Oppanna.com

ಅಬ್ಬೆಯ GST

ಬರದೋರು :   ಶರ್ಮಪ್ಪಚ್ಚಿ    on   06/07/2017    30 ಒಪ್ಪಂಗೊ

ಅಬ್ಬೆಯ GSTಪ್ರಸನ್ನಾ ವಿ.ಚೆಕ್ಕೆಮನೆ

ಮನ್ನೆ ತಮ್ಮನ ಬರ್ತುಡೇ….ಅಬ್ಬೆ ಎಂತಾರು ಗಮ್ಮತ್ತು ಮಾಡುಗು ಹೇದು ಎನಗೆ ಗೊಂತಿದ್ದು. ಹಾಂಗೇದು ತಿಂಬಲೆ ಬೇಕಾಗಿ ಅಪ್ಪನಮನಗೆ ಹೋದ್ದೂಳಿ ಆರಿಂಗೂ ಗೊಂತ್ತಪ್ಪಲಾಗ ಇದಾ..

ತಮ್ಮಂಗೊಂದು” ಹೇಪ್ಪಿ ಬರ್ತುಡೇ”ಹೇಳದ್ರೆ ಹೇಂಗಕ್ಕು?ಹಾಂಗೆ ಮರುದಿನ  ಉದಿಯಪ್ಪಗ ಹೋಪದು ಹೇದು ಅಟ್ಟಣೆ ಕಟ್ಟಿ ಒರಗಿದ್ದು.

ಉದಿಯಪ್ಪಗ ಏಳುಗಳೇ ಎಂಥಾ ಮಳೆ ದೇವರೇ….!!!!
“ಈ ಮಳಗೆ ನೀನು ಹೋಗದ್ರಕ್ಕು ” ಹೇದು ಪತಿದೇವರು ಉವಾಚ..ದೇವರ ಮಾತು ಮೀರ್ಲಾಗ ಇದಾ..ಸಣ್ಣ ಸಣ್ಣ ವಿಶಯಲ್ಲಿ ಅವು ಹೇಳಿದಾಂಗೆ ಕೇಳಿರೆ ಮುಂದಂಗೆ ನಮಗೆಂತಾರು ದೊಡ್ಡ ಕೆಲಸ ಇದ್ದರೆ “ಅಂದೆಲ್ಲ ನಿಂಗೊ ಹೇದಾಂಗೆ ಕೇಳಿದ್ದೆ, ಇದೊಂದಕ್ಕಾದರೂ ಎನ್ನ ಮಾತು ಕೇಳಿ” ಹೇದರೆ ಬೇಗ ಒಪ್ಪಿಗೆ ಕೊಡುಗಲ್ಲದಾ..

ಆತಂಬಗ..ಹೋಯೆಕು ಹೇದು ಗ್ರೇಶಿದ ಆಶೆ ಪುಸ್ಕ ಆತು.ಇನ್ನೆಂತ ಮಾಡುದು?
ಅಂಬಗ ಒಂದರಿ ಪೋನಿಲ್ಲಾದರೂ ಮಾತಾಡೀತೆ ಹೇದು ಹೆರಟೆ.

ಅಬ್ಬೆ ಹತ್ರೆ ಮಾತಾಡುದು ಹೇದರೆ ಅಷ್ಟು ಬೇಗ ಮಾತು ಮುಗುಶುಲೆಡಿತ್ತೋ..ಮಾತಾಡುಗ ರಜಾ ಮಾತಾಡಿ ಅಂಬ್ರೆಪ್ಪಿಲ್ಲಿ ಮಡುಗಿರೆ ಏವ ಶುದ್ದಿಯೂ ಗೊಂತಾವ್ತಿಲ್ಲೆ.

ಆಚಮನೆ ಅತ್ತೆಯ ಸೊಸೆ ಅಪ್ಪನಮನಗೆ ಹೋಯಿದೋ ಹೇದು ಗೊಂತಾಯೆಕು. ಈಚಮನೆ ಅಕ್ಕ ಎಷ್ಟು ಉಪ್ಪುಸೊಳೆ ಹಾಕಿದ್ದು, ಕಳುದ ತಿಂಗಳು ಅಪ್ಪ ತಂದ ರೇಶನ್ ಅಕ್ಕಿ ತೆಳ್ಳವು ಮಾಡಿರೆ  ಅಂಟುತ್ತಿಲ್ಲೆ ಹೇಳಿದ್ದು.ಅದರ್ಲಿ ಗುಗ್ಗುರು ಇರ್ತಾ ಕೇಳ್ಲೆ ಮರದ್ದು.

ಇಷ್ಟು ಮಾತ್ರ ಅಲ್ಲ‌‌….ಇನ್ನೂ ಎಷ್ಟಿದ್ದು ಗೊಂತಿದ್ದಾ?ಅದರ ಬರಕ್ಕೊಂಡು ಕೂದರೆ ಅದು ಮಾತ್ರ ಬರವಲಿಕ್ಕಟ್ಟೇ..

“ದೊಡ್ಡ ಗೌಜಿ ಕಟ್ಟಿ ಬರವಲೆ ಹೆರಟಿದು.ಪೋಂಡು ಪೋ…..ಇದರ್ಲಿ ಏವ ಪೊದುಂಕುಳೂ ಇಲ್ಲೆ ಹೇದು ನಾಕು ಜೆನ ಓದುವವು ನೆಗೆ ಮಾಡ್ಲಾಗ ಇದಾ..

ಹಾಂಗೂ ಹೀಂಗೂ ಕಾಪಿ ತಿಂಡಿ ಸಮರಾಧನೆ ಮಾಡಿ ಮುಗುಶಿಕ್ಕಿ ,ಹೆಜ್ಜೆ ಅಳಗೆ ಒಲೆಲಿ ಮಡುಗಿ ಅಕ್ಕಿ ಹಾಕಿಕ್ಕಿ ಪೋನು ಕೈಲಿ ಹಿಡುದೆ. ಅಬ್ಬೆ ಹತ್ರೆ ಮಾತಾಡಿಯಪ್ಪಗ ಹೆಜ್ಜೆ ಬೇಯಿಗು….

ಈಗ ಮೊಬೈಲು ಬಂದ ಮತ್ತೆ ಪೋನು ಮಾಡ್ಲೆ ನಂಬ್ರ ಎಲ್ಲ ಒತ್ತೆಕೂಳಿಯೇ ಇಲ್ಲೆ ಇದಾ..ಹಾಂಗೆಯೋ ಏನೋ ಅಪ್ಪನಮನೆ ಪೋನು ನಂಬ್ರವೇ ಮರದ್ದು. ಅದರ್ಲಿ ಅಬ್ಬೆ ಹೇದು ಕೊಟ್ರೆ ಅಲ್ಲಿಗೇ ಪೋನು ಹೋಕಟ್ಟೇ..

ಪೋನು ಎಷ್ಟು ರಿಂಗಾದರೂ ಅಬ್ಬೆ ತೆಗೆತ್ತೆಯಿಲ್ಲೆ. ಮತ್ತೆ ನೆಂಪಾತು.. ಅಬ್ಬೆ ಎಂತ ಗಮ್ಮತ್ತು ಮಾಡ್ತರೂ ಉದಿಯಪ್ಪಗ ಬೇಗ ಮಾಡುದು ಹಾಂಗೇ ಆದಿಕ್ಕು ಗ್ರೇಶಿ ಪೋನು ಹಿಡ್ಕೊಂಡು ಒಳ ಬಂದೆ.

ಅಟ್ಟಪ್ಪಗ ಅಬ್ಬೆ ಇತ್ಲಾಗಿಮಾಡಿತ್ತು..ಕೊಶಿಯಾತು.. ಪಾಚ ಉಣ್ಣದ್ರೂ ಉಂಡಟ್ಟೇ ಸಂತೋಷ..ಎನ್ನ ಮೊಬೈಲಿಂದ ಪೈಸೆ ಮುಗಿತ್ತಿಲ್ಲೇ ಹೇದು..

ಭಾರೀ ಕೊಶಿಲಿ ಮಾತಾಡ್ಲೆ ಸುರು ಮಾಡಿದೆ..
” ಇಂದೆಂತೆಲ್ಲ ಗಮ್ಮತ್ತು ಮಾಡಿದ್ದೆ”ಕೇಳಿದೆ. ಅಬ್ಬೆ ನೆಗೆ ಮಾಡಿಂಡು GST ಹೇಳುದು ಕೇಟಪ್ಪಗ ಎನಗೆ ನಿಜವಾಗಿಯೂ ಪಿಸ್ರು ಬಂತು.”ಈ GST ಎಂತರಾ ಹೇದು ಗೊಂತಿದ್ದಾ.. ಬರೇ ಪೇಪರೋದುದು ಹೇದು ಸಿನೆಮಾ ಶುದ್ದಿಯೋ,ಸತ್ತ ಶುದ್ದಿಯೋ ಓದುದಲ್ಲ..ಇದುದೆ ಎಂತರಾ ಹೇದು ತಿಳ್ಕೊಳೆಕು ಹೇದು ಕೆಲವು ದಿನಂದಲೇ ಇವು ಎನ್ನ ತಲೆ ತಿಂಬಲೆ ಸುರು ಮಾಡಿದ್ದವು.

ಸಾಲದ್ದಕ್ಕೆ ಶ್ರೀಮತಿಯಕ್ಕ, ಪುರುಷೋತ್ತಮಣ್ಣ, ಅಡಿಗೆ ಸತ್ಯಣ್ಣ, ಭಟ್ಟ ಮಾವ ….ಈಗ ಇದಾ ಪುಟ್ಟ ಕೂಡ GST ಹೇದರೆ ಎಂತರಾ ಹೇದು ಹೇಳುಗ ಆನು ಮಾತ್ರ ಬೋಸು ಬೆಪ್ಪಿ ಹಾಂಗೆ ಇದರ್ಲಿ ಸರಿಯಾದ GST ಯೇವದೂ ಹೇದು ತಲೆ ಬೆಶಿ ಮಾಡಿಂಡಿಪ್ಪಗ ಈ ಅಬ್ಬೆದೂದೆ ಅದೇ ರಾಗ…..

ಇಟ್ಟೆಲ್ಲ ಹೇಳುಗ ಎನ್ನ ಅಬ್ಬೆಯ ಗುರ್ತ ಮಾಡೆಡದೋ ನಿಂಗೊಗೆ.. ಎನ್ನ ಅಬ್ಬೆ ಕಲಿವಲೆ ಭಾರೀ ಉಶಾರಿ ಇದ್ದತ್ತು ಹೇದು ಹೇಳೆಕಾದ ಅಗತ್ಯವೇಯಿಲ್ಲೆ.ಎನಗೆ ಕಂಪ್ಯೂಟರು ಒತ್ತಲೆ,ಈ ಪೇಸು ಬುಕ್ಕು ಗುರುಟ್ಲೆ ಎಲ್ಲ ಈಗಲೂ ಗೊಂತಿಲ್ಲೆ. ಆದರೆ ಎನ್ನ ಅಬ್ಬೆ ಹಾಂಗಲ್ಲ.. ಅಬ್ಬಗೆ ಎಲ್ಲಾ ಗೊಂತಿದ್ದು.ಅಬ್ಬೆ ಅದರ ಗುರುಟುಗ ಆನು ಮೇಲೆ ಕೆಳ ನೋಡಿಂಡು ಬಟ್ಲು ಬಾಯಿ ಮಂಗನ ಹಾಂಗೆ ಬಾಯಿ ಬಿಡುದಟ್ಟೇ..

ಹೀಂಗಿದ್ದ ಅಬ್ಬೆ ಬಾಯಿಂದಲೂ GST !!!!!
ಹಾಂಗೇದರೆ ಎಂತರ ಕೇಳಿರೆ ಅಬ್ಬೆ ಪೋನಿಲ್ಲೇ ಅದರ ಪಾಠ ಮಾಡುಗು ಹೇದು ಗೊಂತಿದ್ದೆನಗೆ.ಅಬ್ಬೆ ಯೇವಗಳೂ ಪೇಪರು ನೋಡುವ ಜೆನ.ಇಂಗ್ಲೀಷ್ ಪೇಪರೂ ಓದುಗು,ಹಿಂದಿಯೂ ಓದುಗು..

ಅದರ ವಿವರ ಕೇಳಿರೆ ಎನ್ನ ಪೊಟ್ಟು ತಲಗೆ ರೆಜವೂ ಅರ್ಥಾಗದ್ದಿಪ್ಪಗ ಅಂತೇ ಎಂತರ ಮಾತಾಡುದು ಹೇಳಿ ಉದಾಸೀನ ಆತು.

ಅಟ್ಟಪ್ಪಗ ಅಬ್ಬೆ ನೆಗೆ ಮಾಡಿಂಡು ಹಾಂಗೇದರೆ ಎಂತರಾ ಹೇದು ಗೊಂತಿದ್ದಾ ಕೇಳಿತ್ತು.ಎನಗೆ ನಿಜವಾಗಿಯೂ ಅಡಕ್ಕೆ ಕತ್ತರಿ ಎಡೆಲಿ ಸಿಕ್ಕಿ ಹಾಕ್ಯೊಂಡ ಹಾಂಗಾತು.ಗೊಂತಿಲ್ಲೆ ಹೇದರೆ ಅಬ್ಬೆ ಪಾಠ ಮಾಡುಗು. ಗೊಂತಿದ್ದು ಹೇದರೆ ಪ್ರಶ್ನೆ ಕೇಳುಗು..

“ಇದೆಂತರ ಅಬ್ಬೆ.. ಈ GST GST ಹೇದು ನೋಡಿ ಕೇಳಿ ಬೊಡುದತ್ತು.ಇನ್ನೂದೆ ಅದೇ ವಿಶಯವ ನಿನ್ನತ್ರೆ ಮಾತಾಡೆಕಾ?ಎಲ್ಲಾ ಗೊಂತಿಪ್ಪವರ ಹಾಂಗೆ ದೆನಿ ರೆಜಾ ಬದಲ್ಸಿ ಮಾತಾಡಿದೆ..

ಎಟ್ಟಾದರೂ ಎನ್ನ ಅಬ್ಬೆ ಅಲ್ಲದಾ?ಎನ್ನ ಹಾಂಗೆ ಬರೇ ಪಾಪ ಇದಾ….” ಆತಪ್ಪಾ..ಆನಂತೇ ಕೇಟದಟ್ಟೇ..ಮನೆಯೊಳ ಇಪ್ಪ ಹೆಮ್ಮಕ್ಕ ಆದರೂ ಪ್ರಪಂಚಲ್ಲಿ ಏನೆಲ್ಲಾ ನೆಡೆತ್ತು ಹೇದು ತಿಳ್ಕೊಳೆಕು. ಹಾಂಗೆ ಕೇಟದಟ್ಟೆ ಒಪ್ಪಕ್ಕಾ..ಹೇದಪ್ಪಗ ಎನಗೂ ಸಮದಾನ ಆತು.ಇನ್ನೆಂತ ಪ್ರಶ್ನೆ ಕೇಳ.

ಅಟ್ಟು ಮಾತಾಡಿಯಪ್ಪಗ ಎನಗೆ ಇನ್ನೆಂತ ಮಾತಾಡುದು ಹೇದು ಅಂದಾಜಾಯಿದೇಯಿಲ್ಲೇತ.
“ವಿಶೇಶ ಎಂತಾರು ಇದ್ದಾ?ತಮ್ಮಂಗೆ ಎನ್ನ ಲೆಕ್ಕದ ಶುಭಾಶಯ ಹೇಳಿಕ್ಕು.ಇವು ದೆನಿಗೇಳ್ತವು. ಪೋನು ಮಡುಗೆಕಾ” ಕೇಳಿದೆ.

ಪೋನಿಲ್ಲಿ ಹೆಚ್ಚು ಮಾತಾಡ್ಲೆ ಮನಸಿಲ್ಲದ್ರೆ ಹೆಮ್ಮಕ್ಕೊ ಮಾಡುವ ಸುಲಭ ಉಪಾಯ ಇದು.”ಇವು ದೆನಿಗೇಳ್ತವು”ಅಲ್ಲಿಗೇ ಆಚ ಹೊಡೇಲಿಪ್ಪವು ಪೋನು ಮಡುಗುತ್ತವು.ಈ ಇವು ಹೇದರೆ ಹೆಮ್ಮಕ್ಕೊ ಅಟ್ಟು ಗೌರವ ಕೊಡ್ತವು ಹೇದು ಗ್ರೇಶಿ ಆದಿಪ್ಪಲೂ ಸಾಕು. ಆನುದೆ ಈಗ ಅದೇ ಪ್ರಯೋಗ ಮಾಡಿದೆ..

ಅಬ್ಬೆ ಜೋರು ನೆಗೆ ಮಾಡಿತ್ತು. “ಅಂವ ಇಲ್ಲಿ ತಮ್ಮನತ್ರೆ ಪೋನಿಲ್ಲಿ ಮಾತಾಡುದು ಕೇಳ್ತು”
ಆತನ್ನೇ….
ಇನ್ನೆಂತ ದಾರಿಯೂ ಇಲ್ಲೆ.
ಮತ್ತೆ ಅಬ್ಬೆಯೇ ಹೇಳಿತ್ತು..ಆನು ಮಾಡಿದ GST ತಿಂಬಲೆ ಬತ್ತಿಲ್ಲೆಯಾ ಹಾಂಗಾರೆ..
ಈ ಮಳಗೆ ಹೇಂಗೆ ಬಪ್ಪದು?ಅದೆಂತರ ನಿನ್ನ GST ..ಗುಗ್ಗುರು ಆದ ಸಜ್ಜಿಗೆಯಾ?ಗೋಳಿಬಜೆಯಾ?..ಎನಗೆ ಸ್ವೀಟ್ ಇಷ್ಟ ಅಲ್ಲದೋ ಅಬ್ಬೇ..ಈ ಗುಗ್ಗುರು ಆದ ಸಜ್ಜಿಗೆ ಅವನ ಬರ್ತುಡೇ ದಿನವೇ ಮಾಡಿದ್ದಾ ನೀನು?ಅವಂಗೆ ಪ್ರೀತಿ ಇಪ್ಪ ಸೇಮಗೆ ಮಾಡ್ಲಾವ್ತಿತು”ಹೇದೆ..

“ಅದನ್ನೇ ಮಾಡಿದ್ದು ಮಾರಾಯ್ತೀ..ಗೆಣಂಗು ಸೀವುದೆ,ಸೇಮಗೆಯೂ,ತೆಂಗಿನಕಾಯಿ ಬರ್ಫಿಯೂ ಮಾಡಿದ್ದೆ….ನಿನಗೆ ಬಪ್ಪಲೆಡಿಯದ್ರೆ ತಮ್ಮನತ್ರೆ ಕೊಟ್ಟು ಕಳುಗುತ್ತೇ…..” ಅಬ್ಬೆಯ ಈ ಮಾತು ಕೇಳಿಯಪ್ಪಗ ಎನಗೆ ಎಲ್ಲಾ GST ಯೂ ಮರದು ಹೋಗಿ ಗೆಣಂಗು ಸೀವು,ಸೇಮಗೆ,ತೆಂಗಿನಕಾಯಿ ಬರ್ಪಿ ಮಾತ್ರ ತಲೆಲಿ ಒಳ್ದದು.

ಪ್ರಸನ್ನಾ ವಿ ಚೆಕ್ಕೆಮನೆ

 

 

 

 

 

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

30 thoughts on “ಅಬ್ಬೆಯ GST

  1. gst ಗೆ ಒಂದು ಹೆಡಗೆ ಒಪ್ಪಂಗ ಬೈಂದು.

  2. ಈ GST ಹುಳು ತಲಗೆ ಹೊಕ್ಕದರಲ್ಲಿ ಮೂರು ದಿನ ಕಳ್ದದೇ ಗೊಂತಾಯಿದಿಲ್ಲೆ.ಮೂರು ಬಗೆಯೂ ಹೊಸ ರುಚಿಯಾಗದ್ದೆ ಸವಿ ರುಚಿ ಆಗಿತ್ತಿದ್ದು.

    1. ಧನ್ಯವಾದ ಅಣ್ಣಾ….ಲೇಖನ ಮೆಚ್ಚಿದ್ದು ಕೊಶಿಯಾತು

  3. ಗುಣಭರಿತವೂ ಸಾರವತ್ತೂ ತಾತ್ಪರ್ಯಸಹಿತವೂ [ಜಿ ಎಸ್ ಟಿ ] ಆದ ಲೇಖನ

    1. ಲೇಖನ ಮೆಚ್ಚಿದ್ದಕ್ಕೆ ಧನ್ಯವಾದ ಅಣ್ಣಾ..

  4. ಬೇರೆ ಬೇರೆ ತೆರಿಗೆಗಳ ಒಟ್ಟು ಮಾಡಿ ಒಂದೇ ತೆರಿಗೆ ಮಾಡಿದ್ದವು‌ . ಬೇರೆ ಬೇರೆ ಸಾಮಾನಿಂಗೆ ಬೇರೆ ಬೇರೆ ತೆರಿಗೆ. ಎಲ್ಲಾ ರಾಜ್ಯ ಗಳಲ್ಲಿ ಇದು ಒಂದೇ. ಇದು ಗೂಡ್ಸ್ ಏಂಡ್ ಸರ್ವಿಸ್ ಟೇಕ್ಸ್‌ ‌.ಇದು GST ತಿಳುಶುಲೆ ಸಣ್ಣ ಪ್ರಯತ್ನ ಅನ್ನಪೂರ್ಣ ಅಕ್ಕ.

  5. ಎನಗುದೆ ಈ GST ಹೇದರೆ ಎಂತರ ಹೇಳಿ ಇನ್ನೂ ಪೂರ ತಲೆಗೆ ಹೊಕ್ಕೆಕ್ಕಟ್ಟೆ.. ಎಂತದೇ ಇರಲಿ..ಲೇಖನ ಸೂಪರ್ ಆಯಿದು…

    1. ಧನ್ಯವಾದ ಅತ್ತೇ..

  6. GST ಜಾರಿಗೆ ಬಂದ ಲೆಕ್ಕಲ್ಲಿ ಈ ಕಥೆಯಾ… ಭಾರಿ ಲಾಯ್ಕಾಯಿದು ಅಬ್ಬೆಯ GST ಕಥೆ.. ಅಬ್ಬೆ ಮಾಡಿದ GSTಯುದೇ ಲಾಯ್ಕ ಆದಿಕ್ಕು…

    1. ಅಬ್ಬೆ ಮಾಡಿದ GST ತಿಂದಪ್ಪಗ ಆದಷ್ಟೇ ಕೊಶಿ ನಿನ್ನ ಒಪ್ಪ ನೋಡಿಯಪ್ಪಗಳೂ ಆತು ಅಶ್ವಿನೀ.. ಧನ್ಯವಾದ

    2. ಓ ಅಶ್ವಿನಿದೇ ಬಂತು. ಅದಕ್ಕೆ ಸ್ವಾಗತ.

    1. ಧನ್ಯವಾದ ದೀಪಾ..ಒಪ್ಪ ಕೊಟ್ಟದಕ್ಕೊಂದೊಪ್ಪ..

  7. ಈಶ್ವರ ಣ್ಣ ತೀರಿಹೋಯಿದವು ಅಕ್ಕ. ಆವರ ಯಜಮಾಂತಿ ಪ್ರೊಫೆಸರ್ ಶಂಕರ ರ ಅಕ್ಕ ಅಕ್ಕ. ಈಶ್ವರ ಣ್ ಒಳ್ಳೆ ಅರ್ಥ ಧಾರಿ. ಎನಿ ಕೊಶ್ಚನ್ ಅಕ್ಕ?

    1. ಶಿವರಾಮಣ್ಣ, ನಿಂಗಳ ಹೆಸರಿನ ಎಡೆಲಿ ಬಪ್ಪ ಪ್ರಶ್ನಾರ್ಥಕ ಚಿಹ್ನೆ ಎಂತಕದು ? ಬರೇ ಕುತೂಹಲಕ್ಕೆ ಕೇಳಿದೆ ಅಷ್ಟೆ.

      1. ಗೋಪಾಲಣ್ಣ ಅದು ಆನು ಟೈಪು ಮಾಡುಗ ಬೈ ಮಿಸ್ಟೇಕ್ ಬಂದದು. ಉದ್ದುಲೇ ಟ್ರೈ ಮಾಡಿದೆ ಆದರೆ ಎಡಿಗಾಯಿದಿಲ್ಲೆ.

  8. ಲೇಖನ ಒಳ್ಳೆದು ಇದ್ದು. ಎಂಗಳ ಮನೆ ಹತ್ತರೆ ಒಬ್ಬ ಚೆಕ್ಕೆ ಮ ನೆ ಈಶ್ವರ ಅಣ್ಣ ಹೇದು ಇತ್ತಿದ್ದ. ನಿಂಗಳ ಪೈಕಿ ಆದಿಕ್ಕು ಹೇದು ತೋರುತ್ತು.

    1. ಧನ್ಯವಾದ.. ಅವು ಎಂಗಳ ಮನೆಯವ್ವೆ ಆಡ.ಇಲ್ಲಿಂದ(ಧರ್ಮತ್ತಡ್ಕ ಚೆಕ್ಕೆಮನೆಂದ)ಮದಲಿಂಗೆ ಹೋದವ್ವಾಡ.ಈಗ ಅವು ಅಲ್ಲಿ ಇಲ್ಲೆ ಅಲ್ಲದಾ?

  9. ಅಷ್ಟಪ್ಪಗ ಸಿಕ್ಕುವ ಸುಲಭ ಉಪಾಯ ಮತ್ತೊಂದಿದ್ದು.ಮೊಬೈಲ್ ಪೋನಿಂಗೆ ರೇಂಜು ಸಿಕ್ಕುದ್ದೆ ಕಟ್ಟ್ ಅಪ್ಪದು.ಅದೇ ಆವ್ತಿತಟ್ಟೇ..

    1. ಅಬ್ಬೆಯ ಜಿ ಎಸ್ ಟಿ ಸೂಪರ್ ಆಯಿದು. ಶುದ್ದಿಯ ಪೀಠಿಕೆಯುದೆ ಒಳ್ಳೆ ರೈಸಿತ್ತು. ಪ್ರಸನ್ನಕ್ಕ ಕೊಟ್ಟ ಕಿವಿಮಾತುಗೊ ಲಾಯಕಿತ್ತು.
      ನಮ್ಮ ಬೈಲಿಂಗೆ ಹೇಳಿ ಮಾಡುಸಿದ ಹಾಂಗಿತ್ತು ಈ ಶುದ್ದಿ. ಹೀಂಗಿಪ್ಪ ಶುದ್ದಿಗೊ ಬೈಲಿಲ್ಲಿ ಬತ್ತಾ ಇರಳಿ. ಎಲ್ಲೋರನ್ನು ರಂಜಿಸಲಿ.

      1. ಧನ್ಯವಾದ ಗೋಪಾಲಣ್ಣಾ..ನಿಂಗಳೆಲ್ಲರ ಪ್ರೋತ್ಸಾಹ ನೋಡುಗ ಮನಸು ತುಂಬಿ ಬತ್ತು. ಇದುವೇ ಎನ್ನಲ್ಲಿ ಬರವ ಉತ್ಸಾಹ ಬಪ್ಪ ಹಾಂಗೆ ಮಾಡುದು.

  10. ಶ್ಶೆಲ ! ಅಡಿಗೆ ಸತ್ಯಣ್ಣ, ಬಟ್ಟಮಾವಂದಲೂ ಬಲ ಇದ್ದನ್ನೇ ಈ ಜೀ ಎಸ್ಸು ಟಿ. !!!

    1. ಅದೇ ಮಗಳಾಗಿದ್ದರೆ ಗಿಳಿವಿಂಡು,ಸುಧಾ,ತರಂಗ ಹೇಳ್ತಿತಷ್ಟೆ ಹೇದು ಮತ್ತೆ ಅಬ್ಬೆ ಹತ್ರೆ ಹೇಳಿ ನೆಗೆ ಮಾಡುದು ಕಂಡತ್ತಪ್ಪಾ..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×