ಕಿದೂರು ಡಾಕ್ಟ್ರ ಆರಿಂಗೆ ಪರಿಚಯ ಇಲ್ಲದ್ದು, ನಿಂಗಳೇ ಹೇಳಿ.
ಒಪ್ಪಣ್ಣನ ಬೈಲಿನ ಆರಿಂಗೆ ಎಂತ ಸಂಕಟ ಬಂದರೂ ಮದಾಲು ನೆಂಪಪ್ಪದು ಈ ಡಾಕ್ಟ್ರ. ಮತ್ತೆ ವೆಂಕಟರಮಣನ.
ಕಾಸ್ರೋಡಿನ ಏವದೋ ದೊಡ್ಡ ಆಸ್ಪತ್ರೆಲಿ ಮದ್ದು ಕೊಡುದಡ. ಇವು ಕೊಟ್ಟ ಮದ್ದಿಂಗೆ ಗುಣ ಆಗದ್ದ ಜೆನವೇ ಇಲ್ಲೆಡ.
ಯೇವ ಮದ್ದಾದರೂ ಸಮ, ಇವು ಕೊಟ್ಟ ಮತ್ತೆ ರೋಗ ಇಲ್ಲೆ ಹೇಳಿಯೇ ಅರ್ಥ!
ಅದರಲ್ಲೂ ಬೋದ ತಪ್ಪುಸುದರ್ಲಿ ಎತ್ತಿದ ಕೈ ಅಡ.
ಬೋದ ತಪ್ಪುಸುದೇ ಹಾಂಗೆ, ಮೂರು ನಮುನೆ ಮದ್ದು ಇದ್ದಡ ಅವರತ್ರೆ.
ಬೆಳಿದು, ಕಂದು ಬಣ್ಣದ್ದು, ಕಪ್ಪು ಬಣ್ಣದ್ದು.
ಮಕ್ಕೊಗೆಲ್ಲ ಬೆಳಿ ಬಣ್ಣದ್ದು - ಪಾಪದ್ದು.
ಹದಾದವಕ್ಕೆ ಹದಾ ಪವರಿನ ಕಂದು ಬಣ್ಣದ್ದು,
ದೊಡ್ಡವಕ್ಕೆ ಕಪ್ಪು ಬಣ್ಣದ್ದು - ಷ್ಟ್ರೋಂಗು!
ಮೂರ್ನೇದುದೇ ಹಿಡಿಯದ್ರೆ, ಮತ್ತುದೇ ಬೋದ ತಪ್ಪದ್ರೆ - ಮತ್ತೆ ಅವು ಮಾತಾಡ್ಳೆ ಸುರು ಮಾಡುದಡ!
ಹಾಂಗೆ, ಇವರ ಕೈಲಿ ಬೋದ ತಪ್ಪದ್ದ ಜೆನವೇ ಇಲ್ಲೆ.
ಮನುಷ್ಯರ, ಮುಖ್ಯವಾಗಿ ಮಕ್ಕಳ ಆರೋಗ್ಯದ ಬಗೆಗೆ ವಿಶೇಷ ಕಾಳಜಿ.
ಇವು ಹೇಳ್ತ ಒಂದೊಂದು ಪೋಯಿಂಟುದೇ ಇಂಜೆಕ್ಷನು ಕುತ್ತಿದ ಹಾಂಗೆ ಆವುತ್ತು.
ವಿಷಯ ವಿವರುಸಿಗೋಂಡು ಹೋದರೆ ಷ್ಟೆತಸ್ಕೋಪಿಲಿ ಶಬ್ದ ಕೇಳಿದ ಹಾಂಗೆ ಆವುತ್ತು.
ವೈದ್ಯಕೀಯ ಕ್ಷೇತ್ರದ ಕೆಲವು ಸತ್ಯಂಗಳ ಹೇಳಿಯಪ್ಪಗ ದೋಡ್ಡ ಮಾತ್ರೆ ನುಂಗಿದಷ್ಟು ಕಷ್ಟ ಆವುತ್ತು,
ಕೆಲವು ಗಮ್ಮತ್ತುಗಳ ಹೇಳುವಗ ಸೆಮ್ಮದ ಕೆಂಪುಮದ್ದು ಕುಡುದ ಹಾಂಗಾವುತ್ತು.
ಒಟ್ಟಿಲಿ ಇವು ಡಾಗುಟ್ರು.
ಇವುದೇ ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತವು.
ನಾವೆಲ್ಲರುದೇ ಕೇಳುವೊ.
ರಜ ರಜ ಕುಷಾಲು, ರಜ ಚೀಪೆ ಮದ್ದು, ರಜ ರಜ ಮದ್ದು-ಮಾತ್ರೆ, ರಜ ರಜ ಇಂಜೆಕ್ಷನು - ಎಲ್ಲವುದೇ ಸೇರಿ ನಮ್ಮ ಕಿದೂರು ಡಾಕ್ಟ್ರ. (ವೇಲುವೈದ್ಯರ ಶಕ್ತಿಮದ್ದು ಸದ್ಯಕ್ಕೆ ಈಗ ಇವರತ್ರೆ ಮಾತ್ರ ಸ್ಟೋಕು ಇಪ್ಪದಡ.......ಲ೦ಬೋದರ ಗುಟ್ಟಿಲಿ ಹೋಗಿ ತಿ೦ದಿಕ್ಕಿ ಬತ್ತ..ನಿ೦ಗೊಗೂ ಬೇಕಾರೆ ಕೇಳಿ!!!)
ಮದ್ದು ತೆಕ್ಕೊಳಿ, ಒಪ್ಪ ಕೊಡಿ.
ಆಗದೋ?
ಡಾಗುಟ್ರೆ, ನಿಂಗಳ ‘ಕೆಲವು ಪಟಂಗ’ ಲಾಯ್ಕ ಬಯಿಂದು!!
[ಮೂರನೆಯ ಬಾಳೆ ಎಲೆಯ ಎದುರು ಕೂದವು ಆರು ಗೊ೦ತಿಕ್ಕ?]
ಎರಡೂ ಹೊಡೆಲಿ ಬಾಳೆ ಮಡಿಗಿದಲ್ಲಿ ನಿಂಗೊ ಹೀಂಗೆ ಕೇಳಿದರೆ ಎಂತ ಹೇಳುದು? ಆರ ಹೇಳುದು?
ಯೇವ ಹೊಡೆಂದ ಮೂರನೇ ಬಾಳೆ?
ಊಟ ಮಾಡ್ತಲ್ಲಿ ತೆಗದ ಪಟ ಕಂಡಪ್ಪಗ ನಮ್ಮ ಬೈಲಿನ ಬಟ್ಟಮಾವ° ಅಲ್ಲಿ ಹೋಗಿತ್ತಿದ್ದವೋ ಹೇಳಿ ಆತು ಒಂದರಿ!!!!! 😉
ಪಟಂಗ ಎಲ್ಲಾ ಬಾರೀ ಲಾಯಿಕ ಬಯಿಂದು ಡಾಕ್ಟ್ರೆ..
ಆ ಮರದ ಕೊಡಿಲಿ ಹತ್ತಿ ಕೂದ್ದಾರಪ್ಪಾ??? 😀
argentumaaniYo?? ಏ??? 😉
ಅರ್ಗೆ೦ಟುಮಾಣಿಯ ಆರೋ ಬೆತ್ತ ಹಿಡುದು ಓಡುಸಿಯೋ೦ಡು ಬಪ್ಪಗ ಅವ° ತಪ್ಪ್ಸುಲೆ ಮರ ಹತ್ತಿದ°. ಈಗ ಇಳಿವಲೆ ಅರಡಿಯದ್ದೆ ಅಲ್ಲಿಯೇ ಕೂಯಿದ..
ಆರು ಡಾಕ್ಟರು ಮಾವನಾ ಹೇಳಿದ್ದು ಆ ನಿಗೂಢ ವಿಷಯವ? ಆನು ಬೈಲಿನ್ಗೆ ಹಾರಿ ಆಯ್ದು!
ಹಾರಿದ್ದೋ, ಉದುರಿದ್ದೋ?(ಗಾಳಿ ಬೀಸಿಯಪ್ಪಗ)
ಒ೦ದರಿ೦ದ ಒ೦ದು ಲಾಯಿಕ ಆಯಿದು ಡಾಗುಟ್ರೆ.ತೇರೇಸು ಕಾವಲು ಮಾಡುವ ನಾಯಿ,ಹೊಯಿಗೆಲಿ ಹೆಜ್ಜೆ ಗುರ್ತ,ಚೆ೦ದದ (?) ಮರ,ಒ೦ಟಿ ಮರ ಅದ್ಭುತ.ನಿ೦ಗಳ ಕಾರಿನ ಮಾರ್ಗದ ಕರೇಲಿ ಬಿಟ್ಟುಗೊ೦ಡು ಹೋದಿರೋ ಹೇಳಿ ಸ೦ಶಯ ಆತು,ನೂಲಿನಷ್ಟು ಸರ್ತದ ಮಾರ್ಗ ನೋಡೊಗ !
{ ನೂಲಿನಷ್ಟು ಸರ್ತದ }
ಮುಳಿಯಬಾವಂಗೆ ರಜ ಲೊಟ್ಟೆ ಇದ್ದೋ ಹೇಳಿಗೊಂಡು! 😉
ಮೊನ್ನೆ ಮಾಲಚಿಕ್ಕಮ್ಮ ಹೊಲಿಗೆಮಿಶನಿಂಗೆ ಕುತ್ತಿದ ನೂಲು ಸರ್ತ ಇತ್ತಿಲ್ಲೆ, ಅದು ನೂಲಉಂಡೆ, ಸುರುಟಿಗೊಂಡು – ಉರೂಟಿತ್ತು.
ಸರ್ತ ಇಪ್ಪಲೆ ಅದೆಂತ ನಾಯಿಬೀಲವೋ? 😉
ನೂಲಿ೦ಗೂ ನಾಯಿಬೀಲಕ್ಕೂ ವೆತ್ಯಾಸ ಇದ್ದು ನಗೆಗಾರೋ..
ನೂಲು ಸರ್ತ ಎಳದು ಹಿಡುದರೆ ಸರ್ತವೇ ಇರ್ತು..ಸು೦ದಿರೆ ಉ೦ಡೆ…ಆದರೆ ನಾಯಿ ಬೀಲ ಯಾವಾಗ್ಲೂ….ನೀನು ಹೇಳಿದಾ೦ಗೆ
Layka baindu…
Last pata karanji kereli thegaddada?
ಅಲ್ಲ. ಅಕೇರಿಯಾಣದ್ದು ಮೇಲುಕೋಟೆಲಿಪ್ಪ ವೀಕ್ಷಾಣಾಗೋಪುರ.
ಎಲ್ಲೇ ತೆಗದಿರಳಿ, ಅದು ಪ್ರಶ್ಣೆ ಅಲ್ಲ.
ಆ ಜೆನ ಮತ್ತೆ ಇಳುದ್ದೋ – ಹಾರಿದ್ದೋ?
ಡಾಗುಟ್ರಿಪ್ಪಗ ಹಾರುಲೂ ಹೆದರಿಕೆ ಇಲ್ಲೆ ಇದಾ! 😉
ಡಾಕ್ಟ್ರು ತೆಗದ ಪಟಂಗ ಎಲ್ಲಾ ಲಾಯಕಿದ್ದು. ಹಲವು ಕೈಕಾಲುಗಳ ಮರ, ಬೋಳು ಚೆಂದದ ಮರ, ಪುಚ್ಚೆ ಬೆಚ್ಚಂಗೆ ಕೂದ್ದದು ಎಲ್ಲವೂ ಲಾಯಕಿದ್ದು. ಮೈಲೇಜು ಪಟಲ್ಲಿ ಇಪ್ಪ ಮೀಟರು ಹಾಳಾದ್ದದೊ, ಅಲ್ಲ ಆಯ್ಕು. ಬೈಕು ಓಡುಸುವಗ ಪಟ ತೆಗವಲೆ ಕಷ್ಟ ಅಲ್ಲದೊ ?
ಅಲ್ಲ ಮಾವ°, ಅದು ಬೈಕು ಅಲ್ಲ. ಹೊಸ ಕಾರು ಏಳು ಸಾವಿರ ಕಿ ಮಿ ಓಡಿಯಪ್ಪಗ ತೆಗದ್ದು. ಈಗ ಮೂವತ್ತೆರಡು ಸಾವಿರ ಆತು!
ಮೀಟ್ರಿನ ಕರೆಲಿ ’ಓಡ’ ಹೇಳಿ ಬರಕ್ಕೊಂಡು ಕಂಡಪ್ಪಗ ದೋಣಿದೋ ಗ್ರೇಶಿದೆ ಪಕ್ಕನೆ.
ಕಾರಿಂದೋ ಅಂಬಗ! ಕಾರು ರೂಪತ್ತೆದೋ?
ಅಲ್ಲ, ನಿಂಗಳದ್ದೆಯೋ? 🙂
ಪಟಂಗೊ ಎಲ್ಲ ಪಷ್ಟಿದ್ದು. ಆ ಹಂತಿಲಿ ಹರ್ಷಣ್ಣನ ಅಮ್ಮನ ಕಂಡತ್ತು..
ಅವೆಂತ ಉಂಬಗ ಪಾಟ ಮಾಡ್ಳೆ ಬಂದದೋ?
😉
ಕಾರು ನಮ್ಮದೇ, ರೂಪತ್ತೆಯ ಕಾರಿ೦ಗೆ ಓಡಿ ಓಡಿ ಬಚ್ಚಿ ಕರೇಲಿ ಕೂಯಿದಡ!!
ಮಾಸ್ತರು ,ಟೀಚರು ..!!
ಮಾಸ್ತರು ,ಟೀಚರು ..!!???? ಹೇದರೆ ಎ೦ತ? ಅರ್ಥ ಆಯಿದಿಲ್ಲೆ.
ಹಾಯ್…!!! ಪಟಂಗ ತುಂಬಾ ಒಪ್ಪೊಪ್ಪ ಇದ್ದು….
ದುರುಸು ಹೇದರೆ ಅದುವೋ? ಅಂಬಗ ಅಂಡೆದುರುಸು ಹೇದರೆ ಎಂತರ
ಹೆಬಗೋ!
ಅ೦ಡೆದುರುಸು ಹೇದರೆ ದುರುಸಿನ ಮದ್ದಿನ ದೊಡ್ಡ ಮಣ್ಣಿನ ಅ೦ಡೆಲಿ ತು೦ಬುಸಿ ಇಪ್ಪದು.ಕೆಲವು ಸಿನೆಮಲ್ಲಿ ಕಾ೦ಬಲೆ ಸಿಕ್ಕುತ್ತು(ದೀಪಾವಳಿ ಪದ್ಯ೦ಗಳಲ್ಲಿ).ನಮ್ಮ ಅ೦ಗಡಿಗಳಲ್ಲಿ ಸಣ್ಣ, ದೊಡ್ಡ ಮತ್ತೆ ಹದಾ ಸೈಜಿ೦ದು ಇರ್ತಷ್ಟೆ.
ನಮ್ಮ ಬೈಲಿಲಿ ಮಾತ್ರ ಒ೦ದೋ೦ದರಿ ಬೇರೆ ಬೇರೆ ನಮೂನೆಯಅ ದುರ್ಸುಗ, ಗರ್ನಾಲುಗ ಕಾ೦ಬಲೆ ಸಿಕ್ಕುತ್ತವು.
ದುರುಸು ಹೊತ್ತುಸಿದ ಕಂಪೌಂಡಿನ ಒಳಾಂಗೆ ನಮ್ಮ ಒಪ್ಪಣ್ಣ ಅಂಬಗಂಬಗ ಬಂದಂಡು ಇರ್ತನಡ; ಅಪ್ಪೊ ಡಾಕ್ಟ್ರೆ?
{ದುರುಸು ಹೊತ್ತುಸಿದ ಕಂಪೌಂಡಿನ ಒಳಾಂಗೆ ನಮ್ಮ ಒಪ್ಪಣ್ಣ ಅಂಬಗಂಬಗ ಬಂದಂಡು ಇರ್ತನಡ;}
ಇತ್ತಿದ್ದ° ಸುಭಗಣ್ಣ..
ಮಾಸ್ಟ್ರುಮಾವನ ಸಣ್ಣಮಗನ ಮದುವೆ ನಿಘ೦ಟು ಅಪ್ಪಲ್ಲಿವರೆಗೆ ಅ೦ಬಗ೦ಬಗ ಜೋರುಜೋರು ಇತ್ತಿದ್ದ…ಈಗ ರೆಜಾ ಅಪರೂಪ ಆಯಿದು!
ನಿ೦ಗಳ ಮಾವಗಳ ಮನೆಲಿ ಇನ್ನು ಒ೦ದೋ೦ದರಿ ಕಾ೦ಬಲೆ ಸಿಕ್ಕುಲೂ ಸಾಕು.
ಹ್ಹ ಹ್ಹ ಹ್ಹಾ…!
ಚೆಂದ ಬೈಂದು
ತುಂಬಾ ಲಾಯಿಕಲ್ಲಿ ಪಟಂಗ ಬಯಿಂದು…..
ಎಲ್ಲಾ ಫೋಟೊಂಗಳೂ ಲಾಯಕ್ಕ ಇದ್ದು
ಒಹ್! ಮಾಬಲ ಡಾಕ್ಟ್ರು! ಕಾಣದ್ದೆ ಸುಮಾರು ಸಮಯ ಆತನ್ನೆ?
ಫಟ ಎಲ್ಲಾ ಲಾಯ್ಕ ಬಯಿಂದು. ಶೋಕಿತ್ತಿದ್ದು ನೋಡ್ಲೆ.
ಡಾಕಟ್ರು ಮಾವನತ್ರೆ ಖಂಡಿತಾ ಇನ್ನೂ ಇಕ್ಕು. ಮೆಲ್ಲಂಗೆ ಬಕ್ಕು ಇಲ್ಲಿ ಒಂದೊಂದೇ ಹೇಳಿ ಗ್ರೆಶುವೋ?
ಹೀಂಗೆ 4 ಜೆನ ಒಟ್ಟು ಸೇರಿಯಪ್ಪಗಿದ ಬೈಲಿಂಗೆ ಒಂದು ಕಳೆ ಬಪ್ಪಲೆ ಸುರುವಾತಿದ. ಬನ್ನಿ ಬನ್ನಿ . ಎಲ್ಲೋರು ಮುಂದೆ ಬನ್ನಿ.