Oppanna.com

ಹವಿಕ ಹೆಮ್ಮಕ್ಕಳ ಹೃದಯಗೀತೆಗೊ

ಬರದೋರು :   ಶರ್ಮಪ್ಪಚ್ಚಿ    on   10/10/2017    7 ಒಪ್ಪಂಗೊ

ಹವ್ಯಕ ಹಾಡುಗೊ

ಬಡೆಕ್ಕಿಲ ಸರಸ್ವತಿ ಅತ್ತೆ ಅವರ ಸಂಗ್ರಹಂದ ಕೆಲವು ಹವ್ಯಕ ಹಾಡುಗಳ ನವಗಾಗಿ ಕಳ್ಸಿಕೊಟ್ಟಿದವು.ಬಡೆಕ್ಕಿಲ ಸರಸ್ವತಿ

 

ಕಳುದ ಶತಮಾನಕ್ಕೂ ಹಿಂದಾಣ ಹವಿಕ ಹೆಮ್ಮಕ್ಕಳ ಹೃದಯಗೀತೆಗೊ

ಮಗುವೆ ಬಾ ಮುದ್ದುಮುಗುಳೆ ಬಾ
ವಜ್ರ..ದಾ ಹರಳೇ ಬಾ….
ಅಜ್ಜನಾ ಕೊರಳ… ಪದಕಾವೇ ಬಾ
ಎಂದೂ ಅಜ್ಜಿ ಮೊಮ್ಮಗನ
ಕರೆವಾಳೂ ಕರೆವಳೂ

ಏಕಳುವೇ ಎಲೆ ರಂಗಾ
ಬೇಕಾದ್ದೂ ನಿನಗುಂಟೂ
ನಾಕೆಮ್ಮೆ…ಕರೆದಾ ನೊರೆಹಾಲೂ
ನೊರೆಹಾಲು ನಿನಗುಂಟೂ ನಿನಗುಂಟೂ
ನೀ ಕೇಳಿದಾಗ…. ಕೊಡುವೇ…..
ಕೊಡುವೆನು ಕೊಡುವೆನೂ

ಅತ್ತು ಕಾಡುವನಲ್ಲ ಮತ್ತೆ ಬೇಡುವನಲ್ಲಾ
ಎತ್ತಿಕೊಳ್ಳೆಂಬ ಹಟವಿಲ್ಲಾ ಹಟವಿಲ್ಲಾ
ನಿನ್ನಂಥಾ ಹತ್ತೂ ಮಕ್ಕಾಳಿರಬಹುದೂ
ಇರಬಹುದೂ….

ಅಳುವಾಗಾ ಮಕ್ಕೊಗೇ ಅಳಗೇಲಿ ಪಾಯಸಾ
ತಳಿಗೇಲಿ ನೂರೂ ಎಳ್ಳುಂಡೆ ಮಾಡೀ
ಮಡುಗಿದರೇ….
ಅಳುವಾಗ ಒಂದೊಂದು  ಕೊಡ್ಳಕ್ಕೂ
ಕೊಡ್ಳಕ್ಕೂ….

ತುಪ್ಪಶನ ಉಂಬಲೆ ತುಳುನಾಡಿಂಗ್ಹೋಯೆಕ್ಕೂ
ಅಕ್ಕಿಯ ಮೇಲೇ…ಬರೆ ಇಲ್ಲೇ…
ತುಳುನಾಡ ಮಕ್ಕಳಾ ಮೇಲೇ
ಕಲೆ ಇಲ್ಲೇ ಕಲೆ ಇ….ಲ್ಲೇ

೬ ಮನೆ ಮನೆ ದೋಸೆ

ಅಪ್ಪಚ್ಚೀ ಅಳಿಯಂಗೇ
ಸೊಪ್ಪಿನಾ…ಮೇಲ್ಲಾರಾ
ಹುಲ್ಲಕ್ಕೀ  ಅಶನಾ ಕಸಂಟೆಣ್ಣೇ…
ಕಸಂಟೆಣ್ಣೆ ಬಳ್ಸಿದರೇ..
ಅಪ್ಪಚ್ಚಿ ಅಳಿಯಾ° ಸವಿದುಂಗೂ
ಸವಿದುಂಗೂ

ತಾಯಿದ್ರೆ ತವರ್ಹೆಚ್ಚು
ತಂದಿದ್ರೆ ಬಳಗ್ಹೆಚ್ಚು
ದೇವರಿಗೂ ಹೆಚ್ಚು ಪತಿರಾಯಾ
ಎಲ್ಲರಿಗೂ ಹೆಚ್ಚು ರಾಮಚಂದ್ರನಂಥಾ
ಮಗ ಹೆಚ್ಚು
ಮಗನೇ ಹೆಚ್ಚು

ಉಪ್ಪರಿಗೆಯೊಳಗೇ…
ಪುತ್ರನ ತೊಟ್ಟಿಲ ಕಟ್ಟೀ ಜೋಗುಳ ಹಾಡಿ
ಒಪ್ಪಾಗೀ ಮೊಸರಾ ಕಡೆದಾಳೂ
ಒಪ್ಪಾಗೀ ಮೊಸರಾ ಕಡೆವಳು ನಮ್ಮಮ್ಮ
ಪಟ್ಟೆಪೀತಾಂಬರ ಮಡಿಯುಟ್ಟೂ…
ಪಟ್ಟೆಪೀತಾಂಬರ ಮಡಿಯುಟ್ಟು ಕಡೆವಾಗ
ಕೊಪ್ಪಿನ ಬೆಳಕೀಗೇ ಮಗನೆದ್ದಾ… (ಕೊಪ್ಪು= ಕರ್ಣಾಭರಣ)

೯ ನತದೃಷ್ಟ

ಕಣ್ಣು ಕಾಣದ ಪಕ್ಷೀ ಹಣ್ಣುಳ್ಳ ಮರಕ್ಹೋಗೀ
ಹಣ್ಣೆಂದು ತಿಂಗೂ ಕಸುಕಾಯಾ ಕಸುಕಾ…ಯಾ..
ಆ ಹ್ಗಕ್ಕೀ ಹಾಲೆಂದೂ ಕುದಿಗೂ ಹಣಿನೀರಾ…
ಹಣಿ ನೀ…ರಾ.

೧೦ ಸವತಿ

ನಾ ಮುಚ್ಚಿ ಮುಡಿವ ಮಲ್ಲಿಗೆಯ ಹೂವಾ…
ಅವಳೊಮ್ಮೆ ಮುಡಿಯಲಿ… ನಗಲ್ಹೇಳು
ನಾ ಮುಚ್ಚಿ ಮುಡಿವ ಕೇದಿಗೆಯ ಹೂವ
ಅವಳೊಮ್ಮೆ ಮುಡಿಯಲಿ… ನಗಲ್ಹೇಳು


೧೧. ಸಂಸಾರ

ಸಂತೆ ಸೂಳೆಯ ನಂಬೀ…
ಮನೆಯ ಹೆಂಡತ್ತಿಯ ಬಿಟ್ಟಾ°…
ತನದುದ್ದಾ ಬೆಳದಾ…ಹರುವೇಯ ನಂಬಿ…
ಕರವೆಮ್ಮೆ ಬಿಟ್ಟಾ°… ಅತಿ ಹೆಡ್ಡಾ°
ಅತಿ ಹೆಡ್ಡಾ°

~~~~~****~~~~~

ಸರಸ್ವತಿ ಬಡೆಕ್ಕಿಲ
ಚಾಲುಕ್ಯ ಶಿಲ್ಪ,
ನಂ: 1566, 19th ಕ್ರಾಸ್
ರೂಪಾನಗರ
ಭೋಗಾದಿ ಪೋಸ್ಟ್
ಮೈಸೂರು 570026
9019274678

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

7 thoughts on “ಹವಿಕ ಹೆಮ್ಮಕ್ಕಳ ಹೃದಯಗೀತೆಗೊ

  1. ಲಾಯಿಕಿದ್ದು ಬಡೆಕ್ಕಿಲ ಅತ್ತೆ. ಇದಲ್ಲಿ ಮೂರ್ನಾಲ್ಕು ಆನು ೨೦೦೦ನೇ ಇಸವಿಲಿ ಪಬ್ಲಿಷ್ ಮಾಡಿದ “ಜಾನಪದಹಾಡುಗಳು” ಸಂಕಲನಲ್ಲಿ ಇದ್ದು.

  2. ಅತ್ತಗೆ ಹುಟ್ಟುಹಬ್ಬದ ಶುಭಾಶಯಗಳು. ಈ ದಿನವೂ ಮತ್ತೆ ಮತ್ತೆ ಬರಲಿ.

  3. ಇದಲ್ಲಿ ಒಂದು ಪದ್ಯ ಎನಗೆ ಸಣ್ಣ ಕ್ಲಾಸಿಲ್ಲಿ ಪಾಠಕ್ಕೆ ಇದ್ದತ್ತು. ತಾಯಿದ್ರ tavarecchu ತಂದಿದ್ರ ಬಳಗೆಚ್ಚು ಸಾವಿರಕೆ ಹೆಚ್ಚು ಪತಿ ಪುರುಷ, ಹೊಟ್ಟೆಯ ಮಾಣಿಕದ haralu ಮಗ ಹೆಚ್ಚು.

  4. aanu ನಿನ್ನೆ ಅತ್ತಿಗೆಯ ಮೂಲಕ badekkila ಅತ್ತೆಯ ಹತ್ರೆ ಕೇಳಿದ್ದಷ್ಟೇ ಏಕೆ ಹೊಸ ಕಥೆ, ಕವನ ಬರದ್ದು ಹೇಳಿ. ಅದಾ ಬಂತದ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×