Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಪದಾಭ್ಯಾಂ ನ ಸ್ಪೃಶೇದಗ್ನಿಂ ಗುರುಂ ಬ್ರಾಹ್ಮಣಮೇವ ಚ।
ನೈವ ಗಾಂ ಕುಮಾರೀಂ ಚ ನ ವೃದ್ಧಂ ನ ಶಿಶುಂ ತಥಾ।।
ಅನ್ವಯ:
ಅಗ್ನಿಂ ಗುರುಂ ಬ್ರಾಹ್ಮಣಂ ಚ ಏವ ಪದಾಭ್ಯಾಂ ನ ಸ್ಪೃಶೇತ್।
ಗಾಂ ನೈವ (ಪದಾಭ್ಯಾಂ ಸ್ಪೃಶೇತ್)।
ತಥಾ ನ ಕುಮಾರೀಂ ನ ವೃದ್ಧಂ ನ ಶಿಶುಂ ಪದಾಭ್ಯಾಂ ಸ್ಪೃಶೇತ್।।
ಭಾವಾರ್ಥ:
ಅಗ್ನಿ, ಗುರು, ಬ್ರಾಹ್ಮಣ, ಗೋವು, ಕುಮಾರಿ, ವೃದ್ಧ, ಶಿಶು ಇವಕ್ಕೆ ನಮ್ಮ ಕಾಲಿನ ಸ್ಪರ್ಶವೇ ಅಪ್ಪಲಾಗ.
ಆರನ್ನೂ ಕಾಲಿಂದ ಸ್ಪರ್ಶ ಮಾಡಲಾಗ. ಇವರಂತೂ ಆಗಲೇ ಆಗ.
ಸರಿಯಾದ ಮಾತು. ಆರಿಂಗೂ ಕಾಲು ತಾಗುಸಲೇ ಆಗ. ಅಕಸ್ಮಾತ್ ತಾಗಿತ್ತು ಹೇಳಿರೆ ಎದೆ ಹಣೆ ಮುಟ್ಟಿ ನಮಸ್ಕಾರ ಮಾಡುತ್ತದುದೆ ಕ್ರಮ. ಆದರೆ ಈಗಾಣ ಮನುಷ್ಯರು ಬೇಕು ಬೇಕು ಹೇಳಿ ಮೆಟ್ಟಿಕ್ಕಿ “ಸೋರಿ” ಹೇಳುಗತ್ತೆ ! ಕಾಲ ಅಲ್ಲಿಗೆತ್ತಿದ್ದು.
ಆಗಪ್ಪ ಆಗ. ನೆಂಪು ಮಾಡ್ಸಿಯೊಂಡಿರೆಕ್ಕಾವ್ತು.