Oppanna.com

ಒಂದು ಪ್ರಕರಣದ ಸುತ್ತ -೭ : ರಮ್ಯ ನೆಕ್ಕರೆಕಾಡು

ಬರದೋರು :   ಶರ್ಮಪ್ಪಚ್ಚಿ    on   02/07/2020    2 ಒಪ್ಪಂಗೊ

ಒಂದು ಪ್ರಕರಣದ ಸುತ್ತ -೭ 

-ರಮ್ಯ ನೆಕ್ಕರೆಕಾಡು

ಆ ಕೆಟ್ಟ ವಾಸನೆಯ ಕೇಳಿ ಮೂರು ಜನಕ್ಕುದೇ ಗಾಬರಿ ಆತು. ಎಂತ ಅನಾಹುತ ಆಗಿಕ್ಕಪ್ಪಾ..?? ಹೇಳಿ ಆತು. ಕೇಶವಂಗೆ ಕಣ್ಣನೀರು ತಡದ್ದಿಲ್ಲೆ..” ಭಾವ… ಅಂಜಲಿ..” ಹೇಳಿ ಕೂಗುಲೆ ಸುರು ಮಾಡಿದ. ಶರತ್ಚಂದ್ರ “ಎಂತಕುದೇ ಒಳ ಹೋಪ..” ‌ಹೇಳಿಕ್ಕಿ ಮೂಗಿಂಗೆ ಒಂದು ಚೂರುದೇ ಗಾಳಿ ಹೋಪಲೆ ಎಡೆ ಬಿಡದ್ದೇ ಗಟ್ಟಿ ಮುಚ್ಚಿ ಹಿಡ್ಕೊಂಡು ಒಳ ಹೋದವು. ಚಾವಡಿ ಹತ್ರೆ ಇಪ್ಪ ಒಂದು ಕೋಣೆಗೆ ಹೊಕ್ಕಿಯಪ್ಪದ್ದೇ, ಶರತ್ಚಂದ್ರ” ಓಹ್… ನೋ…” ಹೇಳಿ ತಲೆಂದ ಟೊಪ್ಪಿ ತೆಗದು ಕೈಲಿ ಹಿಡ್ಕೊಂಡದು ಅಲ್ಲಿ ಒಂದು ಹೆಣ ಇತ್ತು ಹೇಳ್ತದಕ್ಕೆ ಸೂಚನೆ ಆತು.
“ಗೋಪಾಲಣ್ಣ…” ಹೇಳಿ ಕೇಶವ ಆ ಹೆಣವ ನೋಡಿ ಗೋಡೆಗೆರಗಿದ.  ಕೋಣೆಯ ಮಂಚದ ಮೇಲೆ ಗೋಪಾಲಣ್ಣನ ಹೆಣ ಅನಾಥವಾಗಿ ಬಿದ್ದಿತ್ತು. ಗೋಪಾಲಣ್ಣನ ದೇಹ ಕಪ್ಪು ಕಪ್ಪಾಗಿ ಬೀಗಿ ಹೋಗಿತ್ತು. ಹಣೆ ಮೇಲೆ ಆದ ಗಾಯ ಸರೀ ಕಂಡುಗೊಂಡಿತ್ತು. ಗಾಯದ ಮೇಲೆಲ್ಲಾ ನೆಳಮುತ್ತಿಗೊಂಡಿತ್ತು. ಮಾರಿನೆಳವುಗಳ ಹರಟೆ ಮನೆಯ ನಿಶ್ಶಬ್ದ ಅಪ್ಪಲೆ ಬಿಟ್ಟಿದೇಲ್ಲೆ. ಈ ಚಿತ್ರಣ ಕಂಡ ಮೂರು ಜನಕ್ಕುದೇ ಹೊಟ್ಟೆತೊಳಸಿದ ಹಾಂಗಾಗಿ ನೆತ್ತರೆಲ್ಲ ತಣ್ಣಂಗಾದ ಅನುಭವ ಆತು. ಕೇಶವಂಗೆ ಆಪ್ತನ ಸಾವಿನ ಸ್ವೀಕರ್ಸುಲೆ ಎಡಿಗಾತಿಲ್ಲೆ. ಶರತ್ಚಂದ್ರಂಗೆ ಎಲ್ಲಾ ಒಗಟಿನ ಹಾಂಗಾಗಿ ತಲೆ ಚಿಟ್ಟು ಹಿಡ್ದತ್ತು.” ಒಂದರಮೇಲೊಂದು ಶಾಕ್!! ನಿನ್ನೆ ಉದಿಯಪ್ಪಗ ನೋಡ್ರೆ ಅಂಜಲಿ ನಾಪತ್ತೆ.. ಇಂದು ಮಧ್ಯಾಹ್ನ ಆಯ್ಕಾರೆ ಗೋಪಲಣ್ಣನ ಶವ!! ಟೋಟಲೀ ಕನ್ಫ್ಯೂಸ್ಡ್!! ಇದೀಗ ಕಾಂಬಲೆ ಕೊಲೆ ಆದಾಂಗೆ ಇದ್ದರುದೇ ಅದು ನಿಂಗಾಂಟಾಯ್ಕಾರೆ ಪೋಸ್ಟ್ ಮಾಟರ್ಮ್ ಆಯೆಕ್ಕು.. ಹಣೆಗೆ ಆದ ಗಾಯಂದಾಗಿ ಮತ್ತೆ ದೇಹ ಸೆಕೆಗೆ ಬೆಂದಾಂಗೆ ಆದ ಕಾರಣ ಇಷ್ಟು ವಾಸನೆ ಬಪ್ಪದಾದಿಕ್ಕು.. ನಾಗರಾಜ ಆದಷ್ಟು ಬೇಗ ಪೋಸ್ಟ್ ಮಾಟರ್ಮ್ಂಗೆ ವ್ಯವಸ್ಥೆ ಮಾಡು.. ಆಂಬುಲೆನ್ಸ್ ಬಪ್ಪಲೆ ಹೇಳು” ಹೇಳಿಕ್ಕಿ ಎಂತಾರು ಕ್ಲೂ ಸಿಕ್ಕುತ್ತಾ ಹೇಳಿ ಮನೆ ಇಡೀ ಹುಡ್ಕಿದ. ಗೋಪಾಲಣ್ಣ ಸತ್ತ ಕೋಣೆಯ ಗೋಡೆಲಿ ಸಣ್ಣಕ್ಕೆ ನೆತ್ತರಿನ ಕಲೆ ಬಿಟ್ಟರೆ ಮತ್ತೆಂತದೂ ಸಿಕ್ಕಿದ್ದಿಲ್ಲೆ.
ಶರತ್ಚಂದ್ರ ಗೇಟಿನತ್ರೆ ನಿಂದುಗೊಂಡು,” ಭಾವ… ಈ ಗೋಪಾಲಣ್ಣ ಜನ ಹೇಂಗೆ?? ಹೆಂಡತಿ ಮಕ್ಕ..” ಹೇಳಿ ಕೇಶವನತ್ರೆ ಕೇಳಿದ. ಕೇಶವಂಗೆ ಇನ್ನುದೇ ಆಘಾತಂದ ಹೆರ ಬಪ್ಪಲೆ ಎಡಿಗಾಗದ್ರುದೇ ಸುದಾರ್ಸಿಗೊಂಡು,” ಗೋಪಾಲಣ್ಣ ಎನಗೆ ದೂರಂದ ಸಂಬಂಧ.. ಈಗ ಯಾವ ಸಂಬಂಧಿಕರೂ ಇಲ್ಲೆ ಇವಂಗೆ.. ಸಂಬಂಧಲ್ಲಿ ದೂರ ಆದರುದೇ ಎನಗೆ ಮಾತ್ರ ಇವ ಭಾರೀ ಆಪ್ತ.. ಹೆಂಡತಿ ಎರಡು ವರ್ಷದ ಹಿಂದೆ ಸೀಕು ಬಂದು ಸತ್ತತ್ತು.. ಒಬ್ಬ ಮಗ ಇದ್ದ. ಅವ ಫಾರಿನಿಲಿ ಕೆಲಸಲ್ಲಿಪ್ಪದು. ನೆರೆಕರೆಯವತ್ರೆ ಒಬ್ಬನತ್ರೂ ಮಾತಿತ್ತಿಲ್ಲೆ.. ಆನು ಹೇಳ್ರೆ ಸ್ವಂತ ತಮ್ಮನಷ್ಟು ಪ್ರೀತಿ… !!” ಹೇಳಿ ಕಣ್ಣನೀರು ಹಾಕಿದ. ” ಇಲ್ಲಿ ಹತ್ತರೆ ಆರಿಂದೂ ಮನೆ ಇಲ್ಲೆ.. ಆರೂ ಹೋಗಿ ಬಪ್ಪವು ಇಲ್ಲದ್ದ ಕಾರಣ ಸತ್ತದು ಆರಿಂಗೂ ಗೊಂತಾಗಿರ… ಆದರೆ ಎಂತಾದ್ದಾದಿಕ್ಕು.. ಅಂಜಲಿಯ ಪ್ರಕರಣಕ್ಕೂ ಈ ಸಾವಿಂಗುದೇ ಎಂತಾರು ಸಂಬಂಧ ಇಕ್ಕಾ..??” ಹೇಳಿಗೊಂಡು ಸುತ್ತಮುತ್ತ ನೋಡುವಗ ದೊಡ್ಡಕ್ಕೆ ಶಬ್ಧ ಮಾಡಿಗೊಂಡು ಆಂಬುಲೆನ್ಸ್ ಬಂತು. ಗೋಪಲಣ್ಣನ ಹೆಣವ ತೆಕ್ಕೊಂಡು ಕಣ್ಣು ಮುಚ್ಚಿ ಒಡೆಯೆಕ್ಕಾರೆ ಹೋಗಿದೇ ಆತು. ಅಷ್ಟೊತ್ತಿಂಗೆ ಒಂದು ಆಳು ಅಲ್ಲಿಗೆ ಬಂದು ಎಂತಾತು ಹೇಳಿ‌ ಕೇಳಿತ್ತು. ಎಲ್ಲ ವಿಷಯ ತಿಳ್ಕೊಂಡು,” ಇಷ್ಟೆಲ್ಲಾ ಆದರುದೆ ಎನಗೆ ಗೊಂತಾಯ್ದಿಲ್ಲನ್ನೆ.. ಆನೊಂದೊಂದರಿ ಈ ದಾರಿಲ್ಯಾಗಿ ಬತ್ತೆ… ಇಂದು ಉದಿಯಪ್ಪಗಳುದೇ ಬೈಂದೆ..” ಹೇಳಿಯಪ್ಪಗ ಶರತ್ಚಂದ್ರ,” ಇಲ್ಲಿಗೊರೆಗೆ ಬಡ್ಕೊಂಡಿತ್ತ ನಾತ ನಿನಗೆ ಬೈಂದಿಲ್ಯಾ..?” ಹೇಳಿ ಆಶ್ಚರ್ಯಲ್ಲಿ ಕೇಳಿದ. ಅದಕ್ಕೆ ಆ ಆಳು,” ಇದೊಂದು ಕೊಳ್ಳೆಗೇರಿ.. ಒಂದೊಂದರಿ ಫಾರ್ಮಿಲಿ ಸತ್ತ ಕೋಳಿಗಳ ಓ ಅಲ್ಯೊಂದಿಕ್ಕೆ ತಂದು ಹಾಕುತ್ತವು. ಹಾಂಗಾಗಿ ಎಂಗೋಗೆ ಈ ವಾಸನೆ ಯಾವ ಲೆಕ್ಕವುದೇ ಅಲ್ಲ..” ಹೇಳಿಗೋಂಡು ಸೀದಾ ಹೋತು.
“ಎಂತಾದಿಕ್ಕು ಹೇಳಿ ಊಹಿಸೆಕ್ಕಾರೆ ನಾಳೆ ಪೋಸ್ಟ್ ಮಾಟರ್ಮ್ ರಿಪೋರ್ಟ್ ಬಂದಾಯೆಕ್ಕಷ್ಟೆ… ಮೊದಲೇ ಗೋಪಾಲಣ್ಣನ ಶವದ ಪರಿಸ್ಥಿತಿ ಭಾರೀ ಶೋಚನೀಯ ಆಯ್ದು.. ಇನ್ನು ಅವರ ಮಗನ ದಿನಿಗೇಳಿ ಅವ ಬಂದು ಇದೆಲ್ಲ ಅಪ್ಪಹೋಪ ವಿಷಯ ಅಲ್ಲ… ಫೋನು ಮಾಡಿ ತಿಳಿಶುವ ವ್ಯವಸ್ಥೆ ಮಾಡುವ…” ಹೇಳಿಕ್ಕಿ ಶರತ್ಚಂದ್ರ ಕೇಶವನೊಟ್ಟಿಂಗೆ ಮನೆಗೆ ಹೋದ. ವಿಷಯ ಗೊಂತಾಗಿ ವೀಣಾಂಗು ಶಾಂತಗೂ ಕೈ ಕಾಲು ಹಂದದ್ದಾಂಗಾತು.
” ಇಲ್ಲಿ ಎಂತಾವ್ತಾ ಇದ್ದು?? ಗೋಪಾಲಣ್ಣನ ಸಾವು ಹೇಂಗಾತು?? ಅಂಜಲಿ ಎಂತಾತು..??” ಹೇಳಿ ಆ ದಿನ ಎಲ್ಲರಿಂಗೆ ಎಲ್ಲವುದೇ ಪ್ರಶ್ನೆಯಾಗಿಯೇ ಉಳ್ಕೊಂಡತ್ತು. ಆ ಇರುಳು ಎಲ್ಲರೂ ಕಲ್ಲಿನ ಶಿಲೆಗಳ ಹಾಂಗೆ ಕೂದಲ್ಲಿಂದ ಹಂದಿದ್ದವೇಲ್ಲೆ. ಕೇಶವ ಗೋಪಾಲಣ್ಣನ ಹೆಣವ ತುಂಬಾ ಹತ್ತರಂದ ನೋಡಿದ ಕಾರಣ ಕಣ್ಣು ಮುಚ್ಚೆರೆ ಬಿಟ್ಟರೆ ಪೂರಾ ಹೆಣವೇ ಕಣ್ಣೆದುರಿಂಗೆ ಬಂದುಗೊಂಡಿತ್ತು. ಪೋಲಿಸ್ ಆದ ಕಾರಣ  ಶರತ್ಚಂದ್ರಂಗೆ ಈ ಅನುಭವ ಎಂತ ಹೊಸತ್ತು ಹೇಳಿ ಆಯ್ದಿಲ್ಲೆ.
ಮರುದಿನ ಉದಿಯಪ್ಪಗ ಪೇದೆ ನಾಗರಾಜ ಗೋಪಾಲಣ್ಣನ ಪೋಸ್ಟ್ ಮಾಟರ್ಮ್ ರಿಪೋರ್ಟ್ ತೆಕ್ಕೊಂಡು ಮನೆಗೆ ಬಂತು. ಆ ರಿಪೋರ್ಟ್ ನ ಪ್ರಕಾರ ನಿನ್ನೆ ಸುಮಾರು ಐದುವರೆಯ ಹೊತ್ತಿಂಗೆ ಗೋಪಾಲಣ್ಣ ಸತ್ತು ನಲವತ್ತೆಂಟು ಗಂಟೆ ಆವ್ತು. ತಲೆಗೆ ಬಿದ್ದ ಬಲವಾದ ಪೆಟ್ಟಿಂಗೆ ಜೀವ ಹೋದ್ದು ಹೇಳಿ ಗೊಂತಾವ್ತು. ಶರತ್ಚಂದ್ರ ಕೇಶವನತ್ರೆ,” ಭಾವ… ಮೊನ್ನೆ ಅಂಜಲಿ ಹೊತ್ತಪ್ಪಗ ಮನೆಗೆ ಬಪ್ಪಗ ಎಷ್ಟೊತ್ತಾಯ್ದು..??” ಹೇಳಿ ಕೇಳಿಯಪ್ಪಗ ಕೇಶವ,” ಆರು ಗಂಟೆ ಅಪ್ಪಗ ಮನೆಗೆ ಎತ್ತಿದ್ದದು..” ಹೇಳಿದ. ಶರತ್ಚಂದ್ರ ದೀರ್ಘವಾಗಿ ಉಸುಲು ಬಿಟ್ಟು,” ಸೋ… ಇಟೀಸ್ ಕನ್ಫರ್ಮ್….. ಆನು ನಿಂಗಳ ಎದುರೆ ಹೀಂಗೆ ಹೇಳುದು ಸರಿಯಲ್ಲ… ಆದರೆ ಇದರಲ್ಲಿ ಡೌಟೇ ಇಲ್ಲೆ. ಅಂಜಲಿ ಅರವಿಂದನ ಮೀಟ್ ಆಗಿ ಸುಮಾರು ಐದೂವರೆಯ ಹೊತ್ತಿಂಗೆ ಗೋಪಾಲಣ್ಣನಲ್ಲಿಗೆ ಹೋತು. ಒಂದಾ ಅರವಿಂದ ಅಂಜಲಿಯ ಮದುವೆ ಅಪ್ಪಲೆ ಒಪ್ಪಿಗೊಂಡ ಹೇಳಿ ಇದಕ್ಕೆಲ್ಲಾ ಕಾರಣ ಆದ ಗೋಪಾಲಣ್ಣನ ತಲೆಯ ಗೋಡೆಗೆ ಹೆಟ್ಟಿಸಿ ಅಥವಾ ಗೋಡೆಗೆ ನೂಕಿ ಬೇಕೋಳಿಯೇ ಕೊಂದದು. ಇಲ್ಲದ್ರೆ ಉದ್ದೇಶಪೂರ್ವಕವಾಗಿ ಅಲ್ಲದ್ರೂ ಎಂತಾರು ಸಣ್ಣಕ್ಕೆ ಗಲಾಟೆ ಆಗಿ ಗೊಂತಾಗದ್ದೆ ಗೋಪಾಲಣ್ಣನ ಕೊಂದಿಪ್ಪಲೂ ಸಾಕು…” ಹೇಳಿ ಬಾಯಿಮುಚ್ಚೆಕ್ಕಾರೆ, ಶಾಂತ” ಚಂದ್ರ… ನಿನಗೆ ಈ ಕೇಸು ನಿಭಾಯಿಸುಲೆ ಎಡಿಗಾಗದ್ರೆ ತೊಂದರಿಲ್ಲೆ.. ಆದರೆ ಅಂಜಲಿಯೇ ಕೊಲೆಗಾರ್ತಿ ಹೇಳಿ ಎನ್ನ ಮಗಳ ಮೇಲೆ ಸುಳ್ಳು ಆರೋಪ ಹಾಕೆಡ..” ಹೇಳಿ ಶರತ್ಚಂದ್ರನ ಮುಂದೆ ಕೈ ಮುಗುದು ಕೂಗುಲೆ ಸುರು ಮಾಡಿತ್ತು. ಹೆತ್ತ ಕರುಳು ಮಗಳ ಕೊಲೆಗಾರ್ತಿ ಹೇಳಿ ಒಪ್ಪಿಗೊಂಬಲೆ ತಯಾರಿತ್ತಿಲ್ಲೆ. ಸಾಕ್ಷಿ ಅಂಜಲಿಯ ಹೊಡೆಂಗೆ ಬೆರಳು ಮಾಡಿ ತೋರ್ಸುತ್ತ ಕಾರಣ ಶರತ್ಚಂದ್ರ, ವೀಣಾ,ನಾಗರಾಜಂಗೆ ಒಪ್ಪಿಗೊಳ್ಳದ್ದೆ ಬೇರೆ ವಿಧಿ ಇತ್ತಿಲ್ಲೆ. ಕೇಶವಂಗೆ ಯಾವುದು ಸತ್ಯ ಯಾವುದು ಸುಳ್ಳು ಹೇಳಿ ನಿರ್ಧಾರಕ್ಕೆ ಬಪ್ಪಲೇ ಎಡಿಗಾಯ್ದಿಲ್ಲೆ.. ಒಟ್ಟಾರೆ ಅಂಜಲಿ ಗೋಪಾಲಣ್ಣನ ಕೊಲೆ ಮಾಡಿ ಎಲ್ಲಿಗೆ ಹೋತು ಹೇಳ್ತದು ಶರತ್ಚಂದ್ರಂಗೆ ಯಕ್ಷಪ್ರಶ್ನೆ ಆತು…

– ಮುಂದುವರೆತ್ತು…>>>>

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)

2 thoughts on “ಒಂದು ಪ್ರಕರಣದ ಸುತ್ತ -೭ : ರಮ್ಯ ನೆಕ್ಕರೆಕಾಡು

  1. ಒಳ್ಳೆ ಕುತೂಹಲ ಹುಟ್ಟುಸಿತ್ತು ಕತೆ. ಹವ್ಯಕಲ್ಲಿ ಪತ್ತೇದಾರಿ ಕತೆ ಓದುತ್ತದು ಆನು ಇದು ಸುರು. ತುಂಬಾ ಲಾಯಕಲ್ಲಿ ಹೋವ್ತಾ ಇದ್ದು ಧಾರಾವಾಹಿ. ಸುಮತಿ ಅಕ್ಕ ಹೇಳಿದ ಹಾಂಗೆ ಅಂಜಲಿ ಕೈಲಿ ಈ ಕೊಲೆ ನೆಡದಿರ. ಇನ್ನಾಣ ವಾರ ನೋಡುವೊ.

  2. ತುಂಬಾ ಕುತೂಹಲಕಾರಿಯಾಗಿ ಮೂಡಿ ಬತ್ತಾ ಇದ್ದು.ಅಂಜಲಿ ಕೊಲೆ ಮಾಡಿರ.ಆದರೆ ಎಲ್ಲಿಗೆ ಹೋದಿಕ್ಕು….?

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×