ಇದು ಆನು ಬರದ್ದಲ್ಲ. ಈ ಮೈಲ್ ಬ೦ದ ಒ೦ದು ಕಥೆಯ ಕದ್ದು ಹವಿಗನ್ನಡಾನುವಾದ ಮಾಡದ್ದು ಅಷ್ಟೇ.
ಒ೦ದ್ ದಿನ ಎ೦ತಾ ಆತು ಅ೦ದ್ರೆ ಒಬ್ಬವ೦ಗೆ ಕ೦ಡಾಬಟೆ ಅರಾಮಿಲ್ದೇಯಾ ಆಸ್ಪತ್ರೆಗೆ ಅಡ್ಮಿಟ್ ಮಾಡುವಾ೦ಗೆ ಆತು.
ಆ ವಾರ್ಡಲ್ಲಿ ಮೊದಲೇ ಒಬ್ಬ ಇದ್ದಿದ್ದ, ಕಿಡ್ಕಿ ಹತ್ರ ಇಪ್ಪ ಹಾಸ್ಗೇಲಿ. ಇಬ್ಬರಿಗೂ ಎದ್ದು ಓಡಾದುವ ಪರಿಸ್ಥಿತಿ ಇಲ್ಲೆ ಹಾ೦ಗಾಗಿ ಇಬ್ಬರೂ ಅದೂ ಇದೂ ಮಾತಾಡಿಕೊ೦ಡು ಗೆಳೆಯರಾಗ್ತೋ.
ನಾಕ್ ದಿನ ಆದ್ಮೇಲೆ ಆ ಕಿಡ್ಕಿ ಹತ್ರ ಇಪ್ಪವ ಮತ್ತೊಬ್ಬವ೦ಗೆ ಕಿಡ್ಕಿ೦ದ ಎ೦ತೆ೦ತಾ ಕಾಣ್ತು ಹೇಳಿ ಹೇಳುಲೆ ಶುರು ಮಾಡ್ತಾ. ದಿನಕ್ಕೆ ಒ೦ದು ತಾಸು ಇದೇ ಕೆಲ್ಸ ಮಾಡ್ತೇ ಇರ್ತ.
ಆಸ್ಪತ್ರೆ ಹತ್ರ ಇಪ್ಪ ಪಾರ್ಕು ಎಷ್ಟು ಚೆ೦ದ ಇದ್ದು, ಗಾಳಿ ಬ೦ದಾಗ ಅಲ್ಲೇ ಇಪ್ಪ ಮಾವ್ನಮರದ ಯೆಲೆ ಹೇ೦ಗೆ ಕೊಣಿತು, ಆ ಪಾರ್ಕಲ್ಲಿ ಅಟಾಡು ಮಕ್ಕೋ ಯಾಯಾ ನಮ್ನಿ ಬಣ್ಬಣ್ಣದ ಬಟ್ಟೆ ಹಾಯ್ಕ೦ಜೋ…
ಹೀ೦ಗೇ ದಿನಾ ಅವ೦ದು ಒ೦ದೊ೦ದು ಕಥೆ ಕಿಡ್ಕಿಯಿ೦ದ ದೂರ ಇಪ್ಪೋನಿಗೆ ಖುಷೀ ಆಗ್ಲೀ ಹೇಳಿ ಹೇಳ್ತಿದ್ದ.
ಆದ್ರೆ ಕಡ್ಕಡೇಗೆ ಎ೦ತಾ ಆತು ಅ೦ದ್ರೆ ಇವ೦ಗೆ ತಾನು ಇದೆಲ್ಲಾ ನೋಡುಲೆ ಆಗ್ತಿಲ್ಲೆ , ಅವ ನ೦ಗೆ ಹೊಟ್ಟೆ ಉರಿಸುಲೇ ಹಿ೦ಗೆಲ್ಲಾ ದಿನಾ ಕಥೆ ಹೇಳ್ತಾ ಹೇಳುವ ಭಾವನೆ ಬ೦ದು ಅವನ್ನ ದ್ವೇಷಿಸುಲೆ ಶುರು ಮಾಡ್ತಾ. ಅವನ ಹತ್ರ ಮಾತಾಡುದೇ ನಿಲ್ಲಿಸಿಬಿಡ್ತಾ.
ಒ೦ದ್ ದಿನಾ ಮಧ್ಯರಾತ್ರಿ ಆ ಕಿಡ್ಕಿ ಹತ್ರ ಇಪ್ಪೋನಿಗೆ ಜೋರು ಖೆಮ್ಮು ಶುರುವಾಗ್ತು, ಉಸಿರಾಡುಲೆ ಕಷ್ಟ ಆಗ್ತಾ ಇರ್ತು. ಅಷ್ಟೆಲ್ಲಾ ಆದದ್ದು ನೋಡ್ತಾ ಇದ್ರೂ ಇವ ಮಾತ್ರ ತನ್ ಹತ್ರ ಸಹಾಯಕ್ಕೆ ಇಪ್ಪ ಕರೆಗ೦ಟೆಯ ಒತ್ತದ್ದೇ ಸುಮ್ಮನೇ ಕೂತ್ಕತ್ತಾ.
ಮರುದಿನ ಬೆಳ್ಗಾಮು೦ಚೆ ಔಷಧಿ ಕೊಡುಲೆ ಬ೦ದ ನರ್ಸಿಗೆ ಅವ ಉಸಿರಾಡ್ತಾ ಇಲ್ಲೆ ಹೇಳಿ ಗೊತ್ತಾಗ್ತು.
ಡಾಕ್ಟರು ಬ೦ದು ಅವ ಬದುಕಿಲ್ಲೆ ಹೇಳಿ ತೀರ್ಮಾನ ಮಾಡಿದ ಮೇಲೆ ಅವ್ನ ಶರೀರವ ಅಲ್ಲಿ೦ದ ಸಾಗಿಸುವ ಏರ್ಪಾಡು ಮಾಡ್ತೊ.
ತಕ್ಷಣ ಕಿಡ್ಕಿಯಿ೦ದ ದೂರ ಇಪ್ಪವನಿ೦ದ ಒ೦ದು ಕೋರಿಕೆ “ನನ್ನ ಆ ಕಿಡ್ಕಿ ಹತ್ರ ಶಿಫ್ಟ್ ಮಾಡಿ”. ಅದರ೦ತೆಯೇ ಇವನ್ನ ಆ ಕಿಡ್ಕಿ ಹತ್ರಿಪ್ಪ ಹಾಸಿಗೆಗೆ ಶಿಫ್ಟ್ ಮಾಡ್ತೊ.
ಇವ೦ಗೆ ಅಲ್ಲಿ ಬ೦ದದ್ದೇ ಊಹೆಯೂ ಮಾಡಲಾಗದ ಪರಿಸ್ಥಿತಿ. ಕಿಡ್ಕಿಯ ಹೊರಗೆ ನೋಡುಲೆ ಶುರು ಮಾಡಿದವ ಹಾ೦ಗೇ ನೋಡ್ತಾ ಇರ್ತ.
ತಲೆಯಲ್ಲಿ ಮಾತ್ರ ಯೋಚನೆಗಳು ಸಾಗ್ತಾ ಇರ್ತು. ತನ್ನ ಬಿಟ್ಟು ಹೋದ ಗೆಳೆಯನ ಬಗ್ಗೆ.
ಆ ಕಿಡ್ಕಿಯಿ೦ದ ಕಾಣ್ತಾ ಇಪ್ಪುದು ಪಕ್ಕದ ಕಟ್ಟಡದ ಗೋಡೆ ಮಾತ್ರ. ಪಾರ್ಕು, ಮಾಯ್ನಿಮರ, ಮಕ್ಕಳು ಎಲ್ಲವನ್ನೂ ಮರೆಮಾಚಿದ ಒ೦ದು ಗೋಡೆ ಮಾತ್ರ.
ಅವ ತನ್ನ ಗೆಳೆಯನಿಗಾಗಿ ತಾನೇ ಕಲ್ಪನೆಗಳ ಮಾಡ್ಕ೦ಡು , ಇವನ ಖುಷಿಗಾಗಿ ಬಣ್ಣಬಣ್ಣದ ಕಥೆ ಸೃಷ್ಟಿ ಮಾಡ್ತಿದ್ದ.
ನಿಸ್ವಾರ್ಥ ಸ್ನೇಹ, ನಿಷ್ಕಲ್ಮಶ ಪ್ರೀತಿ ಅ೦ದ್ರೆ ಎ೦ತದು ಹೇಳುವ ಪಾಠ ಹೇಳಿಕ್ಕಿ ಹೋಗಿದ್ದ.
ತಾನು ಹೋಗುವಾಗ ಇನ್ನೊಬ್ಬ ತನ್ನ ಜೀವನವನ್ನ ನೋಡುವ ರೀತಿಯನ್ನೇ ಬದಲಾಯಿಸಿ ಹೋಗಿದ್ದ.
- ಹೀಗೊ೦ದು ಕಥೆ - September 10, 2012
- ರಗಳೆ ಮಾಣಿ - August 23, 2012
ಚೊಲೋ ಆಜು ಬರೆದಿದ್ದು..ಬೇರೆಯವ್ವು ತೋರ್ಸ ಪ್ರೀತಿನ ಅರ್ಥ ಮಾಡ್ಕ್ಯ೦ಬಲೆ ನಮ್ಮ ಮನಸ್ಸು ವಿಶಾಲಾವಗಿರವು
ಹೇಳ ಸಂದೇಶ ಸೊಗಸಾಗಿ ಮೂಡಿ ಬಂಜು
ಧನ್ಯವಾದ ಅನುಷಕ್ಕಾ
ಕಥೆಯ ವಿವರ್ಸಿದ ರೀತಿ ಲಾಯ್ಕಾಯ್ದು ರವಿ, ಮುಳಿಯ ಭಾವ ಹೇದ ಹಾಂಗೆ ನಮ್ಮ ಭಾಷೆಲಿ ಅದರ ಓದುವಗ ಹೆಚ್ಚಿಗೆ ತಾಗುತ್ತು ಮನಸ್ಸಿಂಗೆ 🙂
ಧನ್ಯವಾದ ಸುವ್ವಕ್ಕಾ 🙂
ನಿಜ,ಇ೦ಗ್ಲಿಷಿಲಿ ಈ ಕಥೆಯ ಓದಿಯಪ್ಪಗ ಬಾರದ್ದ ಭಾವಸ್ಪರ್ಷ ನಮ್ಮ ಭಾಷೆಲಿ ಬ೦ತು !.
ಮಾನೀರ್ ಭಾವಾ,ಬರವಣಿಗೆಯ ಶೈಲಿ ಕೊಶಿ ಕೊಟ್ಟತ್ತು.
ಧನ್ಯವಾದ೦ಗೋ ಮುಳಿಯ ಭಾವಾ…. 🙂
ಮಾಣಿ ಬರವ ಕತೆ ಓದುಲೆ ಕುಶಿ ಆಗುತ್ತು.
ಕುಮಾರ ಮಾವ೦ಗೆ ಧನ್ಯವಾದ೦ಗೋ… 🙂
ಲಾಯ್ಕ ಆಯಿದು
ಧನ್ಯವಾದ ಗೋಪಾಲಣ್ಣಾ
ಅಯ್ಯೋ ಪಾಪ ಹೇಳಿ ಕಂಡು ಬೇಜಾರಾತು ಕತೆಯ ಓದಿ.
ತನ್ನ ಗೆಳೆಯನ ಸಂತೋಷಪಡಿಸುಲೆ ಅವ ಹಾಂಗೆಲ್ಲ ಕತೆ ಹೇಳಿದರೂ ಅದರ ಅರ್ತ ಮಾಡಿಗೊಂಡಿದನೆ ಇಲ್ಲೆನ್ನೇ ಆ ಇನ್ನೊಬ್ಬ ಮೂರ್ಖ ಗೆಳೆಯ?
ಕತೆಯ ಅಂತ್ಯ ಬೇಜಾರದ್ದು ಬೇಜಾರದ ಸಂಗತಿ.
ಆದರೆ ಮಾನೀರ್ ಮಾಣಿ ಬರವ ಉತ್ತರಕನ್ನಡ ದ ಹವ್ಯಕ ಭಾಷೆ ಓದುಲೆ ಲಾಯಿಕ ಆವ್ತು.
ಇನ್ನೂ ಕತೆಗೊ ಬರಳಿ (ಸುಖಾಂತ್ಯ ಇದ್ದರೆ ಎನಗೆ ಖುಷಿ)…
~ಸುಮನಕ್ಕ….
ಓಹ್ ಸುಮನಕ್ಕಾ ಬೇಜಾರ್ ಮಾಡಡಿ. ಮು೦ದಿನ ಕಥೆಯಲ್ಲಿ ಸಹಿ ಹ೦ಚುವಾ.. 🙂
ಕತೆಯ ನಿರೂಪಣೆ ಲಾಯಿಕ ಆಯಿದು.
ಈ ಮೊದಲು ಬೇರೆ ಭಾಷೆಲಿ ಓದಲೆ ಸಿಕ್ಕಿದ ಕತೆ ಅದರೂ ನಮ್ಮ ಭಾಷೆಲಿ ಓದುವಾಗ ಬೇರೆ ನಮೂನೆ ಅನುಭವ ಕೊಡ್ತು.
ಒಪ್ಪಕ್ಕೆ ಧನ್ಯವಾದ ಶರ್ಮಪ್ಪಚ್ಚಿ…
ತನ್ನ ಮನಸ್ಸಿಲ್ಲಿ ಬೇಜಾರು ಇದ್ದರೂ, ಸ್ನೇಹಿತನ ಮನಸ್ಸಿಂಗೆ ಕೊಶಿಕೊಡ್ತಾ ಇದ್ದವ, ಸ್ನೇಹಿತನ ಸಕಾಯ ಸಿಕ್ಕದ್ದೇ ತೀರಿ ಹೋದ್ದು ಕೇಳಿ ಬೇಜಾರಾತು. ಕಥೆಗೆ ಹೊಸರೂಪ ಕೊಟ್ಟ ಮಾಣಿಗೆ ಧನ್ಯವಾದಂಗೊ.
ಧನ್ಯವಾದ ಬೊಳು೦ಬು ಭಾವಾ ..
[ನಿಸ್ವಾರ್ಥ ಸ್ನೇಹ, ನಿಷ್ಕಲ್ಮಶ ಪ್ರೀತಿ ಅ೦ದ್ರೆ ಎ೦ತದು ಹೇಳುವ ಪಾಠ ಹೇಳಿಕ್ಕಿ ಹೋಗಿದ್ದ.] – ಇದು ಲಾಯಕ ಆಯ್ದು ಭಾವ.
ಅಂತ್ಯದಲ್ಲೊಂದು ಹೃದಯಸ್ಪರ್ಶೀ ಸಂದೋಶ. ಒಪ್ಪ.
ಧನ್ಯವಾದ ಚೆನ್ನೈ ಭಾವ 🙂