ನಮ್ಮವು ಎಲ್ಲಾ ಕ್ಷೇತ್ರಲ್ಲಿಯೂ ಹೆಸರು ಮಾಡಿಯೊಂಡಿಪ್ಪದು ಹೊಸ ಶುದ್ದಿ ಏನೂ ಅಲ್ಲಾದ.ಎಂಗಳ ಮುಗುಳಿ ಸುಬ್ಬಣ್ಣ ಭಟ್ರು ರಜಾ ವಿಷೇಶ.
ಕನ್ನಡ ಪೇಪರು ಓದುವವು ಇತ್ತೀಜಗೆ ಇವರ ವಿಷಯ ಓದಿಪ್ಪಿ.
ವಿಟ್ಳದ ಹತ್ತರೆ ಕೊಡಂಗೆ ಹೇಳ್ತಲ್ಲಿ ವಿಶ್ರಾಂತ ಅಲ್ಲ ಕೆಲಸಂದ ನಿವೃತ್ತ ಜೀವನ ನೆಡೆತ್ತಾ ಇದ್ದು ಇವರದ್ದು,ಹಾಂಗೆ ಹೇಳಿ ಸುಮ್ಮನೆ ಕೂಪ ಜಾತಿ ಅಲ್ಲ.ಸುರತ್ಕಲ್ಲಿಲ್ಲಿ ಎನ್ ಐ ಟಿ ಕೆ ಲಿ ಕ್ರಯೋಜೆನಿಕ್ಸ್ ಹೇಳುತ್ತ ವಿಷಯಲ್ಲಿ ಎಮ್ ಟೆಕ್ ಮತ್ತು ಪಿ ಹೆಚ್ ಡಿ ಮಾಡುತ್ತ ಮಕ್ಕೊಗೆ ಕಲಿಶುತ್ತಾ ಇದ್ದವು.
ನಲುವತ್ತು ವರ್ಷ ಇಸ್ರೋಲ್ಲಿ ಕ್ರಯೋಜೆನಿಕ್ಸ್ ವಿಭಾಗದ ಡೈರೆಕ್ಟರ್ ಆಗಿತ್ತಿದ್ದವು.ನಮ್ಮ ರಾಷ್ಟ್ರಪತಿ ಆಗಿತ್ತಿದ್ದ ಅಬ್ದುಲ್ ಕಲಾಮ್ ಅವರೊಟ್ಟಿಂಗೇ ೨೦ ವರ್ಷ ಕೆಲಸ ಮಾಡಿದ್ದವು,ಹಾಂಗೆ ಹೇಳಿ ಆರ ಹತ್ರೂ ಹೇಳಿಯೊಂಡು ಬಪ್ಪ ಜೆನ ಅಲ್ಲ.
ಯಾವಗಲೋ ಒಂದರಿ ಅಸೌಖ್ಯಂದಾಗಿ ಅವರ ನೋಡೆಕ್ಕಾಗಿ ಬಂದು ಎನಗೆ ಪರಿಚಯ ಆತು.ತಿರುವನಂತಪುರಕ್ಕೆ ಬನ್ನಿ ಹೇಳಿ ಅವು ಕೊಟ್ಟ ಕಾರ್ಡ್ ನೋಡಿಯೇ ಅವು ಅಷ್ಟು ದೊಡ್ಡ ಕೆಲಸಲ್ಲಿಪ್ಪದು ಹೇಳಿ ನವಗೆ ಗೊಂತಾದ್ದು.
ಊರಿಂಗೆ ಬಂದಿಪ್ಪಲೆ ಹೇಳಿ ಮನೆ ಕಟ್ಟುಸುವಾಗ ಸುಬ್ಬಣ್ಣ ಭಟ್ರು ಹದ್ನೈದು ವರ್ಷ ಹಿಂದೆಯೇ ಮನಗೆ ಕರೆಂಟಿಂಗೆ ಸೋಲಾರ್ ವಿದ್ಯುತ್ ವ್ಯವಸ್ತೆ ಮಾಡಿತ್ತಿದ್ದವು,ಮಳೆಗಾಲಲ್ಲಿ ಹೇಂಗಪ್ಪ ಕರೆಂಟು ಹೇಳಿ ಕೇಳಿಯಪ್ಪಗಳೇ ನವಗೆ ಗೊಂತಾದ್ದದು ಸೋಲಾರ್ ಬೆಶಿ ನೀರಿಂಗೆ ಮಾಂತ್ರ ಬೆಶಿಲು ಬೇಕಾದ್ದು,ಕರೆಂಟಿಂಗಲ್ಲ ಹೇಳಿ.ಇವರಲ್ಲಿ ಇಡೀ ಮನಗೆ ಕರೆಂಟು ಸೋಲಾರಿಂದೇ,ಫೇನು,ಗ್ರೈಂಡರು,ಮಿಕ್ಸಿ,ಲೈಟು ಎಲ್ಲವೂ.
ಇವರ ಬಗ್ಗೆ ಕೆಲವು ಪೇಪರುಗಳಲ್ಲಿ ಬಯಿಂದು,ಆದರೆ ಆರುದೇ ಇವರ ಸೌರ ವಿದ್ಯುತ್ತಿನ ಬಗ್ಗೆ ಬರದ್ದು ನೋಡಿದ್ದಿಲ್ಲೆ.
ವಿಜ್ಞಾನಿ ಆದ ಕಾರಣ ಸಹಜವಾಗಿಯೇ ತಲೆ ಹೊಸ ವಿಷಯಂಗಳ ಬಗ್ಗೆ ಕೆಲಸ ಮಾಡ್ತನ್ನೆ,ಸುಬ್ಬಣ್ಣ ಭಟ್ರು ಅಡಕ್ಕೆ ಒಣಗುಸಲೆ ಪ್ಲೇಸ್ಟಿಕ್ಕಿನ ಮನೆ ಮಾಡಿದವು,ಎಲ್ಲೊರೂ ಮಾಡಿದವೇ,ಆದರೆ ಇವರದ್ದು ಮಾಂತ್ರ ಅಡಕ್ಕೆ ಒಣಗುಸಲೆ ಭಾರೀ ಲಾಯಕ ಹೇಳಿ ನೋಡಿದವು ಹೇಳಿದವು,ನವಗೆ ಅದೆಲ್ಲ ಅರಡಿಯ.
ನಮ್ಮ ಪ್ರಾಚೀನ ಹೇಳಿರೆ ವೇದ ಕಾಲದ ಗಣಿತದ ಬಗ್ಗೆ ಅದ್ಭುತ ಪಾಂಡಿತ್ಯ ಇಪ್ಪ ಸುಬ್ಬಣ್ಣ ಭಟ್ರಿಂಗೆ ಗೊಂತಿಲ್ಲದ್ದ ವಿಷಯ ಇರ,ಕುತೂಹಲ ಇಲ್ಲದ್ದ ವಿಷ್ಯವೂ ಇಲ್ಲೆ.
ರಶ್ಯದ ಮೋಸ್ಕೋ ವಿಶ್ವವಿದ್ಯನಿಲಯಲ್ಲಿ ಕೆಲಸ ಮಾಡಿ ಅನುಭವ ಇಪ್ಪ ಇವಕ್ಕೆ ವೇದ ಗಣಿತದ ಪುಸ್ತಕ ರಶ್ಯನ್ ಭಾಶೆಲಿ ಬರದ ಹೆಗ್ಗಳಿಕೆ ಇದ್ದು,ಹಾಂಗೆ ಹೇಳಿ ಇದು ಆರಿಂಗೂ ಗೊಂತಿರ,ಅವರ ಒಟ್ಟಿಂಗೆ ಕೆಲಸ ಮಾಡಿದವಕ್ಕೆ ಬಿಟ್ಟು.
ಅವು ಎನ್ನ ಹತ್ತರೆ ಆರೋಗ್ಯದ ಬಗ್ಗೆ ಸಲಹೆಗೆ ಬಂದರೆ ಎನಗೆ ಒಂಥರಾ ಅಳುಕು,ಅವರ ಎಲಾ ಪ್ರಶ್ನೆಗೊಕ್ಕೆ ಉತ್ತರ ಕೊಡೆಕಲ್ಲದೋ! ಯೋಚನೆ ಮಾಡ್ತ ಕಂಪ್ಯುಟರ್ ಮಾಡ್ಳೆ ಇನ್ನೂ ಏಕೆ ಆಯಿದಿಲ್ಲೆ ಹೇಳಿ ಎನಗೆ ಮೆದುಳಿನ ಬಗ್ಗೆ ಪಾಠ ಮಡಿದ್ದು ಇದೇ ಸುಬ್ಬಣ್ಣ ಭಟ್ರು!
ಸೋಲಾರ್ ಪವರ್,ಅಡಕ್ಕೆ ಒಣಗುಸುವ ಮನೆ ಅಲ್ಲದ್ದೆ ಈಗ ಒಂದು ನಾಲ್ಕು ಲಕ್ಶ (ಸ್ವಂತ)ಖರ್ಚಿಲ್ಲಿ ಸೌರ/ಜಲ/ವಾಯು ವಿದ್ಯುತ್ ಉತ್ಪಾದನೆ ಮಾಡುವ ಒಂದು ಪ್ರೋಜೆಕ್ಟಿಂಗೆ ಕೈ ಹಾಕಿದ್ದವು,ಬಹುಶ ಮಗನ ಮದುವೆಯ ಗೌಜಿಲಿ ರಜಾ ನಿಧಾನ ಆವುತ್ತೋ ಏನೋ.ಎಷ್ಟು ಸಣ್ಣ ಮಕ್ಕಳ ಹತ್ತರೂ ಲಾಯಕಲ್ಲಿ ಮತಾಡುವ ಇವರ ಹಳ್ಳಿಲಿ ಮಾಡಿದ ಜನಕ್ಕೆ ಉಪಯೋಗ ಅಪ್ಪ ಹಾಂಗಿಪ್ಪ ಕೆಲಸವ ಕಣ್ಣಿಲ್ಲಿ ನೋಡೆಕ್ಕಾರೆ ಶನಿವಾರ ಒಂದು ದಿನ ವಿಟ್ಳಂದ ಎರಡು ಕಿ.ಮೀ ದೂರಲ್ಲಿಪ್ಪ ಇವರ ರಜತಗಿರಿ ಮನಗೆ ಹೋಪಲಕ್ಕು.ಫೋನ್ ಮಾಡಿ ಕೇಳಿ ಹೋಗಿ.
ಡಿಪ್ಲೊಮೇಟಿಕ್ ಪಾಸ್ ಪೋರ್ಟ್ ಇಪ್ಪ ವ್ಯಕ್ತಿ ನಾವು ನೋಡಿದ್ದು ಇವರ ಮಾಂತ್ರ! ಫೋ ನಂಬ್ರ-08255239081.
- ಉಡುಗೊರೆ - February 3, 2013
- ಈ ಮರ್ಯಾದಿ ನವಗೆ ಬೇಕೋ - January 31, 2013
- ಹೇಂಗೆ? - September 30, 2012
ತುಂಬಾ ಹತ್ತರೆ ಇದ್ದವು ಬೈಲಿಂಗೆ,ಅವರ ವಿಷಯ ಎಲ್ಲ ಬರೆಯೆಕ್ಕಾರೆ ಒಂದು ಪುಸ್ತಕವೇ ಬೇಕಕ್ಕು.ತುಂಬ ಸರಳ ಮನುಷ್ಯ°.ಆಸಕ್ತಿ ಇದ್ದರೆ ಅವರ ಭೇಟಿ ಅಪ್ಪದು ಕಷ್ಟ ಏನಲ್ಲ.ಮದಲೇ ತಿಳಿಶಿ ಹೋಯೆಕ್ಕಷ್ಟೆ.
ಮುಗುಳಿ ಸುಬ್ಬಣ್ಣ ಭಟ್ಟರ ಪರಿಚಯ ಮಾಡಿಕೊಟ್ಟ ಕೇಜಿಮಾವ೦ಗೆ ಅನಂತ ಧನ್ಯವಾದಂಗ…
“ಊರಿಂಗೆ ಬಂದಿಪ್ಪಲೆ ಹೇಳಿ ಮನೆ ಕಟ್ಟುಸುವಾಗ ಸುಬ್ಬಣ್ಣ ಭಟ್ರು ಹದ್ನೈದು ವರ್ಷ ಹಿಂದೆಯೇ ಮನಗೆ ಕರೆಂಟಿಂಗೆ ಸೋಲಾರ್ ವಿದ್ಯುತ್ ವ್ಯವಸ್ತೆ ಮಾಡಿತ್ತಿದ್ದವು,ಮಳೆಗಾಲಲ್ಲಿ ಹೇಂಗಪ್ಪ ಕರೆಂಟು ಹೇಳಿ ಕೇಳಿಯಪ್ಪಗಳೇ ನವಗೆ ಗೊಂತಾದ್ದದು ಸೋಲಾರ್ ಬೆಶಿ ನೀರಿಂಗೆ ಮಾಂತ್ರ ಬೆಶಿಲು ಬೇಕಾದ್ದು,ಕರೆಂಟಿಂಗಲ್ಲ ಹೇಳಿ.ಇವರಲ್ಲಿ ಇಡೀ ಮನಗೆ ಕರೆಂಟು ಸೋಲಾರಿಂದೇ,ಫೇನು,ಗ್ರೈಂಡರು,ಮಿಕ್ಸಿ,ಲೈಟು ಎಲ್ಲವೂ.”
“ನಮ್ಮ ಪ್ರಾಚೀನ ಹೇಳಿರೆ ವೇದ ಕಾಲದ ಗಣಿತದ ಬಗ್ಗೆ ಅದ್ಭುತ ಪಾಂಡಿತ್ಯ ಇಪ್ಪ ಸುಬ್ಬಣ್ಣ ಭಟ್ರಿಂಗೆ ಗೊಂತಿಲ್ಲದ್ದ ವಿಷಯ ಇರ,ಕುತೂಹಲ ಇಲ್ಲದ್ದ ವಿಷ್ಯವೂ ಇಲ್ಲೆ.”
“ಸೋಲಾರ್ ಪವರ್,ಅಡಕ್ಕೆ ಒಣಗುಸುವ ಮನೆ ಅಲ್ಲದ್ದೆ ಈಗ ಒಂದು ನಾಲ್ಕು ಲಕ್ಶ (ಸ್ವಂತ)ಖರ್ಚಿಲ್ಲಿ ಸೌರ/ಜಲ/ವಾಯು ವಿದ್ಯುತ್ ಉತ್ಪಾದನೆ ಮಾಡುವ ಒಂದು ಪ್ರೋಜೆಕ್ಟಿಂಗೆ ಕೈ ಹಾಕಿದ್ದವು”
ಹೀಂಗಿದ್ದ ವಿಷಯಂಗ ಎಂಗೊಗೆಲ್ಲ ತುಂಬಾ… ತುಂಬಾ… ಆಸಕ್ತಿಯ ವಿಷಯಂಗ… ಬೈಲಿಲ್ಲಿ ಈ ವಿಷಯಂಗ ಬಪ್ಪ ಹಾಂಗೆ ಎಂತಾರೂ ಮಾಡುಲೆ ಎಡಿಗೋ… ಅನಂತ ಧನ್ಯವಾದಂಗ…
ಸುಬ್ಬಣ್ಣ ಭಟ್ರು ಇಸ್ರೋಲಿ ಕೆಲಸ ಮಾಡಿಗೊಂಡಿತ್ತಿದ್ದವು ಹೇಳಿ ಮಾತ್ರ ಗೊಂತಿತ್ತು. ಸಂಪೂಣ೯ ವಿವರವ ತಿಳಿಸಿದ್ದಕ್ಕಾಗಿ ಧನ್ಯವಾದಂಗೊ
ಒಳ್ಳೆ ವ್ಯಕ್ತಿಯ ಬಗ್ಗೆ ಉತ್ತಮ ಮಾಹಿತಿ ಕೊಟ್ಟದಕ್ಕೆ ಕೇಜಿಮಾವಂಗೆ ಧನ್ಯವಾದಂಗೋ
ಒಳ್ಳೆಯವರ ಒಳ್ಳೆ ಶುದ್ದಿ ಕೇಳುವದೇ ಒ೦ದು ಖುಶಿ.ಇತ್ತೀಚೆಗೆ ಯಾವುದೋ ಒ೦ದು ಪತ್ರಿಕೇಲಿ ಅವರ ಬಗ್ಯೆ ಒ೦ದು ಲೇಖನ ಓದಿದ್ದೆ.ಯಾವದರಲ್ಲಿ ಹೇಳಿ ನೆ೦ಪಾವುತ್ತಿಲ್ಲೆ.ಇರಳಿ ಆನಗೆ ಗ೦ಟೆ ಬೇಡ ಹೇಳಿ ಎನ್ನ ಅಪ್ಪ೦ ಯಾವಾಗಳೂ ಹೇಳುಗು.ಅವಕ್ಕೆಲ್ಲ ಪ್ರತ್ಯೇಕ ಪ್ರಚಾರ ಬೇಡ.ಅವರ ಕೆಲಸವೇ ಪ್ರಚಾರ.ಅವರ ಎಲ್ಲಾ ಕೆಲಸ೦ಗಳೂ ಯಶಸ್ವಿ ಆಗಿ ಲೋಕೋಪಕಾರ ಆಗಲಿ ಹೇಳಿ ಆ ಪರಮಾತ್ಮನತ್ರೆ ಕೇಳಿಯೊ೦ಬೊ೦.ಒಪ್ಪ೦ಗಳೊಟ್ಟಿ೦ಗೆ.
ಉದಯವಾಣಿಲಿ ಬಂದಿದ್ದತ್ತು,ಅವರ ಕೇಳದ್ದೆ ಹಾಕುತ್ಸು ಬೇಡ ಹೇಳಿ ಹಾಕಿದ್ದಿಲ್ಲೆ.ಮೊನ್ನೆ ಮಗನ ಮದುವೆಗೆ ಹೇಳಿಕೆ ಹೇಳ್ಲೆ ಬಂದಿಪ್ಪಾಗ ಕೇಳಿ ಹಾಕಿದ್ದು.
“ತುಂಬಿದ ಕೊಡಪ್ಪಾನ ಅಳೆಂಚ”- ಮುಗುಳಿ ಸುಬ್ಬಣ್ಣ ಭಟ್ರು ಹಾಂಗಿದ್ದವಲ್ಲದೊ?
ಅವಕ್ಕೆ ನಮಸ್ಕಾರಂಗೊ,
ಕೇಜಿ ಮಾವಂಗೆ ಧನ್ಯವಾದಂಗೊ.
ತುಂಬಾ ಧನ್ಯವಾದ,
ಅವರ ಕೆಲಸಂಗಳ ಬಗ್ಗೆ ಇನ್ನೊಂದು ವಿವರವಾದ ಲೇಖನ ಇದ್ದರೆ ಒಳ್ಳೆದಿದ್ದತ್ತು.
ಸುರೇಶ ಕೃಷ್ಣ
ಅವರ ಬಗ್ಗೆ ಲೇಖನ ಅಲ್ಲ,ಪುಸ್ತಕವೇ ಬರೆಯೆಕ್ಕಕ್ಕು,ಹಾಂಗಾಗಿ ಅಷ್ಟೇ ಬರದ್ದು.ಇಷ್ಟ ಅದ್ದವು ಅವರ ಮನಗೆ ಹೋದರೆ ತುಂಬಾ ಪ್ರಯೋಜನ ಅಕ್ಕು.ಈಗ ಮಾಂತ್ರ ಅವು ಮಗನ ಮದುವೆಯ ಬೆಶಿಲಿ ಇಕ್ಕು,ದಶಂಬ್ರ ಇಪ್ಪತ್ತೈದರ ವರೆಗೆ.ಕುತೂಹಲ ಇದ್ದವಕ್ಕೆ ವಿವರುಸುದು ಹೇಳಿರೆ ಅವಕ್ಕೆ ಹೋಳಿಗೆ ತಿಂದದಕ್ಕಿಂತಲೂ ರುಚಿ.ಸುಮ್ಮನೇ ಉಪದ್ರ ಕೊಟ್ಟರೆ ಮಾಂತ್ರ ಕೋಪ ಬಕ್ಕು.ಇನ್ನೊಬ್ಬ ಅವರ ಬಗ್ಗೆ ಎಂತ ಹೇಳ್ತ ಹೇಳುದು ಅವಕ್ಕೆ ಅಷ್ಟು ಮುಖ್ಯ ಅಲ್ಲ!
ಮಾವ, ತುಂಬಾ ಧನ್ಯವಾದ.
ಮುಗುಳಿ ಸುಬ್ಬಣ್ಣ ಭಟ್ಟರ ಪರಿಚಯ ಬೈಲಿಂಗೂ ಆತು.ಅವರ ವೈಜ್ಞಾನಿಕ ಮಾಹಿತಿಗೋ ಖಂಡಿತ ಎಲ್ಲೋರಿಂಗೂ ಸಹಾಯ ಅಕ್ಕು.
ಸೌರ ವಿದ್ಯುತ್ ನ ನಾವೆಲ್ಲಾ ನಮ್ಮ ಮನೆಗಳಲ್ಲಿ ಕಡಿಮೆ ಖರ್ಚಿಲಿ ಉತ್ಪಾದನೆ ಮಾಡುಲೆ ಎಡಿಗಾದ ವಿಷಯ.ಈ ಹಿರಿಯರ ಹೆಚ್ಚಿನ ಮಾರ್ಗದರ್ಶನ ಪಡವಲೆ ಆಸೆ ಆಯಿದು.
avu bareda lekhana iddare haaki.
Uttama mahithi doctre.. Danyavadagalu..
:)ಲೇಖನ ಲೈಕಾಯಿದು…
ಕೇಜಿ ಮಾವ, ಎಲೆಮರೆಯ ಕಾಯಿಯ ಹಾಂಗಿಪ್ಪ ಸುಬ್ಬಣ್ಣ ಭಟ್ರ ಪರಿಚಯ ಮಾಡಿದ್ದಕ್ಕೆ ಧನ್ಯವಾದಂಗೋ.. ಶ್ರೀಯುತರ ಮನೆಗೆ ಕೆಲವು ವರ್ಶಗಳ ಹಿಂದೆ ಭೇಟಿ ಕೊಟ್ಟಿತ್ತಿದೆ.. ನಿಜಕ್ಕೂ ಅವರದ್ದು ಅದ್ಭುತ ಪ್ರತಿಭೆ.. ಆದರೆ ಅವರ ಬಗ್ಗೆ ಇಷ್ಟೆಲ್ಲಾ ಗೊಂತಿತ್ತಿಲ್ಲೆ, ತಿಳುದು ಕುಶಿಯಾತು.. ಅವರ ಮುಂದಿನ ಪ್ರಯತ್ನಂಗಳಲ್ಲಿಯುದೆ ದೇವರು ಅದ್ಭುತ ಯಶಸ್ಸು ಕೊಡ್ಲಿ ಹೇಳಿ ಆಶಿಸುತ್ತೆ.. 🙂