Latest posts by ಪುಣಚ ಡಾಕ್ಟ್ರು (see all)
- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಸಂಗ್ರಹೈಕಪರಃ ಪ್ರಾಯಃ ಸಮುದ್ರೋsಸ್ತಿ ರಸಾತಲೇ।
ದಾತಾರಂ ಜಲದಂ ಪಶ್ಯ ಗರ್ಜಂತಂ ಭುವನೋಪರಿ।।
ಅನ್ವಯ:
ಪ್ರಾಯಃ ಸಂಗ್ರಹೈಕಪರಃ ಸಮುದ್ರಃ ರಸಾತಲೇ ಅಸ್ತಿ ।
ದಾತಾರಂ ಜಲದಂ ಭುವನೋಪರಿ ಗರ್ಜಂತಂ ಪಶ್ಯ ।।
ಭಾವಾರ್ಥ:
ಕಟ್ಟಿ ಮಡುವವಂದ ಕೊಡುವವ ಯಾವಗಳೂ ಮೇಲೆ. ಕೊಡುವವನ ಕೈ ಮೇಲೆ ತೆಕ್ಕೊಂಬವನ ಕೈ ಕೆಳ. ಭೋಗಿಗಿಂತ ತ್ಯಾಗಿ ಮೇಲು.
ಸಮುದ್ರ ಯಾವಾಗಲೂ ನೀರಿನ ಸಂಗ್ರಹ ಮಾತ್ರ ಮಾಡುದು. ಆರಿಂಗೂ ಕೊಡುವ ಪ್ರಶ್ನೆಯೇ ಇಲ್ಲೆ
ಒಂದು ವೇಳೆ ಕೊಟ್ಟರೂ ಕುಡಿವಲೆ ಆರಿಂಗೂ ಎಡಿಯ. ಹಾಂಗಾಗಿ ಅದರ ಸ್ಥಾನ ಯಾವಾಗಲೂ ಭೂಮಟ್ಟಂದ ಕೆಳ.
ಮೋಡ ಮಳೆ ಸುರಿಸಿ ಭೂಮಿಗೆ ನೀರು ಕೊಡ್ತು.
ಜಲದಾನಿ ಅದು. ಗರ್ಜನೆ ಮಾಡಿಗೊಂಡು ಯಾವಾಗಲೂ ಭೂಮಿಂದ ಮೇಲೆಯೇ ಇರ್ತು.
ಅರ್ಥಗರ್ಭಿತ ಸುಭಾಷಿತ
ಒಳ್ಳೆ ಸುಭಾಷಿತ
ಪುಣ್ಚ ಡಾಕ್ಟರೇ, ಆನು ಮದಲೇ ಹೇದ ಹಾಂಗೆ ಈ ಕಬ್ಬಿಣದ ಕಡ್ಳಗೆ ವಿಶೇಷ ಅಭಿಪ್ರಾಯವ ಅಪೇಕ್ಷೆ ಮಾಡೇಡಿ.ಅಮೃತದ ಹಾಂಗೆ ಇಪ್ಪ ಈ ವಾಕ್ಯಗಳ ಕೇಳುವವು ಈಗ ರಜ ಕಮ್ಮಿ. ಧನ್ಯವಾದಗಳು.