Oppanna.com

ಪ್ರದೀಪನ ಸಾಹಸ

ಬರದೋರು :   ಗೋಪಾಲಣ್ಣ    on   17/05/2011    7 ಒಪ್ಪಂಗೊ

ಗೋಪಾಲಣ್ಣ

ಪ್ರದೀಪ ಹೇಳಿರೆ ನಿಂಗಳ ಮನೆಲಿ ಇಪ್ಪ ಮಾಣಿ ಹೇಳಿ ತಿಳಿಕ್ಕೊಳಿ-ಅದರಿಂದ ತೊಂದರೆ ಇಲ್ಲೆ.

ಪ್ರದೀಪನ ಅಪ್ಪ ಅವರ ತಂಗೆಯ ಮನೆಗೆ ಹೋಯಿದವು. ಬಯಿಂದವಿಲ್ಲೆ;ಕತ್ತಲೆಯೂ ಆಗಿ ಹೋತು.

ಕಾಸರಗೋಡಿನ ಹತ್ತರೆ ಹಳ್ಳಿ ಪ್ರದೀಪನ ಊರು.ಅವನ ಅಪ್ಪಂಗೆ ಎರಡೂವರೆ ಎಕ್ರೆ ತೋಟ ಇದ್ದು-ಮನೆಂದ ರಜಾ ದೂರ.

ತೋಟಲ್ಲಿ ಕಾವಲಿಂಗೆ ಒಂದು ಜೆನ ಮಾಡಿದ್ದವು-ಮಾಳವೂ ಇದ್ದು.

ಆ ದಿನ ಜನವೂ ಬಯಿಂದಿಲ್ಲೆ.ಪ್ರದೀಪನೇ ಆ ದಿನ ಕಾವಲಿಂಗೆ ಹೊರಟ.

ಹನ್ನೆರಡು ವರ್ಷದ ಮಾಣಿ ಅವ.ಒಂದು ದಪ್ಪದ ಪೇಂಟು ಸುರುಕ್ಕೊಂಡ.ಒಂದು ಅಂಗಿ,ತಲೆಗೆ ಅಪ್ಪನ ಶಾಲಿನ ಮುಂಡಾಸು. ಐದು ಬೆಟ್ರಿಯ ಟೋರ್ಚು,ಒಂದು ದೊಣ್ಣೆ ಎಲ್ಲಾ ತೆಕ್ಕೊಂಡ.ಅವನ ಅಮ್ಮ ಹೋಗೆಡ ಹೇಳಿದರೂ ಇಷ್ಟೆಲ್ಲಾ ಅಲಂಕಾರ ಮಾಡಿ ಹೆರಟ.ಅವನ ಹಾಸಿಗೆಯನ್ನೂ ತೆಕ್ಕೊಂಡು ಹೋದ!

ತೋಟಲ್ಲಿ ಒಂದಾರಿ ಸುತ್ತು ಬಂದ.ಎಂತ ಸುದ್ದಿಯೂ ಇಲ್ಲೆ.

ಮತ್ತೆ ಮಾಳಕ್ಕೆ ಹತ್ತಿ ಹಾಸಿಗೆ ಸರಿ ಮಾಡಿ ಮನುಗಿದ.

ತುಂಬಾ ಹೊತ್ತಾದ ಮೇಲೆ ಒರಕ್ಕು ಬಂತು.

ಮಧ್ಯರಾತ್ರಿ ಒಂದೊ,ಎರಡೊ ಘಂಟೆ ಆಗಿಕ್ಕು.ಪ್ರದೀಪಂಗೆ ಎಚ್ಚರ ಆತು.ಹುಡುಗಾಟಿಕೆ ಪ್ರಾಯ.ಕೆಳ ಇಳಿದವ ಹಾಂಗೆ ತೋಟಕ್ಕೆ ಒಂದು ಸುತ್ತು ಬಂದ .ತೋಡಿನ ಕರೆಯ ಕಟ್ಟಪ್ಪುಣಿಯ ಹತ್ತರೆ ಹೋಪಾಗ ಹಳ್ಳಲ್ಲಿ ಆರೋ ಬಪ್ಪ ಹಾಂಗೆ ನೀರಿನ ಬಳ ಬಳ ಶಬ್ದ ಕೇಳಿತ್ತು.ಪ್ರದೀಪ ಕಟ್ಟಪ್ಪುಣಿಗೆ ಹತ್ತಿದರೂ ಅವಂಗೆ ಎಂತದೂ ಕಂಡಿದಿಲ್ಲೆ.ಅವ ಕಟ್ಟಪ್ಪುಣಿಲಿ ಇಪ್ಪ ಬಕ್ಕೆ ಹಲಸಿನ ಮರ ಹತ್ತಿದ. ಅಷ್ಟಪ್ಪಗ,ಆರೋ ಎರಡು ಜೆನ ಕಟ್ಟಪ್ಪುಣಿ ಹತ್ತುದು ಕಂಡತ್ತು.ಆರು ಇವು?ಕದ್ದೊಂಬಲೆ ಬಂದವೊ?ಚಳಿಗಾಲಲ್ಲೂ ಅವಂಗೆ ಬೆಗರಿತ್ತು.ಕೋಪವೂ ಬಂತು .ಮೈಯೆಲ್ಲ ಕಣ್ಣಾಗಿಸಿ ನೋಡಿದ.ಬಂದ ಜೆನಂಗೊ ಕಟ್ಟಪ್ಪುಣಿ ಹತ್ತಿ ತೋಟಕ್ಕೆ ಇಳಿದವು.ಒಬ್ಬ ಅಡಕ್ಕೆ ಮರ ಹತ್ತಿದ.ಗೊನೆಯ ಕೊಯ್ದು ಬಳ್ಳಿಲಿ ಇಳಿಶಲೆ ನೋಡಿದ.ಒಬ್ಬ ಕೆಳ ಗೋಣಿ ಹಿಡಿದು ನಿಂದಿದ.”ಅಬ್ಬ ಇವೆ?ಅಪ್ಪ ಇಲ್ಲದ್ದು,ಆಳು ಬಾರದ್ದು ಇವಕ್ಕೆ ಹೇಂಗೆ ಗೊಂತಾತಪ್ಪ?” ಹೇಳಿ ಪ್ರದೀಪ ಆಲೋಚನೆ ಮಾಡಿದ.

ಆಲೋಚನೆಗೆ ಅಲ್ಲಿ ಸಮಯ ಇಲ್ಲೆ.ಅವನ ಕೈಲಿ ಎಂತದೂ ಇಲ್ಲೆ.ಬಡಿಗೆ,ಟೋರ್ಚು ಕೆಳ ಇದ್ದು-ಇವ ಮರದ ಮೇಲೆ ಇದ್ದ.”ಆನು ಇಳುದರೊ? ಎಂತ ಅಕ್ಕು?ಅವು ಎರಡು ಜೆನ ಧಾಂಡಿಗರು ಇದ್ದವು-ಆನು ಸಣ್ಣ ಮಾಣಿ” -ಹೇಳಿ ಅವಂಗೆ ಹೆದರಿಕೆ ಆತು.

ಆದರೂ ಇದು ತೋಟ ನಮ್ಮದು ,ನಾವು ಇಲ್ಲಿ ಹೆದರೆಕ್ಕು ಎಂತಗೆ?ಹೇಳಿ ಅವ ಯೋಚನೆ ಮಾಡಿದ.

ಹಲಸಿನ ಮರಲ್ಲಿ ತುಂಬ ಗುಜ್ಜೆ ಬಿಟ್ಟಿದು.

ಪ್ರದೀಪ ಒಂದು ಕುಜುವೆಯ ಪೀಂಟ್ಸಿ ಮುರಿದು ಇಡುಕ್ಕಿದ. ಅವ ಆಟ ಆಡುವ ಮಾಣಿ- ಅವನ ನೋಟ ಸರೀ ಬಿದ್ದತ್ತು-ಸರಿಯಾಗಿ ಮರದ ಮೇಲೆ ಇಪ್ಪ ವ್ಯಕ್ತಿಯ ಬೆನ್ನಿಂಗೆ!

ಆ ಮನುಷ್ಯಂಗೆ ಪಕ್ಕನೆ ಗಾಬರಿ ಆಗಿ ಕೈ ಬಿಟ್ಟು ಹೋತು-ಸೀದಾ ಅಡಕ್ಕೆ ಮರದ ಬುಡಕ್ಕೆ ಬಿದ್ದತ್ತು.ಅಷ್ಟಪ್ಪಗ ಇನ್ನೊಬ್ಬ ಓಡಲೆ ಹವಣಿಸಿತ್ತು-ತೆಕ್ಕೋ,ಇನ್ನೊಂದು ಗುಜ್ಜೆ ಅದರ ಕಾಲಿಂಗೆ!ಒಂದರ ಸೊಂಟ ಮುರುತ್ತು,ಇನ್ನೊಂದರ ಕಾಲು ಮುರುತ್ತು.ಕಟ್ಟಪ್ಪುಣಿ ಹತ್ತುವಾಗ ಅದೂ ಕೆಳ ಬಿದ್ದತ್ತು.ಓಡಲೆ ಎಡಿಗಾಯಿದಿಲ್ಲೆ.

ಪ್ರದೀಪ ಕೆಳ ಇಳಿದು ಇಬ್ಬರನ್ನೂ ಬಳ್ಳಿಲಿ ಮರಕ್ಕೆ ಕಟ್ಟಿ ಹಾಕಿದ.ಹತ್ತರೆ ಇಪ್ಪ ನಮ್ಮವರ ಮನೆಗೆ ಹೋಗಿ ಅಲ್ಲಿದ್ದವರ ಕರಕ್ಕೊಂಡು ಬಂದ.

ಅವು ಬಂದು ಎಲ್ಲಾ ಬೇಕಾದ ಹಾಂಗೆ ಮಾಡಿದವು .ಪೋಲೀಸರಿಂಗೆ ಕಳ್ಳರ ಒಪ್ಪಿಸಿದವು.

ಮರುದಿನ ಊರಿಲಿ,ಶಾಲೆಲಿ ಎಲ್ಲಾ ಇದೇ ಸುದ್ದಿ-ಅಬ್ಬಾ ಈ ಮಾಣಿಯ ಧೈರ್ಯವೆ ಹೇಳಿ ಎಲ್ಲರೂ ಹೊಗಳಿದವು.

“ಇವ ಎಂತ, ಬರೀ ಹೇಡಿ-ಅಪ್ಪ ಇಲ್ಲೆ ಹೇಳಿ ಕುಶಾಲಿಂಗೆ ತೋಟಕ್ಕೆ ಹೋದ-ಜೀವ ಭಯಲ್ಲಿ ಎರಡು ಕುಜುವೆ ಪೀಂಟಿಸಿ ಇಡುಕ್ಕಿದ-ಅಷ್ಟೆ”-ಹೇಳಿ ಅವನ ಅಕ್ಕ ತಮಾಷೆ ಮಾಡಿತ್ತು.ಅದು ಹೇಳಿದ್ದರಲ್ಲಿ  ರಜಾ ಸತ್ಯ ಇತ್ತು – ಅಂದಿನ ವರೆಗೆ ಕತ್ತಲೆ ಇಪ್ಪ ಕೋಣೆಗೆ ಹೋಯೆಕ್ಕಾದರೂ ಅವನ ಅಕ್ಕನೊ ಅಮ್ಮನೋ ಒಟ್ಟಿಂಗೆ ಬರೆಕ್ಕಾಗಿತ್ತು,ಅವಂಗೆ.

ಶಕ್ತಿ ಇಲ್ಲದಿದ್ದರೂ,ಯುಕ್ತಿ , ಶೌರ್ಯ ,ಧೈರ್ಯ ಇದ್ದರೆ  ಪ್ರದೀಪನ ಹಾಂಗಿದ್ದ ಮಾಣಿಂಗಳೂ ಜೈಸುಗು-ಅಲ್ಲದೊ?

7 thoughts on “ಪ್ರದೀಪನ ಸಾಹಸ

  1. ಮಾಣಿಯ ಸಾಹಸದ ಕತೆ ಲಾಯಕಿತ್ತು. ಅವನ ಸಮಯ ಪ್ರಜ್ನೆ ಮೆಚ್ಚುವಂತದ್ದು. ಮಾಳವ ನೆಂಪು ಮಾಡಿದ ಗೋಪಾಲಣ್ಣಂದ್ಗೆ ಧನ್ಯವಾದಂಗೊ.

  2. ಸಣ್ಣಾಗಿಪ್ಪಗ ತೋಟದ ನೆಡೂಕೆ ಇದ್ದ ಮಾಳದ ನೆ೦ಪಾತು ಗೋಪಾಲಣ್ಣ.
    ಪ್ರದೀಪನ ಸಮಯಪ್ರಜ್ಞೆ ಕೊಶಿ ಕೊಟ್ಟತ್ತು.

  3. [ಹನ್ನೆರಡು ವರ್ಷದ ಮಾಣಿ ಅವ ] – ವಾಸ್ತವಕ್ಕೆ ತುಸು ಅತಿಶಯೋಕ್ತಿ ಹಾಂಗೆ ಕಂಡರೂ ಅಪರೂಪಲ್ಲಿ ಒಬ್ಬ ಹೀಂಗಿರ್ಪ ಗಟ್ಟಿಗ ಹುಟ್ಟಿ ಬತ್ತ ಹೇಳುವಲ್ಲಿ ಇದೊಂದು ಸಣ್ಣ ಉದಾಹರಣೆ. ಕೆಲವೊಂದು ಮನೆ ಪರಿಸ್ಠಿತಿಲಿ ಮಕ್ಕೊಗೆ ಚಿಕ್ಕಂದಿನಿಂದಲೇ ಜವಾಬ್ದಾರಿ, ಕರ್ತವ್ಯ ಪ್ರಜ್ಞೆ, ಸಾಹಸ ಗುಣ, ಧೈರ್ಯ ರಕ್ತಗತವಾಗಿ ಬೆಳೆತ್ತು ಹೇಳಿ ಗೋಪಾಲಣ್ಣ ಎತ್ತಿ ತೋರ್ಸಿದ್ದವು.

    ಅಂದರೂ ಈ ಸಣ್ಣ ಮಾಣಿಗೆ ಇರುಳು ಮಾಳಕ್ಕೆ ಹೆರಡಲೆ ಧೈರ್ಯ ಬಂದದು ಸಾಕನ್ನೇ.! ಅದು ಇರಲಿ, ಆ ನೆಡು ಇರುಳು , ನೀರಿನ ಬಳ ಬಳ ಕೇಳುವಾಗ ಭೂತ ಪ್ರೇತ ಪಿಶಾಚಿ ಹೆದರಿಗೆ ಆಗಿ ಜ್ವರ ಹಿಡಿಯದ್ದು ಅವನಜ್ಜಿ ಪುಣ್ಯ. ನವಗಾಗಿದ್ದರೆ ಮಾಳವೇ ಚಂಡಿ ಆವ್ತಿತ್ತೋ!! ಅದಲ್ಲ, ಆ ಕಟ್ಟಪುಣಿಲಿ ಹರೆತ್ತದು ಏನಾರು ಇರ್ತಿದ್ರೆ?!! ಯಪ್ಪಾ …ಎನ್ನಂದಾಗಪ್ಪ !!.

    ಗುಜ್ಜೆ ನೋಟ ಸರೀ ತಾಗಿತ್ತು . ಒಳ್ಳೆದಾತದು. ಇಲ್ಲದ್ರೋ …ಹು…
    ಕಳ್ಳನ್ಗೊ ಬಳ್ಳಿ ತಂದದು ಬಹಳ ಗುಣ ಆತು. ಮಾಣಿಗೂ ಟೈಮಿಂಗೆ ಹೊಳದತ್ತು ನೋಡಿ. ಇಲ್ಲದ್ರೆ ಬಾಳೆ ಬಳ್ಳಿಯೇ ಗತಿ.

    [ಹತ್ತರೆ ಇಪ್ಪ ನಮ್ಮವರ ಮನೆಗೆ ಹೋಗಿ …] – ಅಜ್ಜಕ್ಕಾನ ಭಾವನೋ, ಚುಬ್ಬಣ್ಣ ಭಾವನೋ? ಎಂತಕೆ ಹೇಳಿರೆ, ಬೇಗಕ್ಕೆ ಎಚ್ಚರಿಗೆ ಆವ್ತಿಲ್ಲೇ ಇದಾ ಅವಕ್ಕೆ.

    “ಶಕ್ತಿ ಇಲ್ಲದಿದ್ದರೂ,ಯುಕ್ತಿ ” – ಗೋಪಲಣ್ಣ , ಲಾಯಕ್ಕ ಆಯ್ದು ಹೇಳಿ ನಮ್ಮ ಮೆಚ್ಚುಗೆಯ ಒಪ್ಪ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×