Oppanna.com

ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,             (ಭಾಗ-17)

ಬರದೋರು :   ಶೀಲಾಲಕ್ಷ್ಮೀ ಕಾಸರಗೋಡು    on   25/10/2016    7 ಒಪ್ಪಂಗೊ

 

ಮಗಳ ಮನಸ್ಸಿಂಗೂ ಬೇನೆ ಅಪ್ಪಲಾಗ ತನ್ನ ಉದ್ದೇಶವೂ ಸಫಲ ಆಯೇಕು ಹೇಳಿ ಜಾನ್ಸಿಯೊಂಡು ಹರಿಣಿ ತುಂಬಾ ಜಾಗ್ರತೆಂದ ಶಬ್ದಂಗಳ ಆಯ್ಕೆ ಮಾಡಿ ಮಾತಾಡಿತ್ತು,

“ಒಪ್ಪಕ್ಕೋ, ನಿನ್ನನ್ನೇ ನೀನು ಎಂತಕೆ ಹಳ್ಕೋಳ್ತೆ…? ಖಂಡಿತಕ್ಕೂ ನೀನು ತಪ್ಪಿತಸ್ತೆ ಅಲ್ಲ. ಎಂಗಳೇ ತಪ್ಪತಸ್ತರು. ಅದು ಇಂದೋ ನಿನ್ನೆಯೋ ಆಗಿ ಹೋದ ತಪ್ಪಲ್ಲ, ನಿನ್ನ ಹೆತ್ತ ಲಾಗಾಯ್ತು ಬೆಳಶಿ ದೊಡ್ಡ ಮಾಡುವವರೆಂಗೂ ಎಂಗೊ ಬರೀ ತಪ್ಪನ್ನೇ ಮಾಡಿದ್ದದು. ಅತಿ ಚೆಲುವೆ, ಬುದ್ಧಿವಂತೆ, ಒಂದೇ ಮಗಳು ಹೇದೊಂಡು ಮೇಗೆ ಮಡುಗೀರೆ ಕಾಕೆ ಕಚ್ಚಿಯೊಂಡು ಹೋಕು…,ಕೆಳ ಮಡುಗೀರೆ ಎರುಗು ಕಚ್ಚುಗು ಹೇಳ್ತಾಂಗೆ ನಿನ್ನ ಪೋಚಕನ ಮಾಡಿದೆಯೋಂ. ಬೇರೆ ಮಕ್ಕೊ ಎಲ್ಲ ನಿನ್ನ ಮಟ್ಟಿಂಗಪ್ಪಗ ಬರೇ ತಾಪು ಹೇಳ್ತ ಭಾವನೆ ಎಂಗೋಗೆ ತಲೆಗೆ ಅಡ್ರಿ ಹೋಗಿತ್ತಿದ್ದು. ಅದರನ್ನೇ ನೀನುದೆ ಅನುಸರಿಸಿದೆ. ಹಾಂಗಾಗಿಯೇ ನೀನು ಹುಲಿ ಕುಂಞಿಯ ಹಾಂಗೆ ಒತ್ತೆಯಾಗಿಯೇ ಸ್ನೇಹಿತರುಗೊ ಒಡನಾಡಿಗೊ ಇಲ್ಲದ್ದೆ ಬೆಳದೆ. ಇನ್ನೂ ಒಂದು ವಿಷಯ ಎಂತರ ಹೇಳೀರೆ ಆನೂ ಅಪ್ಪನೂ ಇಬ್ರೂದೆ ಕೂಡು ಕುಟುಂಬಲ್ಲಿ ಹುಟ್ಟಿ ಬೆಳದವು. ಆಸ್ತಿ ಬದ್ಕು ಬೇಕಾದಷ್ಟು ಇತ್ತಿದ್ದರೂ ಮನೆಯ ಪ್ರತಿಯೊಂದು ಖಚರ್ೂದೆ ಹಿರಿಯರ ಮಜರ್ಿ ಪ್ರಕಾರವೇ ನೆಡಕ್ಕೊಂಡಿತ್ತಿದ್ದನ್ನೇ? ಹಾಂಗಿಪ್ಪಾಗ ಮನೆ ತುಂಬ ಇತ್ತಿದ್ದ ಮಕ್ಕಳ ಆಶೆಗಳ ಹೇಳ್ತವು ಕೇಳ್ತವು ಆರಿತ್ತಿದ್ದವು? ಸಣ್ಣ ಪುಟ್ಟ ಆಶೆಗಳನ್ನೂ ನುಂಗಿಯೊಂಡೇ ಬೆಳದ ಎಂಗೋ ಮದುವೆಯಾಗಿಯಪ್ಪದ್ದೆ ತಕ್ಕೊಂಡ ನಿಧರ್ಾರ ಎಂತರ ಹೇಳೀರೆ ಎಂಗೋಗೆ ಆದ ಹಾಂಗೆ ಎಂಗಳ ಮಗುವಿಂಗೆ ಅಪ್ಪಲೆಡಿಯ…ಅಬ್ಬೆ ಅಪ್ಪಂ ಇದ್ದೊಂಡು ಮಗುವಿನ ಬೇಡಿಕೆ ಪೂರೈಕೆ ಆಗದ್ದೆ ಇಪ್ಪಲೆಡಿಯ…,ನಿನ್ನ ಪ್ರತಿಯೊಂದು ಆಶೆಗಳನ್ನೂ ಪೂರೈಸೇಕಾದ್ದದು ಎಂಗಳ ಕರ್ತವ್ಯ ಹೇದೇ ಎಂಗೊ ತಿಳ್ಕೊಂಡ್ಯೋಂ. ಎಂಗೊ ಇಬ್ರೂ ಟೊಂಕ ಕಟ್ಟಿ ನಿಂದು ನಿನ್ನ ಬಾಯಿಂದ ಬಿದ್ದ ಬೇಡಿಕೆಗಳ ತಲೆಲಿ ಹೊತ್ತು ಪೂರೈಸುತ್ತ ಗೌಜಿಲಿ ಮುಖ್ಯವಾದ ವಿಷಯವ ಮರದೇ ಬಿಟ್ಟೆಯೋಂ. ಎರಡೂ ಕೈಲಿ ಬಾಚಿ ತೆಕ್ಕೋಂಬದ್ರ ಮಾಂತ್ರ ನಿನಗೆ ಹೇಳಿಕೊಟ್ಟೆಂಯೋಂ ಅಷ್ಟೆ ಹೊರತಾಗಿ ಕೈಯೆತ್ತಿ ಕೊಡುವದ್ರ ಹೇಳಿ ಕೊಟ್ಟಿದಿಲ್ಲೆಯೋಂ. ಹಾಂಗಾಗಿಯೇ ನೀನು ತುಂಬಾ ಸ್ವಕೇಂದ್ರಿತ ವ್ಯಕ್ತಿಯಾಗಿ ಬೆಳದೆ. ಪ್ರಾಯಕ್ಕೆ ತಕ್ಕ ಹಾಂಗಿದ್ದ ಒಡನಾಡಿಗೊ ಇಲ್ಲದ್ದಿಪ್ಪಗ ಇಂಟನರ್ೆಟ್, ಫೇಸ್ ಬುಕ್, ವಾಟ್ಸಾಪ್ಪು…,ಇತ್ಯಾದಿಗಳೇ ನಿನ್ನ ಜಗತ್ತಾದ್ರಲ್ಲಿ ಎಂತ ಆಶ್ಚರ್ಯವೂ ಇಲ್ಲೆ. ಅಷ್ಟೇ ಅಲ್ಲದ್ದೆ ಅದರ ಮಿಥ್ಯಾಲೋಕದೊಳ ಹೊಕ್ಕು ನಿನ್ನನ್ನೇ ನೀನು ಮರದು ಬಿಟ್ಟೆ. ಸುಖ, ದುಃಖ, ಪ್ರಶಂಸೆ, ವಿಮಶರ್ೆ, ತೆಕ್ಕೋಂಬದು, ಕೊಡುವದು ಇತ್ಯಾದಿಗಳ ಹದ ಪಾಕವೇ ಜೀವನ ಹೇಳ್ತದ್ರ ಎಂಗೊ ನಿನಗೆ ಹೇಳಿಯೇ ಕೊಟ್ಟಿದಿಲ್ಲೆ. ಹಾಂಗಾಗಿಯೇ ಇನ್ನೊಬ್ಬರ ಭಾವನೆಗಳ ತೀಳ್ಕೋಂಬಂತಹ ಸಹೃದಯತೆ ನಿನ್ನೊಳ ಬೆಳದ್ದೇ ಇಲ್ಲೆ. ಆ ಕಾರಣಂದಾಗಿಯೇ ನಿನ್ನ ಜೀವನ ಸಂಗಾತಿಯ ಆಯ್ಕೆ ಮಾಡುವಾಗಳೂ ಎಂಗೋಗೊಂದು ಮಾತು ಹೇಳೇಕು ಹೇಳಿಯೂ ನಿನಗೆ ಕಾಣದ್ದದು. ನೀನು ಒಂಟಿಯಾಗಿಪ್ಪಾಗ ಇದೆಲ್ಲ ದೊಡ್ಡ ವಿಷಯವೇ ಆಗಿತ್ತಿದ್ದಿಲ್ಲೆ. ಎಂತಕೆ ಹೇಳಿದ್ರೆ ಎಂಗೊ ನಿನಗೆ ಕೊಡವದ್ರಲ್ಲಿಯೇ ಸಂತೋಷ ಕಂಡೊಂಡಿತ್ತಿದ್ದೆಯೋಂ ಹೊರತಾಗಿ ನಿನ್ನಂದ ಎಂಗೋಗೆ ಎಂತ ನಿರೀಕ್ಷೆಯೂ ಇತ್ತಿದ್ದಿಲ್ಲೇನ್ನೇ? ಯೇವಾಗ ಆದಿತ್ಯ ನಿನ್ನ ಜೀವನಲ್ಲಿ ಪ್ರವೇಶ ಮಾಡಿದನೋ ಅಂಬಗ ಸುರುವಾತದ ಸಮಸ್ಯೆಗೊ.

 

ಒಪ್ಪೀ…,ದಾಂಪತ್ಯ ಜೀವನ ಹೇದರೆ ಅದರಲ್ಲಿಪ್ಪದು ಕೊಟ್ಟು ತಕ್ಕೋಂಬ ಪ್ರಕ್ರಿಯೆ ಮಾಂತ್ರ…, ಹೆಮ್ಮಕ್ಕೋಗೆ ಅದು ಸೋತು ಗೆಲ್ಲುತ್ತ ಆಟ. ಒಯ್ಲು ಇಪ್ಪ ಹೊಳೆಗೆ ಬಿದ್ದತ್ತು ಕಂಡ್ರೆ ಎಂತ ಮಾಡ್ತು ನಾವು…? ಒಯ್ಲಿನ ವಿರುದ್ದ ದಿಕ್ಕಿಂಗೆ ಮೀಸಿತ್ತೋ ಸೆಳೆತಕ್ಕೆ ಸಿಕ್ಕಿ ಕೈಕ್ಕಾಲು ಸೋತು ನೀರು ಕುಡುದು ಸಾವೇ ಗತಿಯಕ್ಕು ಅಲ್ದೋ? ಎಂತಾ ಒಳ್ಳೆ ಈಜುಗಾರನೇ ಆದ್ರೂ ಒಯ್ಲಿನೊಟ್ಟಿಂಗೇ ಮುಂದೆ ಹೋಯೇಕಷ್ಟೆ. ಅದು ಸುಲಭವೂ ಅಪ್ಪು, ಬದುಕುತ್ತ ಕೆಣಿಯೂ ಅಪ್ಪು. ಒಯ್ಲು ಕಡಮ್ಮೆ ಇಪ್ಪ ಜಾಗೇಲಿ ನೀರಿನ ಹರಿವೂ ಸಾಪಾಟಾಗಿ ಇಪ್ಪಲ್ಲಿ ಈಜುಗಾರ ಸರಕ್ಕನೆ ತಿರುಗಿ ದಡ ಸೇರಿಯೋಳ್ತಂ…ಅಲ್ದೋ ಮಗಳೋ…?ಹಾಂಗೇ ಈ ನಮ್ಮ ಸಂಸಾರವೂ…ನೀನು ಜಾನ್ಸಿದ್ದೇ ಆಯೇಕು ಹೇಳಿರೆ ಅದರ ಫಲಿತಾಂಶ ಒಯ್ಲಿನ ವಿರುದ್ಧ ಮೀಸಿದ ಹಾಂಗೇ ಅಕ್ಕಷ್ಟೆ…ಬರೀ ಘರ್ಷಣೆ. ಈಗ ನಿಂಗಳೊಳ ಆದ್ದದೂ ಅದುವೇ…ಇದಬ್ಬೋ…ನಿನಗೊಂದು ಗುಟ್ಟು ಹೇಳ್ತೆ, ಎಂತರ ಗೊಂತಿದ್ದೋ…? ಎಷ್ಟೇ ಆಧುನಿಕ ಸಾಫ್ಟ್ವೇರುಗಳ ಆವಿಷ್ಕಾರ ಆಗಲಿ ಗೆಂಡುಮಕ್ಕಳ ಮೆದುಳು ಹೇಳ್ತ ಹಾರ್ಡ್ವೇರ್ ಇದ್ದನ್ನೇ…ಅದು ಒಂದು ರಜ್ಜವೂ ಬದಲಾಯಿದಿಲ್ಲೆ ಮಿನಿಯಾಂ…ತಲೆ ತಲಾಂತರಂದ ಬಂದಂತಹ `ಹೆಣ್ಣು ಶಾರೀರಿಕವಾಗಿಯೂ ಮಾನಸಿಕವಾಗಿಯೂ ತನ್ನಿಂದ ದುರ್ಬಲೆ’ ಹೇಳ್ತ ಆ ಭಾವನೆಯೂ `ಅದರ ರಕ್ಷಣೆಯ ಪೂರ್ಣ ಹೊಣೆ ತನ್ನದು..’ ಹೇಳ್ತ ಆ ಸ್ವಾಮಿತ್ವ ಭಾವನೆಯೂ ಇದ್ದನ್ನೇ ಅದು ಅವರ ವಂಶವಾಹಿಲೇ ಬಂದದು. ಆಧುನಿಕತೆ, ಸಮಾನ ಶಿಕ್ಷಣ, ಸಮಾನ ಸ್ಥಾನಮಾನ…ಹೀಂಗಿದ್ದದೆಲ್ಲ ಗೆಂಡುಸಿನ ಮೆದುಳಿನ ಹೆರಾಣ ಕವಚವ ಸವರಿಯೊಂಡು ಹೋಪ ಪರದೆಗೊ ಅಷ್ಟೇ ಹೊರತಾಗಿ ಅದುವೇ ಅವರ ಮೆದುಳಿನ ಹೂರಣವಂತೂ ಖಂಡಿತಾ ಅಲ್ಲ. ಹಾಂಗಿದ್ದ ಭಾವನೆಗೊ ಕೆಲವು ಗೆಂಡುಮಕ್ಕಳಲ್ಲಿ ಹೆಚ್ಚು, ಕೆಲವರಲ್ಲಿ ಕಡಮ್ಮೆ ಹೇಳಿ…ಅಷ್ಟೇ ವ್ಯತ್ಯಾಸ. ಆದರೆ ಅದುವೇ ಅವರ ಬಲಹೀನತೆಯೂ ಅಪ್ಪು. ನಾವು ಹೆಮ್ಮಕ್ಕೊ ಅದರ ತಿಳ್ಕೊಂಡು ಅವರೊಟ್ಟಿಂಗೆ ಭಿನ್ನಾಭಿಪ್ರಾಯ ಬಪ್ಪಾಗ ಸೋತ ಹಾಂಗೆ ಮಾಡಿ ಅವರ ಮನಸ್ಸಿನ ಗೆಲ್ಲಲೆ ಕಲಿಯೇಕು. ನೀನು ಸತ್ಯಭಾಮೆಯಾಗಿಯೋ ರುಕ್ಮಿಣಿಯಾಗಿಯೋ ಕೃಷ್ಣ ಪಾತ್ರಧಾರಿಯೊಟ್ಟಿಂಗೆ ಡೇನ್ಸು ಮಾಡುವಾಗ ಅಂವನ ಬಗೆ ಬಗೆಯಾಗಿ ಓಲೈಸಿ ಅಂವನ ನಿನ್ನ ಕೈವಶ ಮಾಡಿಯೋಂಬ ನಟನೆಲಿ ಪಳಗಿದ್ದಿಲ್ಯೋ…ದಾಂಪತ್ಯ ಜೀವನವೂ ಅದ್ರಿಂದ ಬೇರೆಯಲ್ಲ…ನೀನಾಗ ಅರುಂಧತಿಯ ಬಗ್ಗೆ ಹೇಳಿದೆಯನ್ನೇ? ಅದರ ಕತೆ ಎಲ್ಲವನ್ನೂ ಅಂದೇ ನಿನಗೆ ಹೇಳಿತ್ತಿದ್ದೆ. ಅಂದರೆ ಈಗ ನೀನು ಅದರ ವಿಷಯ ಎತ್ತಿದ್ದದಕ್ಕೆ ತಪ್ಪಾಗಿ ಅರ್ಥ ಮಾಡಿಯೋಂಡದಕ್ಕೆ ಬೇಕಾಗಿ ಪುನಃ ಹೇಳ್ತೆ.

ಆ ಹೆಮ್ಮಕ್ಕೊ ಭಾರೀ ಗಟ್ಟಿಗೆತ್ತಿಯಾಡ. ಪೂರ್ವ ಜನ್ಮಲ್ಲಿ ಸಂಧ್ಯೆ ಹೇಳ್ತ ಅತ್ಯಪೂರ್ವ ಸುಂದರಿಯಾಗಿತ್ತಿದ್ದಾಡ ಅದು. ಅದರ ಮೊಹಕ ರೂಪಕ್ಕೆ ಮರುಳಾಗದ್ದ ಗೆಂಡುಸರುಗೊ ಇತ್ತಿದ್ದವಿಲ್ಲೆಯಾಡ. ಕಾಮುಕರ ಕರಿ ದೃಷ್ಟಿಗೆ ರೋಸಿಹೋತಾಡ. ತನ್ನ ಅತಿ ಸೌಂದರ್ಯವೇ ತನಗೆ ಮುಳ್ಳಾದ್ದದು ಹೇಳ್ತ ಜಿಗುಪ್ಸೆಂದ ವಿಷ್ಣುವಿಂಗೆ ಮೊರೆಹೋಗಿ ಕಡೇಂಗೆ ಯಜ್ಙಕುಂಡಕ್ಕೆ ಹಾರಿ ಪ್ರಾಣ ಬಿಟ್ಟತ್ತಾಡ. ಆ ಘಟನೆ ಅದರ ಉದ್ದಾರಕ್ಕಾಗಿಯೇ ಆದ್ದದು. ಮುಂದೆ ಅದು ಅರುಂಧತಿಯಾಗಿ ಹುಟ್ಟಿತ್ತಾಡ. ಅತಿ ಸೌಂದರ್ಯವೂ ಅತಿ ಅಪಾಯವೇ….ನೀನು ಮದಲೇ ಹುಣ್ಣಿಮೆ ಚಂದ್ರನ ಹಾಂಗಿಪ್ಪೋಳು…ಅದರ ಮೇಗಂದ ಆ ಚೆಂದವ ಮತ್ತಷ್ಟು ಎದ್ದು ಕಾಂಬ ಹಾಂಗೆ ನೋಡ್ತವರ ಭಾವನೆಗೊ ಕೆರಳ್ತ ಹಾಂಗಿದ್ದ ಡ್ರೆಸ್ಸು ಹಾಕಿಯೊಂಡು ಅದೂ ಇರುಳಾಣ ಗೆಟ್ ಟುಗೆದರಿಂಗೆ ನೀನು ಹೆರಟು ನಿಂದದು ಸರಿಯೋ? ಆ ವಿಷಯಲ್ಲೇ ಅಲ್ದೋ ನಿಂಗಳೊಳ ಜಗಳ ಸುರುವಾದ್ದದು…? ಕಾಮುಕರು ಅಂದು ಸಂಧ್ಯೆಯ ಕಾಲಲ್ಲಿಯೂ ಇತ್ತಿದ್ದವು, ಇಂದು ಸುರಭಿಯ ಕಾಲಲ್ಲಿಯೂ ಇದ್ದವು. ಅಂದು ಸಂಧ್ಯೆ ಯಜ್ಞ ಕುಂಡಕ್ಕೆ ಹಾರಿ ಬದ್ಕಿಯೋಂಡತ್ತು. ಅದರ ಉದ್ದಾರ ಮಾಡ್ಲೆ ಮಹಾ ವಿಷ್ಣುವೇ ಇತ್ತಿದ್ದಂ. ನಿನಗೆ…? ಸಮಾಜದ ರೀತಿ ನೀತಿಗಳ ಸರಿಯಾಗಿ ತಿಳ್ಕೋಂಡ ಕಾರಣಕ್ಕೇ ಆದಿತ್ಯ ನಿನ್ನ ಡ್ರೆಸ್ಸಿನ ನೋಡಿ ಆಕ್ಷೇಪ ಎತ್ತಿದಂ ಹೇಳ್ತ ಸಣ್ಣ ಅಂಶವನ್ನೂ ನೀನು ಗಮನಿಸದ್ದೆ ಹೋದೆನ್ನೇ ಮಗಳೋ…? ಅಂವನ ಅಭಿಪ್ರಾಯಕ್ಕೆ ನೀನು ಬೆಲೆ ಕೊಟ್ಟಿದಿಲ್ಲೆ ಹೇಳಿಯಪ್ಪಗ ಅಂವಗೆ ಪಿತ್ತ ನೆತ್ತಿಗೇರಿತ್ತು….ಜಟಾಪಟಿಯಾತು…ಕಡೇಂಗೆ ಆದ್ದದು ಎಂತರ…? ಪಾಟರ್ಿಯೂ ಇಲ್ಲೆ, ಔಟಿಂಗೂ ಇಲ್ಲೆ, ಇಬ್ರಿಂಗೆ ಊಟವೂ ಇಲ್ಲೆ, ಒರಕ್ಕೂ ಇಲ್ಲೆ ಹೇಳಿ ಆದ್ದಷ್ಟೆ ಹೊರತಾಗಿ ಬೇರೆ ಎಂತಾರು ಪ್ರಯೋಜನ ಆಯಿದೋ? ಹೀಂಗಿದ್ದ ಸಣ್ಣ ಸಣ್ಣ ವಿಷಯಂಗಳೇ ಬೆಳದು ಬೆಳದು ನಿಂಗಳಿಬ್ರ ಮಧ್ಯಲ್ಲಿ ದೊಡ್ಡಾ ಹೊಂಡವೇ ನಿಮರ್ಾಣ ಆಗಿ ಹೋತನ್ನೇ…?

 

ವಸಿಷ್ಠ ಮುನಿಗಳ ಪತ್ನಿ ಅರುಂಧತಿ ಅಂತೆ ಸುಖಾ ಸುಮ್ಮನೆ ಮಹಾಸತಿ ಹೇಳ್ತ ಪಟ್ಟ ಪಡಕ್ಕೋಂಡಿದಿಲ್ಲೆ. ಸಪ್ತಷರ್ಿಗಳ ಉಲ್ಲೇಖ ಮಾಡುವಾಗ ಒಳುದ ಆರು ಜೆನರ ಹೆಂಡತ್ತಿಯಕ್ಕಳಿಂದಲೂ ಹೆಚ್ಚು ಇದಕ್ಕೇ ಎಂತಕೆ ಪ್ರಾಮುಖ್ಯತೆ ಸಿಕ್ಕಿತ್ತು…? ಗೆಂಡನ ನಿತ್ಯ ಅಗತ್ಯಂಗಳ ಚಾಚೂ ತಪ್ಪದ್ದೆ ಪೂರೈಸಿದ ಕೂಡ್ಲೆ ಮಹಾಸತಿ ಹೇಳಿ ಆವುತ್ತಿಲ್ಲೆ. ಅದು ಎಷ್ಟು ಗಟ್ಟಿಗೆತ್ತಿ ಆಗಿತ್ತಿದ್ದಾಡ ಹೇಳಿರೆ ಎಷ್ಟೋ ಸಂದರ್ಭಂಗಳಲ್ಲಿ ಅಂತಾ ದೊಡ್ಡ ಮಹಷರ್ಿಗಳನ್ನೇ ಕೂಸರ್ಿ ಉಪದೇಶ ಮಾಡಿಯೊಂಡಿತ್ತಿದ್ದಾಡ. ಹಾಂಗೆ ಹೇಳಿ ತಾನು ಎಲ್ಲ ಗೊಂತಿದ್ದೋಳು ಹೇಳ್ತ ಠೇಂಕಾರವ ಒಂದು ದಿನವೂ ಗೆಂಡನೆದುರು ತೋಸರ್ಿದ ಹೆಮ್ಮಕ್ಕೊ ಅದಲ್ಲಾಡ. ಮೊನ್ನೆ ಎಂಗೊ ನಚ್ಚಣ್ಣನ ಮನೇಲಿಪ್ಪಾಗ ಅಂವನ ಪುಳ್ಳಿಯ ಪುಸ್ತಕಲ್ಲಿ ಒಂದು ಕತೆ ಓದಿದೆ. ಅದು ಸತ್ಯವೋ ಲೊಟ್ಟೆಯೋ ಹೇಳ್ತದ್ರಿಂದ ಹೆಚ್ಚಿಗೆ ನಮ್ಮ ಹಾಂಗಿದ್ದ ಲೌಕಿಕರಿಂಗೆ ಅದ್ರಲ್ಲಿ ಒಂದೊಳ್ಳೆ ಪಾಠ ಇದ್ದು ಹೇಳಿ ಕಂಡತ್ತು ಎನಗೆ…., ವಸಿಷ್ಠ ಮುನಿಗೊ ದೊಡ್ಡಾ ಯಜ್ಙ ಮಾಡ್ಲೆ ಹೆರಟವಾಡ. ಎದುರು ಕಾಮಧೇನುವೂ ಇತ್ತಿದ್ದಾಡ. ಹೋಮಕ್ಕೆ ಹವಿಸ್ಸಾಗಿ ಕೊಡಗಟ್ಲೆ ತುಪ್ಪವನ್ನೂ ಹಾಕಿಯೊಂಡಿತ್ತಿದ್ದವಾಡ. ಕಡೇಯಾಣ ಆಹುತಿಗಪ್ಪಾಗ ತುಪ್ಪ ಸಾಲದ್ದೆ ಬಂತಾಡ. ಅರುಂಧತಿ ಪ್ರಸಂಗಾವಧಾನತೆ ಮೆರದತ್ತಾಡ…ಹೇಂಗೆ? ನಿತ್ಯ ಉಪಯೋಗಕ್ಕೆ ಮಡುಗಿದ ತುಪ್ಪ ಹೋಮಕ್ಕೆ ನಿಶಿದ್ಧ ಹೇಳಿ ಅದಕ್ಕೆ ಗೊಂತಿಲ್ಲದ್ದೆ ಇಕ್ಕೋ? ಅಂದರೂ ಆ ಭರಣಿಯ ಹಿಡ್ಕೊಂಡು ಮನಸ್ಸಿಲ್ಲೇ ದೇವರತ್ರೆ ಬೇಡಿಯೊಂಡತ್ತಾಡ, `ದೇವಾ…,ಮನ್ನಿಸು…,ನನ್ನ ಪತಿ ಕೈಗೊಂಡ ಕಾರ್ಯ ಸಿದ್ಧಿಯಾಗಿ ಲೋಕ ಕಲ್ಯಾಣವಾಗಬೇಕಾದದ್ದು ಸದ್ಯದ ತುತರ್ು…ಆದುದರಿಂದ ಜನರ ಉಳಿವಿಗಾಗಿ ಸ್ವಂತದ ಮಡಿ ಮೈಲಿಗೆಯನ್ನು ಕಡೆಗಣಿಸುತ್ತಿದ್ದೇನೆ ಮಹಾಪ್ರಭೋ…’ ಹೇಳಿಕ್ಕಿ ತುಪ್ಪ ತಂದು ಗೆಂಡನ ಕೈಗೆ ಕೊಟ್ಟತ್ತಾಡ. ಯಜ್ಙ ಸಾಂಗವಾಗಿ ನೆಡದತ್ತು ಹೇಳ್ತದು ಕತೆಯ ಸಾರಾಂಶ. ಇದಕ್ಕೇ ಅನುಕೂಲ ಶಾಸ್ತ್ರ ಹೇಳ್ತದು. ಕಾಮಧೇನು ಅಲ್ಲೇ ಇಪ್ಪಾಗ ಹೋಮಕ್ಕೆ ತುಪ್ಪ ಸಾಲದ್ದೆ ಬಂದ್ರೆ ಹೆದರೇಕೋ? ಅಥವಾ ನೂರಾರು ಶಿಷ್ಯರು ಗುರು ಪತ್ನಿ ಕಾಲಿಲ್ಲಿ ತೋಸರ್ಿದ್ದರ ತಲೆಲಿ ಹೊತ್ತು ತಪ್ಪಲೆ ತಯಾರಾಗಿ ಇಪ್ಪಾಗ ಆರಾರು ಒಬ್ಬಂ ಗಳಿಗ್ಗೆಲಿ ತುಪ್ಪ ತೆಕ್ಕೊಂಡು ಬತ್ತಿತಾಂಯಿಲ್ಲ್ಯೋ? ಆದರೆ ಅರುಂಧತಿ ಇದೇವದ್ರನ್ನೂ ಮಾಡಿದ್ದಿಲ್ಲೆ. ಎಂತಕೆ? ಯಜ್ಙಕ್ಕೆ ಮದಲೇ ಬೇಕಾದಷ್ಟು ತುಪ್ಪ ಸಂಗ್ರಹಿಸಿ ಮಡುಗೇಕಾದ್ದದು ಅದರ ಜವಾಬ್ದಾರಿ. ಕೊನೆ ಗಳಿಗೆಲಿ ತುಪ್ಪ ಸಾಕಾಯಿದಿಲ್ಲೆ ಹೇಳ್ಸಿಯೊಂಡು ತನ್ನದು ಬೇಜವಾಬ್ದಾರಿಯ ನಿರ್ವಹಣೆ ಹೇಳಿ ತೋಸರ್ಿಯೋಂಬಲೆ ಅದು ಇಷ್ಟಪಟ್ಟಿದಿಲ್ಲೆ. ಒಪ್ಪಕ್ಕೋ…,ದಾಂಪತ್ಯ ಜೀವನ ಹೇಳಿರೂ ಅಷ್ಟೇ, ನಾವು ಮದಲೇ ಸರಿಯಾದ ತಯಾರಿ ಮಾಡಿಯೊಂಡಿರೇಕು. ಹಾಂಗೊಂದು ವೇಳೆ ತಯಾರಿ ಸಮರ್ಪಕವಾಗಿ ಇಲ್ಲದ್ರೂ ಅನುಕೂಲ ಶಾಸ್ತ್ರವ ಅನ್ವಯಿಸಿ ಸಮಯ ಪ್ರಜ್ಞೆಯ ಮೆರೆದು ಆದ ತಪ್ಪಿನ ಸರಿ ಪಡ್ಸಿಯೋಂಬಲೆ ಕಲಿಯೇಕು. ಅರುಂಧತಿ ಹೇಳಿದ್ರೆ ಎಲ್ಲಾ ಕಾಲಕ್ಕೂ ಎಲ್ಲಾ ವಿಧಲ್ಲಿಯೂ ಅನುಸರಣೀಯವಾದ ಮಹಿಳೆ, ಮಹಾಸತಿ ಹೇಳುವ ಕಾರಣಕ್ಕಾಗಿಯೇ ಮದುವೆಯ ಕಡೇಯಾಣ ಅಂಗವಾದ ಚತುಥರ್ೀ ಹೋಮದ ಸಮಯಲ್ಲಿ ಭಟ್ಟ ಮಾವಂದ್ರು ಮದುಮ್ಮಾಯನ ಹತ್ರೆ ಮದುಮ್ಮಾಳಿಂಗೆ ಅರುಂಧತಿ ನಕ್ಷತ್ರವ ತೋರ್ಸಲೆ ಹೇಳ್ತವು. `ಅರುಂಧತಿ ವಸಿಷ್ಠಂಗೆ ಇಪ್ಪ ಹಾಂಗೆ ನೀನು ಎನಗಿರೇಕು’ ಹೇಳ್ತ ಅರ್ಥಲ್ಲಿ ಹಾಂಗೆ ತೊಸರ್ುತ್ತದು. ಆದಿತ್ಯ ಅರುಂಧತಿಯ ತೋಸರ್ಿದ್ದಾಂಯಿಲ್ಲೆ….ಹಾಂಗಾಗಿ ನಿನಗೆ ಹೀಂಗಾದ್ದದು ಹೇಳ್ತದಕ್ಕೆ ಅರ್ಥ ಇಲ್ಲೆ ಅಬ್ಬೋ…

 

ವತ್ಸಲ ಮೇಡಂ ಗಾಳಿ ಹಾಕಿತ್ತು ಹೇದೊಂಡು ನೀನು ಟಿ.ವಿ.ಧಾರಾವಾಹಿಗಳಲ್ಲಿ ನಟಿಸುತ್ತೆ ಹೇದೋ ಸಿನೆಮಾ ತಾರೆ ಆವುತ್ತೆ ಹೇದೋ ಹೆರಟಪ್ಪಗ ಆದಿತ್ಯ ಎಂತಕೆ ಕೋಪ್ಸಿದಂ ಹೇಳ್ತದ್ರ ನೀನು ಆಲೋಚನೆ ಮಾಡೇಕಾತೋ ಬೇಡದೋ? ನಿನ್ನ ಸಿನೆಮಾ ತಾರೆ ಮಾಡ್ಲೆ ಆದಿತ್ಯ ಬಿಡ್ತಾಂಯಿಲ್ಲೆ ಹೇಳಿ ಗೊಂತಾದಪ್ಪಗ ವತ್ಸಲ ಮೇಡಂ ನಿನ್ನ ದೋಸ್ತಿ ಸ್ನೇಹನ ಪುಸ್ಲಾಯ್ಸಿ ಒಪ್ಸಿತ್ತಾಡ. ಈಗಾಣ ಅದರ ಕತೆ ಗೊಂತಿದ್ದೋ ನಿನಗೆ…? ಆ ಸಿನೆಮಾ ನಿಮರ್ಾಪಕನ ಮನೆಲಿ ಇದರ ಖಾಯಾಂ ವಾಸ ಆಡ. ಅದರ ಹೆಸರಿಲ್ಲಿ ನಿನ್ನ ವತ್ಸಲ ಮೇಡಂ ಲಕ್ಷಗಟ್ಲೆ ಪೈಸೆ ಎಣ್ಸುತ್ತಾಡ ಗೊಂತಿದ್ದೋ…?”

(ಇನ್ನೂ ಇದ್ದು)

 

 

 

 

7 thoughts on “ಅಬ್ಬೇ…,ಎನಗೆ ಅರುಂಧತಿಯ ಕಂಡಿದೇ ಇಲ್ಲೆ…,             (ಭಾಗ-17)

  1. ಪಟ್ಟಾಜೆ ಶಿವರಾಮಣ್ಣನ ಶುದ್ದಿಯೇ ಇಲ್ಲೇಳಿ ಆನು ಹೇಳ್ತಾ ಇದ್ದೆನ್ನೆ!.”ಕಾಟಂಕೋಟಿ’ ಹೇಳಿರೆ ಅಗತ್ಯ ಇಲ್ಲದ್ದದು.

  2. ವಿಜಯಕ್ಕನ ಶುದ್ದಿಯೇ ಇಲ್ಲೇ. ಕಾಟಂಕೋಟಿ ಹೇಳುತ್ತ ಶಬ್ದಕ್ಕೆ ವಿಜಯಕ್ಕನ ನಿಘಂಟಿಲ್ಲಿ ಎಂತಾರು ಅರ್ಥ ಇಕ್ಕೋ?

  3. ಧನ್ಯವಾದಂಗೊ ರಂಜಿತಾ…, ರಜ್ಜ ಬಿಡುವು ಮಡುಗಿ ಹೊಸ ಕತೆ ಸುರು ಮಾಡ್ತೆ ಆಗದೋ…ಯಾವುದೂ `ಅತಿ’ ಹೇಳಿ ಅಪ್ಪಲಾಗನ್ನೇ…

  4. ಹರಿಣಿ ಮಗಳಿಂಗೆ ಬೇಜಾರ ಅಗದ್ದ ಹಾಂಗೆ ವಿಷಯ ಅರ್ಥ ಅಪ್ಪ ಹಾಂಗೆ ಮಾತಡಿದ್ದು ಬಾರೀ ಲಾಯ್ಕ ಆಯಿದು. ಪ್ರತೀ ವಾರವು ಬಿಡದ್ದೆ ಕತೆ ಓದುತ್ತಾ ಇದ್ದೆ. ಶೀಲಕ್ಕನ ಬರವಣಿಗೆ ಎನಗೆ ತುಂಬಾ ಇಷ್ಟ ಆವ್ತು. ಇದು ಮುಗುದಪ್ಪಗ ಹೊಸ ಕತೆ ಸುರುಮಾಡೆಕ್ಕೂಳಿ ಶೀಲಕ್ಕನತ್ರೆ ಒಂದು ಕೋರಿಕೆ.

    1. ಪಾಚಕ ಅಲ್ಲ ಶಿವರಾಮಣ್ಣ , ಪೋಚಕನ. ನಮ್ಮ ಭಾಷೇಲಿ ವಿವೇಚನೆ ಇಲ್ಲದ್ದೆ ಕುರುಡು ಪ್ರೀತಿ ಮಾಡ್ತದಕ್ಕೆ ಆ ಶಬ್ದವ ಉಪಯೋಗಿಸುತ್ತವು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×