Oppanna.com

ಭರಣಿ ಒಡದ ಮುದಿಯಜ್ಜ

ಬರದೋರು :   ಪಟಿಕಲ್ಲಪ್ಪಚ್ಚಿ    on   21/06/2013    5 ಒಪ್ಪಂಗೊ

ಪಟಿಕಲ್ಲಪ್ಪಚ್ಚಿ

ಎನ್ನ ಒಬ್ಬ ಮಲೆಯಾಳಿ ‘ಜೋಸ್ತಿ’ ಹೇಳಿದ ಕತೆಯ ರಜ್ಜ ಬದಲಿಸಿ ಈ ಕೆಳ ಹೇಳಿದ್ದೆ –

ಒಬ್ಬಂಗೆ ದೊಡ್ಡ ಸಂಸಾರದ ಹೊಣೆ ಇತ್ತು – ಎಂಟು ಮಕ್ಕ (ನಾಲ್ಕು ಗಂಡು, ನಾಲ್ಕು ಹೆಣ್ಣು). ಮನೆಲಿ ಅವನೂ, ಹೆಂಡತ್ತಿಯೂ, ಅತ್ತೆಯೂ ಸೇರಿ ಹನ್ನೊಂದು ಜೆನರ ಸಂಸಾರ. ಆದಾಯ ಕಡಮ್ಮೆ. ಮನೆ ಖರ್ಚಿಂಗೆ ತತ್ವಾರ. ಮನೆಯೋರ ಎಲ್ಲಾ ಬಳಕೆಗೆ ಬೇಕಾದ ನೀರಿನ ಕೈ ಪಂಪಿಲಿ ಅವನೇ ತುಂಬಿಸಿ (ಸುಮಾರು ಎರಡು ಗಂಟೆ ಕೆಲಸ), ತೋಟಕ್ಕೆ ಹೋಗಿ ಒಂದಾಳಿನ ಕೆಲಸ ಮಾಡೆಕ್ಕು. ಹೀಂಗೆಲ್ಲಾ ಮಾಡಿರೂ, ಅಡಕ್ಕೆಗೆ ಬೆಲೆ ಇಲ್ಲದ್ದ ಆ ಕಾಲಲ್ಲಿ ಹೇಂಗೋ ಸಾಲ, ಸೋಲ ಮಾಡಿ ಮಕ್ಕಳ ಅವರವರ ದಡ ಸೇರಿಸಿದ.

ಗಂಡು ಮಕ್ಕ ಉದ್ಯೋಗಕ್ಕೆ ಸೇರಿ ಸಂಪಾದನೆ ಸುರು ಮಾಡಿದ ಮೇಲೆ ಸಾಲ ಎಲ್ಲ ತೀರಿತ್ತು, ಮರ್ಯಾದೆಲಿ ಬದುಕ್ಕುವ ಹಾಂಗಾತು. ಪುಳ್ಳಿಯಕ್ಕ, ಅವರ ಮಕ್ಕ ಎಲ್ಲ ಆದವು. ಇವ ಈಗ ಮುದಿ ಅಜ್ಜ. ಪ್ರಾಯ ಆದ ಹಾಂಗೇ ಕಣ್ಣು, ಮೆದುಳು, ಕೈ ಕಾಲು ಸ್ವಾಧೀನ ತಪ್ಪುಲೆ ಸುರು ಆತು. ಎಲ್ಲೋರೂ ಮುದಿ ಅಜ್ಜನ ದುಡಿಮೆಯ ಮರವಲೆ ಸುರು ಮಾಡಿದವು. ಒಂದು ದಿನ ಮುದಿ ಅಜ್ಜ ಕಣ್ಣು ಕಾಣದ್ದೆಯೋ ಅಲ್ಲಾ ಕಾಲು ಸ್ವಾಧೀನ ತಪ್ಪಿಯೋ ಡಂಕಿ ಉಪ್ಪಿನ ಕಾಯಿ ಭರಣಿಯ ಒಡದು ಹಾಕಿದ. ತೆಕ್ಕೊಳ್ಳಿ ಅವಂಗೆ ಆ ದಿನಂದ ‘ಭರಣಿ ಒಡದ ಮುದಿ ಅಜ್ಜ’ ಹೇಳ್ತ ಹೆಸರು ಖಾಯಂ ಆತು. ಆರೇ ಅದರೂ ಎಂತಾರೂ ಅವನ ಬಗ್ಗೆ ಹೇಳಿಕ್ಕಾದರೆ ‘ಭರಣಿ ಒಡದ ಮುದಿ ಅಜ್ಜ’ ಹೇಳೊದೇ.

ಕತೆ ಇಲ್ಲಿಗೆ ಮುಗುತ್ತು. ಮಾಡಿದ ಸಾವಿರ ಒಳ್ಳೆ ಕೆಲಸಂಗಳ ಮುದಿ ಪ್ರಾಯಲ್ಲಿ ಪ್ರಮಾದಂದಾಗಿ ಆದ ತಪ್ಪು ಹೇಂಗೆ ಮರೆಸುತ್ತು!

ಎನ್ನ ಮನೆಲಿ ಎನ್ನ ಅಪ್ಪನೂ ಹೀಂಗೇ ಪ್ರಾಯ ಆದೋರು. ಅವರ ಬಗ್ಗೆಯೂ ಒಂದೊಂದರಿ ಎನಗೆ ‘ಒಂದು ಚೂರು’ ಹೀಂಗೆ ಕಂಡುಗೊಂಡು ಇತ್ತು – ಎನ್ನ ‘ಜೋಸ್ತಿ’ಯ ಕತೆ ಕೇಳುವಲ್ಲಿ ವರೆಗೆ. ಈಗ ತಿದ್ದಿಗೊಂಡಿದೆ.

ನಿಂಗಳಲ್ಲೂ ಹೀಂಗಿಪ್ಪ ಅಜ್ಜನೋ, ಅಜ್ಜಿಯೋ ಇದ್ದರೆ ಈ ಕತೆ ನೆಂಪು ಮಾಡಿಗೊಳ್ಳಿ – ಅವರರಿಂದ ಎಂತಾದರೂ ವಯೋ ಸಹಜ ತಪ್ಪು ಆದರೆ.

5 thoughts on “ಭರಣಿ ಒಡದ ಮುದಿಯಜ್ಜ

  1. ಕತೆ ಮನಮುಟ್ಟುವಂತದ್ದು.

  2. ವಿಅಾರ ಸರಿ ಆದ್ದೆ. ಆದರೆ ನೆತ್ತರಿನ ಕಾವು ಇಪ್ಪಾಗಳೇ ಗೊಂತಾದರೆ ಎಷ್ಟೋ ಹಿರಿಯೋರ ಬದುಕು ಹಗುರ ಆಕ್ಕು.

  3. ಒಳ್ಳೆ ಸಂದೇಶ ಅಪ್ಪಚ್ಚಿ.

  4. ಅಪ್ಪಚ್ಹಿ,
    ಒಳ್ಲೆ ವಿಚಾರ. ನಿ೦ಗೊ ಬರದಪ್ಪಗ ಎನಗೂ ಒ೦ದು ಕತೆ ನೆನಪ್ಪಾತು.
    ಒ೦ದು ಹೆಮ್ಮಕ್ಕೊ ಅದರ ವೃದ್ಧಾಪ್ಯಲ್ಲಿಪ್ಪ ಮಾವ೦ಗೆ ಒ೦ದು ಹಳೆ ಚೋಕಟೆ ಅಲುಮಿನಿಯಮ್ ಪಾತ್ರಲ್ಲಿ ದಿನಾಗಳು ಅಶನ ಬಳುಸಿಯೊ೦ದಿತ್ತಡ. ಗ೦ಡ, ಮಗ೦ಗೆ ಅದಕ್ಕೆ ಸ್ಟೀಲಿನ ಬಟ್ಲು. ಮಾವ ತೀರಿ ಹೋದ. ಕೆಲವು ದಿನ ಕಳುದಪ್ಪಗ ಗುಜುರಿ ಸಾಮಾನಿನ ಜೆನಕ್ಕೆ ಆ ಪಾತ್ರವ ಮಾರಿತ್ತಡ. ಇದರ ನೋಡಿದ ಅದರ ೫ ವರ್ಶದ ಸಣ್ಣ ಮಾಣಿ ಹಟ ಮಾಡಿ ವಾಪಸ್ಸು ಆ ಪಾತ್ರವ ಗುಜುರಿದರತ್ತರೆ ಕೇಳಿ ತೆಕ್ಕೊ೦ಡ. ಗುಜುರಿದು ಹೋದ ಮತ್ತೆ ಅಮ್ಮ ಕೇಳಿತ್ತು- ಎ೦ತಕೆ ಮಗ ಅಷ್ಟು ಹಟ ಮಾಡಿ ಆ ಪಾತ್ರವ ತೆಕ್ಕೊ೦ಡೆ? ಅದು ಇನ್ನೆ೦ತ ಉಪಯೋಗಕ್ಕೆ? ಮುಗ್ಡ ಮನಸ್ಸಿನ ಮಾಣಿ ಹೇಳಿದಡೊ-ಅಮ್ಮಾ, ಅಜ್ಜನ ನೀನುದೆ ಅಪ್ಪ೦ದೆ ನೋಡಿಗೊ೦ಡ ಹಾ೦ಗೆ ದೊಡ್ಡಪ್ಪಗ ಆನುದೆ ಎನ್ನ ಹೆ೦ಡತಿದೆ ನಿ೦ಗಳ ನೋಡಡದಾ? ಅಸ್ಟಪ್ಪಗ ನಿ೦ಗೊಗೆ ಅಶನ ಕೊಡ್ಲೆ ಆ ಪಾತ್ರವ ವಾಪಾಸು ತೆಕ್ಕೊ೦ಡೆ ಆನು.
    ”ತಲಗೆರದ ನೀರು ಕಾಲಿ೦ಗೆ ಬಾರದ್ದಿಕ್ಕೊ” ಹೇಳುವ ಹಾ೦ಗೆ ಆತು.

  5. ಕತೆ ಸಣ್ಣದಾದರೂ ಗಹನವಾದ ವಿಚಾರದತ್ತ ಬೆಳಕು ಬೀರಿದ್ದು. ಇದನ್ನೆಯೋ ಓ ಅತ್ಲಾಗಿಯಾಣೋರು ‘ಶಾರ್ಟ್ ಏಂಡ್ ಕ್ಯೂಟ್ ಸ್ವೀಟ್’ ಹೇಳುಸ್ಸು!.
    ನಿಂಗಳಾಂಗಿಪ್ಪ ಹಿರಿಯೋರ ವಿಚಾರ, ಜೀವನಾನುಭವ ಬೈಲಿಂಗೆ ಸದಾ ಬೇಕು ಅಪ್ಪಚ್ಚಿ. ಧನ್ಯವಾದಂಗೊ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×