- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಪತ್ರಂ ಚೇನ್ನ ಕರೀರವಿಟಪೇ ದೋಷೋ ವಸಂತಸ್ಯ ಕಿಮ್।
ನೋಲೂಕೋಽಪ್ಯವಲೋಕತೇ ಯದಿ ದಿವಾ ಸೂರ್ಯಸ್ಯ ಕಿಂ ದೂಷಣಮ್
ಧಾರಾ ನೈವ ಪತಂತಿ ಚಾತಕಮುಖೇ ಮೇಘಸ್ಯ ಕಿಂ ದೂಷಣಮ್।
ಯತ್ಪೂರ್ವಂ ವಿಧಿನಾ ಲಲಾಟಲಿಖಿತಂ ತನ್ಮಾರ್ಜಿತುಂ ಕಃ ಕ್ಷಮಃ।।
ಅನ್ವಯ:
ಯದಿ ಕರೀರವಿಟಪೇ ಪತ್ರಂ ನೈವ ಅಸ್ತಿ ಚೇತ್ ವಸಂತಸ್ಯ ಕಿಂ ದೂಷಣಮ್?
ಯದಿ ಉಲೂಕಃ ದಿವಾ ಅಪಿ ನ ಅವಲೋಕತೇ ಚೇತ್ ಸೂರ್ಯಸ್ಯ ಕಿಂ ದೂಷಣಮ್?
ಯದಿ ಚಾತಕಮುಖೇ ಧಾರಾಃ ನೈವ ಪತಂತಿ ಚೇತ್ ಮೇಘಸ್ಯ ಕಿಂ ದೂಷಣಮ್?
ವಿಧಿನಾ ಪೂರ್ವಂ ಏವ ಯತ್ ಲಲಾಟಲಿಖಿತಂ ತತ್ ಮಾರ್ಜಿತುಂ ಕಃ ಕ್ಷಮಃ ಭವತಿ?
ಭಾವಾರ್ಥ:
ವಸಂತಕಾಲ ಬಂದರೆ ಎಲ್ಲಾ ಮರಂಗಳೂ ಚಿಗುರಿ ಹಸುರಲೆ ಬಕ್ಕು. ಹಾಂಗೇಳಿ ಮರಳುಗಾಡಿನ ಕಳ್ಳಿಲಿ ಎಲೆ ಬಾರದ್ದರೆ ಅದು ವಸಂತರಾಜನ ತಪ್ಪಾ?
ಇರುಳು ಏನೂ ಕಾಣದ್ದರೂ ಸೂರ್ಯೋದಯ ಆಗಿ ಬೆಣಚ್ಚು ಬಿಟ್ಟಪ್ಪಗ ಎಲ್ಲಾ ಕಾಂಬಲೆ ಸುರು ಆವುತ್ತು. ಆದರೆ ಗೂಬೆಗೆ ಮಾತ್ರ ಹಗಲು ಕಣ್ಣು ಕಾಣದ್ರೆ ಅದು ಸೂರ್ಯನ ತಪ್ಪು ಹೇಂಗಪ್ಪದು?
ಚಾತಕ ಪಕ್ಷಿ ಮಳೆ ಹನಿಯ ಮಾತ್ರ ಕುಡಿವದು.
ಊರೆಲ್ಲಾ ಮಳೆ ಬಂದು ಬೆಳ್ಳ ಹೋದರೂ ಅದರ ಬಾಯಿಗೆ ಒಂದು ಹನಿ ನೀರು ಬೀಳದ್ದರೆ ಅದಕ್ಕೆ ಮೋಡ ಎಂತ ಮಾಡ್ಲೆಡಿಗು.
ಬೇರೆವರ ಮೇಲೆ ದೂರು ಹಾಕಿ ಏನೂ ಸುಖ ಇಲ್ಲೆ
ಎಲ್ಲಾ ಸರಿಯಾಗಿ ಆದರೆ ಅದು ಆನು ಮಾಡಿದ್ದು
ಎಲ್ಯಾರು ಚೂರು ತಟವಟ ಆಗಿ ಆನಾಹುತ ಆದರೆ ಅದಕ್ಕೆ ನೀನು ಕಾರಣ ಹೇಳೂದು ಲೋಕದ ರೂಢಿ.
ಆದರೆ ವಾಸ್ತವ ಬೇರೆಯೇ.
ವಿಧಿ ಎಲ್ಲವನ್ನೂ ಮೊದಲೇ ನಿರ್ಣೈಸಿ ಹಣೆಲಿ ದಾಖಲು ಮಾಡಿದ್ದ. ಅದರ ಉದ್ದಿ ರಿಪೇರಿ ಮಾಡ್ಲೆ ಆರೂ ಸಮರ್ಥರಲ್ಲ.
ಬಾವಿಂದ ಎಳದರೂ ಸಮುದ್ರಲ್ಲಿ ಮುಳುಗುಸಿದರೂ ನಮ್ಮ ಚೆಂಬಿಲಿ ಹಿಡಿವದು ಅಷ್ಟೇ. ಸುಮ್ಮನೆ ಇನ್ನೊಬ್ಬರ ದೂಷಣೆ ಮಾಡಿ ಏನೂ ಸುಖ ಇಲ್ಲೆ.
ನಮೋ ನಮಃ
ಒಪ್ಪ
ಧನ್ಯವಾದ