Oppanna.com

ಮಳೆಗಾಲದ ವೇಷ

ಬರದೋರು :   ಗೋಪಾಲಣ್ಣ    on   22/06/2014    10 ಒಪ್ಪಂಗೊ

ಗೋಪಾಲಣ್ಣ

ಪತ್ತನಾಜೆಯು ಕಳ್ತು ಮಳೆಗಾಲ ಬಂತು
ಮುತ್ತಿತ್ತು ಮುಗಿಲಲ್ಲಿ ಬಾನು ಕಪ್ಪಾತು
ಕಪ್ಪರವು ಕಟ್ಟಿತ್ತು ಕಣ್ ಕಾಣ ಮನೆಲಿ
ನಡುಬಾನು ರಟ ರಟನೆ ಹೊಟ್ಟಿತ್ತು ಸಿಮಿಲಿ !
ರಕ್ಕಸನ ಹಾಂಗೊಂದು ಖಡ್ಗ ಬೀಸಿತ್ತು
ಗದೆಗದೆಯ ಗುದ್ದಾಣ ಬೊಬ್ಬೆ ಕೇಳಿತ್ತು
ಕತ್ತಿ ಕತ್ತಿಯ ತಾಗಿ ಕಿಚ್ಚು ಹುಟ್ಟಿತ್ತು
ಕಣ್ಣು ಕೋರೈಸಿತ್ತು ವೇಷ ರೈಸಿತ್ತು
ಹೆದರಿದವು ನೋಡಿದವು ,ಕಣ್ಣ ನೀರಿಂದ
ನೆಲಕೆಲ್ಲ ಸುರಿದತ್ತು ಕೊಳಗ ಪಾತ್ರೆಂದ
ಅಜ್ಜಿ ಕೇಳಿದವು ಈ ವರ್ಷ ಮಳೆಯೆಷ್ಟು
ಎರಡು ಮೂರೋ ನಾಲ್ಕೋ ಕೊಳಗ ಮತ್ತೆಷ್ಟು
ಎಷ್ಟು ಕೊಳಗವೇ ಇರಲಿ ಮಳೆ ಮಾತ್ರ ಬರಲಿ
ಬೆಳೆ ಬೆಳೆದು ನಾಡೆಲ್ಲ ನೆಗೆ ಮಾಡುತಿರಲಿ

10 thoughts on “ಮಳೆಗಾಲದ ವೇಷ

  1. ತು೦ಬಾ ಒಳ್ಳೆ ರಚನೆ . ಅಭಿನಂದನೆ ಗೋಪಾಲಣ್ಣ .

  2. ಮಳೆಗಾಲದ ಪದ್ಯ ತುಂಬಾ ಲಾಯ್ಕ ಅಯಿದು

  3. ಒಳ್ಳೆ ಪದ್ಯ ಗೋಪಾಲ, ಅರ್ಥವತ್ತಾಗಿದ್ದು. ಅಕೇರಿಯಾಣ ಗೆರೆ ಎಷ್ಟು ಕೊಶಿ ಮನಸ್ಸಿಂಗೆ!.

  4. ಹವ್ಯಕ ಅಷ್ಟ ಷಡ್ಪದಿ ಲಾಯಿಕ್ಕಾಯಿದು.

    1. ಅಷ್ಟ ಪದಿ ಗೊಂತಿದ್ದು, ಷಡ್ಪದಿ ಗೊಂತಿದ್ದು. ಅಷ್ಟ ಷಡ್ಪದಿ ಹೇಳಿರೆ ಎಂತ?

      1. ಸಾನೆಟ್ =ಅಷ್ಟ ಷಟ್ಪದಿ =೮+೬ ಸಾಲಿನ ಪದ್ಯ

        1. ಕನ್ನಡಲ್ಲಿ ೧೪ ಸಾಲುಗಳ ಪದ್ಯಕ್ಕೆ ‘ಸುನೀತ’ ಹೇಳಿ ಹೇಳ್ತವು.

  5. ಧನ್ಯವಾದ .
    ಕಪ್ಪರ ಕಟ್ಟುದು=ಆಕಾಶಲ್ಲಿ ಮುಗಿಲು ತುಂಬಿ ಕತ್ತಲೆ ಆದ ಹಾಂಗೆ ತೋರುವುದು
    ಸಿಮಿಲಿ=ಮುಗಿಲು ತುಂಬಿ ಶೀತ ಆಗಿ ಬಾನು ‘ಅಕ್ಷೀ’ ಹೇಳಿ ಸೀನು ಮಾಡಿತ್ತು ಹೇಳಿ. ಸಿಮಿಲುದು-ಹೇಳಿದರೆ ಸೀನುವುದು ಹೇಳಿ ಅರ್ಥ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×