ಕೂಳಕ್ಕೋಡ್ಳು ಅಣ್ಣ ಹೇಳಿರೆ ಮದಲಿಂದಲೇ ಹಾಂಗೆ. ಓದುಗು, ಬರಗು.
ಸಂಸ್ಕೃತಿ, ಸಂಸ್ಕೃತ - ಎರಡರಲ್ಲಿದೇ ವಿಶೇಷ ಆಸಕ್ತಿ.
ಮಹೇಶಣ್ಣ ಹೇಳಿ ಇವರ ಹೆಸರು, ಎಂಗೊ ಎಲ್ಲ ಕೂಳಕ್ಕೂಡ್ಳಣ್ಣ ಹೇಳಿಯೇ ದಿನಿಗೆಳುದು.
ಊರಿಲಿ, ನೀರ್ಚಾಲು ಶಾಲೆಲಿ ಕಲಿವಗಳೇ ಹಾಂಗೆ - ಎಡಪ್ಪಾಡಿ ಬಾವ ಹೇಳುಗು - ಬಾಕಿ ಒಳುದವೆಲ್ಲ ಬಿಂಗಿ ಮಾಡಿಗೊಂಡು, ಮಾಷ್ಟ್ರನ ಅಂಗಿಗೆ ಶಾಯಿ ಹಾಕಿಯೊಂಡು ಆಡುವಗ, ಇವು ಕರೆಲಿ ಕೂದಂಡು ಓದುಗಡ.
ಮುಂದೆ ಉಜಿರೆಲಿ ಕಲ್ತುಗೊಂಡು ಇಪ್ಪಗಳೂ ಹಾಂಗೆಯೇ.
ಅಲ್ಲಿಂದಲೂ ಮುಂದೆ ತಿರುಪತಿಲಿ ಕಲ್ತವು - ಅಷ್ಟಪ್ಪಗ ಪ್ರತಿಸರ್ತಿ ಊರಿಂಗೆ ಬಪ್ಪಗಳೂ ಒಪ್ಪಣ್ಣಂಗೆ ಲಾಡು ಸಿಕ್ಕಿಯೋಂಡು ಇತ್ತು. 😉
ಈಗ, ಪ್ರಸ್ತುತ ಬೊಂಬಾಯಿಯ ಹತ್ರೆ ಐ.ಐ.ಟಿ ಹೇಳ್ತ ದೊಡ್ಡ ಕೋಲೇಜಿಲಿ -ಭಾರತಲ್ಲಿ ಆದ ವಿಜ್ಞಾನದ ಬೆಳವಣಿಗೆಯ ಬಗ್ಗೆ - ಪಚ್ಚಡಿ (Ph.D) ಮಾಡಿಕ್ಕಿ ಡಾಗುಟ್ರು ಆಯಿದವು.
ಕಿದೂರು ಬಾವನ ಹಾಂಗೆ ಮದ್ದಿನ ಇಂಜೆಕ್ಷನು ಕುತ್ತತ್ತ ಡಾಗ್ಟ್ರು ಅಲ್ಲ, ತತ್ವದ ಇಂಜೆಕ್ಷನು ಕುತ್ತುತ್ತ ಡಾಗ್ಟ್ರು.
ಕುಶಿ ಆವುತ್ತು, ನಮ್ಮೋರು ಮೇಗೆ ಮೇಗೆ ಹೋಪಗ. ಅಲ್ಲದಾ? ಅವಕ್ಕೆ ರಜ ಕುಶಾಲುದೇ ಇದ್ದು. ಚಿಂತನೆಯುದೇ ಇದ್ದು.
ಭಾರತೀಯರ ಸಂಶೋಧನೆಗಳ ಬಗೆಗೆ ಕಾಳಜಿಯುದೇ ಇದ್ದು. ನಮ್ಮೋರ ಹಿಂದಾಣೋರ "ಮಹತ್ವ"ದ ಬಗೆಗೆ ಹೆಮ್ಮೆಯುದೇ ಇದ್ದು.
ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತಿರಾ ಹೇಳಿ ಕೇಳುವಗ ಸಂತೋಷಲ್ಲಿ ’ಅಕ್ಕಪ್ಪಾ, ಧಾರಾಳ!’ ಹೇಳಿದವು. ಹಾಂಗಾಗಿ, ನಮ್ಮೋರ ಮಹತ್ವಂಗಳ ಹೇಳುಲೆ "ಮಹತ್ವ" ಹೇಳ್ತ ಅಂಕಣ, ಇವು ಬರದ್ದರ ಓದಿಕ್ಕಿ, ನಮ್ಮೋರ ಬಗೆಗೆ ನವಗೆಲ್ಲರಿಂಗುದೇ ಹೆಮ್ಮೆ ಬಂದು, ಹಿಂದಾಣೋರ ಮಹತ್ವ ಬಂದರೆ ಕೂಳೆಕ್ಕೋಡ್ಳಣ್ಣನ ಶ್ರಮ ಸಾರ್ಥಕ ಆದ ಹಾಂಗೆ.
ಓದಿ, ಒಪ್ಪ ಕೊಡಿ. "ಮಹತ್ವ"ದ ಮಾಹಿತಿಯ ಅರ್ಥ ಮಾಡಿಗೊಳ್ಳಿ..!
ಆಗದೋ?