- ಸಣ್ಣ ಸಂಗತಿ - February 13, 2018
- ದೇಶಸೇವೆ - August 15, 2017
- ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ - August 15, 2017
ಭ್ರಷ್ಟಾಚಾರ ಬಗ್ಗೆ ಅಣ್ಣಾ ಹಜಾರೆ ಮಾಡಿದ ಪ್ರತಿಭಟನೆ ಈ ಕಾಲಲ್ಲಿ ದೊಡ್ಡ ಸುದ್ದಿ.
ಇಂತಾ ಭ್ರಷ್ಟತೆ ಕ್ರಿಕೆಟ್ ರಂಗಲ್ಲಿ ಕೆಲವು ವರ್ಷ ಹಿಂದೆ ಬಯಲಾಗಿ,ನಮ್ಮ ದೇಶದ ಪ್ರತಿಭಾವಂತ ಬ್ಯಾಟ್ಸ್ ಮನ್ ಅಜರುದ್ದೀನ್ ಕೂಡ ಇಂತಾ ಕೆಲಸ ಮಾಡಿತ್ತು ಹೇಳಿ ಗೊಂತಪ್ಪಾಗ ಎನಗೆ ಕ್ರಿಕೆಟಿಲಿ ಇಪ್ಪ ಆಸಕ್ತಿ ಅರ್ಧಕ್ಕರ್ಧ ಕಮ್ಮಿ ಆತು.ಅಜರುದ್ದೀನ್ ಗೆ ಯಾವ ಕೊರತೆ ಇತ್ತು? ಎಂತಗೆ ಹೀಂಗೆ ಮಾಡೆಕಾದ ಅಗತ್ಯ ಇತ್ತು ಹೇಳಿ ಗೊಂತಾವ್ತಿಲ್ಲೆ.
ಕ್ರಿಕೇಟಿಲಿ ಪೈಸೆಯ ಆಟ ಈಗ ತುಂಬಾ ಹೆಚ್ಚಾಯಿದು.ನಮ್ಮ ಆಟಗಾರರಲ್ಲಿ ಮೊದಲಿನ ಬದ್ಧತೆ ಇಲ್ಲೆ. ಸೋಲು,ಗೆಲುವು ಆಟಲ್ಲಿ ಇಪ್ಪದೇ.ಗಾಯ ಅಪ್ಪದೂ ಸಾಮಾನ್ಯ ವಿಷಯ.ಅದಕ್ಕಾಗಿ ಅಲ್ಲ ಆನು ಹೇಳುದು-ಆಟದ ಗುಣಮಟ್ಟ ಕಮ್ಮಿ ಆಯಿದು.ಈಗ ಆಟಗಾರರ ಮನೋಬಲ ಹೆಚ್ಚಿಸೆಕ್ಕು.ಬರೇ ಪೈಸ ಕೊಡುದರಿಂದ ಅದು ಸಾಧ್ಯ ಇಲ್ಲೆ. ಸಂಭಾವ್ಯ ಆಟಗಾರರಿಂಗೆ ಎರಡು ತಿಂಗಳ ಕಠಿಣ ತರಬೇತಿ ಕೊಡೆಕ್ಕು.
ಕ್ರಿಕೆಟ್ ಭಾರತಲ್ಲಿ ತುಂಬಾ ಜನಪ್ರಿಯ ಆಟ.ಓವರ್ ನಡುವೆ ಸಮಯವೂ ಸಿಕ್ಕುತ್ತ ಕಾರಣ ಜಾಹೀರಾತು ಹಾಕುಲೂ ಅನುಕೂಲ ಕ್ರಿಕೆಟ್ ಆಟಲ್ಲಿ ಇದ್ದು.ಹೀಂಗಾಗಿ ಜಾಹೀರಾತು ಉದ್ಯಮವೂ ಭೂತಾಕಾರಲ್ಲಿ ಬೆಳದತ್ತು.ಈಗ ಕ್ರಿಕೆಟಿನ ಜನಪ್ರಿಯತೆಯ ಕಮ್ಮಿ ಮಾಡಲೆ ಎಡಿಯ.ದೇಶಾಭಿಮಾನಕ್ಕೂ ಅದು ಪೂರಕವೇ ಆಗಿ ಇದ್ದು.
ಈಗ ಇದರಲ್ಲೂ ಪೈಸೆಯ ಆಟವ ಕಮ್ಮಿ ಮಾಡುಲೆ ಕ್ರಮ ತೆಕ್ಕೊಂಬ ಅಗತ್ಯ ಇದ್ದು .
ಬಾಕಿ ಆಟಂಗೊಕ್ಕೂ ಜನಂಗೊ ಪ್ರೋತ್ಸಾಹ ಕೊಡೆಕ್ಕು.ವ್ಯಾಯಾಮಕ್ಕೆ,ಕಮ್ಮಿ ಜಾಗೆಲಿ ಕಮ್ಮಿ ಕರ್ಚಿಲಿ ಆಡುವ ಆಟಂಗೊಕ್ಕೆ ಸರ್ಕಾರೀ ಬೆಂಬಲ ಸಿಕ್ಕೆಕ್ಕು.ಹಾಕಿ,ಕಾಲ್ಚೆಂಡು ,ವಾಲ್ಲಿ ಬಾಲ್ ಎಲ್ಲಾ ಆಟಂಗೊಕ್ಕೂ ಪ್ರೋತ್ಸಾಹ ಜಾಸ್ತಿ ಮಾಡೆಕ್ಕು.
ಆದಷ್ಟು ಮಟ್ಟಿಂಗೆ ಮಾರ್ಚ್,ಎಪ್ರಿಲಿಲಿ[ಪರೀಕ್ಷಾ ಸಮಯ]ಕ್ರಿಕೇಟ್ ಆಟ ಮಡಿಕ್ಕೊಂಬಲಾಗ.ಅತಿಯಾದ ಕ್ರಿಕೆಟ್ ಮರುಳು ಯುವಕರ ಭವಿಷ್ಯವ ಹಾಳು ಮಾಡುಲಾಗ.
೨೦-೨೦ ಪಂದ್ಯಲ್ಲೂ ನಮ್ಮ ಸಂಸ್ಕೃತಿಗೆ ವಿರೋಧವಾದ ಕುಣಿತವ ಕೈ ಬಿಡೆಕ್ಕು-ಅದರಿಂದ ದೊಡ್ಡ ನಷ್ಟ ಇಲ್ಲೆ.ಅಂಧಾನುಕರಣೆ ನಮಗೆ ಹೇಳಿಸಿದ್ದಲ್ಲ.
ಅಣ್ಣಾ ಹಜಾರೆ ಅಲ್ಲದ್ದರೂ ಬೇರೊಬ್ಬ ಜನ ಮುಂದಾಗಿ ಈ ರಂಗವ ಸರಿ ಮಾಡೆಕ್ಕು,ಅಲ್ಲದೊ?
ಗೋಪಾಲಣ್ಣಾ,
ಕ್ರಿಕೆಟ್ಟಾಚಾರ, ಭ್ರಷ್ಟಾಚಾರ – ಎರಡನ್ನೂ ಲಾಯಿಕಂಗೆ ವಿಮರ್ಶೆ ಮಾಡಿ ಬರದ್ಸು ಕಂಡು ಕೊಶಿ ಆತು.
ಆಟಲ್ಲಿ ರಾಜಕೀಯ ಬಪ್ಪಲಾಗ, ರಾಜಕೀಯಲ್ಲಿ ಆಟ ಬಪ್ಪಲಾಗ – ಬಂದರೆ ಎರಡುದೇ ಹಾಳಾಗಿ ಹೋತು – ಹೇಳಿ ಗೆಡ್ಡದಮಾವ ಒಂದೊಂದರಿ ಹೇಳುಗು.
ಈಗ ಎರಡುದೇ ಬಂದುನಿಂದಿದು.
ರಾಜಕೀಯ ತೊಳದು ಶುದ್ದ ಅಪ್ಪ ಅಂದಾಜಿದ್ದು. ಆದರೆ ಆಟಕ್ಕೆ ಆರು “ಅಣ್ಣ” ಆವುತ್ತನೋ..
ಅಲ್ಲದೋ?
ನಮಸ್ತೇ..
ಭ್ರಷ್ಟಾಚಾರ ಪ್ರತಿಯೊಂದು ಕ್ಷೇತ್ರಲ್ಲಿಯೂ ತಾಂಡವ ಆಡ್ತಾ ಇದ್ದು. ಮನುಷ್ಯಂಗೆ ಪೈಸೆ ವ್ಯಾಮೋಹ ಹೋಗಿ ಕರ್ಮ ಸಾಫಲ್ಯಂದ ಎಂದಿಂಗೆ ಆತ್ಮ ತೃಪ್ತಿ ಸಿಕ್ಕುತ್ತು ಹೇಳುವ ಮನವರಿಕೆ ಆವ್ತೋ ಅಂದಿಗೆ ಕಾರ್ಯ ಜಯಪ್ರದವೂ ಬಹು ಜನ ಮನ್ನಣೆಯೂ ಪಡಗು ಹೇಳುವದಾವ್ತು ‘ಚೆನ್ನೈವಾಣಿ’.