪೇಟೆ ಹರಟೆಲಿ ಗಣಿತದ ಸಮಸ್ಯೆ ಬಿಡುಸುಲೇ ಎಡೆತ್ತಿಲ್ಲೆ – ಹೇಳಿ ಚಿಕ್ಕಮ್ಮಂಗೆ ಬೇಜಾರು! ಎಲ್ಲೊರು ಪೇಟೆ ಪೇಟೆ ಹೇಳಿ ಹಾರುವಗ, ಹಳ್ಳಿಜೀವನವೇ ಒಳ್ಳೆದು ಹೇಳಿ ‘ಮರಳಿ ಮಣ್ಣಿಂಗೆ’ ಹೋವುತ್ತ ಈ ಮನಸ್ಸುಗಳ ತುಂಬ ಕೊಶಿ ಆವುತ್ತು. ಅಲ್ಲದೋ?! ಬರಳಿ – ಬೇಗ ನಮ್ಮ ನೆರೆಕರೆಗೆ ಬರಳಿ!ಅದೇನೇ ಇರಳಿ,ಅವರ ರಂಗಪ್ರವೇಶ ಆದ್ದದೇ ಒಪ್ಪಣ್ಣನ ‘ಇಂಗ್ರೋಜಿಯ’ ಶುದ್ದಿಗೆ ಒಪ್ಪಕೊಟ್ಟೊಂಡು, ಒಂದು ತಾತ್ವಿಕ ಪೋಯಿಂಟಿನ ಹಿಡ್ಕೊಂಡು! ಚಿಂತನೆ ಅವರ ನೆತ್ತರಿನ ಗುಣ. ಚಿಂತನಾ ಲೇಖನ ಬರವದು ಅವರ ಹವ್ಯಾಸಂಗಳಲ್ಲಿ ಒಂದು.ಮೊನ್ನೆ ಊರಿಂಗೆ ಬಂದಿಪ್ಪವು ಸಿಕ್ಕಿದವು, ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತಿರಾ ಕೇಳಿದೆ. ಈಗ ರಜಾ ಅಂಬೆರ್ಪು.. ನಿದಾನಕ್ಕೆ ಹೇಳ್ತೆ. ಹೊಸ ಕೆಮರ ತೆಗದ್ದೆ, ಪಟತೆಗವಲಿದ್ದು – ಹೇಳಿಕ್ಕಿ ಮೆಲ್ಲಂಗೆ ಬೇಗು ಹಿಡ್ಕೊಂಡವು. ‘ಇದಾ, ಈ ಪಟಂಗಳ ನೋಡುಸು ನೀನು, ಎಲ್ಲೊರಿಂಗುದೇ’ ಹೇಳಿದವು.ಪಟ ಕೊಟ್ಟು ಕಳುಸಿದ್ದವು. ಕೊಶಿ ಆದರೆಪಟಂಗೊಕ್ಕೆಒಪ್ಪ ಕೊಡಿ. ಶುದ್ದಿ ಬೇಗಲ್ಲೇ ಬರೆತ್ತವಡ, ಕಾದೊಂಡಿಪ್ಪ..ಆತೋ?
ಒಳ್ಳೆ ಕಾರ್ಯಕ್ರಮದ ಸಣ್ಣ – ಒಳ್ಳೆ ಶುದ್ದಿ ಹೇಳಿದ ನೀರ್ಕಜೆ ಅಪ್ಪಚ್ಚಿಗೆ ಧನ್ಯವಾದಂಗೊ.
ಹೇಳಿದಾಂಗೆ, ಕಂತ್ರಾಟು ಕೃಷಿಯ ಬಗ್ಗೆ ಎಂತದೋ ಶುದ್ದಿ ಹೇಳ್ತೆ ಹೇಳಿತ್ತಿದ್ದಿ..
ಹೇಳುವಿರೋ? 🙂
ಧನ್ಯವಾದ.
ಆನುದೆ ಅಷ್ಟು ಗಮನ ಹರಿಸಿತ್ತಿದಿಲ್ಲೆ ಈ ಶುದ್ದಿ ಪೇಪರಿಲ್ಲಿ ಬಂದುಗೊಂಡಿದ್ದರೂ… !!! ಲಾಯಿಕ ಆತು ದೇಶ್ಮುಖರ ಲೇಖನವ ಬೈಲಿಂಗೆ ಲಿಂಕಿಸಿದ್ದು!
ಹೀಂಗೊಂದು ಕಾರ್ಯಕ್ರಮ ನೆಡದ್ದು ಹೇಳಿಯೇ ಗೊಂತಾತಿಲ್ಲೆನ್ನೇ.. ಸಂತೋಷ ಆತು ಸುದ್ದಿ ನೋಡಿ,ಸಮಾಜಮುಖಿ ಚಿಂತನೆಗೋ ಇನ್ನೂ ಹೆಚ್ಚಾಗಲಿ.ಅಪ್ಪಚ್ಚಿ,ಧನ್ಯವಾದ.
ಕಾಂಗ್ರೆಸಿನ ರ್ಯಾಲಿಗೂ ಈ ಕಾರ್ಯಕ್ರಮಕ್ಕೂ ಸಿಕ್ಕಿದ ಪ್ರಚಾರಕ್ಕೆ ಅಜಗಜಾಂತರ ವ್ಯತ್ಯಾಸ. ಎಂತ ಮಾಡುದು. ಅದಕ್ಕೇ ಆರಿಂಗೂ ಗೊಂತಾಯಿದಿಲ್ಲೆ ಇದು.