Oppanna.com

ಒಂದು ಮಾವಿನ ಮರದ ಸುತ್ತ

ಬರದೋರು :   ಸುಬ್ಬಣ್ಣ ಭಟ್ಟ, ಬಾಳಿಕೆ    on   19/09/2012    3 ಒಪ್ಪಂಗೊ

ಸುಬ್ಬಣ್ಣ ಭಟ್ಟ, ಬಾಳಿಕೆ
Latest posts by ಸುಬ್ಬಣ್ಣ ಭಟ್ಟ, ಬಾಳಿಕೆ (see all)

ತುಂಬ ಹಿಂದೆ ನಡದ ಘಟನೆ. ಅ  ಕಾಲಲ್ಲಿ ರಾಜಕೀಯವೂ ಇಷ್ಟು ಬದಲಾಯಿದಿಲ್ಲೆ. ಅಂದ್ರಾಣ ಜನಂಗಳೂ ಈಗ ಇಲ್ಲೆ. ಇದ್ದರು ನೆಂಪೂ ಇರ ಹೇಳಿ ಕಾಣುತ್ತು.
ಕಾಲವೆ ಎಲ್ಲವನ್ನೂ ನುಂಗಿ ಹಾಕುತ್ತು. ಕೆಲವು ವರ್ಷ ಕಳದ ಮೇಲೆ ಇಂದ್ರಾಣದ್ದೂ ಮುಂದಿನವಕ್ಕೆ ನೆಂಪು ಬಾರ.
ಮರೆದುಹೋಪದು ಒಂದು ಲೆಕ್ಕಲ್ಲಿ ಒಳ್ಳೆಯದೇ. ಜೀವನಲ್ಲಿ ಬಂದ ಕಷ್ಟಂಗಳನ್ನೋ, ಸೋಲುಗಳನ್ನೋ ನೆಂಪು ಮಾಡಿಗೊಂಡಿದ್ದರೆ ನಮ್ಮ ತಲೆಯೊಳ ಜಾಗೆಯೇ ಸಾಕಾಗ.
ಯಾವಾಗಲೂ ನೆಂಪು ಮಾಡಿಗೊಂಡಿದ್ದರೆ ಮಾಂತ್ರ  ಹಳತ್ತು ನೆಂಪಪ್ಪದು. ಕಷ್ಟ ಸೋಲು ಮನುಷ್ಯಂಗಲ್ಲದ್ದೆ  ಮರಕ್ಕೋ ಬಪ್ಪದು?
ಒಂದರಿ ಬಂದ ಕಷ್ಟವ ನುಂಗಿಗೊಂಡರೆ ಮತ್ತೆ ಮರವಲೆಡಿಗು. ಮತ್ತೆ ಮತ್ತೆ ನೆಂಪು ಮಾಡಿಗೊಂಡೇ ಇದ್ದರೆ, ಜೀವನಲ್ಲಿ ಬೇಜಾರು ಹೆಚ್ಚಾವುತ್ತು. ಏನೋ ಇದೆಲ್ಲಾ ಸಾಮಾನ್ಯ ಇಪ್ಪದೇ ಹೇಳಿ ಗ್ರೇಶಿಗೊಂಡರೆ ಕಷ್ಟ.
ಆಟಲ್ಲಿ ಬಂದ ಸೋಲಿನ ಹಾಂಗೆ, ಇನ್ನೊಂದರಿ ಪ್ರಯತ್ನ ಮಾಡಿ ಗೆಲ್ಲುಲೆ ಎಡಿತ್ತೋ ನೋಡುವದು.
ಆಗದ್ದರೆ ಸುಮ್ಮನೆ ಕೂಪದು. ಹೇಂಗಿದ್ದರೂ ಗೆದ್ದೇ ಗೆಲ್ಲೆಕ್ಕು ಹೇಳುವ ಹಟ ಬಂದರೆ ನಮ್ಮ ಮನಸ್ಸು ಹಟ ಸಾಧುಸುವದು ಹೇಂಗೆ ಹೇಳುವ ಯೋಚನೆಲ್ಲೇ ಇರೆಕ್ಕಾವುತ್ತು.
ಕಿಚ್ಚು ಹೊತ್ತಿದರೆ, ಕಿಚ್ಚು ಅಲ್ಲಿದ್ದ ಅದರ ಆಹಾರ ಎಲ್ಲ ಮುಗಿಶಿಕ್ಕಿ ಮತ್ತೆ ತಣ್ಣಂಗಾವುತ್ತು. ಆದರೆ ಆಹುತಿ ಮುಗಿಶದ್ದೆ ಸುಮ್ಮನೆ ಕೂರುತ್ತಿಲ್ಲೆ.
ಅಥವಾ ಕಿಚ್ಚು ದೊಡ್ಡ ಮಾಡೆಕ್ಕಾರೆ ಆರಾರುದೆ  ಅದಕ್ಕೆ ತಿಂಬಲೆ ಆಹಾರ ಕೊಡುತ್ತಾ ಇರೆಕ್ಕು.ಕೆಲವು ಜನಕ್ಕೆ ಕಿಚ್ಚಿಂಗೆ ತುಪ್ಪ ಎರವದು ಅಭ್ಯಾಸ. ಪಾಕಿಸ್ಥಾನ-ಭಾರತದ ಜಗಳ ಮುಂದುವರಿತ್ತಾ ಇಪ್ಪಲೆದೆ ಅವಕ್ಕೆ ಅದರ ಮುಗಿಶೆಕ್ಕು ಹೇಳಿ ಇಲ್ಲದ್ದ ಕಾರಣ ಮಾಂತ್ರ ಅಲ್ಲ ನಾವು ಹೀಂಗೆ ಜಗಳಾಡಿಗೊಂಡಿದ್ದರೆ ಬೇರೆಯವಕ್ಕೆ ನೋಡ್ಯೊಂಡಿದ್ದರಾತು.
ಬೇರೆ ದೇಶಂಗೊ ಸಹಾಯ ಮಾಡುತ್ತೆಯೋ ಹೇಳಿ ಆಯುಧ ಸಾಮಗ್ರಿ ಕೊಟ್ಟುಗೊಂಡು ಇನ್ನೂ ತುಪ್ಪ ಎರೆತ್ತಾ ಇದ್ದವಲ್ಲದೋ?
ಮುಗಿವ ಯೋಗ ಬಯಿಂದಿಲ್ಲೆ. ಮಹಾಭಾರತ ಯುದ್ಧ ಕೌರವರ ಅವಸಾನ ಆದ ಮೇಲೆ ಮುಗುದಿತ್ತಲ್ಲದೋ? ಹಾಂಗೆ ಒಂದು ಕಾಲ ಬಕ್ಕು ಎಲ್ಲ ತಣ್ಣಂಗಕ್ಕು.
ಒಂದು  ಕಶಿ ಮಾವಿನ ಮರ ಎಂಗಳ ಊರಿನ ಒಂದು ಜಾಗೆಲ್ಲಿ ಇತ್ತು.
ಮಾಂತ್ರ ಅಲ್ಲ, ಒಂದು ಕುಂಟುಕಾನ ಮಾವಿನ ಮರವೂ ಇತ್ತು ಆ ಜಾಗೆಲ್ಲಿ. ಒಂದು ಮನೆ, ಏಳೆಂಟು ತೆಂಗಿನ ಮರಂಗೊ. ಜಾಗೆಯ ಒಡಮಸ್ತ ಸಾಲ ಆಗಿ ಜಾಗೆಯ ಮಾರೆಕ್ಕಾಗಿ ಬಂತು.
ಮಾರುವದು ಆ ಊರಿನ ಒಬ್ಬ ರಾಮಣ್ಣ ಹೇಳುವ ಊರಿನ ಪ್ರಮುಖಂಗೆ ಗೊಂತಾತು. ಮದಲೆಲ್ಲ ಒಂದೊಂದು ಊರಿಲ್ಲಿ ಹೀಂಗಿಪ್ಪ ಆಢ್ಯರು, ಊರನ್ನೇ ಕಲಂಕುಸಿ ತನ್ನ ಬೇಳೆ ಬೇಶಿಗೊಂಡಿದ್ದೋವು! ಅವ ಒಬ್ಬ ಪಾಪದೋನ, ಬೇರೆ ಆರ ಸುದ್ದಿಗೂ ಹೋಗದ್ದೋನ ಹಿಡುದು ಹಾಕಿ ಅವನತ್ರೆ “ಜಾಗೆಯ ನೀನು ತೆಕ್ಕೊ. ಕಮ್ಮಿಗೆ ಬತ್ತು. ಹೇಂಗಿದ್ದರೂ ಬರೇ ಒಂಡು ಸಾವಿರ ರೂಪಾಯಿಗೆ ೨೫ ಸೆಂಟ್ಸ್ ಜಾಗೆಯೂ ಮನೆ ಎಲ್ಲ ಬತ್ತು. ಮನೆಲ್ಲಿ ಎರಡು ಜನ ಕೂಲಿಯೋವು ಬಾಡಿಗೆಗೆ ಇದ್ದವು. ಬಡ್ದಿ ಪೈಸೆ ಬಾಡಿಗೆಲ್ಲಿ ಬಕ್ಕು ತೆಕ್ಕೋ” ಹೇಳಿದ.

ಅವಂಗೆ ಪಾಪ ದಾರಿಲ್ಲಿ ಹೋಗಿಗೊಂಡಿದ್ದ ಮಾರಿಯ ಮನೆ ಬಾಗಿಂಗೇ ಬರುಸಿದ ಹಾಂಗೆ ಆಗಿ ಹೋತು. ಜಾಗೆಲ್ಲಿ ಒಂದು ಕಶಿ ಮಾವಿನ ಮರಲ್ಲಿ ಒಳ್ಳೆ ಜಾತಿ ಕಶಿ ಮಾವಿನ ಕಾಯಿಗೊ ಸಿಕ್ಕುತ್ತು. ಜಾಗೆ ದೂರಲ್ಲಿಪ್ಪ ಕಾರಣ ಆನು ಇಲ್ಲಿಗೆ ಯಾವಾಗಲೂ ಬಪ್ಪ ಕಾರಣ ಜಾಗ್ರತೆ ನೋಡ್ಯೊಳ್ಳುತ್ತೆ. ಕೊಯ್ವಗ ಎನಗೂ ಮಾವಿನ ಕಾಯಿ ಕೊಡೆಕ್ಕು ಹೇಳಿ ಒಂದು ಮಾತಿನ ಮುಳ್ಳು ಮಡಗಿತ್ತಿದ್ದ.
ಸರಿ! ಅವನ ಮಾತಿಂಗೆ ಮರುಳಾಗಿ ದಾರಿಲ್ಲಿ ಹೋಪ ಮಾರಿಯ ಮನೆಗೇ ತಂದು ಹಾಕಿಗೊಂಡ ಇವ.
ಆ ವರ್ಷ ಮಾವಿನ ಕಾಯಿ ಮುಗುದಿತ್ತು. ಮತ್ತಾಣ ವರ್ಷ ಮರ ತುಂಬ ಮಾವಿನ ಕಾಯಿಗೊ! ಜಾಗೆ ತೆಕ್ಕೊಂಡವಂಗೆ ಬೇರೆ ಕೆಲಸದ ಎಡಕ್ಕಿಲ್ಲಿ ಮಾವಿನ ಕಾಯಿ ಕೊಯ್ವಲೆ ನೆಂಪಾಗಿತ್ತಿದ್ದಿಲ್ಲೆ.
ಜನಂಗೊ ಎಲ್ಲ ತನ್ನ ಕಚ್ಚೆಯೊಳ ಇರೆಕ್ಕು ಹೇಳುವ ಯೋಚನೆ ಇದ್ದ ಪ್ರಮುಖಂಗೆ. ಎಲ್ಲಿ, ಯಾವಗ, ಹೇಂಗೆ, ಆರಿಂಗೆ ಬೆಶಿ ಮುಟ್ಟುಸೆಕ್ಕು, ತನ್ನ ಪತ್ತಿಂಗೆ ಬರುಸ್ಯೊಳ್ಳೆಕ್ಕು ಹೇಳುವದೇ ಯೋಚನೆಯಾಗಿತ್ತು.
ಹೋದಲ್ಲೆಲ್ಲ ಜಾಗೆ ಅವಂಗೆ. ಎಲ್ಯಾದರೂ ದಾರಿ ನಡಕ್ಕೊಂಡು ಹೋಪಗ ಒಳ್ಳೆ ಆಯಕಟ್ಟಿನ ಫಲವತ್ತಾದ ಭೂಮಿ ಕಂಡರೂ, ಆ ಪರಿಸರಲ್ಲಿಪ್ಪ ಪಾಪದೋನು ಒಬ್ಬನ ದಿನಿಗೇಳಿ, ನಿನಗೊಂದು ಜಾಗೆ ನೋಡಿದ್ದೆ. ಅದರ ದರಕಾಸ್ತು ಮಾಡುಸಿ ಕೊಡುತ್ತೆ.
ಸೇನವಂಗೆ, ಮಣೆಗಾರಂಗೆಲ್ಲ ಆನೇ ಕೊಡುತ್ತೆ. ಜಾಗೆಯ ನೀನೇ ನೋಡಿಗೋ’ ಹೇಳಿಕ್ಕಿ,
ಇವ ಪಾಪ! ಬೆಗರು ಸುರಿಸಿ ಕಷ್ಟಪಟ್ಟು ಕೆಲಸ ಮಾಡಿ, ತೋಟವೊ ಗೆದ್ದೆಯೋ ಮಾಡ್ಯೊಂಡಿದ್ದರೆ, ಇವ ಬತ್ತ ಅಲ್ಲಿಗೆ. “ಜಾಗೆ ಈಗ ಭಾರಿ ಒಳ್ಳೆದಾಯಿದು. ಚೆಂದ ಆಯಿದು. ನಿನಗೆ ಈ ಜಾಗೆ ಮಾಡಿಕೊಡೆಕ್ಕಾರೆ  ಎನಗೆ ತುಂಬ ಕಷ್ಟ ಆಯಿದು. ತುಂಬ ಖರ್ಚಾಯಿದು. ಅದರ ನೀನು ಕೊಡುತ್ತೆಯೋ ಅಲ್ಲ; ವರ್ಷವೂ ಅಷ್ಟೋ ಇಷ್ಟೋ ಕೊಟ್ಟುಗೊಂಡಿರುತ್ತೆಯೋ ಹೇಂಗೆ? ಒಂದು ಗೇಣಿ ಚೀಟು ಮಾಡಿಕ್ಕುವೋ. ಈಗ ನಿನ್ನ ಸ್ವಾಧೀನವೇ ಇರಲಿ.  ರೆಕೋರ್ಡ್ ನಿನ್ನ ಹೆಸರಿಂಗೆ ಮಾಡೆಕ್ಕಾರೆ ಎಷ್ಟು ಕೊಡುತ್ತೆ?” ಹೇಳಿ ಎಲ್ಲ ಇವನ ಪೀಡುಸುಲೆ ಸುರು ಮಾಡುವದು ಅವನ ಜಾಯಮಾನ!

ವಿಷಯ ಗೊಂತಿದ್ದರೂ ಹೆಚ್ಚಿನೋವು ಅವನ ಬಾಯಿಗೆ ಬೀಳುವೋರೇ. ಈ ಮಾವಿನ ಮರದ ಕತೆಯೂ ಹಾಂಗೇ ಆಗಿತ್ತು.
ಒಂದು ದಿನ ಹೊತ್ತೋಪಗ ಆ ಜಾಗಗೆ ಬಂದೋನು, ಕೆಲಸದೋರ ದಿನಿಗೇಳಿ (ಬರೇ ಚಾಯ ಕೊಟ್ಟರೆ ಸಾಕು; ಚಾಯ ಕುಡಿವ ಆಸೆಗೆ ಕೆಲವು ಜನ ಓಡಿ ಬಂದೊಂಡಿತ್ತಿದ್ದವು.) ಬೆಳೆದ ಕಾಯಿಗಳೆಲ್ಲ ಕೊಯ್ಸಿ, ಒಂದಷ್ಟು ಕಾಯಿಗಳ “ಇದರ ಅವ ಬಂದರೆ ಕೊಟ್ಟಿಕ್ಕು'” ಹೇಳಿ ಕೊಟ್ಟಿಕ್ಕಿ, ಊರೆಲ್ಲ ಹಂಚಿ ಅರೆವಾಶಿ ಕಾಯಿಗಳನ್ನೂ ಕೊಂಡು ಹೋದಡ. ಎರಡು ದಿನ ಕಳುದು ಹೋಪಗ ಹೋಟ್ಲಿನೋನು “ಇದ, ಇಲ್ಲಿ ರಜ ಮಾವಿನ ಕಾಯಿ ಇದ್ದು ನಿನಗೇಳಿ ರಾಮಣ್ಣ ಮಡುಗಿದ್ದು ಕೊಂಡೋಗು, ಕೊಂಡೋಗದ್ದರೆ ಹಾಳಕ್ಕು” ಹೇಳಿದಡ.
ಸರಿ ಇವ ಪಾಪ ಕೊಂಡೋದ. ಒಂದು ವರ್ಷ ಹಾಂಗೆ ಹೋತು. ಎಲ್ಲೋರುದೆ ‘ಇದು ಊರ ರಾಮಣ್ಣನ ಮರ ಹೇಳುಲೆ ಸುರುಮಾಡಿದವು. “ಜಾಗೆ ಮತ್ತೊಬ್ಬಂದಾದರೂ ಕ್ರಯಚೀಟು ಅಪ್ಪಗಳೇ ಮಾತು ಹಾಂಗೆ ಇದ್ದಡೋ. ಹೇಳುಲೆ ಸುರುಮಾಡಿದವು.

ಒಂದೆರಡು ವರ್ಷ ಹೀಂಗೇ ಕಳುತ್ತು. ಊರೋರೆಲ್ಲ ಹೇಳುವದು ಪ್ರಚಾರ ಆಗಿದ್ದರೂ ಇವಂಗೆ ಗೊಂತಾದು ಒಂದು ವರ್ಷ ಕಳುದ ಮೇಲೆ.
ಮತ್ತೆ ಒಂದರಿ ಇವನೇ ಮದಲು ಹೋಗಿ ಕಾಯಿ ಕೊಯ್ದಕ್ಕೆ, ಅವಂಗೆ ಕೋಪ ಬಂದು, ಮತ್ತಾಣ ಸರ್ತಿ ಇವ ಹೋಪಗ ಮರ ಖಾಲಿ.
ಆ ಸಮಯಲ್ಲಿ ಜಾಗೆಲ್ಲಿದ್ದ ಬಾಡಿಗೆಯೋರುದೆ ಪ್ರಮುಖನ ಕಡೆಯಾಗಿತ್ತಿದ್ದವು. ಮತ್ತೆ ಬಾಡಿಗೆ ಸರಿ ಕೊಡದ್ದ ಕಾರಣಂದ ಜಾಗೆಂದಲೇ ಏಳೆಕ್ಕು ಹೇಳಿ ಬಾಡಿಗೆಯೋರತ್ರೆ ಹೇಳಿದ್ದಕ್ಕೆ ಒಪ್ಪದ್ದೆ, ಮಾತಿಂಗೆ ಬಗ್ಗದ್ದೆ, ಜಾಗೆಲ್ಲಿದ್ದೋರ ಮೇಲೆ ಕೇಸ್ ಮಾಡಿಯೂ ಆತು.
ಕೇಸಿಲ್ಲಿ ಒಕ್ಕಲಾಗಿಪ್ಪೋರು ಜಾಗೆ ಬಿಡೆಕ್ಕು ಹೇಳಿ ಅಪ್ಪಗ, ಸುಲಭಲ್ಲಿ ಬಿಟ್ಟು ಹೋಗದ್ದೆ ಪೋಲಿಸ್ ಕೇಸ್ ಆದಮೇಲೆ ಮನೆ ಬಿಟ್ಟಿಕ್ಕಿ ಹೋದವು.
ಆಮೇಲೆ ಇವರೊಳದಿಕ್ಕೆ “ಇತ್ತಲು ಹತ್ತಿತು ಕರ್ಣಾರ್ಜುನರೊಳಗೆ” ಹೇಳಿ ನೇರ ಸಮರವೇ ಸುರುವಾತು. ಅವನ ಕಡೆಲ್ಲಿ ಊರೋರೆಲ್ಲ ಇತ್ತಿದ್ದವು. ಕಾರಣ ವರ್ಷಕ್ಕೊಂದರಿ ಮಾವಿನ ಕಾಯಿ ಸಿಕ್ಕುತ್ತಿತ್ತಲ್ಲದೋ?
ಆರದ್ದೋ ಬದುಕ್ಕಿಂಗೆ ಅವ ಯಜಮಾನ ಆಗಿಹೋದ ಊರೋರ ಮಟ್ಟಿಂಗೆ. ಇವಂಗೆ ನಿವೃತ್ತಿ ಇಲ್ಲೆ.  ಜಾಗೆಲ್ಲಿದ್ದ ಮನೆಯ ಮುರುದು ತಂದಿತ್ತಿದ್ದ ಹಾಂಗೆ ಈಗ ಮನೆ ಖಾಲಿ.

ಒಬ್ಬ ಪಾಪದೋನು “ಆನು ಜಾಗೆಲ್ಲಿ  ಅಂಗಡಿ ಕಟ್ಟಿ ವ್ಯಪಾರ ಮಾಡುತ್ತೆ. ಜಾಗ್ಗೆ ,ಮಾಂತ್ರ ಬಾಡಿಗೆ ಚೀಟು ಮಾಡಿಕೊಡುತ್ತೆ ಹೇಳಿದಡ.  ಹಾಂಗಿಪ್ಪಗ ಜಾಗೆಲ್ಲಿ ಹಾಂಗೆ ಒಂದು ಒಕ್ಕಲಿನ ಹಾಂಗೆ ಇದ್ದರೆ ಮರದ ಕಾವಲಿಂಗೂ ಅಕ್ಕು ಹೇಳಿ ಇವ ಒಪ್ಪಿದಡಾ. ಆ ವರ್ಷ ಮಾವಿನ ಕಾಯಿ ಬೆಳೆದು ಅವ ಕೊಯ್ವಲೆ ಬಪ್ಪಗ ಅಂಗ್ಡಿಲ್ಲಿದ್ದೋನು ಬಿಟ್ಟ ಇಲ್ಲೆ. ರಾಮಣ್ಣ ಕೊಯ್ವಲೆ ಬತ್ತ ಹೇಳುವದು ಜಾಗೆಲ್ಲಿಪ್ಪವಂಗೆ ಗೊಂತಾಗಿ ಬಂದು ಹೇಳಿದಡ. ಇವ ಹೋಪಗ ರಾಮಣ್ಣ ಕಾಯಿ ಕೊಯ್ಕೊಂಡು ಇತ್ತಿದ್ದಡ. ಇವ ಸೀದಾ ಹೋಗಿ ಅವನ ದೂಡಿ ಬಿಟ್ಟಪ್ಪಗ ಅಲ್ಲಿಂದ ಹೋಯೆಕ್ಕಾಗಿ ಬಂತು. ಮತ್ತೆ ಸುದ್ದಿ ಇಲ್ಲೆ.
ಒಂದೆರಡು ವರ್ಷವೂ ಹೀಂಗೇ ಹೋತು. ಮಾವಿನ ಕಾಯಿ ವರ್ಷವೂ ಒಡಮಸ್ಥನೇ ಕೊಯ್ದು ಕೊಂಡೋಗ್ಯೊಂಡು ಇತ್ತಿದ್ದಡ.
ಆ ಸಮಯಲ್ಲೇ ಏನೋ ಒಂದು ಕಾರಣಕ್ಕೆ ಈ ಅಂಗ್ಡಿಯೋನಿಂಗೂ ಬೇರೊಬ್ಬಂಗೂ ಜಗಳ ವಿಕೋಪಕ್ಕೆ ಹೋಗಿ ಕೇಸ್ ಆತು.
ಅಂಗ್ಡಿಯೋನ ಮೇಲೆ ಕೋಪ ಇದ್ದ ಪ್ರಮುಖ ಅಂಗ್ಡಿಲ್ಲಿದ್ದೋನ ವಿರುದ್ಧ ಸಾಕ್ಷಿ ಕೂಡಾ ಹೇಳಿ ಜೈಲಿಂಗೆ ಹೋಪ ಹಾಂಗೆ ಮಾಡಿದನದ. ಮತ್ತೆ ಮದಲಾಣ ಹಾಂಗೆ ಮಾವಿನ ಕಾಯಿ ಕೊಯ್ವಲೆ ಅನುಕೂಲವೇ ಆಗಿಹೋತು.

ಒಂದೆರಡು ವರ್ಷ ಕಳಿವಗ ಅವ ಜೈಲಿಂದ ಬಂದ. ಅಂಗ್ಡಿಯ ಬೇರೆ ಜನಕ್ಕೆ ಮಾರಿದ. ತೆಕ್ಕೊಂಡೋನನ್ನೂ ಮಂಕಾಡುಸಿ ತನ್ನ ಕಡೆಂಗೆ ಪ್ರಮುಖ ಮಾಡಿಗೊಂಡ.ಮತ್ತೆ ಮಾವಿನ ಕಾಯಿ ಕೊಯ್ವದು ಕೊಂಡೋಪದು ಅವನೇ ಆಗಿತ್ತು.
ಅಂಗ್ಡಿಲ್ಲಿದ್ದೋನುದೆ ವ್ಯಾಪಾರ ಇಲ್ಲದ್ದ ಕಾರಣ ಆನು ಇದರ ಮಾರುತ್ತೆ. ಆನು ಕೊಟ್ಟ ಪೈಸೆ ಎನಗೆ ಸಿಕ್ಕೆಕ್ಕು ಹೇಳಿದ್ದಕ್ಕೆ ಏನೋ ಒಪ್ಪಂದಕ್ಕೆ ಬಂದು ಪೈಸೆ ಕೊಟ್ಟು ಬೀಗದ ಕೈ ತೆಕ್ಕೊಂಬದು ಹೇಳಿ ರಾಝಿ ಆಗಿತ್ತಡೋ.
ಸೆರೆ ನೋಡಿ ಉಳಿ ಮಡಗುಲೆ ಹೆರಟ ಪ್ರಮುಖ ಆ ಅಂಡಿಯೋನ ದಿನಿಗೇಳಿ ನಿನಗೆ ಆನು ಹೆಚ್ಚು ಪೈಸೆ ಕೊಡುತ್ತೆ ಹೇಳಿ ಒಪ್ಪಿಸಿದಡೋ.
ಮತ್ತೆ ರೆಕೋರ್ಡು ಅವನ ದಸ್ಕತ್ ತೆಕ್ಕೊಂಡ ಅಡೊ. ಈ ಜಾಗೆಯ ಎನಗೆ ಗೇಣಿಗೆ ಕೊಟ್ಟಿದವು ಹೇಳಿ ಕೋರ್ಟಿಂಗೆ ಅರ್ಜಿ ಮಾಡುಸಿಕ್ಕಿ ಅವನ ಹಕ್ಕಿನ ತಾನು ತೆಕ್ಕೊಂಡಡ.
ಅಂಬಗ ಕಾಲ ಬದಲಾಗಿ ಉಳುವವನೇ ಹೊಲದೊಡೆಯ ಹೇಳಿ ಕೆಲವು ಜನ ಅಂತೆ ಮಣೆಗಾರಂಗೆ ಪೈಸೆ ಕೊಟ್ಟು, ರಿಪೋರ್ಟ್ ಮಾಡುಸ್ಯೊಂಡು ಆರಾರ ಜಾಗೆಯ ತನ್ನದು ಹೇಳಿ ಮಾಡಿಗೊಂಡದು ತುಂಬ ಉದಾಹರಣೆ ಇದ್ದು.
ಕೋರ್ಟಿಲ್ಲಿಯೂ ತಹಶಿಲ್ದಾರಂಗೆ ಪೈಸೆ ಕೊಟ್ಟರೆ ಬೇಕಾದ ಹಾಂಗೆ ತೀರ್ಪು ಕೊಟ್ಟುಗೊಂಡಿಕ್ಕು. ಹೀಂಗೆಲ್ಲ ಜಾಗೆ ಸುಲಭಲ್ಲಿ ಪ್ರಮುಖಂಗೆ ಜಾಗೆಯೇ ಹೋತು.
ಇವನೂ ಹಾಂಗೆ ಪಾಪದ ವಕೀಲನ ಹಿಡುದ ಕಾರಣ ಇವನ ಮಾತು, ಸತ್ಯ ಮುಚ್ಚಿಹೋತು. ಇದರೆಡೆಲ್ಲಿ ಪ್ರಮುಖನೂ ಸತ್ತು ಹೋದ. ಜಾಗೆ ತೆಕ್ಕೊಂಡೋನೂ ಸತ್ತು ಹೋದ. ಜಾಗೆ ತೆಕ್ಕೊಂಡೋನ ಮಕ್ಕೊಗೆ ಹೀಂಗೊಂಡು ಜಾಗೆಯ ಜಗಳ ಇತ್ತು ಹೇಳುವದು ಮತ್ತೆ ಆರ್‍ಓ ಹೇಳಿ ಗೊಂತಪ್ಪಗ ಜಾಗೆ ಕೈ ಬದಲಿಗೊಂಡು ಹೋಗಿತ್ತು.

ಆದರೆ ಮಾವಿನ ಮರ ಮಾಂತ್ರ ಮೂಕಸಾಕ್ಷಿಯಾಗಿ ಈಗಳೂ ಇದ್ದು.

3 thoughts on “ಒಂದು ಮಾವಿನ ಮರದ ಸುತ್ತ

  1. ಮಾವನ ಕತೆ ಈಗಷ್ಟೆ ಓದಿದೆ. ಹೊಸ ನಮುನೆಯ ಕಥನ ಶೈಲಿ ಹೇಳಿ ಅನಿಸಿತ್ತು.
    ಲಾಯಿಕಿದ್ದು.

  2. ವಿಷಯವ ಸ್ವಾರಸ್ಯವಾಗಿ ಪ್ರಸ್ತುತಪದುಸುವ ಮಾವನ ಶೈಲಿ ಮನೋಹರವಾಗಿದ್ದು . ಮಾವನೇ ಕಣ್ಣೆದುರು ಕ್ಲಾಸಿಲ್ಲಿ ಪಾಠ ಮಾಡುವ ಹಾಂಗಿದ್ದು ಹೇಳಿ ಮೆಚ್ಚುಗೆ ಇತ್ಲಾಗಿಂದ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×