Oppanna.com

ನೀರುಳ್ಳಿ ಕಳ್ಳನ ಕಥೆ…

ಬರದೋರು :   ಜಾಣ    on   07/05/2012    19 ಒಪ್ಪಂಗೊ

ನಿಂಗೊಗೆ ಜಾಣನ ಅರಡಿಗೋ? ಓ ಇಲ್ಲೇ, ಜಾಲ್ಸೂರಿನ ಹತ್ರೆ ಇಪ್ಪದಿದಾ!
ಜಾಲ್ಸೂರಿನ ಚರ ನೇ ನಮ್ಮ ಬೈಲಿಲಿ “ಜಾ-ಣ“.
ಮೂಡಬಿದ್ರೆ ಕೋಲೇಜಿಲಿ ಪೀಯೂಶ ಮಥನ ಮಾಡಿಂಡಿಪ್ಪ ಮಾಣಿ ಕಲಿಯಲೆ ಮಾಂತ್ರ ಉಶಾರಿ ಅಲ್ಲ; ಮಾತುಗಾರಿಕೆ, ಪಂಚಾತಿಗೆ, ಸುದರಿಕೆ – ಎಲ್ಲದರ್ಲಿಯೂ – ಅವನ ಅಪ್ಪನ ಹಾಂಗೇ!
ಓಯ್, ನಮ್ಮ ಸುಭಗಣ್ಣನ ಮಗನೇ ಈ ಜಾಣ ಮಾಣಿ, ಗೊಂತಾತೋ?

ಈಗ ರಜೆಲಿ ಬೈಲಿಂಗೆ ಬಪ್ಪ ಯೇಚನೆಲಿ ಇದ್ದ°! ಶಾಲೆ ಇಪ್ಪಗಳೂ ಎಡಡೇಲಿ ಪುರ್ಸೊತ್ತು ಮಾಡಿಗೊಂಡು ಬೈಲಿಂಗೆ ಬಕ್ಕಿದಾ.
ತಾನು ಕಲ್ತುಗೊಂಡ ಹಲವು ನೀತಿಕತೆ, ಲೊಟ್ಟೆಕತೆಗಳ ಬೈಲಿಂಗೆ ಹೇಳುಗು; ಎಲ್ಲೋರುದೇ ಕೇಳುವೊ°..
ಎಲ್ಲೋರುದೇ ಅವನ ಪ್ರೀತಿಲಿ ಮಾತಾಡುಸಿ, ಯುವ ಪ್ರತಿಭೆಯ ಬೆಳಗುಸಿ.
ಬೈಲಿನ ಹೆರಿಯೋರ ಮಾರ್ಗದರ್ಶನ, ಆಶೀರ್ವಾದ ಈ ಮಾಣಿಯ ಮೇಗೆ ಸದಾ ಇರಳಿ – ಹೇಳ್ತದು ನಮ್ಮ ಆಶಯ.
~
ಗುರಿಕ್ಕಾರ°

ನೀರುಳ್ಳಿ ಕಳ್ಳನ ಕಥೆ…

ಒ೦ದಾನೊಂದು ಕಾಲಲ್ಲಿ ಒಂದು ಮಹಾ ಸಾಮ್ರಾಜ್ಯ ಇತ್ತಿದಡ; ಅಲ್ಲಿಯಾಣ ರಾಜ ಜನ೦ಗಳ ಲಾಯ್ಕಲ್ಲಿ ನೊಡಿಗೊ೦ಡು ಇತ್ತಿದ್ದನಡ.
ಹಾಂಗಿಪ್ಪ ಕಾಲಲ್ಲಿ ಆ ರಾಜನ ನೀರುಳ್ಳಿ ಗೊದಾಮಿಂಗೆ ಒಂದು ಕಳ್ಳ° ಕನ್ನ ಕೊರದು ಅಲ್ಲಿದ್ದ ನೀರುಳ್ಳಿಗಳಗ ಗೋಣಿಲಿ ತುಂಬುಶಿಗೊಂಡು ಹೆರಟತ್ತಡ.
ಅದು  ಹೆರ ಬಂದಪ್ಪಗ ರಾಜ ಭಟರು ಈ ಜನರ ಹೆರ ಬಪ್ಪಲೆ ಕಾದುಗೊಂಡು ಇಪ್ಪಹಾಂಗೆ ನಿಂದುಗೊಂಡಿದ್ದವು.

ಕದ್ದ ಸಾಮಾನು ಸಮೇತ ಸಿಕ್ಕಿ ಬಿದ್ದ ಮೆಲೆ ಲೊಟ್ಟೆ ಹೇಳಿ ತಪ್ಪುಸಿಗೊಂಬಲೆ ಎಡಿಯ ಇದಾ…
ಆ ಕಳ್ಳನ ರಾಜನ ಎದುರಂಗೆ ತೆಕ್ಕೊಂಡು ಬಂದವು.  ರಾಜ ತುಂಬ ಬುಧ್ಧಿವಂತ, ಶಿಸ್ತಿನವ.

ರಜ್ಜ ಹೊತ್ತು ಆಲೋಚನೆ ಮಾಡಿಕ್ಕಿ ಆ ಕಳ್ಳಂಗೆ ಒಂದು ಶಿಕ್ಶೆ ಕೊಟ್ಟ.
ಶಿಕ್ಷೆ ಎಂತರ?
ಕಳ್ಳಂಗೆ ಮೂರು ಆಯ್ಕೆಗಳ ಕೊಟ್ಟ.

  • ಮೊದಲ್ನೆಯದು ಎಂತರ ಹೇದರೆ ಅವ ನೀರುಳ್ಳಿ ಕದ್ದದಕ್ಕಾಗಿ ನೂರು ನೀರುಳ್ಳಿ ಒಂದೇ ಸರ್ತಿಗೆ ತಿನ್ನೆಕ್ಕು.
  • ಇಲ್ಲದ್ರೆ ಸಪೂರ ಬಳ್ಳಿಯ ಹಾಂಗಿಪ್ಪ ಜಬ್ಕಿನ ಕೋಲಿಲಿ ನೂರು ಪೆಟ್ಟು ತಿನ್ನೆಕ್ಕು.
  • ಇದು ಎರಡೂ ಅಲ್ಲದ್ರೆ ನೂರು ಚಿನ್ನದ ವರಹಂಗಳ ದಂಡ ಆಗಿ ಕೊಡೆಕ್ಕೂದು ಹೇಳಿದ.

ಕಳ್ಳಂಗೆ ಮೊದಲ್ನೇದು ತುಂಬ ಸುಲಾಬ ಹೇದು ಕಂಡತ್ತು; ಅವ ನೀರುಳ್ಳಿ ತಪ್ಪಲೆ ಹೇಳಿದ.
ಸೈನಿಕರು ತಂದ ನೀರುಳ್ಳಿ ಬಯ೦ಕರ ಘಾಟಿ೦ದು- ಅದರ ಘಾಟಿಂಗೆ ಎಲ್ಲರ ಕಣ್ಣು, ಮೂಗಿಲಿ ನೀರು ಬಪ್ಪಲೆ ಸುರು ಆತು!
ಕಳ್ಳ ಮೊದಲು ಒ೦ದು ಹತ್ತು ಹೇಂಗಾರು ಮಾಡಿ ತಿಂದ. ಮತ್ತೆ ಎಡಿಗಾಗದ್ದೆ ಅಲ್ಲಿಯೆ ಬೋದ ತಪ್ಪಿ ಬಿದ್ದ! ನೀರು ತಳುದು ಏಳುಸಿಯಪ್ಪಗ “ಇನ್ನು ಎನಗೆ ನೀರುಳ್ಳಿ ತಿಂಬಲೆ ಎಡಿಯ ಆನು ಚಾಟಿ ಪೆಟ್ಟು ತಿಂಬಲೆ ತಯಾರಿದ್ದೆ“ಹೇದು ಹೇಳಿದನಡ.

ಕಳ್ಳ ಹೇಳಿದಾಂಗೆ ಅವ೦ಗೆ ಚಾಟಿ ಪೆಟ್ಟು ಕೊಡುವವು ಬಂದವು.
ಒಂದು ಇಪ್ಪತ್ತು ಪೆಟ್ಟು ತಿಂದಿದನೊ ಇಲ್ಲೆಯೊ “ಎನ್ನಂದೆಡಿಯ ಇನ್ನು ಪೆಟ್ಟು ತಿಂಬಲೆ. ಆನುಬೇಕಾರೆ ನಿಂಗ ಹೇಳಿದ ದಂಡವ ಪೂರ್ತಿಯಾಗಿ ಕೊಡ್ಲೆ ತಯ್ಯಾರಿದ್ದೆ” ಹೇಳಿದನಡ.
ರಾಜಭಟಂಗೊ ಕಳ್ಳನ ಕೈಂದ ಪೂರ್ತಿ ಪೈಸೆ ವಸೂಲಿ ಮಾಡಿದ ಮೇಲೆಯೇ ಕಳ್ಳನ ಬಿಟ್ಟವಶ್ಟೆ.

~

ತನಗೆ ಸಿಕ್ಕಿದ ಶಿಕ್ಶೆಲಿ ಮೂರು ಆಯ್ಕೆಗ ಇದ್ದರುದೆ ಎಲ್ಲಾ ಮೂರು ಶಿಕ್ಶೆಯ ಅನುಭವಿಸಿ ಆ ಸಾಮ್ರಾಜ್ಯಲ್ಲಿ ಎಲ್ಲರೂ ಅವನ ಅದರ ನೊಡಿ ನೆಗೆ ಮಾಡುವ ಹಾಂಗೆ ಆತು ಈ ಕಳ್ಳನ ಕತೆ.

ಈ ಕಥೆಯ ಒಪ್ಪ ನೀತಿ: ಯಾವುದೇ ಕೆಲಸ  ಮಾಡುವ ಮೊದಲು ನಮ್ಮ ಸಾಮರ್ಥ್ಯವ ನಾವು ತಿಳುಕ್ಕೊಳ್ಳಕ್ಕಾದ್ದು ಬಹು ಮುಖ್ಯ

ವಿ.ಸೂ:

ಇದಾನು ಬೈಲಿಲಿ ಬರದ ಮೊದಲ್ನೆ ಶುದ್ದಿ . ಎಂತಾರು ತಪ್ಪಾಗಿದ್ದರೆ ಎನಗೊ೦ದು ಒಪ್ಪಕೊಡಿ…..!
ಇನ್ನೊಂದು ವಿಶಯ  ಈ ಕಥೆ ಎನ್ನ ಸ್ವಂತದ್ದು ಅಲ್ಲ; ಸಣ್ಣ ಕ್ಲಾಸಿಲಿಪ್ಪಗ ಎಲ್ಲಿಯೊ ಓದಿದ ನೆನಪ್ಪು!

19 thoughts on “ನೀರುಳ್ಳಿ ಕಳ್ಳನ ಕಥೆ…

  1. ಜಾಣನು ಹೇಳಿದ ಕತೆಗಳು.. ರೈಸಿದ್ದಯ್ಯಾ!

  2. ಪ್ರೋತ್ಸಾಹಿಸಿದ ಎಲ್ಲೋರಿಂಗೂ ಧನ್ಯವಾದಂಗೊ°……

  3. ಜಾಣಂಗೆ ಸ್ವಾಗತ 🙂
    ಕಥೆ ಲಾಯ್ಕಾಯ್ದು, ಇನ್ನುದೇ ಹೀಂಗಿದ್ದ ಹಲವು ನೀತಿ ಕಥೆಗೊ ಬರಲಿ 🙂

  4. ಜಾಣಂಗೆ ಬೈಲಿಂಗೆ ಆತ್ಮೀಯ ಸ್ವಾಗತ.
    ಕೇಳಿದ ಕತೆ ಆದರೂ ಅದರ ನಿರೂಪಣೆ ಲಾಯಿಕ ಆಯಿದು ಹೇಳಿ ಒಂದೊಪ್ಪ.
    ಕತೆಯೊಟ್ಟಿಂಗೆ ನೀತಿ ಹೇಳಿದ್ದಕ್ಕೆ ಇನ್ನೊಂದು ಒಪ್ಪ.
    ಬರೆತ್ತಾ ಇರು. ಬೈಲಿಂಗೆ ಬತ್ತಾ ಇರು

  5. ಜಾಣಂಗೆ ಸ್ವಾಗತ ಬೈಲಿಂಗೆ…
    ಕತೆ ರೈಸಿದ್ದಾತೊ
    ಹೀಗೆ ಬೈಲಿಲಿ ಬರಲಿ ಕಥೆಗೊ

  6. ಆ ಕಳ್ಳ° ನಿಜವಾಗಿ ‘ಜಾಣ’ನೇ.

    ಸುರುವಾಣದ್ದನ್ನೇ ಆಯ್ಕೆ ಮಾಡುವುದರಿಂದಾಗಿ ತಿಂಬಲೂ ಆತು, ಹೊಟ್ಟೆಯೂ ತುಂಬುತ್ತು ಲೆಕ್ಕ ಹಾಕಿದ°. ಇಲ್ಲದ್ರೆ ನಾಕು ಜೆನರ ಎದುರು ಪೆಟ್ಟು ತಿಂತ ನರಕ ಎಂತಕೆ., ಅಲ್ಲಾ., ಎಲ್ಲಿಂದಲೋ ಜಾರ್ಸಿದ ನೂರು ವರಹ ಇಲ್ಲಿ ಕಟ್ಟಿ ಕಳಕ್ಕೊಂಬದೆಂತಕೆ.

    ಏನೋ ಅಂದಿಂಗೆ ಕಳ್ಳನ ದುರದೃಷ್ಟ ಅಂದಿಂಗೆ. ಕೆಣಿ ನಡದತ್ತಿಲ್ಲೆ ಪಾಪಿಮಗಂಗೆ!.

    ಅದು ಇರ್ಲಿ., ಈ ಜಾಣಂಗೆ ದೊಡ್ಡಜ್ಜನ, ದೊಡ್ಡಮಾವನ ಸಾಜ ಇದ್ದಪ್ಪೊ.

    ಜಾಣನ ಬರವ ಸಾಮರ್ಥ್ಯವ ಮೆಚ್ಚಿ -‘ಚೆನ್ನೈವಾಣಿ’

    1. ಅದು ಹಾಂಗಲ್ಲ ಭಾವಾ… ಮುಂದಂಗೆ ಅನುಭವಕ್ಕೆ ಇರಲಿ ಹೇಳಿ ಆ ಕಳ್ಳ ಎಲ್ಫ್ಲಾ ಶಿಕ್ಷೆಯನ್ನೂ ಅನುಭವಿಸಿದ್ದಾಯಿಕ್ಕು…

  7. ಲಾಯ್ಕ ಆಯಿದು

  8. ಹೋಯ್ ಭಾವಾ,
    ಕಥೆ ಲಾಯ್ಕಿದ್ದು ಆತೋ?
    ಇದಾ ಒಪ್ಪ ಕೊಟ್ಟಿದೆ – ಹಾಂಗೆ ಹೇಳಿಯೊಂಡು ತಪ್ಪಿದ್ದು ಹೇಳಿ ಅರ್ಥ ಅಲ್ಲ 😉
    ಒಪ್ಪ ಆಯಿದು 🙂

  9. ಇವ ಜಾಣನೇ……………………

  10. ಜಾಣ ಹೇಳಿದ ಕಥೆಲಿ ಏವ ತಪ್ಪುದೆ ಇಲ್ಲೆ. ಆದರುದೆ ಒಪ್ಪ ಒಂದು ಕೊಡ್ತಾ ಇದ್ದೆ. ಕಥೆ ಈಗಾಗಲೇ ಕೇಳಿದ್ದಾದರೂ ಒಳ್ಳೆ ಸಂದೇಶ ಇಪ್ಪಂತಹದ್ದು. ಬೈಲಿಂಗೆ ಜಾಣನ ಪ್ರವೇಶ ಲಾಯಕಾಯಿದು. ಸುಭಗಣ್ನನ ಹಾಂಗೇ ಬೈಲಿಲ್ಲಿ ರೈಸುತ್ತಾ ಇರಳಿ.

    1. ಮಾವಾ°,
      ಬೊಳುಂಬುಮಾವನ ಮಗ, ಬೊಳುಂಬು ಭಾವ ಯೇವಗ ಬಕ್ಕು ಬೈಲಿಂಗೆ?
      ಅವಂಗೆ ಇಂಗ್ಳೀಶು ಕಲಿಯಲೆ ಬೇಕಾರೆ ಎನ್ನ ಶುದ್ದಿಗಳೇ ಇದ್ದು. 😉
      ಬೇಗ ಕಳುಸಿ ಆತೋ?

  11. ಇದು ಕಣ್ಣೀರು ಬರ್ಸುವ ಕತೆಯೇ, ನೀರುಳ್ಳಿದಲ್ಲದೋ..?
    ಜಾಣನ ಕತೆ ಲಾಯಕಿದ್ದು.
    {ಸಣ್ಣ ಕ್ಲಾಸಿಲಿಪ್ಪಗ ಎಲ್ಲಿಯೊ ಓದಿದ ನೆನಪ್ಪು}…ಸಣ್ಣಾಗಿಪ್ಪಗ ಶಾಲೆ ಪುಸ್ತಕ ತಪ್ಪುಸಿ ಗುಟ್ಟಿಲಿ ಕತೆ ಪುಸ್ತಕ ಓದಿ, ಮತ್ತೆ ಸಿಕ್ಕಿ ಬಿದ್ದು “”ನೂರು ನೀರುಳ್ಳಿ ತಿಂಬ ” ಶಿಕ್ಷೆ ಆಯ್ದಿಲೆನ್ನೆ ಜಾಣಂಗೆ.

    1. ಹೇಂಗೆ ಸಿಕ್ಕಿ ಬೀಳುದು ಮಾವ°……
      ಕಥೆ ಪುಸ್ತಕ ಓದುದು ಶಾಲೆ ಪುಸ್ತಕದ ಎಡೆಕ್ಕಿಲಿ ಮಡುಗಿ ಅಲ್ಲದೋ…..

      1. ಹೋ, ಜಾಣಣ್ಣನೂ ಬೈಲಿಂಗೆ ಬಂದನೋ, ಗಮ್ಮತ್ತಾತು.
        ಕತೆ ಓದಿಂಡಿದ್ದ ಹಾಂಗೇ ಎನಗೂ ಕಣ್ಣೀರು ಬಂತು; ನೀರುಳ್ಳಿಂದಾಗಿ! 🙁

        ಹಾಂಗೆ ಹೇಳಿಗೊಂಡು, ನೀರುಳ್ಳಿಯ ಬದಲು “ಬೆಳ್ಳುಳ್ಳಿ” ತಿಂಬದಾಗಿದ್ದರೆ ಟೀಕೆಮಾವನ ಒಪ್ಪವೇ ಬತ್ತಿತಿಲ್ಲೆ ಶುದ್ದಿಗೆ.
        ಒಟ್ಟು ಕಷ್ಟಪ್ಪ, ಬೈಲಿಲಿ.

        ಪಾಟಪುಸ್ತಕದ ಎಡೆಲಿ ಕತೆಪುಸ್ತಕ ಓದುದರಲ್ಲಿಯೂ ಜಾಣನೆಯೋ ನೀನು?
        ಬೈಲಿಲಿ ಕೆಲವು ಜೆನ ಮಾಷ್ತ್ರಕ್ಕೊ ಇದ್ದವು, ಜಾಗ್ರತೆ ಮಾಡಿಗೊ. 😉

        1. ಕಳ್ಳಂಗೆ ಬೆಳ್ಳುಳ್ಳಿ ಒಂದೊಂದೇ ಚೊಲ್ಲಿ ತಿಂಬಲೆ ಸುಮಾರು ಹೊತ್ತು ಅಕ್ಕು ಹೇದು ನೀರುಳ್ಳಿ ತಿಂಬಲೆ ಹೇಳಿದ್ದು…;)

  12. ಜಾಣ ಜಾಣನ ಹಾಂಗೆ ಬಂದು ಇಲ್ಲಿ ಕಥೆ ಹೇಳಿದ್ದು ಭಾರಿ ಕೊಶಿ ಆತಿದ. ಈ ಕಥೆಯ ಆನು ಮಗಂಗೆ ಹೇಳ್ತೆ….. ಒಳ್ಳೇ ಕಥೆ ಹೇಳಿದ್ದಕ್ಕೆ ಧನ್ಯವಾದಂಗೊ…..

    ಇನ್ನೂ ಹೀಂಗಿರ್ತ ಕಥೆಗ ಬೈಲಿಲಿ ಬತ್ತಾ ಇರಲಿ ……………..

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×