Oppanna.com

ದಾರಳೆಕಾಯಿ ಮೆಂತೆ ಸೊಪ್ಪು ತಾಳು(ಪಲ್ಯ)

ಬರದೋರು :   ವೇಣಿಯಕ್ಕ°    on   09/09/2014    0 ಒಪ್ಪಂಗೊ

ವೇಣಿಯಕ್ಕ°

ದಾರಳೆಕಾಯಿ ಮೆಂತೆ ಸೊಪ್ಪು ತಾಳು(ಪಲ್ಯ)

ಬೇಕಪ್ಪ ಸಾಮಾನುಗೊ:

  • 2 ದಾರಳೆಕಾಯಿ
  • 1/2 ಕಟ್ಟು ಮೆಂತೆ ಸೊಪ್ಪು
  • 1/2 ನೀರುಳ್ಳಿ
  • 1/2 ಚಮ್ಚೆ ಶುಂಠಿ – ಬೆಳ್ಳುಳ್ಳಿ ಪೇಸ್ಟ್
  • 2-3 ಹಸಿಮೆಣಸು
  • ಚಿಟಿಕೆ ಅರುಶಿನ ಹೊಡಿ
  • 1/2 – 3/4 ಚಮ್ಚೆ ಕೊತ್ತಂಬರಿ ಹೊಡಿ (ಹೊರುದು ಹೊಡಿ ಮಾಡಿದ್ದು)
  • ರುಚಿಗೆ ತಕ್ಕಸ್ಟು ಉಪ್ಪು
  • 5-6 ಬೇನ್ಸೊಪ್ಪು
  • 4-5 ಎಳೆ ಕೊತ್ತಂಬರಿ ಸೊಪ್ಪು
  • 1/2 ಚಮ್ಚೆ ಸಾಸಮೆ
  • 1/2 ಚಮ್ಚೆ ಉದ್ದಿನ ಬೇಳೆ
  • 1/2 ಚಮ್ಚೆ ಜೀರಿಗೆ
  • 2 ಚಮ್ಚೆ ಎಣ್ಣೆ

ಮಾಡುವ ಕ್ರಮ:
ದಾರಳೆಕಾಯಿಯ ಚೋಲಿ ತೆಗದು, ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಾಧಾರಣ ಗಾತ್ರಕೆ ಕೊರದು ಮಡುಗಿ. ಮೆಂತೆ ಸೊಪ್ಪಿನ ದಂಟಿಂದ ತೆಗದು ತೊಳದು ಮಡಿಕ್ಕೊಳ್ಳಿ. ನೀರುಳ್ಳಿಯನ್ನೂ, ಮೆಂತೆ ಸೊಪ್ಪನ್ನೂ ಕೆಳಾಣ ಚಿತ್ರಲ್ಲಿ ತೋರ್ಸಿದ ಹಾಂಗೆ ಸಣ್ಣಕೆ ಕೊಚ್ಚಿ ಮಡಿಕ್ಕೊಳ್ಳಿ. ಹಸಿಮೆಣಸಿನ ಸಿಗುದು ಮಡಿಕ್ಕೊಳ್ಳಿ.

ಒಂದು ಬಾಣಲೆಲಿ ಉದ್ದಿನ ಬೇಳೆ, ಸಾಸಮೆ, ಜೀರಿಗೆ ಎಣ್ಣೆ ಹಾಕಿ ಬೆಶಿ ಮಾಡಿ. ಅದು ಹೊಟ್ಟಿ ಅಪ್ಪಗ ಶುಂಠಿ – ಬೆಳ್ಳುಳ್ಳಿ ಪೇಸ್ಟ್ ಹಾಕಿ ರೆಜ್ಜ ಹೊತ್ತು(ಸಾಧಾರಣ ಒಂದು ನಿಮಿಷ) ಹೊರಿರಿ. ಇದಕ್ಕೆ ನೀರುಳ್ಳಿ, ಹಸಿಮೆಣಸು, ಬೇನ್ಸೊಪ್ಪು, ಅರುಶಿನ ಹೊಡಿ, ರೆಜ್ಜ ಉಪ್ಪು ಹಾಕಿ 4-5 ನಿಮಿಷ ಸಣ್ಣ ಕಿಚ್ಚಿಲ್ಲಿ ಹೊರಿರಿ. ಇದಕ್ಕೆ ಕೊರದ ಮಂತೆ ಸೊಪ್ಪು ಹಾಕಿ 4-5 ನಿಮಿಷ ಸಣ್ಣ ಕಿಚ್ಚಿಲ್ಲಿ ಬಾಡ್ಸಿ. ಇದಕ್ಕೆ ಕೊರದ ದಾರಳೆಕಾಯಿ, ಕೊತ್ತಂಬರಿ ಹೊಡಿ, ಉಪ್ಪು ಹಾಕಿ ಹಾಕಿ ತೊಳಸಿ ಹದ ಕಿಚ್ಚಿಲ್ಲಿ ನೀರು ಹಾಕದ್ದೆ ಮುಚ್ಚಲು ಮುಚ್ಚಿ 15-20 ನಿಮಿಷ ಬೇಶಿ.

ಇದಕ್ಕೆ ಕೊತ್ತಂಬರಿ ಸೊಪ್ಪು ಹಾಕಿ ತೊಳಸಿ. ಇದು ಚಪಾತಿ/ರೊಟ್ಟಿ ಒಟ್ಟಿಂಗೆ ತಿಂಬಲೆ ಲಾಯಿಕ ಆವುತ್ತು.

ಮಾಡಿ, ರುಚಿನೋಡಿ ಹೇಂಗಾಯಿದು ತಿಳಿಶಿ.

~
ವೇಣಿ ಅಕ್ಕ°

ಸೂ: ಈ ಶುದ್ದಿಯ ಇಂಗ್ಲೀಷ್ ಪ್ರತಿ ಇಲ್ಲಿದ್ದು.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×