Latest posts by ಗೋಪಾಲಣ್ಣ (see all)
- ಸಣ್ಣ ಸಂಗತಿ - February 13, 2018
- ದೇಶಸೇವೆ - August 15, 2017
- ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ - August 15, 2017
ಸುಮಾರು ಸಮಯ ಆತು ಹೊಸ ಶಬ್ದ ಕೇಳದ್ದೆ. ಬೈಲಿನವಕ್ಕೆ ಮರೆತ್ತು ಹೋದ್ದೊ ಎನಗೆ ಮರೆತ್ತು ಹೋದ್ದೊ? ಎನಗೇ ನೆಂಪಿಲ್ಲದ್ದು. ಇದಾ ಈ ಶಬ್ದ ಯಾವದು ಹೇಳಿ-
ಈ ಶಬ್ದಕ್ಕೆ ಆರು ಅಕ್ಷರ.
೧,೬-ಉಪವಾಸ ಉಪವಾಸ ಹೇಳಿ ಸುಬ್ಬಮ್ಮ ಇಷ್ಟು ಹಣ್ಣು ತಿಂದತ್ತಡ.ಹಣ್ಣು ಹೇಳಿರೆ ಅದೇ ಹಣ್ಣು; ಎಷ್ಟು? ಇಷ್ಟು!
೧,೫-ನೋಡು
೨,೫-ಇದರ ಸರ್ಕಾರ ಈ ವರ್ಷ ನಿಲ್ಲಿಸಿತ್ತು
೪,೬-ನಮ್ಮ ಭಾಷೆಲಿ ಅಡ,ಅಡೊ-ಹೇಳಿ ಹೇಳುದು ಇದನ್ನೆಯೋ? ಅಲ್ಲದೊ? ಖಂಡಿತ ಹೇಳಿ.
೨,೩-ಇದು ತಪ್ಪಿರೆ ಎಂತ ಪದ?
೨,೬-ಇದರ ಎಲೆಲಿ ಬರೆತ್ತವಡ.-
೧,೪-ಸತ್ಯನಾರಾಯಣಂಗೆ ಪ್ರೀತಿಯ ಪ್ರಸಾದಲ್ಲಿ ಈ ಸಂಖ್ಯೆಯ ರೂಪ ಇದ್ದು!
೧,೨,೩-ರಾಕ್ಷಸರೆಲ್ಲಾ ಹೆದರಿ ಹೋಗಿ ಹುಗ್ಗಿ ಕೂದ್ದೆಲ್ಲಿ?
೪,೫,೬- ಇವಂಗೂ ಚೆನ್ನೈ ಭಾವಂಗೂ ಕರತಲಾಮಲಕವಾದ ಒಂದು ಸಂಗತಿ ಇದ್ದು!
ಇಷ್ಟು ಹೇಳಿರೆ ನಿಂಗೊಗೆ ಗೊಂತಾಗದ್ದಿಕ್ಕೊ?
ಈ ನರಸಿಂಹಣ್ಣನ ಕೈಲಿ ಎಡಿಯ… ಗೊಂತಾದರೂ ರಜಾ ನಿದಾನಕ್ಕೆ ಹೇಳ್ಲೆ ಆವುತಿತ್ತಿಲೆಯಾ? ರಜಾ ಕುತೂಹಲ ಒಳಿಶೆಕ್ಕು ಭಾವಾ….
ಅಕ್ಕು ಶ್ಯಾಮಣ್ಣ.ಇನ್ನು ಮುಂದೆ ಹಾಂಗೇ ಮಾಡುವೊ.
ಅಪ್ಪು ಮಾವ, ಉತ್ತರ ಗೊಂತಪ್ಪದ್ದೆ, ಆ ಉತ್ತರವ ಪ್ರಶ್ನಾತ್ಮಕವಾಗಿ ಮತ್ತೂ ತಿರುಚ್ಚಿ ಬರದರೆ ಬಾಕಿಪ್ಪೋರಿಂಗೆ ಕುತೂಹಲ ಒಳಿತ್ತು.
ಗೋಪಾಲಣ್ಣ, ಪ್ರಶ್ನೆ ರಜ್ಜ ಕಷ್ಟ ಆವುತಿತ್ತು, ಈ ಸರ್ತಿ.ಇನ್ನೂ ಹೀಂಗಿರ್ಸು ಬರಲಿ.
ಹೇಳ್ಲಾಗ ಹೇಳಿ ಅಲ್ಲ ನರಸಿಂಹಣ್ಣ… ಉತ್ತರ ಗೊಂತಾದರೆ ಅದರ ಒಗಟಿನ ಹಾಂಗೆ ಹೇಳ್ಲಕ್ಕು… ಉದಾಹರಣೆಗೆ “ವಿಷ್ಣು ವಾಹನ ವಾಸುಕಿಯ ಲೋಕಕ್ಕೆ ಹೋದರೆ ಈ ಶಬ್ದ ಸಿಕ್ಕುಗು”
ಪಾತಾಳಗರುಡ
ನಿಂಗೊ ಯೋಚನೆ ಮಾಡಿ ಮಾಡಿ ಇಷ್ಟು ಹೇಳಿರೆ ನಿಂಗೊಗೆ ಗೊಂತಾಗದ್ದಿಕ್ಕೊ?! ಹೇದು ಸುಲಾಬಕ್ಕೆ ಹೇದಿಕ್ಕಿ ಕೂದಿ.
ಇದೆಲ್ಲಿಂದ ಅಟ್ಟು ಎಳ್ಪಕ್ಕೆ ಗೊಂತಾವ್ಸು!. ಅಂದರೂ ನೋಡ್ವೋ ನಾವುದೇ ಏನಾರು ಇದರ್ಲಿ ಉರುಡಪ್ಪುಡಿ ಮಾಡ್ಳೆ ಎಡಿತ್ತೋದು
ಇದು ಸಂಗತಿ ಪಷ್ಟಾಯ್ದು ಗೋಪಾಲಣ್ಣ ಹೇದು ಮಾತ್ರ ಈಗಂಗೆ ಒಪ್ಪ.