ಶೇಡಿಗುಮ್ಮೆ ಗೋಪಾಲಣ್ಣನ ಬಗ್ಗೆ ಬೈಲಿಂಗೆ ಮೊದಲೇ ಅರಡಿಗು. ಶರ್ಮಪ್ಪಚ್ಚಿ ಅವರಬಗ್ಗೆ ವಿಶೇಷವಾದ ಶುದ್ದಿಯನ್ನೇ ಬೈಲಿಂಗೆ ಹೇಳಿತಿಳುಸಿದ್ದವು. ( ಸಾಧನೆಗೆ ಅಡ್ಡಿ ಆಗದ್ದ ಅಂಗವೈಕಲ್ಯ: https://oppanna.com/nammooru/shedigumme-gopalakrishna-bhat )
ಹ್ಮ್, ಅಪ್ಪು. ಶರ್ಮಪ್ಪಚ್ಚಿ ಹೇಳಿದ ಹಾಂಗೆಯೇ, ಅವು ದೈಹಿಕವಾಗಿ ಎದ್ದು ನಿಂಬಲೆ ಸಾಧ್ಯ ಆಗದ್ದೆ ಇಕ್ಕು, ಆದರೆ ಅವು ಮಾನಸಿಕವಾಗಿ ಎದ್ದು ನಿಂದ ರೀತಿ ಇದ್ದನ್ನೆ- ಅದರ ಗ್ರೇಶಿರೆ ಒಪ್ಪಣ್ಣಂಗೆ ತುಂಬಾ ಕೊಶಿ ಅಪ್ಪದು. ಸ್ವಂತವಾಗಿ ಬರದು ಪಾಸಪ್ಪ ಪರೀಕ್ಷೆಗೊ, ಅದರಿಂದ ಮತ್ತೆ ಸಿಕ್ಕಿದ ಸ್ವಂತ ಉದ್ಯೋಗ, ಅಲ್ಲಿಂದ ಮುಂದಕ್ಕೆ ನೆಡದು ಬಂದ ಸ್ವಂತ ಸಂಪಾದನೆಯ ಜೀವನ – ಇದರ ಎಲ್ಲವನ್ನುದೇ ಗ್ರೇಶಿರೆ, ಜೀವನವ ಎದರುಸಲೆ ಒದಗಿ ಬಂದ ದೈವಪರೀಕ್ಷೆ ಹೇಳಿ ಅನುಸುದು ಒಪ್ಪಣ್ಣಂಗೆ. ಈಗ ಅವು ಉದ್ಯೋಗಸ್ಥರಾಗಿದ್ದರೂ, ಕೆಲವು ಪುಸ್ತಕಂಗಳ ಬರದು ಸಾಹಿತ್ಯಕ್ಷೇತ್ರಕ್ಕೂ ಹೊಂದುತ್ತ ಸಾಧನೆಯ ಮಾಡಿ ತೋರುಸಿದ್ದವು. ಅವರ ಜೀವನಗಾಥೆಯೇ ಒಳುದೋರಿಂಗೆ ಪ್ರೇರೇಪಣೆ. ಇದರನ್ನೇ ನಮ್ಮ ಶರ್ಮಪ್ಪಚ್ಚಿ ಐದಾರು ತಿಂಗಳು ಹಿಂದೆ ಹೇಳಿದ್ದದು! ಇರಳಿ, ನಮ್ಮ ಹತ್ತರಾಣೋರು ಹಾಂಗೆ ಮಿಂಚಿರೆ ನವಗೂ ಕೊಶಿಯೇ. ಅವು ಇನ್ನೂ ಹತ್ತರೆ ಬಂದರೆ ಮತ್ತೂ ಕೊಶಿ, ಅಲ್ಲದೋ? ಬೈಲಿಂಗೆ ಶುದ್ದಿ ಹೇಳುತ್ತಿರೋ – ಕೇಳಿದೆ ಒಂದರಿ ಅವರತ್ರೆ. ಸಂತೋಷಲ್ಲಿ ಒಪ್ಪಿಗೊಂಡವು. ಅವು ಒಪ್ಪಿ, ತಕ್ಷಣ ಕೊಶೀಲಿ ಕಳುಸಿದ ಆ ಶುದ್ದಿಯ ಕಂಡು ಒಪ್ಪಣ್ಣಂಗೆ ಕೊಶಿಯೂ ಆಶ್ಚರ್ಯವೂ ಆಗಿಬಿಟ್ಟತ್ತು!
ಅವರ ಶುದ್ದಿಗಳ ನಾವೆಲ್ಲೊರೂ ಕೇಳುವೊ°, ಪ್ರೀತಿಲಿ ಒಪ್ಪ ಕೊಡುವೊ°. ಸಾಹಿತ್ಯದ ಅವರ ಅಭಿರುಚಿಯ ಇನ್ನುದೇ ಬೆಳೆಸುವೊ°, ಆಗದೋ?
ಶ್ರೀಮತಿ ಸರಸ್ವತಿ ಶಂಕರ್ ಬರೆದ ಹೊಸ ಕಾದಂಬರಿ[ಪ್ರಕಾಶಕರು-ರವಿ ಪ್ರಕಾಶನ,ಬೆಂಗಳೂರು] “ಹೆಣ್ಣು-ಹೊನ್ನು” ತಾ.೫-೨-೧೨ ಆದಿತ್ಯವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಕೃಷ್ಣರಾಜ ಪರಿಷನ್ಮಂದಿರಲ್ಲಿ ಬಿಡುಗಡೆ ಆತು.
ಕಾರ್ಯಕ್ರಮದ ಅಧ್ಯಕ್ಷತೆಯ ಬೆಂಗಳೂರು ದೂರದರ್ಶನದ ಸಹಾಯಕ ನಿಲಯ ನಿರ್ದೇಶಕ ಶ್ರೀ ಸಿ.ಎನ್.ರಾಮಚಂದ್ರ ವಹಿಸಿದ್ದವು.
ಡಾ.ಸಿ.ವೀರಣ್ಣ, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಪರಿಷತ್ – ಈ ಕಾದಂಬರಿಯ ಲೋಕಾರ್ಪಣ ಮಾಡಿದವು.
ಮೈಸೂರಿನ ಸಂಗೀತ ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ ಕಾದಂಬರಿಯ ಪರಿಚಯಿಸಿದವು.
ಪ್ರಕಾಶಕ ಶ್ರೀ ಎಸ್.ಆರ್.ಸತ್ಯನಾರಾಯಣ ಸ್ವಾಗತಿಸಿದವು.
ಲೇಖಕಿ ಶ್ರೀಮತಿ ಸರಸ್ವತಿ ಶಂಕರ್ ಪ್ರಾಸ್ತಾವಿಕ ಮಾತು ಹೇಳಿದವು; ಅವರ ಪತಿ ಪ್ರೊ॥ಶಂಕರ ಭಟ್ ಸುಳ್ಯ ವಂದನಾರ್ಪಣೆ ಮಾಡಿದವು.
ಶ್ರೀ ಸೂರ್ಯನಾರಾಯಣ ಪಂಜಾಜೆ ನಿರೂಪಿಸಿದವು.
ಈ ಕಾರ್ಯಕ್ರಮಲ್ಲಿ ಶ್ರೀ ಕಿಶೋರ್ ದತ್,ಶ್ರೀಮತಿ ಮೇದಿನಿ ದತ್ ಮತ್ತೆ ಶ್ರೀಮತಿ ಜಯಶ್ರೀ ಅವರ ಗೀತ ಗಾಯನವೂ ಇತ್ತು.
ಇದು ಸರಸ್ವತಿಯವರ ಮೂರನೇ ಕಾದಂಬರಿ.
ಇವರ ಬಗ್ಗೆ ಕಳೆದ ವರ್ಷ ಬಿಡುಗಡೆ ಆದ ಪ್ರವಾಸ ಕಥನದ [ಚಿನ್ನದ ನಾಡಿಂದ ಹೊನ್ನ ದ್ವಾರದತ್ತ-ಹೇಳುವ ಕೃತಿ] ವರದಿಲಿ ಬರೆದ್ದೆ..
9 thoughts on “ಹೊಸ ಕಾದಂಬರಿ ಬಂತು”
ಅಭಿನಂದನೆಗೋ.
ಸರಸ್ವತಿ ಅಕ್ಕಂಗೆ ಅಭಿನಂದನೆಗೊ.
ಸಾಹಿತ್ಯ ಕ್ಷೇತ್ರಕ್ಕೆ ಅವರಿಂದ ಇನ್ನೂ ಹೆಚ್ಚಿನ ಸೇವೆ ಸಲ್ಲಲಿ.
ಬೈಲಿಂಗೆ ಬಂದು ನಮ್ಮ ಭಾಶೆಲಿ ಶುದ್ದಿ ಹೇಳ್ತವೋ ಕೇಳ್ಲಾವ್ತಿತು.
ಸಂತೋಷದ ಶುದ್ದಿ.
ಅಭಿನಂದನೆಗೋ.
ಪುಸ್ತಕ ಸಿಕ್ಕಿರೆ ಖಂಡಿತಾ ಓದುವೆ 🙂
ಸಿಕ್ಕೆಕ್ಕಾರೆ ಹುಡ್ಕುಯೊಂಡು ಹೋಯೆಕ್ಕಡಾ ಭಾವ..
ಓಯ್ ಪೆಂಗಣ್ಣ..
ರಾಮಕಥೆಲಿ ಕೊಣುಕ್ಕೊಂಡಿದ್ದ ಹಾಂಗೇ ಎಲ್ಲಿ ಮಾಯ ಆದ್ದು ನೀನು..?
ಎಷ್ಟು ಹುಡುಕ್ಕಿರೂ ಸಿಕ್ಕಿದ್ದೇ ಇಲ್ಲೆ – ಅಂಬಗ ಹುಡ್ಕಿದ್ದೆಲ್ಲ ಸಿಕ್ಕ ಹೇಳಿ ಆತಿಲ್ಲೆಯೋ 😉
ಕಾರ್ಯಕ್ರಮಕ್ಕೆ ಹೋಯೆಕ್ಕು ಹೇಳಿ ಭಾರೀ ಆಶೆ ಇತ್ತು.ಊರಿಲಿ ಇಲ್ಲದ್ದ ಕಾರಣ ಅವಕಾಶ ಆತಿಲ್ಲೆ,ಚೆ..ಆ ಪುಸ್ತಕ ಆದರೂ ಓದೆಕ್ಕು.
ಅಭಿನಂದನೆಗೋ.
ಸರಸ್ವತಿ ಅಕ್ಕಂಗೆ ಅಭಿನಂದನೆಗೊ.
ಸಾಹಿತ್ಯ ಕ್ಷೇತ್ರಕ್ಕೆ ಅವರಿಂದ ಇನ್ನೂ ಹೆಚ್ಚಿನ ಸೇವೆ ಸಲ್ಲಲಿ.
ಬೈಲಿಂಗೆ ಬಂದು ನಮ್ಮ ಭಾಶೆಲಿ ಶುದ್ದಿ ಹೇಳ್ತವೋ ಕೇಳ್ಲಾವ್ತಿತು.
ಸಂತೋಷದ ಶುದ್ದಿ.
ಅಭಿನಂದನೆಗೋ.
ಪುಸ್ತಕ ಸಿಕ್ಕಿರೆ ಖಂಡಿತಾ ಓದುವೆ 🙂
ಸಿಕ್ಕೆಕ್ಕಾರೆ ಹುಡ್ಕುಯೊಂಡು ಹೋಯೆಕ್ಕಡಾ ಭಾವ..
ಓಯ್ ಪೆಂಗಣ್ಣ..
ರಾಮಕಥೆಲಿ ಕೊಣುಕ್ಕೊಂಡಿದ್ದ ಹಾಂಗೇ ಎಲ್ಲಿ ಮಾಯ ಆದ್ದು ನೀನು..?
ಎಷ್ಟು ಹುಡುಕ್ಕಿರೂ ಸಿಕ್ಕಿದ್ದೇ ಇಲ್ಲೆ – ಅಂಬಗ ಹುಡ್ಕಿದ್ದೆಲ್ಲ ಸಿಕ್ಕ ಹೇಳಿ ಆತಿಲ್ಲೆಯೋ 😉
ಕಾರ್ಯಕ್ರಮಕ್ಕೆ ಹೋಯೆಕ್ಕು ಹೇಳಿ ಭಾರೀ ಆಶೆ ಇತ್ತು.ಊರಿಲಿ ಇಲ್ಲದ್ದ ಕಾರಣ ಅವಕಾಶ ಆತಿಲ್ಲೆ,ಚೆ..ಆ ಪುಸ್ತಕ ಆದರೂ ಓದೆಕ್ಕು.
ಪಾಚ ಸಿಕ್ಕಿಯಪ್ಪಗ ಪುಸ್ತಕ ನೆಂಪಪ್ಪಲೇ ನಿಂಗೋ ಟಿ.ಕೆ. ಮಾವನೋ.. ಸಪ್ನಕ್ಕೆ ಹೋದರೆ ಸಿಕ್ಕುಗು ಹೇಳ್ತವು ಟಿ.ಕೆ. ಮಾವ
ಶುದ್ದಿಗೆ ಧನ್ಯವಾದಂಗೊ…..