- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಶಿವೇ ರುಷ್ಟೇ ಗುರುಸ್ತ್ರಾತಾ ಗುರೌ ರುಷ್ಟೇ ನ ಶಂಕರಃ।ತಸ್ಮಾತ್ಸರ್ವಪ್ರಯತ್ನೇನ ಶ್ರೀಗುರುಂ ತೋಷಯೇನ್ನರಃ।।
ಕಾಯೇನ ಮನಸಾ ವಾಚಾ ಸರ್ವದಾ ತತ್ಪರೋ ಭವೇತ್।
ಅನ್ಯಥಾ ತು ಕೃತಘ್ನಃ ಸ್ಯಾತ್ಕೃತಘ್ನೇ ನಾಸ್ತಿ ನಿಷ್ಕೃತಿಃ।।
ಅನ್ವಯಃ
ಶಿವೇ ರುಷ್ಟೇ (ಸತಿ) ಗುರುಃ ತ್ರಾತಾ (ಭವತಿ)।
ಗುರೌ ರುಷ್ಟೇ (ಸತಿ) ನ ಶಂಕರಃ (ಅಪಿ ತ್ರಾಯತೇ)।
ತಸ್ಮಾತ್ ಸರ್ವಪ್ರಯತ್ನೇನ ಶ್ರೀಗುರುಂ ನರಃ ತೋಷಯೇತ್।
ಕಾಯೇನ ಮನಸಾ ವಾಚಾ ಸರ್ವದಾ ತತ್ಪರೋ ಭವೇತ್ ।
ಅನ್ಯಥಾ (ಸಃ) ಕೃತಘ್ನಃ ಸ್ಯಾತ್।
ಕೃತಘ್ನೇ ನಿಷ್ಕೃತಿಃ ನ ಅಸ್ತಿ ।
ಭಾವಾರ್ಥ:
ಶಿವಂ ಕಲ್ಯಾಣಮಸ್ಯಾಸ್ತೀತಿ ಶಿವಃ
ಶಿವ ಕಲ್ಯಾಣಕಾರಕ. ಆದರೆ ಅವಂಗೆ ಕೋಪ ಬಂದರೆ ಅವನೇ ರುದ್ರ. ಅವನ ಕೋಪಕ್ಕೆ ಎದುರಿಲ್ಲೆ. ಆದರೂ ಗುರು ಮಾರ್ಗದರ್ಶನ ನೀಡಿ ರುದ್ರನ ಕೋಪವನ್ನೂ ತಣಿಸಿ ರಕ್ಷಣೆ ಮಾಡುಗು.
ಆದರೆ ಗುರುವಿಂಗೇ ಕೋಪ ಬಂದರೆ?
ಆವಗ ಸರ್ವಮಂಗಳಕಾರಕನಾದ ಶಂಕರನೂ ರಕ್ಷಣೆಗೆ ಬಾರ. ಏಕೆ? ಭೂಮಿಯೇ ಬಾಯಿ ಬಿಟ್ಟರೆ ನಿಂಬದೆಲ್ಲಿ?
ಹುಟ್ಟಿದಲ್ಲಿಂದ ಸಾವಿನ ವರೆಗೂ ಒಟ್ಟಿಂಗೇ ಇದ್ದು ಮಾರ್ಗದರ್ಶನ ಮಾಡಿ ಇಹಪರಲ್ಲಿಯೂ ಕಾಯುವವ ಗುರು. ಹಾಂಗಾಗಿ ಕಾಯೇನ ವಾಚಾ ಮನಸಾ ಅನುಕ್ಷಣವೂ ಗುರುಚರಣಸೇವೆ ಮಾಡೆಕ್ಕಾದ್ದು ಕರ್ತವ್ಯ.
ಇಲ್ಲದ್ದರೆ ಅದು ಕೃತಘ್ನತೆ ಆವುತ್ತು .
ಯಾವದೇ ದೋಷಕ್ಕೆ ಪರಿಹಾರ ಇದ್ದು ಆದರೆ ಕೃತಘ್ನತೆಗೆ ಗುರುದ್ರೋಹಕ್ಕೆ ಪರಿಹಾರ ಇಲ್ಲೆ.
ಕೃತಘ್ನರಿಂಗೆ ಮುಕ್ತಿ ಇಲ್ಲೆ.
ಆದ್ದರಿಂದ ಸರ್ವಪ್ರಯತ್ನಪೂರ್ವಕ ಗುರುವಿಂಗೆ ಸಂತೋಷ ಅಪ್ಪ ಹಾಂಗೆ ನಡಕ್ಕೊಳ್ಳಲೇ ಬೇಕು.
ಅಪ್ಪು
ಗುರುದ್ರೋಹಕ್ಕೆ ಪರಿಹಾರ ಇಲ್ಲೆ
ಇದ್ದರೂ ಗುರುದ್ರೋಹಿಗೆ ಅದರ ಅಪೇಕ್ಷೆ ಇಲ್ಲೆ
ಹಂದಿ ಅಬ್ಬಿ ಕೊಟ್ಟಗೆಲಿ ಮೀತ್ತಾ?
ಅದಕ್ಕೆ ಚರಂಡಿ ನೀರೇ ಆಯೆಕ್ಕು
ಖಂಡಿತ ಗುರುದ್ರೋಹಕ್ಕೆ ಪರಿಹಾರ ಇಲ್ಲೆ. ಡಾಕ್ಟ್ರೇ..ಇಂದ್ರಾಣ ಶ್ರೀಸೂಕ್ತಿಯೂ ಇದೇ.”ಗುರುಕರುಣೆಯೊಂದಿರಲು ಮತ್ತೇನಿಲ್ಲದಿದ್ದರೇನು?.ಗುರುಕರುಣೆಯಿಲ್ಲದಿರೆ; ಮತ್ತೇನಿದ್ದೇನು!.