Oppanna.com

ಬೆಟ್ಟದ ಜೀವಕ್ಕೆ ಪ್ರಶಸ್ತಿ

ಬರದೋರು :   ಗೋಪಾಲಣ್ಣ    on   23/05/2011    22 ಒಪ್ಪಂಗೊ

ಗೋಪಾಲಣ್ಣ

ಇತ್ತೀಚೆಗೆ ಬೆಟ್ಟದ ಜೀವ ಪುಸ್ತಕದ ಬಗ್ಗೆ ಆನು ಬರೆದಿತ್ತಿದ್ದೆ.

ಈಗ ಆ ಕಾದಂಬರಿಯ ಆಧರಿಸಿದ ಸಿನೆಮಕ್ಕೆ ನಿರ್ದೇಶನ ಮಾಡಿದ  ಶ್ರೀ ಪಿ.ಶೇಷಾದ್ರಿ -ಇವಕ್ಕೆ ಪ್ರಶಸ್ತಿ ಬಯಿಂದಡ.ಸಿನೆಮಾ ಆನು ನೋಡಿದ್ದಿಲ್ಲೆ .ಯಾವಾಗಲಾದರೂ ದೂರದರ್ಶನಲ್ಲಿ ಬಂದರೆ ನೋಡೆಕ್ಕು.ಈ ಸಾಧನೆಗಾಗಿ ಎಲ್ಲರಿಂಗೂ ಅಭಿನಂದನೆಗೊ.

ಮನೆಗೆ ಬಾರದ ದನವ ಹುಡುಕುತ

ಇನನು ಕಂತುವ ಸಮಯ ಕಾಡಿನ

ಘನತರದ ಕತ್ತಲೆಯ ಶೀತದ ನೆಲೆಗೆ ಪಥ ತಪ್ಪಿ

ಅನುಸರಿಸಿ ಹಳ್ಳಿಗರ ಕೆಳಬೈ-

ಲಿನಲಿ ಗೋಪಾಲಯ್ಯನೆಂಬರ

ಮನೆಗೆ ಬಂದಿಳಿದಿದ್ದ ಶಿವರಾಮಯ್ಯ  ಬಸವಳಿದು[೧]

ದಾಟಿದನು ಸಂಕಗಳ ಹೊಳೆಯಲಿ

ಪಾಠ ಕೇಳಿದ ಬದುಕ ಬವಣೆಯ

ತೋಟದಾ ಪರಿಸರದಿ ಸುಳಿದಿಹ ಆಧುನಿಕ ಪರಿಯ

ನೋಟಗಳ,ಸಾಹಸದ ದುಡಿಮೆಯ

ಕಾಟುಮೂಲೆಯ ರೂಪದಲಿ ಕ

ಣ್ಣೋಟದಲಿ ಅಳೆಯುತಲಿ  ಕಳೆದನು ಹಲವು ದಿನಗಳನು[೨]

ದಂಪತಿಗಳಾರೈಕೆಯಲಿ ಜ್ವರ

ತಂಪುಗೊಂಡಿರೆ  ಅವರ ಮನವನು

ಸೊಂಪುಗೊಳಿಸಿದ ಮನೆಗೆ ಬಾರದ ಮಗನ ಸುಳಿವಿಂದ

ಕಂಪಗದ್ದೆಯ ಬಗಲ ಬೆಟ್ಟದ

ಪೆಂಪಿನಲಿ ಕುಣಿವಂತ ಝರಿಗಳ

ತಂಪು ನೀರಿಗೆ ಮನದ ಸಂಕಟ ಕಳೆವ ಬಲವಿರದೇ?[೩]

ಬಿತ್ತು ಬೋನಿಗೆ ವನದ ಹುಲಿಯದೊ

ಇತ್ತ ,ನಾರಾಯಣನು ಶಂಭುವು

ಚಿತ್ತದಲಿ ಎಣಿಸಿದ್ದ ಯೋಚನೆ ಬಯಲುಗೊಂಡಿಹುದು

ಎತ್ತರದ ಗಿರಿಯಷ್ಟು ಹಿರಿತನ

ವೆತ್ತ ಗೋಪಾಲಯ್ಯ ಕಥನಕೆ

ಇತ್ತರದೊ ಮನ್ನಣೆಯ ಕನ್ನಡ ಜನತೆ ಹರ್ಷಿಸಲು[೪]

[ತಾ-೨೨.೫.೧೧ರ ಉದಯವಾಣಿಲಿ ಶೇಷಾದ್ರಿ-ಇವು ಚಿತ್ರೀಕರಣದ ಅನುಭವಂಗಳ ಬರೆದ್ದವು.ಈ ಪದ್ಯ ಆವಾಗ ಹುಟ್ಟಿತ್ತು].

22 thoughts on “ಬೆಟ್ಟದ ಜೀವಕ್ಕೆ ಪ್ರಶಸ್ತಿ

  1. ಬೆಟ್ಟದ ಜೀವ ಸಿನೇಮವ ಜೂನ್ ೧೭, ಶುಕ್ರವಾರ ಬಿಡುಗಡೆ ಮಾಡುತ್ತವಡ. ಪಿ ಶೇಷಾದ್ರಿ ಬ್ಫೆಲಿಂಗೆ ಹೇಳಿಕೆ ಕೊಡ್ಲೆ ಹೇಳಿದ್ದವು.

  2. ಬೆಟ್ಟದ ಜೀವ ಪುಸ್ತಕ ಸಪ್ನಾ ಬುಕ್ ಹೌಸಿಲಿ ಇಲ್ಲೆ…. ಆನು ಕೇಳಿಯಪ್ಪಗ ಒಂದೇ ಇತ್ತದು. ಆನು ತೆಕ್ಕೊಂಡೆ.

    ಆರಿಂಗಾರೂ ಬೇಕಾರೆ ಹೇಳಿ. ತರ್ಸುವ ವ್ಯವಸ್ತೆ ಮಾಡ್ತವಡ.

    ಮತ್ತೆ… ಎನಗೆ ಬ್ಯಾಂಕಿನ ಲೆಕ್ಕಲ್ಲಿ ೧೫ % ಡಿಸ್ಕೌಂಟ್ ಕೊಡ್ತವು.ಆರಿಂಗಾರೂ ಬೇಕಾರೆ ಎನ್ನತ್ರೆ ಕೇಳಿ. ರಿಕ್ಷದ ಚಾರ್ಜು ಒಳಿಗು…

    ಎನ್ನ ಪೊನ್ನಂಬ್ರ ಬರಕ್ಕೊಳ್ಳಿ. 9448784145

    1. ಓದ್ಲೆ ಬೇಕಾದವಕ್ಕೆ ಎನ್ನತ್ರೆ ಇದ್ದು, ಉಚಿತವಾಗಿಯೇ ಕೊಡ್ಲಕ್ಕು.

  3. ಬೆಟ್ಟದ ಜೀವ ಆನು ಎರಡೆರಡು ಸರ್ತಿ ಓದಿದ ಕತೆ.ಅದು ಶಿವರಾಮ ಕಾರ೦ತರ ಜೀವನಲ್ಲಏ ಬ೦ದ ಅನುಭವದ ಕತೆ ಹೇಳಿ ಕೇಳಿ ತಿಳುದಿದ್ದಿದ್ದೆ.ಈಗ ಮಗಳಿ೦ಗೆ ಮಡಿಕೇರಿ ಸ೦ಬ೦ದ ಆದ ಮೇಲೆ ಆ ವ್ಯಕ್ತಿಗಳ ಬಗ್ಯೆ ಹೆಚು ತಿಳುದತ್ತು.ಇನ್ನು ಗೋಪಾಲಣ್ಣೋ ಭಾಮಿನೀಲಿ ಮುಳಿಯ ಭಾವ೦ಗೆ ಒಬ್ಬ೦ ಪ್ರತಿಸ್ಪರ್ದಿ ಹುಟ್ಟಿದ್ದದಲ್ಲಾನೆ?ಮನೆಲಿ ಬ೦ದಿಪ್ಪಾಗ ಹೆಚು ಮಾತಾಡ್ಲೆ ಆಯಿದಿಲ್ಲೆ.ಮನೆ ಕಾರ್ಯಕ್ರಮ ಹೇಳೀರೆ ಹಾ೦ಗೇ ಅಲ್ಲದೊ?

  4. ಗೋಪಾಲಣ್ಣಾ, ನಾಕು ಚರಣಂಗಳಲ್ಲಿ ಬೆಟ್ಟದ ಜೀವ ಕಾದಂಬರಿಯ ಸಾರಾಂಶವ ಚೊಕ್ಕಕ್ಕೆ ಹೇಳಿದ್ದಿ.

  5. ಎನ್ನ ಸೋದರತ್ತೆಯ ಗೆಂಡನ ಕಾಸಾ ಅಜ್ಜನ ಕಥೆಅಡ ಅದು… ಹಾಂಗಾಗಿ ಕಾದಂಬರಿಯ ಓದಿತ್ತಿದ್ದೆ ಸಣ್ಣಾದಿಪ್ಪಾಗ… ಈಗ ಆ ಪುಸ್ತಕ ಎಲ್ಲಿದ್ದೋಳಿ ನೆಂಪಿಲ್ಲೆ. ಕಾದಂಬರಿಯ ಕ್ಲೈಮಾಕ್ಸ್ ಎಂತರ ಹೇಳಿಯೂ ನೆಂಪಿಲ್ಲೆ…. ಹಾಂಗಾಗಿ ಈ ಸಿನೆಮವ ಐನಾಕ್ಸಿಲಿ ನೋಡೆಕ್ಕು ಹೇಳಿ ಸಂಕಲ್ಪ ಮಾಡಿದ್ದೆ… ಎಂತಕ್ಕೂ ಪುಟ್ಟಕ್ಕ ಮನಸ್ಸು ಮಾಡೆಕ್ಕು….. 🙁

    1. {ಎನ್ನ ಸೋದರತ್ತೆಯ ಗೆಂಡನ ಕಾಸಾ ಅಜ್ಜನ ಕಥೆಅಡ ಅದು} – ಅಪ್ಪಾ?? ಅಂಬಗ ಓದಲೇ ಬೇಕು…

      ಪುಟ್ಟಕ್ಕನ ಕೇಳದ್ದೇ ಎಂತ ಮಾಡ್ಳೂ ಅರಡಇಯ ಅಲ್ಲದಾ???

  6. ಅರ್ರೇ ವ್ಹಾ.. ಇದು ಭಾರೀ ಲಾಯಿಕಾಯಿದು ಗೋಪಾಲಣ್ಣ.. ಬೆಟ್ಟದ ಜೀವ ಇದುವರೇಗುದೆ ಓದುತ್ತ ಅವಕಾಶ ಸಿಕ್ಕಿದ್ದಿಲ್ಲೆ, ಇನ್ನಾಣ ಸರ್ತಿ ಊರಿ೦ಗೆ ಬಪ್ಪಗ ಈ ಪುಸ್ತಕ ಖರೀದಿಸೆಕು ಹೇಳಿ ಇದ್ದೆ..ಬೆ೦ಗ್ಳೂರಿಲ್ಲ್ಲಿ ಸಿಕ್ಕುಗಾಯ್ಕು ಅಲ್ಲದೊ?

    1. ಸಪ್ನಾ ಬುಕ್ ಸ್ಟಾಲಿಲಿ ಸಿಕ್ಕುಗು.

  7. ಗೋಪಾಲಣ್ಣ, ಭಾಮಿನಿಲಿಯುದೆ ರೈಸಿದ್ದವು. ಬೆಟ್ಟದ ಜೀವವ ಭಾಮಿನಿಲಿ ಕೇಳಿ ಕೊಶಿ ಆತು.

  8. ಆಹಾ,
    ಕಥೆಯ ನಿರೂಪಣೆ ಚೆ೦ದ ಆಯಿದು ಗೋಪಾಲಣ್ಣ.
    ಕಾರ೦ತರೆ ಕಥೆಯ ಚಲನಚಿತ್ರದ ಪರದೆಗೆ ತ೦ದ ಶೇಷಾದ್ರಿಗೊಕ್ಕೆ ಅಭಿನ೦ದನೆ.
    ಈ ಸಿನೆಮಾ ಬಿಡುಗಡೆ ಆಯಿದೋ?

  9. ಶ್ರೀ ಪಿ.ಶೇಷಾದ್ರಿ -ಇವಕ್ಕೆ ನಿಂಗಳ ಭಾಮಿನಿ ಭಾರಿ ಕುಶಿ ಆಯಿದು…

  10. ಪ್ರಿಯ ಗೋಪಾಲಣ್ಣ,

    ನಿಮ್ಮ ಬಾಮಿನಿ ಶೈಲಿಯ ಪದ್ಯ ಓದಿದೆ.
    ಕೆಲವೇ ಸಾಲುಗಳಲ್ಲಿ ಬೆಟ್ಟದ ಜೀವ ಹಿಡಿದಿಟ್ಟಿದ್ದೀರಿ.
    ಅಬಿನಂದನೆಗಳು!
    ನನ್ನ ಸಿನಿಮಾ ನೋಡಿದ ಮೇಲೆ ಇನ್ನೊಂದು ಕವನ ಹುಟ್ಟಬಹುದೇ?

    1. ಖಂಡಿತಾ ನೋಡುತ್ತೇನೆ. ನಿಮ್ಮ ಆದರಕ್ಕೆ ಆಭಾರಿ.

  11. ಬೆಟ್ಟದ ಜೀವ ಒಂದು ಅಪರೂಪದ ಕಾದಂಬರಿ ಹೇಳುದ ಕೇಳಿದ್ದೆ.. ಆದರೆ ಓದುವ ಅವಕಾಶ ಸಿಕ್ಕಿದ್ದಿಲ್ಲೆ.. ಶೇಷಾದ್ರಿಯ ಲೇಖನ ಓದಿದ್ದೆ.. ಚಲನಚಿತ್ರಕ್ಕೆ ಸಂದ ಗೌರವ ಶೇಷಾರದ್ರಿಯ ಛಲಕ್ಕೆ, ಕಾರಂತರ ಪ್ರತಿಭೆಗೆ ಸಂದ ಗೌರವ.. ಭಾಮಿನಿಲಿ ಗೋಪಾಲಣ್ಣ ಬರದ್ದು ಇನ್ನೂ ಸೂಪರಾಯಿದು.. ಗೋಪಾಲಣ್ಣಂಗೆ ಒಂದು ಸಲಾಮು 🙂

  12. ‘ಬೆಟ್ಟದ ಜೀವ’ ಸಿನೆಮಕ್ಕೆ ಪ್ರಶಸ್ತಿ ಸಿಕ್ಕಿದ್ದು ಖುಶಿ ಆತು. ಆ ಖುಶಿಲಿ ಪುಸ್ತಕ ಇನ್ನೊಂದರಿ ಓದಿದೆ. ಇದರ ಭಾಮಿನಿಲಿ ಬರದ ಗೋಪಾಲಣ್ಣಂಗೆ ಅಭಿನಂದನೆಗೊ.

  13. ಗೋಪಾಲ,
    ಭಾಮಿನಿಲಿ ಹರುದ ಬಂದ ಕತೆಯ ರೂಪ ಲಾಯಿಕ ಆಯಿದು

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×