- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಬಡಬಾಗ್ನಿ(ವಡವಾಗ್ನಿ)
ವಡವಾ ಸಮುದ್ರಾನ್ತಸ್ಥಾ ಘೋಟಕೀ ತತ್ಸಂಬಂಧೀ ಅಗ್ನಿಃ ವಡವಾಗ್ನಿರ್ವಡವಾನಲಃ(ಜಟಾಧರ)
ಸಮುದ್ರದೊಳ ಇಪ್ಪ ಕುದುರೆ(ವಡವಾ)ಗೆ ಸಂಬಂಧಪಟ್ಟ ಅಗ್ನಿ ವಡವಾಗ್ನಿ/ವಡವಾನಲ.
ವಡವಾಯಾಃ ಶಿವಸೃಷ್ಟಾಶ್ವಾಯಾಃ ಮುಖಸ್ಥೋsಗ್ನಿಃ
(ವಾಚಸ್ಪತ್ಯ ಮ್)
ಶಿವನಿಂದ ಸೃಷ್ಟಿಯಾದ ಕುದುರೆ(ವಡವಾ)ಯ ಬಾಯಿಲಿ ಇಪ್ಪ ಅಗ್ನಿ ವಡವಾಗ್ನಿ.
ಬಲಂ ವಾತಿ ನಿಸ್ವತೀತಿ ಬಲವಾ
ಡಲಯೋರೈಕ್ಯಾತ್ ಲಸ್ಯ ಡತ್ವಮ್- ಬಡವಾ ಘೋಟಕೀ
ತತ್ಸಂಬಂಧೀ ಅಗ್ನಿಃ ವಡವಾಗ್ನಿರ್ವಡವಾನಲಃ
ಜೋರಾಗಿ ನಿಸ್ವನ(ಹೇಷಾರವ) ಮಾಡುವ ಕಾರಣ ಬಲವಾ ಎಂಬ ಹೆಸರು, ಏಕತ್ವದ ಕಾರಣ ಲ(ಳ)ಕಾರಕ್ಕೆ ಡಕಾರ ಬಡವಾ=ಕುದುರೆ (ಉದಾ:ಅಗ್ನಿಮೀಡೇ/ಳೇ ಪುರೋಹಿತಂ -ಋಗ್ವೇದಾರಂಭ)
ಅದಕ್ಕೆ ಸಂಬಂಧಿಸಿದ ಅಗ್ನಿ ಬಡವಾಗ್ನಿ.
ಔರ್ವಸ್ತು ವಾಡವೋ ವಡವಾನಲಃ(ಅಮರಕೋಶ)
ಔರ್ವಾಗ್ನಿ, ವಡವಾನಲ, ವಾಡವ ಇವು ಬಡವಾಗ್ನಿಯ ಪರ್ಯಾಯ ಪದಂಗೊ
ಕಾರ್ತವೀರ್ಯ ವಂಶದೋರು ಭೃಗುವಂಶೀಯರ ಪೀಡಿಸುವಗ ಚ್ಯವನಪತ್ನಿ ಗರ್ಭ ತೊಡೆಯ ಸೇರಿತ್ತು. ಅಲ್ಲಿಯೂ ಪೀಡಿಸುವಗ ಊರು(ತೊಡೆ)ಯ ಭೇದಿಸಿ ಹೊರಬಂತು. ಅದಕ್ಕೆ ಅವನ ಹೆಸರು ಔರ್ವ.
ಅವನ ಕ್ರೂರ ದೃಷ್ಟಿಯ ತೇಜಸ್ಸಿಂದ ಅವರ ದೃಷ್ಟಿ ಹೋಗಿ ಕಾಡುಮೇಡು ತಿರುಗಿದವು
ಮುಷ್ಣಂದೃಷ್ಟೀಃ ಕ್ಷತ್ರಿಯಾಣಾಂ ಮಧ್ಯಾಹ್ನ ಇವ ಭಾಸ್ಕರಃ। ತತಶ್ಚಕ್ಷುರ್ವಿಹೀನಾಸ್ತೇ ಗಿರಿದುರ್ಗೇಷು ಬಭ್ರಮುಃ॥
ಪಿತೃದೇವತೆಗಳ ಅಪ್ಪಣೆಯಂತೆ ಅವ ತನ್ನ ಕೋಪವ ವಡವಾ(ಕುದರೆ)ರೂಪಲ್ಲಿ ಸಮುದ್ರಲ್ಲಿ ಬಿಟ್ಟ. ಅದಕ್ಕೆ ವಡವಾಗ್ನಿ ಎಂಬ ಹೆಸರು ಬಂತು.(ಮಹಾಭಾರತ ಆದಿಪರ್ವ)
ಉರ್ವಮಹರ್ಷಿ ಅಯೋನಿಜಪುತ್ರಾಕಾಂಕ್ಷಿಯಾಗಿ ಎದೆಯ ತಿಕ್ಕುವಾಗ ಜ್ವಾಲಾಮಯನಾದ ಪುರುಷ ಹುಟ್ಟಿದ. ಅವನ ವಡವಾ ರೂಪಲ್ಲಿ ಸಮುದ್ರಲ್ಲಿ ಸ್ಥಾಪಿಸಲಾಗಿ ಅವಂಗೆ ವಡವಾಗ್ನಿ/ಔರ್ವಾಗ್ನಿ ಎಂಬ ಹೆಸರು ಬಂತು. (ಭರತ ಟೀಕಾ)
ಔರ್ವಸ್ತು ತಪಸಾವಿಷ್ಟೋ ನಿವೇಶ್ಯೋರುಂ ಹುತಾಶನೇ।
ಮಮಂಥೈಕೇನ ದರ್ಭೇಣ ಸುತಸ್ಯ ವ್ರತಧಾರಿಣಂ।।
ತಸ್ಯೋರುಂ ಸಹಸಾ ಭಿತ್ವಾ ಜ್ವಾಲಾಮಾಲೀ ಹ್ಯನಿಂದಿತಃ।
ಜಗತೋ ದಹನಾಕಾಂಕ್ಷೀ ಪುತ್ರೋsಗ್ನಿಃ ಸಮಪದ್ಯತ।।
,….
ವಡವಾಮುಖೋsಸ್ಯ ವಸತಿಃ ಸಮುದ್ರೇ ವೈ ಭವಿಷ್ಯತಿ।(ಮತ್ಸ್ಯ ಪುರಾಣ)
ಪುತ್ರಕಾಂಕ್ಷಿಯಾದ ಔರ್ವಮುನಿ ಕಿಚ್ಚಿಲಿ ತೊಡೆ ಮಡಗಿ ಒಂದು ದರ್ಭೆಯ ಮಥಿಸುವಗ ಅವನ ತೊಡೆಯ ಭೇದಿಸಿ ಜ್ವಾಲಮಾಲಿಯಾದ
ಜಗತ್ತನ್ನೇ ಸುಡುವಂಥ ಅಗ್ನಿರೂಪೀ ಮಗ ಹುಟ್ಟಿದ.
ಬ್ರಹ್ಮನ ಆದೇಶದಂತೆ ವಡವಾಮುಖಲ್ಲಿ ಸಮುದ್ರದೊಳ ಅವನ ವಾಸ,
ಹಾಂಗಾಗಿ ಅವನ ಹೆಸರು ವಡವಾಗ್ನಿ.
ಕಾಮದಹನಾನಂತರ ಶಿವನ ನೇತ್ರಾಗ್ನಿ ಅಸಹನೀಯವಾಗಲಾಗಿ ದೇವತೆಗಳ ಪ್ರಾರ್ಥನೆಯಂತೆ ಬ್ರಹ್ಮ ಆ ಅಗ್ನಿಯ ಕುದುರೆಯ ರೂಪಕ್ಕೆ ತಂದ.
ಬ್ರಹ್ಮಾ ಕ್ರೋಧಾನಲಂ ಶಂಭೋರ್ಧಕ್ಷಂತಂ ಸಕಲಾನ್ ಜನಾನ್।
ವಡವಾರೂಪಿಣಂ ಚಕ್ರೇ ದೇವಾನಾಂ ಪುರತಸ್ತದಾ।।
….
…..
ವಡವಾಂ ತಾಂ ಸಮಾದಾಯ ತದಾ ಜ್ವಾಲಾಮುಖೀಂ ವಿಧಿಃ।
ಸಾಗರಂ ಪ್ರಯಯೌ ಲೋಕಹಿತಾಯ….।।(ಕಾಲಿಕಾಪುರಾಣ)
ಲೋಕಹಿತಕ್ಕಾಗಿ ಆ ಕುದುರೆ ರೂಪದ ಅಗ್ನಿಯ ಸಾಗರಮಧ್ಯಲ್ಲಿ ಮಡಗಿ ವಡವಾಗ್ನಿ ಎಂಬ ಹೆಸರು ಕೊಟ್ಟ.
ಒಪ್ಪ ವಿವರಣೆ
ಬಡಬಾಗ್ನಿ ಬಗೆಲಿ ಬಗೆ ಬಗೆಯ ಅರ್ಥ ವಿವರಣೆ ಲಾಯಕಿತ್ತು..
ವಡವಾಗ್ನಿಗೆ ಎಷ್ಟೊಂದು ರೂಪಂಗೊ ಹೇಳಿ ಆಧಾರ ಸಹಿತ ಕೊಟ್ಟ ಉಪಯುಕ್ತ ಲೇಖನ. ಧನ್ಯವಾದಂಗೊ