Oppanna.com

ಸುಭಾಷಿತ – ೨೬

ಬರದೋರು :   ಪುಣಚ ಡಾಕ್ಟ್ರು    on   14/05/2017    3 ಒಪ್ಪಂಗೊ

ಪುಣಚ ಡಾಕ್ಟ್ರು
Latest posts by ಪುಣಚ ಡಾಕ್ಟ್ರು (see all)

ಜೀರ್ಣಮನ್ನಂ ಪ್ರಶಂಸಂತಿ ಭಾರ್ಯಾಂ ಚ ಗತಯೌವನಾಮ್।

ರಣಾತ್ಪ್ರತ್ಯಾಗತಂ ವೀರಂ ಶಸ್ಯಂ ಚ ಗೃಹಮಾಗತಮ್।

 

ಪದಚ್ಛೇದ:

ಜೀರ್ಣಂ ಅನ್ನಂ ಪ್ರಶಂಸಂತಿ ಭಾರ್ಯಾಂ ಚ ಗತಯೌವನಾಮ್।

ರಣಾತ್ ಪ್ರತ್ಯಾಗತಂ ವೀರಂ ಶಸ್ಯಂ ಚ ಗೃಹಮ್ ಆಗತಮ್।।

 

ಅನ್ವಯ / ಪ್ರತಿಪದಾರ್ಥ:

ಜೀರ್ಣಂ ಅನ್ನಂ (ಜೀರ್ಣವಾದ ಆಹಾರವ), ಗತಯೌವನಾಮ್ (ಯೌವನ ದಾಂಟಿದ) ಭಾರ್ಯಾಂ (ಹೆಂಡತಿಯ), ರಣಾತ್ (ಯುದ್ಧಂದ) ಪ್ರತ್ಯಾಗತಂ(ಹಿಂದಿರುಗಿ ಬಂದ) ವೀರಂ(ವೀರನ), ಗೃಹಮ್ ಆಗತಂ (ಮನೆಗೆ ಬಂದ) ಶಸ್ಯಂ(ಫಸಲಿನ) ಪ್ರಶಂಸಂತಿ।।

 

ತಾತ್ಪರ್ಯ:

 

ಯಾವುದೇ ಒಂದು ವಿಷಯ ಅದು ಒಳ್ಳೆದೋ ಹಾಳೋ ಗೊಂತಪ್ಪದು ಪರಿಣಾಮಂದ. ಎದುರಂದ ಕಂಡದರ ನೋಡಿ ತೀರ್ಮಾನ ಮಾಡ್ಲೆಡಿಯ.

 

ಊಟ ಲಾಯ್ಕಾಯಿದು ಹೇಳುದು ರೂಢಿ. ಆದರೆ ನಿಜ ಗೊಂತಪ್ಪದು ಮರುದಿನವೇ. ತಿಂದ ಆಹಾರ ಶರೀರಕ್ಕೆ ಹಿತವಾಗಿ ಪರಿಣಾಮ ಆದರೆ ಮಾತ್ರ ಅದರ ಹೊಗಳೆಕ್ಕು.

 

 

ಯೌವನಲ್ಲಿ ಎಲ್ಲವೂ ಚಂದವೇ, ಪ್ರಾಪ್ತೇ ತು ಷೋಡಷೇ ವರ್ಷೇ ಗರ್ದಭಾಪ್ಯಪ್ಸರಾಯತೇ: ಯೌವನ ಬಂದರೆ ಕತ್ತೆಯೂ ಅಪ್ಸರೆಯಾಂಗೆ ಕಾಂಗು. ಅದು ಕೇವಲ ಬಾಹ್ಯ ಸೌಂದರ್ಯ. ಜವ್ವನಲ್ಲಿ ಭಾರೀ ಒಳ್ಳೆಯ ಹೆಂಡತಿ ಸಿಕ್ಕಿತ್ತು ಹೇಳಿ ಕಾಂಗು. ಯೌವನ ಕಳುದು ಬಾಹ್ಯ ಸೌಂದರ್ಯ ಅಳುದಪ್ಪಗ ಆಂತರಿಕ ಸೌಂದರ್ಯ ಗೊಂತಾವುತ್ತು. ಭಾರ್ಯಾ ಚ ಪ್ರಿಯವಾದಿನೀ: ಪ್ರೀತಿ ಕೊಟ್ಟು ಹಿತವಾದ ದಾರಿಲಿ ಗಂಡನ ಕೊಂಡೊಯ್ಯುವ ಹೆಂಡತಿಯ ಬಗ್ಗೆ ಗೌರವ ಭಾವನೆ ಬಂದರೆ ಆವಗ ಹೊಗಳೆಕ್ಕಾದ್ದು ನ್ಯಾಯ.

 

 

ಒಬ್ಬ ಯುವಕ ಸೈನ್ಯಕ್ಕೆ ಸೇರಿದರೆ ಅದು ಹೆಮ್ಮೆಯ ವಿಷಯವೇ ಸರಿ.

ಆದರೆ ಅವನ ಅಂತಃಸತ್ವ ಗೊಂತಪ್ಪದು ವೈರಿಗಳ ಎದುರಿಲೇ.

ಶತ್ರುಗಳ ಬಗ್ಗುಬಡಿದು ವಿಜಯಿಯಾಗಿ ಬಂದರೆ ಅಥವಾ ಕಾದಿ ವೀರ ಸ್ವರ್ಗ ಪಡದರೆ ಲೋಕ ಅವನ ಹೊಗಳ್ತು.

 

ಗಿಡ ಲಾಯ್ಕ ಸೊಕ್ಕಿ ಬೈಂದು ಲಾಯ್ಕ ಇಕ್ಕು ಹೇಳಿ ಬೀಗುಲೆಡಿಯ. ರೋಗ ಬಂದು ನೆಲಕಚ್ಚಿದರೆ ಎಲ್ಲಾ ಮುಗುತ್ತು. ಕೊಯ್ಲು ಮುಗುದು ಫಸಲು ಮನಗೆ ಬಂದಪ್ಪಗ ಮಾತ್ರ ಒಳ್ಳೆ ಫಸಲು ಹೇಳೆಕ್ಕಷ್ಟೆ.

3 thoughts on “ಸುಭಾಷಿತ – ೨೬

  1. ತುಂಬಾ ಒಳ್ಳೆ ಶುಭಾಷಿತ.
    ಬಾಹ್ಯ ಸೌಂದರ್ಯಕ್ಕೆ ಒತ್ತುಕೊಡದ್ದೆ, ಅಂತರ್ ಸೌಂದರ್ಯಕ್ಕೆ ಒತ್ತುಕೊಡೆಕು ಹೇಳುವದರ ನಿರೂಪಣೆ ಲಾಯಿಕ ಆಯಿದು

  2. ಸುಭಾಷಿತವನ್ನೂ ಪ್ರಶಂಸಿಸೆಕಾದ್ದೆ. ಲಾಯಕಾಯಿದು.

  3. ಅದ್ಭುತವಾಗಿದ್ದು ಈ ಸುಭಾಷಿತ

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×