ನೀ ಬಂದೆ ಬಾಗಿಲಲಿ
ಬಾಲ ಮಧುರಕಾನನ ಇವರ “ಮಧುರ ಗೀತಾಂಜಲಿ” ಸಂಗ್ರಹಂದ
ಎನ್ನ ಗುಡಿಸಲ ಮುಂದೆ ಬಂದು ನಿಂದೆಯ ನೀನು
ನಿನ್ನ ಸಿಂಹಾಸನದ ಮೇಲಿನಿಂದಿಳಿದು
ಮೂಲೆಯಲಿ ನಾನೊಂಟಿಯಾಗಿ ಹಾಡುತಲಿದ್ದೆ
ನನ್ನ ಗಾನದ ಲಹರಿ ನಿನ್ನ ಸೆರೆವಿಡಿದು |೧|
ನಿನ್ನ ಭವನದ ತುಂಬ ವಿದ್ವಾಂಸರಿರುತಿರಲು
ಅನವರತ ಹಾಡುಗಳ ಹಾಡುತಿರಲು
ಅನನುಭವಿಯಾನಂದ ಲಲಿತ ಗೀತವದಿಂದು
ನಿನ್ನ ಪ್ರೀತಿಯ ತಟ್ಟಿ ಸ್ಪಂದಿಸಿತ್ತು |೨|
ಶೋಕಪೂರಿತವಾದ ಬಾಲಗೀತವದೀಗ
ವಿಶ್ವಸಂಗೀತದಲಿ ಮಿಳಿತವಾಯಿತ್ತು
ಬಹುಮಾನಕೆಂದೊಂದು ಹೂವಿನೊಡಗೂಡಿ ನೀ
ಎನ್ನ ಮನೆ ಬಾಗಿಲಲಿ ಬಂದು ನಿಂದೆ |೩|
~~~***~~~
ಸ್ವರ ಸಂಯೋಜನೆ ಮತ್ತೆ ಹಾಡಿದ್ದು: ಶ್ರೀಶಣ್ಣ
Latest posts by ಶ್ರೀಶಣ್ಣ (see all)
- ಕೈಕ್ಕೆ ಬೆಂಡೆಕಾಯಿ - April 24, 2017
- ನೀ ಬಂದೆ ಬಾಗಿಲಲಿ - July 27, 2013
- “ಅಬ್ಬಿ” : ಹವ್ಯಕ ಭಾವಗೀತೆ (ಧ್ವನಿಸಹಿತ) - July 19, 2012
ಲಾಯಕಾಯಿದು——-
ಭಕ್ತಿಲಿ ಹಾಡಿದ ಪದಕ್ಕೆ ದೇವರು ಒಲಿದು ಬಂದ;ಆಗಾಣ ಧನ್ಯತೆಯ ವಿವರಿಸಿದ್ದೂ ಶ್ರೀಶಣ್ಣ ಹಾಡಿದ್ದೂ ಅದ್ಭುತ ಆಯಿದು.
ಲಾಯ್ಕ ಆಯ್ದು ಪದ್ಯ..ಹಾದಿದ್ದುದೆ ಲಾಯ್ಕ ಆಯ್ದು..
ಶ್ರೀಶಣ್ಣಾ , ನಿಂಗಳ ಸ್ವರಲ್ಲಿ ಎನ್ನ ಪದ್ಯ ಕೇಳದ್ದೆ ತುಂಬಾ ಸಮಯ ಆತು. ಲಾಯಕ ಆಯಿದು. ತುಂಬಾ ಕೊಶಿ ಆತು.ಧನ್ಯವಾದಂಗೊ.
ಆಹಾ..ಭಾವಪೂರ್ಣ ಪದ೦ಗೊಕ್ಕೆ ತು೦ಬುಕ೦ಠ ಸೇರಿತ್ತು.ಧನ್ಯವಾದ ಬಾಲಣ್ಣ,ಶ್ರೀಶಣ್ಣ ಇಬ್ರಿ೦ಗೂ.
ತುಂಬ ಲಾಯಕ ಆಯ್ದು ಶ್ರೀಶಣ್ಣ. ಸ್ಪಷ್ಟ ಉಚ್ಚಾರ ಆಕರ್ಷಣೀಯವಾಗಿದ್ದು. ಬಾಲಣ್ಣನ ಪದ್ಯವೂ ತುಂಬ ಒಪ್ಪ ಆಯ್ದು.