- ಸುಭಾಷಿತ – ೪೩ - October 16, 2018
- ಸುಭಾಷಿತ ೪೨ - December 20, 2017
- ಸುಭಾಷಿತ – ೪೧ - December 14, 2017
ಯಥಾ ಹ್ಯೇಕೇನ ಚಕ್ರೇಣ ನ ರಥಸ್ಯ ಗತಿರ್ಭವತಿ।
ತಥೈವ ಪುರುಷಯತ್ನೇನ ವಿನಾ ದೈವಂ ನ ಸಿಧ್ಯತಿ।।
ಪದಚ್ಛೇದ:
ಯಥಾ ಹಿ ಏಕೇನ ಚಕ್ರೇಣ ನ ರಥಸ್ಯ ಗತಿಃ ಭವತಿ।
ತಥಾ ಏವ ಪುರುಷಯತ್ನೇನ ವಿನಾ ದೈವಂ ನ ಸಿಧ್ಯತಿ ।।
ಅನ್ವಯ:
ಯಥಾ ಏಕೇನ ಚಕ್ರೇಣ ರಥಸ್ಯ ಗತಿಃ ನ ಹಿ ಭವತಿ ತಥಾ ಏವ ದೈವಂ ವಿನಾ (ಕೇವಲಂ) ಪುರುಷಯತ್ನೇನ (ಕಾರ್ಯಂ) ನ ಸಿಧ್ಯತಿ ।।
ಭಾವಾರ್ಥ:
ರಥ ನಡೆಯೆಕ್ಕಾರೆ ಎರಡು ಚಕ್ರ ಬೇಕೇ ಬೇಕು. ಎರಡೂ ಚಕ್ರಂಗೊ ಅನುನಯಿಸಿ ಹೋಯೆಕ್ಕು.
ಸಂಕಲ್ಪಿತ ಕಾರ್ಯಸಿದ್ಧಿಗೆ ಒಂದು ಚಕ್ರ ಪುರುಷಪ್ರಯತ್ನ ಆದರೆ ಇನ್ನೊಂದು ಚಕ್ರ ದೈವಸಹಾಯ.
ಯಾವ ನಾಸ್ತಿಕನಾದರೂ ಅವ ಕೇಳಿದರೂ ಕೇಳದ್ದರೂ ದೈವಸಹಾಯ ಇಲ್ಲದಿದ್ದರೆ ಕಾರ್ಯಪೂರ್ತಿ ಆಗ.
ಹಾಂಗೇ
ಎಷ್ಟೇ ದೊಡ್ಡ ಭಕ್ತನಾದರೂ ಏನೂ ಪ್ರಯತ್ನ ಮಾಡದೇ ದೈವಂದಲೇ ಎಲ್ಲಾ ಕೆಲಸ ಆಯಕ್ಕು ಹೇಳಿದರೆ ಅದು ಮೂರ್ಖತನ.
ಮಾ ತೇ ಸಂಗೋಽಸ್ತ್ವಕರ್ಮಣಿ
ಕರ್ಮ ಮಾಡದೆ ಫಲ ಸಿಕ್ಕುಲೆ ಸಾಧ್ಯ ಇಲ್ಲೆ ಹೇಳ್ತ ಶ್ರೀಕೃಷ್ಣ ಪರಮಾತ್ಮ.
ನ ಹಿ ಸುಪ್ತಸ್ಯ ಸಿಂಹಸ್ಯ ಪ್ರವಿಶಂತಿ ಮುಖೇ ಮೃಗಾಃಃ।
ಕಾಡಿ ರಾಜನೇ ಆದರೂ ಸಿಂಹ ಆಹಾರಕ್ಕಾಗಿ ಬೇಟೆಯಾಡಲೇ ಬೇಕು. ಸುಮ್ಮನೆ ಬಾಯಗಲಿಸಿ ಒರಗಿದರೆ ಅದರ ಬಾಯಿಗೆ ಪ್ರಾಣಿಗೊ ತಾವಾಗಿಯೇ ಬಂದು ಬೀಳವು.
ಪುರುಷಪ್ರಯತ್ನ ಬೇಕೇ ಬೇಕು.
ಅದಕ್ಕೆ ದೈವಸಹಾಯವೂ ಬೇಕು.
ಆವಗಳೇ ಕಾರ್ಯಕ್ಕೆ ಜಯ.
ಎಂತ ಶಂಕರಿ ಅಕ್ಕ, ಬೇರೆ ಎಂತಾರು ಲೇಖನ ಬರೆತ್ತಿಯೊ ಹೇದು?
ಸರಿಯೇ ಸರಿ ವಿಜಯತ್ತೆ
ಈಗಣ ದಂಪತಿಗೊಕ್ಕೆ ಅದರ ಕಲ್ಪನೆ ಇಲ್ಲೆ
ಅಪ್ಪು.ಪುರುಷ ಪ್ರಯತ್ನದೊಟ್ಟಿಂಗೆ ದ್ಯೆವ ಸಹಾಯ ಬೇಕೇ ಬೇಕು.ಹಾಂಗೇ ಎರಡು ಚಕ್ರದ ಗಾಡಿಗೆ ದಂಪತಿಗಳನ್ನೂ ಹೋಲುಸುತ್ತವು. ಸಂಸಾರ ನೊಗ ಹಿಡುದ ಗಾಡಿಹೇಳಿ.