- ಸಣ್ಣ ಸಂಗತಿ - February 13, 2018
- ದೇಶಸೇವೆ - August 15, 2017
- ಶೇಡಿಗುಮ್ಮೆ ವಾಸುದೇವ ಭಟ್ಟ್ರಿಂಗೆ ಯಕ್ಷಗಾನ ಅಕಾಡೆಮಿಯ ಗೌರವ - August 15, 2017
ಬೆಂಗಳೂರಿಲಿ ಜಯನಗರದ ವಿಜಯಾ ಕಾಲೇಜಿಲಿ ಫೆಬ್ರವರಿ ೨ ಆದಿತ್ಯವಾರ ಒಂದು ಕಾರ್ಯಕ್ರಮ. ರವಿ ಪ್ರಕಾಶನದ ಹೊಸ ಪುಸ್ತಕಂಗಳ ಬಿಡುಗಡೆ.ಅದರಲ್ಲಿ ಅಕ್ಕ ಶ್ರೀಮತಿ ಸರಸ್ವತಿ ಶಂಕರ್ ಬರೆದ ಎರಡು ಕೃತಿಗಳೂ ಲೋಕಾರ್ಪಣೆ ಆತು.ಒಂದು ‘ಪರಿಧಿ’-ಇದು ಅವು ಬರೆದು ಪತ್ರಿಕೆಗಳಲ್ಲಿ ಪ್ರಕಟ ಆದ ವೈಚಾರಿಕ ಲೇಖನಂಗಳ ಸಂಕಲನ.ಮತ್ತೊಂದು ‘ಬೆಸುಗೆ’-ಇದು ಹದಿಹರೆಯದ ಮಕ್ಕೊಗೆ ಹೇಳಿ ಉದ್ದೇಶಿಸಿ ಬರೆದ ಕಾದಂಬರಿ,ಒಂದು ನೂತನ ಪ್ರಯೋಗ. ಖ್ಯಾತ ಜಾನಪದವಿದ್ವಾಂಸ ಡಾ॥ಮಳಲಿ ವಸಂತಕುಮಾರ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದವು. ಡಾ॥ ಆರ್.ವಿ.ಪ್ರಭಾಕರ್ ಮುಖ್ಯ ಅತಿಥಿಯಾಗಿತ್ತಿದ್ದವು. ವಿಜಯಾ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ॥ ಶೇಷಮೂರ್ತಿ ಕೃತಿ ಬಿಡುಗಡೆ ಮಾಡಿದವು.ಸುರುವಿಂಗೆ ಶ್ರೀಮತಿ ಮೇದಿನಿ ಅವರಿಂದ ಪ್ರಾರ್ಥನೆ.ಮತ್ತೆ ಪ್ರಕಾಶಕ ಶ್ರೀ ಎಸ್.ಆರ್.ಸತ್ಯನಾರಾಯಣ ಅವರಿಂದ ಸ್ವಾಗತ ಭಾಷಣ ನಡೆದತ್ತು.ಡಾ।।ಶಂಕರ್ ಭಟ್ ,ಸುಳ್ಯ ವಂದನಾರ್ಪಣೆ ಮಾಡಿದವು. ಶ್ರೀ ಸೂರ್ಯನಾರಾಯಣ ಪಂಜಾಜೆ ಕಾರ್ಯಕ್ರಮ ನಿರ್ವಹಣೆ ಮಾಡಿದವು.
ಪರಿಧಿ-ಬೇರೆ ಬೇರೆ ವಿಷಯಂಗಳಲ್ಲಿ ಬರೆದ ಬರೆಹಂಗಳ ಒಂದು ಗುಚ್ಛ.ವೈಚಾರಿಕ,ವ್ಯಕ್ತಿಚಿತ್ರಣ,ಶೈಕ್ಷಣಿಕ,ಸಾಮಾಜಿಕ,ಕೌಟುಂಬಿಕ -ಎಲ್ಲಾ ವಿಷಯವೂ ಇದ್ದು.
ಬೆಸುಗೆ-ಒಂದು ಶ್ರೀಮಂತ ಹುಡುಗ ಮತ್ತೆ ಕೆಲಸದ ಹೆಂಗುಸಿನ ಮಗ -ಇಬ್ಬರೊಳಗೆ ಮೂಡಿ ಬೆಳೆದ ಸ್ನೇಹದ ಬಗ್ಗೆ ಇಪ್ಪ ಕಾದಂಬರಿ. ಇದಕ್ಕೆ ಮೊದಲು ಇವು ಬರೆದ ಮೂರು ಕಾದಂಬರಿ,ಮೂರು ಕಥಾಸಂಕಲನ,ಒಂದು ಪ್ರವಾಸಕಥನ ಸಂಕಲನ ಮತ್ತೆ ಒಂದು ಮಕ್ಕಳ ಕಥಾಸಂಕಲನ ಪ್ರಕಟ ಆಯಿದು. ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿನಿಧಿ ಪ್ರಶಸ್ತಿಗೊಕ್ಕೆ ಇವರ ಎರಡು ಪುಸ್ತಕಂಗೊ ಆಯ್ಕೆ ಆಯಿದು. ಹವ್ಯಕ ಭಾಷೆಲಿ ಇವು ಬರೆದ್ದು ಕಮ್ಮಿ,ಒಂದು ಸರ್ತಿ ಕೊಡಗಿನ ಗೌರಮ್ಮ ಪ್ರಶಸ್ತಿ ಇವರ ಹವ್ಯಕ ಭಾಷೆಯ ಕತೆಗೆ ಸಿಕ್ಕಿದ್ದು. ಇವರ ಸಾಹಿತ್ಯ ಸೇವೆ ಇನ್ನೂ ಉತ್ತಮ ರೀತಿಲಿ ನಡೆಯಲಿ ಹೇಳಿ ಎಲ್ಲರ ಹಾರೈಕೆ.
all the very best to my dear Akka (Saraswathi Shankar) & my brother Gopalakrishna Bhat.
Gopala, bareda okkane thumba layka aayidu
May God Bless you!,
Indira Bhat.
ಅಭಿನಂದನೆಗೊ.
ಹರೇ ರಾಮ. ಶುಭಮ್