- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಏಕವಾಪೀಜಲಂ ಪಶ್ಯ ಇಕ್ಷೌ ಮಧುರತಾಂ ವ್ರಜೇತ್।
ನಿಂಬೇ ಕಟುಕತಾಂ ಯಾತಿ ಪಾತ್ರಾಪಾತ್ರಾಯ ಭೋಜನಮ್।।
ಅನ್ವಯ:
ಏಕವಾಪೀಜಲಂ ನಿಂಬೇ ಕಟುಕತಾಂ ಯಾತಿ। ಇಕ್ಷೌ ಮಧುರತಾಂ ವ್ರಜೇತ್।
(ತಸ್ಮಾತ್) ಪಶ್ಯ! ಭೋಜನಂ
ಪಾತ್ರಾಪಾತ್ರಾಯ (ವ್ಯತ್ಯಸ್ಯತೇ)
ಭಾವಾರ್ಥ:
ಒಂದೇ ಬಾವಿಯ ನೀರಿನ ಕಬ್ಬಿನ ಬುಡಕ್ಕೂ ಹಾಕಿ ಕಹಿಬೇವಿನ ಬುಡಕ್ಕೂ ಹಾಕಿ.
ಕಬ್ಬಿನ ರಸದ ರುಚಿ ನೋಡಿ, ಕಹಿಬೇವಿನ ರಸದ ರುಚಿ ನೋಡಿ.
ಒಂದೇ ಬಾವಿಯ ನೀರು ಒಂದೇ ಮಣ್ಣಿನ ಮೂಲಕ ಬೇರೆ ಬೇರೆ ಗೆಡುಗಳ ಬೇರುಗಳಲ್ಲಿ ಹೊಕ್ಕಿ ಹೆರಡುವಗ ರುಚಿ ಸಂಪೂರ್ಣವಾಗಿ ಬೇರೆ ಬೇರೇ ಆವುತ್ತು.
ಉಂಬ ಊಟ ಒಂದೇ ಆದರೂ ಅದೇ ಆಹಾರ ಆರಲ್ಲಿ ಯಾವ ಸ್ವಭಾವ ಇದ್ದೋ ಅದೇ ಸ್ವಭಾವವನ್ನೇ ವೃದ್ಧಿ ಮಾಡ್ತು.
ಒಂದು ಬಂದೂಕು ಸೈನಿಕನ ಕೈಗೆ ಸಿಕ್ಕಿದರೆ ಅವ ದೇಶರಕ್ಷಣೆ ಮಾಡುಗು. ಭಯೋತ್ಪಾದಕರ ಕೈಗೆ ಸಿಕ್ಕಿದರೆ ಅಮಾಯಕರ ಜೀವ ತೆಗಗು.
ಸತ್ಪಾತ್ರರಿಂಗೆ ಕೊಟ್ಟದು ಸದುಪಯೋಗ ಅಕ್ಕು!
ಅಪಾತ್ರರಿಂಗೆ ಕೊಟ್ಟದು ಅಪಾಯಕಾರಿಯೇ ಅಕ್ಕು!!
ಅಪ್ಪು
ಆಹಾರವೂ ಸಾತ್ವಿಕ ತಿಂಬವನೂ ಸಾತ್ವಿಕ ಆದರೆ ಫಲವೂ ಸಾತ್ವಿಕ
ಸಾತ್ವಿಕ ಆಹಾರದವರ ಸಾತ್ವಿಕ ಗುಣಕ್ಕೆ, ಈ ಸೂಕ್ತಿ ಆಧಾರ ಕೊಡ್ತು.