Latest posts by ವಾಣಿ ಚಿಕ್ಕಮ್ಮ (see all)
- ಹುಟ್ಟು ಹಬ್ಬದ ಶುಭ ಆಶಯ - December 17, 2014
- ಹರಿಯೊಲ್ಮೆ ಅಜ್ಜಿ - September 5, 2014
- ಹುಟ್ಟುಹಬ್ಬದ ಶುಭಾಷಯಂಗೋ - May 17, 2014
ಎಲ್ಲೋರಿಂಗೂ ನಮಸ್ಕಾರ…
ಆನು ಈ ಸರ್ತಿ ಕಡ್ಲೆ ಬೇಳೆಯ ಕರಿ (ಹೊರ್ದದು) ಮಾಡುವ ವಿಧಾನ ಬೈಲಿಂಗೆ ತಿಳಿಶುತ್ತೆ… ಇದು ಕಡ್ಲೆ ಬೇಳೆ ಅಲ್ಲದ್ದೇ ಹಸರು ಬೇಳೆ(ಈಗಾಣ ಮೂಂಗ್ ದಾಲ್) ದೊಡ್ಡ ಜಾತಿಯ ಬೆಳಿದು ಇಡೀ ಕಡ್ಲೆದು ಇದೇ ರೀತಿಲಿ ಮಾಡಲೆ ಆವ್ತು…
ಬೇಕಾದ ಸಾಮಾನುಗ:-
ಕಡ್ಲೆ ಬೇಳೆ -೨ ಕುಡ್ತೆ
ಕರಿ ಬೇವಿನ ಸೊಪ್ಪು-೮ ರಿಂದ ೧O
ತೆಂಗಿನ ಎಣ್ಣೆ -ಅರ್ಧ ಲೀ.
ಮಾಡುವ ವಿಧಾನ:-
ಕಡ್ಲೆ ಬೇಳೆಯ ೩ ಘಂಟೆಯಷ್ಟು ನೀರಿಲಿ ಬೊದುಲಿಸಿ ಅರಿಶಿ ತೆಂಗಿನ ಎಣ್ಣೇಲಿ ಅರಿಶಿನ ಬಣ್ಣ ಬಪ್ಪಲ್ಲಿ ವರೆಗೆ ಹೊರಿಯೇಕು. ಇನ್ನೊಂದು ಪಾತ್ರಲ್ಲಿ ಉಪ್ಪು,ಮೆಣಸಿನ ಹೊಡಿ,ಹೊರುದು ಮಡುಗಿದ ಬೇವಿನ ಸೊಪ್ಪಿನ ಲಾಯಿಕ ಬೇರುಸಿ ಹೊರುದು ಮಡುಗಿದ ಕಡ್ಲೆ ಬೇಳೆಗೆ ಎಣ್ಣೆ ಬಳುದಪ್ಪಗ ಹಾಕಿ ಲಾಯಿಕಲ್ಲಿ ಬೆರುಸಿದರೆ ಕಡ್ಲೆ ಬೇಳೆ ಕರಿ ರೆಡಿ..
ಈ ಮೇಲೆ ಹೇಳಿದ ಸಾಮಾನುಗಳ ಸೇರ್ಸಿಯಪ್ಪಗ ಮಾಡಿದ ಕಡ್ಲೆ ಬೇಳೆ ಕರಿ ಅಂದಾಜು ಎಂಟು ಜನಕ್ಕೆ ಬಕ್ಕು. ಹೊತ್ತೋಪಗ ಚಾಯ ಕುಡಿವಲೆ ಇದು ಭಾರೀ ಲಾಯಿಕ ಆವ್ತು.ಲಾಯಿಕಲ್ಲಿ ಮುಚ್ಚಿ ಮಡುಗಿದರೆ ಒಂದು ವಾರದ ವರೆಗೆ ಹಾಳಾಗದ್ದೆ ಮೃದುವಾಗಿ ಒಳಿತ್ತು. ಆರೋಗ್ಯಕ್ಕೆ ಇದು ಒಳ್ಳೇದು. ಬೇವಿನ ಸೊಪ್ಪು ಹಾಕುವ ಕಾರಣ ಜೀರ್ಣ ಶಕ್ತಿಯೂ ಹೆಚ್ಚುತ್ತು. ಮಕ್ಕೊಗೆ ಇದು ಭಾರೀ ಪ್ರೀತಿ.
ನಿಂಗಳೂ ಮಾಡಿ ನೋಡಿ. ಹೇಂಗೆ ಆವ್ತು ಹೇಳಿ ಒಪ್ಪಲ್ಲಿ ತಿಳಿಶಿಕ್ಕಿ…
ಅಬ್ಬೆ,,,,,ಎನಗೆ ಇದರ ಮಾಡಿ ಕೊಟ್ಟಿದಿ….ಲಾಯಿಕ ಆವ್ತು,,,
Abbe, heenge hesaru beledu madle avthu, layka avutthu adude. Kadle beLedu try madthe anu.
ವಾವ್ ಚಿಕ್ಕಮ್ಮಾ, ಹೊಸ ಬಗೆ ತಿಂಡಿ…. ಸುರು ಕೇಳಿದ್ದು, ಅಂಬಗ ಈ ಸರ್ತಿ ಊರಿಂಗೆ ಬಂದಿಪ್ಪಗ ಇದರ ತಿಂತೆ ಚಿಕ್ಕಮ್ಮಾ…
ಗುಹಂಗೆ ಖುಶಿ ಅವ್ತಾ? ಮಾಡೆಕ್ಕು ಅಬ್ಬೆ ಹೇಳ್ತನಾ?