Oppanna.com

ಶಂಕ್ರ

ಬರದೋರು :   ಪುಟ್ಟಬಾವ°    on   31/07/2010    26 ಒಪ್ಪಂಗೊ

ಪುಟ್ಟಬಾವ°
ನಿನಗೊಂದು ವಿಷಯ ಗೊಂತಿದ್ದಾ? ನಮ್ಮ ಮೇಗಣ ಮನೆ ನಾರಾಯಣ ಮಾವನ ಮಗ ಶಂಕ್ರ ಇಲ್ಲೆಯಾ? ಅಂವ ಕೊಂಕಣಿ ಕೂಸಿನ ಮದುವೆ ಆವ್ತ ಇದ್ದ.”
ಮನೆಂದ ಸುಮನಂಗೆ ಫೋನು ಬಂದಪ್ಪಗ ಅಮ್ಮ ಹೇಳಿದ ಪಷ್ಟು ಸುದ್ದಿಯೇ ಅದು.
“ಕೂಸು ಬೇರೆ ಆರು ಅಲ್ಲ, ಅಂಗಡಿಯ ಗೋಪಾಲ ಕಿಣಿಗಳ ಮಗಳು ಸಂಧ್ಯಾಡ. ನಾಳ್ತು ೧೮ಕ್ಕೆ ಮದುವೆ. ಕಾಗದ ಇಂದು ಕೊಟ್ಟಿಕ್ಕಿ ಹೋಯ್ದವು”.. ಅಮ್ಮ ಬೇರೆ ಎಂಥ ಎಲ್ಲ ಹೇಳಿತ್ತು ಹೇಳಿ ಸುಮನಂಗೆ  ಗೊಂತೆ ಆಯ್ದಿಲ್ಲೆ.
ಮಂಗಲ ಮೂರ್ತ..
*************
ಸಂಧ್ಯಾ, ಸುಮನ, ಶಂಕ್ರ ಮೂರು ಜನದೆ ಕ್ಲಾಸು ಮೇಟುಗ.
ಒಂದ್ನೆಂದ ಎಮ್ಮೆಸ್ಸಿ ವರೆಗೆ ಜೊತೇಲಿ ಓದಿ; ಸುಮನ ಶಂಕ್ರ ಬೆಂಗಳೂರಿನ್ಗೆ ಕೆಲಸಕ್ಕೆ ಹೋದರೆ, ಒಂದೇ ಕೂಸು ಹೇಳಿ ಕಿಣಿಗ ಮಗಳು ಹೋಪದರ ಒಪ್ಪಿದ್ದವಿಲ್ಲೇ.
ಅದು ಮಂಗ್ಳೂರಿಲಿಯೇ ಲೆಕ್ಚೆರೆರ್ ಆಗಿ ಕೆಲಸ ಮಾಡ್ಲೆ ಸುರು ಮಾಡಿತ್ತು.
ಕಲ್ತ ಮೇಲೆ ಬೆಂಗಳೂರಿನ್ಗೆ ಹೋದರೆ ಮಾತ್ರ ಕೆಲಸ ಹೇಳುವ ಮನೋಭಾವ ಇಪ್ಪ ಸಮಯ ಅದು. ಪೆರ್ಚಿ ಕಟ್ಟಿದ ಮಕ್ಕ ಬೆಂಗಳೂರಿನ್ಗೆ ಹೊದ್ದರಲ್ಲಿ ಆಶ್ಚರ್ಯ ಇಲ್ಲೇ.!!!
ಒಂದೇ ಕಡೆ ಕೆಲಸ, ಜೊತೇಲಿ  ಓದಿದವು…
ಇನ್ನೆಂತರ ಬೇಕು? ಅವಕಿಬ್ರಿಂಗೂ ಸಣ್ಣಕೆ ಲವ್ ಆತು!. ಆದರೆ ಸಮಸ್ಯೆ ಅದ್ದದು ಇಬ್ರ ಜೀವನ ಶೈಲಿ.
ಪೇಟೆಯ ಶೋಕಿ ಜೀವನಕ್ಕೆ ಸುಮನ ಮಾರು ಹೋದರೆ, ತುಂಡು ವಸ್ತ್ರ ಹಾಕುವ, ಮೇಲೆ ಬಿದ್ದುಗೊಂಡು, ಪೈಸೆಗೋಸ್ಕರ ಯಾವುದಕ್ಕೂ ತಯಾರಿಪ್ಪ, ಪಬ್ಬು ಬಾರು ಹೇಳಿ ಸುತ್ತುವ ಕೂಸುಗಳುದೆ- ಮಾಣಿಯಂಗಳನ್ನು ನೋಡಿ ಶಂಕ್ರಂಗೆ ತಲೆ ಹಾಳಾತು.
ಅವಂಗತೂ ಈ ಅವಸ್ಥೆ ನೋಡಿ ಪೇಟೆಯೇ ಹೇಸಿಗೆ ಹುಟ್ಸಿತ್ತು!!.
ಬೆಂಗಳೂರಿನ್ಗೆ ಬಂದು ಒಂದೇ ವರ್ಷಕ್ಕೆ ಅಂವ ಊರಿಂಗೆ ವಾಪಸ್ಸು ಹೋಪ ನಿರ್ಧಾರಕ್ಕೆ ಬಂದ.
ಹೇಂಗೂ ಊರಿಲಿ ಮೂರೆಕ್ರೆ  ಆಡಕ್ಕೆ ತೋಟ, ತೆಂಗಿನಕಾಯಿ ಎಲ್ಲ ಇದ್ದು. ಇಪ್ಪ ಒಂದು ತಂಗೆಗೆ ಮದುವೆ ಮಾಡಿರೆ ಜವಾಬ್ದಾರಿ ಮುಗಿತ್ತು ಹೇಳಿ ಅವನ ನಿರ್ಧಾರ ದೃಢ  ಆತು.
ಆದರೆ ಸುಮನ ಕಂಪೆನಿ ಕೆಲಸ ಬಿಟ್ಟಿಕ್ಕಿ ಬಪ್ಪಲೆ ಒಪ್ಪಿದ್ದಿಲ್ಲೆ. “ಎನ್ನಂದ ಸಗಣ ಬಾಚುಲೇ ಎಡಿಯ!, ಅಲ್ಲದ್ದೆ ನಿನ್ನ ಅಪ್ಪ-ಅಮ್ಮ್ಮನ ನೋಡಿಗೊಳೆಕ್ಕು…. ಊರಿಂಗೆ ಹೋಗಿ ಇಪ್ಪದಾದರೆ ಆನು ಬತ್ತಿಲ್ಲೆ….!!”, ಅದರ ಹರಿತ ಮಾತಿಂಗೆ ಎಂಥ ಹೇಳೆಕ್ಕು ಹೇಳಿ ಶಂಕ್ರಂಗೆ ಗೊಂತಾಯ್ದಿಲ್ಲೆ.
ಇಷ್ಟು ದಿನ ಈ ಕೂಸಿನ ಆನು ಇಷ್ಟ ಪಟ್ಟದಾ ಹೇಳಿ ಅವಂಗೇ ಆಶ್ಚರ್ಯ ಆತು. ಅಲ್ಲಿಗೆ ಅವರ ಫ್ರೆಂಡುಶಿಪ್ಪು, ಲವ್ವು ಎಲ್ಲಾ ಮುಗುದ ಕಥೆ ಆತು.
************
ಅವನ ಈ ನಿರ್ಧಾರಕ್ಕೆ ಬೆಂಬಲ ಕೊಟ್ಟದು ಅವನ ತಂಗೆಯುದೆ – ಅಪ್ಪಂದೆ.
ಅಪ್ಪ ಹೇಳಿದವು ” ನೋಡು ಮಗಾ, ಎನಗೂ ಪ್ರಾಯ ಆತು; ಇನ್ನು ನೀನು ಜವಾಬ್ದಾರಿ ವಹಿಶಿದರೆ ಎನಗುದೆ ಅನುಕೂಲ ಆವ್ತು, ಮುಂದೆ ನಿನಗುದೆ ಸುಲಭ..”
ಆದರೆ ಅವನಮ್ಮಂಗೆ ಚೂರು ತಲೆ ಬೆಶಿ ಆತು “….. ಕ್ರಷಿಕರಿಂಗೆ, ಅಡಿಗೆವಕ್ಕೆ ಎಲ್ಲಿದೆ ಕೂಸು ಕೊಡ್ತವಿಲ್ಲೆ. ಹೀಂಗೆ ಆದರೆ ನಮ್ಮ ಶಂಕ್ರನ ಗತಿ ಎಂತರ?”
” ತೊಂದರೆ ಇಲ್ಲೆ, ಆನು ಅವಂಗೆ ಕೂಸು ಹುಡುಕ್ಕುತ್ತೆ..” ಅಪ್ಪನ ಆತ್ಮ ವಿಶ್ವಾಸ ನೋಡಿ ಅವಂಗೆ ಆಶ್ಚರ್ಯ ಆತು.
******************
” ಇಲ್ಲಿ ಸುಮನ ಒಂದು ಬ್ಯಾರಿಯ  ಜೊತೇಲಿ  ತಿರುಗುತ್ತ ಇದ್ದು ಮಾರಾಯ, ಲಿವಿಂಗ್ ಟುಗೆದೆರ್ (ಒಂದು ಕೂಸುದೆ – ಮಾಣಿದೆ ಮದುವೆ ಅಥವಾ ಯಾವುದೇ ಬಂಧನ ಇಲ್ಲದ್ದೆ ಒಂದೇ ಮನೇಲಿ ಇಪ್ಪ ಒಂದು ಪಾಶ್ಚಾತ್ಯ ಸಂಪ್ರದಾಯ ) ಎಲ್ಲಾ ಇದ್ದು…….!!!! ”
– ಬೆಂಗಳೂರಿಲಿ ಇಪ್ಪ ಅವನ ಫ್ರೆಂಡುಗ ಹೇಳಿಯಪ್ಪಗ, ಶಂಕ್ರಂಗೆ ಅಂವ ಸುಮನನ ಬಿಟ್ಟು ಬಂದದ್ದರಲ್ಲಿ ಯಾವ ತಪ್ಪೂ ಇಲ್ಲೆ ಹೇಳಿ ಅನಿಸಿದರೂ ಚೂರು ಬೇಜಾರು ಅದ್ದದೂ ನಿಜ.
***********
ಅಂತೂ ಒಂದು ವರ್ಷಲ್ಲಿ ಅಪ್ಪ ಶಂಕ್ರಂಗೆ ಕೂಸು ಹುಡುಕ್ಕಿದ್ದೆ ಹುಡುಕಿದ್ದು !!!!. ಎಲ್ಲಾ ಹವ್ಯಕ ಕೂಸುಗೊಕ್ಕೆ ಬೆಂಗಳೂರಿಲಿ ಇಪ್ಪ ಮಾಣಿಯೇ ಅಯೆಕ್ಕು. ಎಂಥ ಮಾಡುದು ಹೇಳಿ ತಲೆಬೆಶಿ ಮಾಡಿಯಪ್ಪಗ ತಲೆಗೆ ಹೋದ್ದು, ಬೇರೆ ಜಾತಿಲಿ ಕೂಸು ನೋಡುದು ಹೇಳಿ. ಶಿವಳ್ಳಿಯೂ ಅಕ್ಕು, ಕೋಟದವ್ವೂ  ಅಕ್ಕು.. !! ಒಂದು ಕೂಸು ಸಿಕ್ಕಿರೆ ಸಾಕು ಹೇಳುವ ಪರಿಸ್ಥಿತಿಗೆ ಬಂದವು ಶಂಕ್ರನ ಅಪ್ಪ. ಹಾಂಗೆ ನೋಡುವ ಹೇಳಿ, ಹೇಂಗೂ ನಮ್ಮ ಗೋಪಾಲ ಕಿಣಿಗೊಕ್ಕೆ ತುಂಬಾ ಜನ ಗೊಂತಿದ್ದವು ಹೇಳಿ ಅವರತ್ರೆ ಮಾತಾಡಿಯಪ್ಪಗ, ಅವು ಅವರ ಮಗಳ ಬಗ್ಗೆ ಪ್ರಸ್ತಾಪಿಸಿದ್ದು , ಮಾತಾಡಿದ್ದು ಎಲ್ಲಾ ಕೆಲವೇ ದಿನಲ್ಲಿ ಆಗಿ ಹೋತು…
ಸಂಧ್ಯಂಗು ಶಂಕ್ರನ ಕಂಡ್ರೆ ಇಷ್ಟ ಇತ್ತು ಹೇಳಿ ಮತ್ತೆ ಗೊಂತಾತು!!!!!
***************
” ಅಲ್ಲಾ ನೀನು ಹೋಗಿ  ಹೋಗಿ ಅದರ ಕಟ್ಟಿಗೊಂಬದಾ!? ನಿನಗಂತೂ ಬೆಂಗಳೂರ್ ಎಂಜಾಯ್ ಮಾಡ್ಲೆ ಎಡಿಗಾತಿಲ್ಲೆ…ಹ್ಮಾ!!! ಅಂತೂ ಸರಿಯಾದ ಜೋಡಿ ಬಿಡು…..!!!! ” ಸುಮನನ ಮಾತಿಲಿ ವ್ಯಂಗ್ಯ ಇತ್ತೋ , ಹುಳುಕಿತ್ತೋ ಅವಂಗೆ ಗೊಂತಾಯ್ದಿಲ್ಲೆ..
ಅಂವ ಬೆಂಗ್ಳೂರಿನ್ಗೆ  ಫ್ರೆಂಡ್ ಗೊಕ್ಕೆ ಮದುವೆಗೆ ಹೇಳುಲೇ ಹೇಳಿ ಬಂದಿಪ್ಪಗ ಅಚಾನಕ್ ಆಗಿ ಸಿಕ್ಕಿತ್ತು ಸುಮನ..
ಈಗ ಅದರ ಸ್ಟೈಲು ಎಲ್ಲಾ ಚೇಂಜ್ ಆಯ್ದು… ಸ್ಲೀವ್ಲೆಸ್ಸ್ ಟೀ-ಶರ್ಟು, ಜೀನ್ಸ್ ಪ್ಯಾಂಟು.. ಬಾಬ್ಕಟ್ಟು…
ಊರಿನ ಹವ್ಯಕರ ಕೂಸು ಹೇಳಿ ಆರಾರು ಹೇಳಿರೆ ಮಾತ್ರ ಗೊಂತಕ್ಕು… ಶಂಕ್ರನ ಮನಸ್ಸಿಲಿ ಒಂದು ನೆಗೆ ಹಾದು ಹೋತು.
” ಆನು ಅದರ ಇಷ್ಟ ಪಟ್ಟೆ, ಮನೇಲಿ ಎಲ್ಲರಿನ್ಗೂ ಇಷ್ಟ ಇದ್ದು.. ನಿಂಗೊಗೆ ಎಲ್ಲಾ ಬೆಂಗ್ಳೂರಿಲಿ ಇಪ್ಪವೇ ಬೇಕು!! ಎಂಗ ಎಲ್ಲಿಗೆ ಹೋಪದು!!” ಹೇಳಿದ ಶಂಕ್ರ.
“ಮತ್ತೆ ನೀನು ಎನ್ನ ಇಷ್ಟ ಪತ್ತದು ಎಲ್ಲಾ???!!!” ಅದರ ಮನಸ್ಸಿಲಿ ಎಲ್ಲೋ ಶಂಕ್ರನ ಬಗ್ಗೆ ಪ್ರೀತಿ ಇದ್ದು.!!!
” ಅದು ನಿಜ, ಅದರ ಸಂಧ್ಯಂಗೂ ಹೇಳಿದ್ದೆ. ಕಳೆದು ಹೊದ್ದರ ಬಗ್ಗೆ ಅದಕ್ಕೂ ಚಿಂತೆ ಇಲ್ಲೆ.ನಿನಗೆ ಬೇಕಾದ್ದು ನಿನಗೆ ಸಿಕ್ಕಿದ್ದು, ಎನಗೆ ಬೇಕಾದ್ದು ಎನಗೆ ಸಿಕ್ಕಿದ್ದು!!”, ಶಂಕ್ರನ ಮಾತಿಲಿ ನಿಖರತೆ ಇತ್ತು…ಕಣ್ಣಿಲಿ ಹೊಸ ತೇಜಸ್ಸು ಇತ್ತು…
” ನಿನಗೇನೋ ಸಿಕ್ಕಿತ್ತು..
ಯಾರೆ ಎನ್ನ ಜೊತೇಲಿ ಇದ್ದಂವ ಬಿಟ್ಟು ಹೋಗಿ ಎರಡು ತಿಂಗಳು ಆತು. ಈಗ ಆನು ಹಾಸ್ಟೆಲಿಲಿ ಇದ್ದೆ ಒಬ್ಬನೇ…” ಅದರ ಮಾತಿಲಿ ಶಂಕ್ರ ಬಿಟ್ಟ ತಪ್ಪಿನ ಅರಿವು ಇತ್ತು. ಅದು ಅವಂಗೂ ಗೊತಾಗದ್ದೆ ಏನೂ ಇತ್ತಿಲ್ಲೇ… !!!
” ಸರಿ, ಆನು ಹೆರಡ್ತೆ, ಮದುವಗೆ ಖಂಡಿತಾ ಬರೆಕ್ಕು.. ಮನೇಲಿ ಹೇಳಿಕೆ ಕೊಟ್ಟಿದೆ..ನೀನಂತು ತಪ್ಸುಲೇ ಆಗ..!! ಸರಿಯಾ!??? ಸಹಜವಾಗಿಯೇ ಹೇಳಿದ ಶಂಕ್ರ.
ಸುಮನಂಗೆ ಎಂತ ಹೇಳೆಕ್ಕು ಹೇಳಿ ಗೊಂತಾತಿಲ್ಲೆ..
” ಸರಿ ಆಲ್ ದಿ ಬೆಸ್ಟ್…….!!! ” ಕೈ ಚಾಚಿತ್ತು…
ಕಣ್ಣ ಅಂಚಿಲಿ ನೀರು ತುಂಬಿತ್ತು…
************************

26 thoughts on “ಶಂಕ್ರ

  1. ಎನ್ನ ಅಭಿಪ್ರಾಯವು ಅದೆ ಅಪ್ಪಚ್ಚಿ ಈ ಸ೦ಸ್ಕಾರ ನಮ್ಮ ನೆಮ್ಮದಿಯಾಗಿ ಜೀವನ ಮಾಡ್ಲೆ ಸಹಕರಿಸುತ್ತು.

  2. ಮಗ/ಮಗಳು : ಮಣ್ಣಿಲಿ ಆಡೆಕ್ಕು
    ಅಪ್ಪ/ಅಮ್ಮ : ಮೈಯೆಲ್ಲ ಕೆಸರಕ್ಕು. ಮನೆಯೊಳ ಆಡು
    ಮಗ/ಮಗಳು : ತೋಟಲ್ಲಿ ಸ್ಪ್ರಿಂಕ್ಲರ್ ಲಿ ಆಡೆಕ್ಕು
    ಅಪ್ಪ/ಅಮ್ಮ : ಶೀತ ಅಕ್ಕು ಬೇಡ
    ಮಗ/ಮಗಳು : ಪುಚ್ಚೆ ಕುಂನ್ನಿ ಬೇಕು ಆಡುಲೆ
    ಅಪ್ಪ/ಅಮ್ಮ : ಕೊಳಕ್ಕು ರೋಮ ಎಲ್ಲ ಅಂಟುತ್ತು ಬೇಡ
    ಮಗ/ಮಗಳು : ನಾಯಿ ಕುಂನ್ನಿ ಲಾಇಕ ಇದ್ದು ಆಡೆಕ್ಕು
    ಅಪ್ಪ/ಅಮ್ಮ : ಕಚ್ಚುಗು ಬೇಡ
    ಮಗ/ಮಗಳು : ಮಳೆಗೆ ಹೆರ ಹೋಯೆಕ್ಕು
    ಅಪ್ಪ/ಅಮ್ಮ : ಶೀತ ಅಕ್ಕು ಬೇಡ
    ಮಗ/ಮಗಳು : ಕುಂಟಲ ಹಣ್ಣು ತಿನ್ನೆಕ್ಕು
    ಅಪ್ಪ/ಅಮ್ಮ : ಜ್ವರ ಬಕ್ಕು ಬೇಡ
    ಮಗ/ಮಗಳು : ಹುಳಿಮಾವು ತಿನ್ನೆಕ್ಕು
    ಅಪ್ಪ/ಅಮ್ಮ : ಹೊಟ್ಟೆ ಬೇನೆ ಅಕ್ಕು ಬೇಡ
    ಮಗ/ಮಗಳು : ಬಟ್ಯನ ಮಗ/ಮಗಳೊಟ್ಟಿಂಗೆ ಹೋವುತ್ತೆ ಆಡುಲೆ
    ಅಪ್ಪ/ಅಮ್ಮ : ಬೇಡ ಹೆರಣ ಜಾತ್ಯೊವು. ಮನೆಲೇ ಇರು
    ಮಗ/ಮಗಳು : ಬಿ ಎಸ್ಸಿ ಅಗ್ರಿ ಮಾಡೆಕ್ಕು
    ಅಪ್ಪ/ಅಮ್ಮ : ಬೇಡ ಕಂಪ್ಯೂಟರ್ ಇಂಜಿನಿಯರಿಂಗ್ ಮಾಡು
    ..
    ..
    ..
    ಅಪ್ಪ/ಅಮ್ಮ : ನಿನಗೆ ಕೂಸು/ಮಾಣಿ ನೋಡಿದ್ದೆಯೊ. ಮದುವೆ ಆಗು
    ಮಗ/ಮಗಳು : ಇಲ್ಲೆ ಅದ್ರಲ್ಲೆಲ್ಲ ಈಗ ಆಸಕ್ತಿ ಇಲ್ಲೆ. ಜಾಬಿಲಿ ಮೇಲೆ ಬರೆಕ್ಕು. ಮತ್ತೆ ಎಲ್ಲ
    ಅಪ್ಪ/ಅಮ್ಮ : ಎಂಗೊಗೆ ಪ್ರಾಯ ಆತು ಜಾಗೆ ನೋಡಿಗೊ
    ಮಗ/ಮಗಳು : ಇಲ್ಲೆ ನಿಂಗ ಬೆಂಗ್ಳೂರಿಂಗೆ ಬನ್ನಿ
    ..
    ..
    ಮಗ/ಮಗಳು : ಆನು ಬೆಂಗ್ಳೂರಿಲೇ ಇದರ/ಅವನ ಲವ್ ಮಾಡ್ತಾ ಇದ್ದೆ. ಈಗ ’ಎಲ್ಲವೂ’ ಆಯಿದು. ನಾಡುದ್ದು ಮದುವೆ. ಬನ್ನಿ
    ಅಪ್ಪ/ಅಮ್ಮ : ??
    ಅಪ್ಪ/ಅಮ್ಮ : ಹೇಂಗಾರು ಮದುವೆ ಆತನ್ನೆ… ಪುಳ್ಳಿ ಕೊಡು ಎಂಗೊಗೆ.. ಉದಾಸಿನ ಆವುತ್ತು
    ಮಗ/ಮಗಳು : ಈಗಿಲ್ಲೆ ಅದೆಲ್ಲ.. ಇನ್ನು ೪-೫ ವರ್ಷ ಕಳುದಿಕ್ಕಿ. ಈಗಲೇ ಅದೆಲ್ಲ ಆದರೆ ’ಫಿಗರು’ ಹಾಳಾವುತ್ತು.

    1. ಅಪ್ಪಚ್ಚೀ, ಲಾಯಿಕ ಆಯಿದು.ಪುಟ್ಟಭಾವನ ಕಥೆಯ ನಾಟಕ ರೂಪದ ಹಾಂಗಿದ್ದು. ನಾಲ್ಕೈದು ವರುಷ ಕಳುದಪ್ಪಗ ಅವು ಒಟ್ಟಿನ್ಗಿದ್ದರೆ ವಿಶೇಷ..

      1. ಆನು ಬರದ್ದು ಮಕ್ಕಳ ಮನಸ್ಥಿತಿ ಹಾಂಗೆ ಅಪ್ಪಲೆ ಹೆತ್ತವರ ಪಾತ್ರ ಎಷ್ಟು ಇದ್ದು ಹೇಳಿ… ಎನ್ನ ಪ್ರಕಾರ ಉಂಬಲೆ ತಕ್ಕ ಇದ್ದತ್ತು ಹೇಳ್ರೆ ಮಕ್ಕೊಗೆ ಇಂತಿಂಥದೇ ಮಾಡೆಕ್ಕು ಹೇಳಿ ಒತ್ತಾಯ ಮಾಡುಲಾಗ. ಅವಕ್ಕೆ ಊಟ ಬಟ್ಟೆ ಕೊಟ್ಟು ಒಳ್ಳೆ ಸಂಸ್ಕಾರ ಕೊಟ್ಟರೆ ಅದಕ್ಕಿಂತ ಉಪಕಾರ ಬೇರೆ ಇಲ್ಲೆ. ಅವಕ್ಕೆ ಬೇಕಾದ್ದರ ಮಾಡಿಯೊಳ್ತವು. ದೊಡ್ಡ ಸಿ ಎ ಅಪ್ಪದೋ ಗೌರ್ಮೆಂಟು ಜಾಬೋ ಕಂಪ್ಯೂಟರೋ ಕೃಷಿಯೋ ಮತ್ತೆ ಇನ್ನೊಂದೋ.. ಸಂಸ್ಕಾರ ಇದ್ದರೆ ಕ್ರೀಡೆ, ಕೃಷಿ, ಸಾಹಿತ್ಯ, ವ್ಯಾಪಾರ ವೈವಾಟು, ಕೋಚಿಂಗು, ಪೌರೋಹಿತ್ಯ, ಅಡಿಗೆ ಹೀಂಗೆ ಯಾವುದಾರೊಂದು ಆಸಕ್ತಿ ಇಪ್ಪ ಕಸುಬು ಮಾಡಿಕೊಳ್ಳುತ್ತವಿಲ್ಲೆಯಾ??
        ಮಕ್ಕೊ ದೊಡ್ಡ ಆದ ಮೇಲೆ ಹೇಂಗೆ ಇರ್ತವು ಹೇಳುದು ಚೂರು ಸಣ್ಣ ಇಪ್ಪಾಗಣ ಸಂಸ್ಕಾರದ ಮೇಲೆ ಆಧರಿಸಿರ್ತು.. ಮತ್ತೆ ಚೂರು ಹೆತ್ತವರ ಹಣೆಬರಹದ ಮೇಲೆ.. ಈ ಹಣೆಬರಹ ಎಂತ ಮಾಡುಲೆ ಅರಡಿಯ.. ಸಂಸ್ಕಾರ ಆದರೂ ಕೊಡುದು ಒಳ್ಳೆದು ಹೇಳಿ ಕಾಂಬದು ಎನಗೆ.. ಅಪ್ಪ ಅಮ್ಮ “ಮನೆಯೊಂದು ಮೋರಿ ಬಾಗಿಲು” ನೋಡಿಯೊಂಡಿದ್ದರೆ ಮಕ್ಕೊಗೆ ಎಂತ ಸಂಸ್ಕಾರ ಬಕ್ಕು ಹೇಳಿ ಹೇಳೆಕ್ಕು ಹೇಳಿ ಇಲ್ಲೆನ್ನೆ..
        ಇದು ಎನ್ನ ಅಭಿಮತ.. ದೊಡ್ಡೋರು ಎಂತ ಹೇಳ್ತವಾ ಗೊಂತಿಲ್ಲೆ…

        1. (ಮಕ್ಕೊ ದೊಡ್ಡ ಆದ ಮೇಲೆ ಹೇಂಗೆ ಇರ್ತವು ಹೇಳುದು ಚೂರು ಸಣ್ಣ ಇಪ್ಪಾಗಣ ಸಂಸ್ಕಾರದ ಮೇಲೆ ಆಧರಿಸಿರ್ತು)
          ಅಪ್ಪಚ್ಚಿ,ನಿಂಗೊ ಹೇಳುತ್ಸು ಸರಿ. ಇದರೊಟ್ಟಿನ್ಗೆ ,ರಜಾ ಪಿ.ಯು.ಸಿ. ಮತ್ತೆ ಮುಂದಾಣ ಕಾಲೇಜುಗಳ ಪರಿಸರದ ಪ್ರಭಾವವೂ ಇರುತ್ಸು.ಬಳ್ಳಿ ಬಿಟ್ಟ ಕಂಜಿ ಕೆಮಿಗೆ ಗಾಳಿ ಹೊಕ್ಕ ಹಾಂಗೆ ಲಾಗ ತೆಗವಗ ಒಳ್ಳೆದು ಹಾಳಿನ ವ್ಯತ್ಯಾಸವೇ ಮರದು ಹೋವುತ್ಸು .
          ಒಳ್ಳೆ ಸಂಸ್ಕಾರ ಕೊಡೋದು ಅಬ್ಬೆಅಪ್ಪನ ಕರ್ತವ್ಯ. ಮತ್ತೆ ಅವರವರ ಜೀವನಲ್ಲಿ ಎಂತ ಬಗದ್ದೋ ಅದೇ ಅಪ್ಪೋದಲ್ಲದೋ.. ಜೀವನಲ್ಲಿ ಸ್ವೀಕಾರ ಹೆಚ್ಚಾಗಿ ಅಪೇಕ್ಷೆ ಕಮ್ಮಿ ಆದರೆ ನೆಮ್ಮದಿ ಹೆಚ್ಚು ಅಲ್ಲದೋ.

    2. ನೀರ್ಕಜೆ ಅಪ್ಪಚ್ಚಿ!!!
      ನಿಂಗಳ ಆ ಮಾತು-ಕತೆ ಭಾರೀ ಚೆಂದ ಆಯಿದು.
      ಒಳ್ಳೆ ಕೊಶಿ ಆತು. ಬೈಲಿನ ಒಳಾಣ ಜೆನಜೀವನವ ಒಳ್ಳೆ ರೀತಿಲಿ ತಿಳುಶಿಕೊಟ್ಟಿ..
      ತುಂಬ ಚೆಂದ ಆಯಿದು..

  3. ಕತೆ ಕೇಳಿ ಬಾರಿ ಬೇಜಾರಾತು ಬಾವ… ಈಗಾಗಲೇ ಇಂಥ ಕತೆ ಹಲವು ನಡದಿಕ್ಕು..ಅಥವಾ ನಡಕ್ಕೊಂಡು ಇಕ್ಕು ಹೇಳ್ತದು ಎನ್ನ ಸಂಶಯ. ಎಂತಕೆ ಬಾವ ನಮ್ಮ (ಹವ್ಯಕ :೦) ಕೂಸುಗೊ ಹೀಂಗೆ ಮಾಡುದು?
    ಕತೆ ಒಂದೊಳ್ಳೆ ಸಂದೇಶ ಇದ್ದು ಬಾವ.
    ಧನ್ಯವಾದ. ಕೊಶಿ ಆತು, ಹೀಂಗೆ ಬರಕ್ಕೊಂಡು ಇರಿ.

  4. ಕತೆ ನಿಜ ಜೀವನಕ್ಕೆ ಹತ್ರೆ ಇದ್ದು. ಎಡೆಲಿ ಒಂದರಿ ಭೈರಪ್ಪನ ಕವಲು ಓದಿದ್ದದೂ ನೆಂಪಾತು.
    ಎಂತದೇ ಹೇಳಲಿ, ಈಗಾಣ ಮಕ್ಕೊಗೇ ಒಳ್ಳೆ ಬುದ್ಧಿ ಬರೆಕಷ್ಟೆ.
    ಹೇಳಿದ ಹಾಂಗೆ ಕೊಂಕಣತ್ತಿ ಕೂಸಿನ ಒಟ್ಟಿಂಗೆ ಹವ್ಯಕ ಶೈಲಿಲಿ ಮದುವೆ ನಡದತ್ತು ಆಯ್ಕು ಅಲ್ಲದೋ? ಪಟ ನೋಡಿ ಹೇಳಿದೆ !!!!

    1. ಮಾವಾ.. ನಿಂಗಳ ಸಂಶಯ ಸರಿ.ಈ ಮದುವೆಗಳಲ್ಲಿ ಯಾವ ಶೈಲಿ ಹೇಳಿಯೇ ಸುಮಾರು ಚರ್ಚೆಗ ನಡವೊದು ಸಾಮಾನ್ಯ. ಧಾರೆ ಎರದು ಕೊಡುವ ವರೆಗೆ ಕೂಸಿನ ಕಡೆಯ ಸಂಪ್ರದಾಯನ್ಗೋ.( ಕೊಂಕಣಿಗ ಆದರೆ ಸೋದರಮಾವ ಮದಿಮ್ಮಾಳ ಹೊತ್ತುಗೊಂಡು ಬರೆಕ್ಕು,ಹೊರುವ ತ್ರಾಣ ಇದ್ದರೆ !!). ಧಾರೆ ಎರದ ಕೂಡಲೇ ಮಾಣಿಯ ಕಡೆ ಭಟ್ಟಕ್ಕೋ ಅವರ ಸಂಪ್ರದಾಯ ಶುರು ಮಾಡಿ ಕೂಸಿನ ಕಡೆ ಭಟ್ಟರು ವೇದಿಕೆಂದ ಇಳಿಯದ್ದೆ ನಿಮ್ರತ್ತಿ ಇಲ್ಲದ್ದ ಹಾಂಗೆ ಮಾಡುತ್ತವು .ಅಂತೂ ಪುರೋಹಿತರ ತ್ರಪ್ತಿಗಾಗಿ ಮಾಡೊದು ಹೇಳಿ ಅನ್ನಿಸುತ್ತು.
      ಶಂಕರನ ಮದುವೆ ಮಾಣಿ ಕಡೆ ಸಂಪ್ರದಾಯಲ್ಲಿ ಅಕ್ಕು ಹೇಳಿ ಕಿಣಿ ಮಾವ ಒಪ್ಪಿಗೆ ಕೊಟ್ತಿತ್ತಿದ್ದವಡ.. ( ಕೂಸು ರಜ ಗಟ್ಟಿ ಆಗಿ ಸೋದರಮಾವ ಸಪುರ ಆದ ಕಾರಣ !!)

  5. ಲಾಯಕ ಆಯ್ದು ಪುಟ್ಟ ಭಾವ ಬರದ್ದು..

  6. ಪುಟ್ಟಭಾವ° ಬರದ ಕತೆ ಬರೇ ಕಾಲ್ಪನಿಕ ಹೇಳುಲೆ ಆವುತ್ತಿಲ್ಲೆ.. ಈಗಾಣ ಕಾಲದ ಸಮಸ್ಯೆಯ ನಮ್ಮ ಎದುರು ಬಿಡುಸಿ ಮಡಿಗಿದ ಹಾಂಗಿದ್ದು.. ಕಲ್ತ ಕೂಡ್ಲೇ ಊರು ಬೇಡ ಹೇಳಿ ಎಲ್ಲಾ ಕೂಸುಗೊಕ್ಕೆ ಕಾಣದ್ರೂ ಕೆಲವು ಜೆನಕ್ಕೆ ಕಾಂಬದಂತೂ ಸತ್ಯ!! ಇದರಲ್ಲಿ ಎಲ್ಲ ಅಬ್ಬೆ, ಅಪ್ಪನೂ ಅಲ್ಲ ಕೆಲವು ಜೆನ ಅಬ್ಬೆ, ಅಪ್ಪಂದ್ರ ತಪ್ಪು ಇರ್ತು.. ಊರು ಬೇಡ, ಕೃಷಿ ಬೇಡ ಹೇಳುವ ಕೂಸುಗೊಕ್ಕೆ ಅವರ ಜೀವನಕ್ಕೆ ಯಾವುದು ಒಳ್ಳೇದು ಹೇಳಿ ಪೇಟೆಯ, ಹಳ್ಳಿಯ ಜೀವನದ ಒಳಿತು, ಕೆಡುಕುಗಳ ಹೇಳುವ ಹಕ್ಕು ಎಲ್ಲ ಹೆತ್ತವರದ್ದೂ ಆಗಿದ್ದು.. ಈಗಾಣ ಈ ಅವ್ಯವಸ್ತೆ ಯಾವಾಗ ಸರಿ ಹೋಕೋ ಗೊಂತಿಲ್ಲೆ ಆದರೂ ಒಂದಲ್ಲ ಒಂದು ದಿನ ಸರಿ ಅಕ್ಕು.. ಅಲ್ಲದಾ?
    ಇನ್ನು ಕತೆಲಿ ಬಪ್ಪ ಸುಮನಂಗೆ, ಒಬ್ಬನ ನಿಜವಾದ ಪ್ರೀತಿ ಸಿಕ್ಕುವಾಗ ಅದು ಬೇರೆಯೋರ ಬಣ್ಣ ಬಣ್ಣದ ಜೀವನ, ಮಾತುಗೊಕ್ಕೆ ಬಲಿಯಾಗಿ, ಎಲ್ಲವನ್ನೂ ಕಳಕ್ಕೊಂಡತ್ತು.. ನಿಜವಾಗಿ ಪ್ರೀತಿಸುವೋರ ಅರ್ಥ ಮಾಡಿಗೊಳ್ಳದ್ದರೆ ಎಲ್ಲವನ್ನೂ ಕಳಕ್ಕೊಳ್ತು ನಾವು ಅಲ್ಲದಾ?

  7. ಕಥೆ ಬಾರಿ ಲಾಯಿಕಯಿದು. ಒಪ್ಪಣ್ಣ ಹೇಳಿದ ಹಾ೦ಗೆ ನಮ್ಮ ಸಮಾಜ ವೆವಸ್ತೆಗೆ ಹಿಡುದ ಕೈಕನ್ನಾಟಿಯ ಹಾಂಗಾಯಿದು..

  8. ಪುಟ್ಟಭಾವಾ..
    ಹೊಸತನದ ಕತೆ ಒಂದರ ಬೈಲಿಂಗೆ ಹೇಳಿದೆ..
    ಕತೆ ಹೇಳಿದ್ದರ ನೋಡಿ ತುಂಬಾ ಕೊಶಿ ಆತು, ಕತೆ ಕೇಳಿ ತುಂಬಾ ಬೇಜಾರಾತು.
    ನಮ್ಮ ಸಮಾಜ ವೆವಸ್ತೆಗೆ ಹಿಡುದ ಕೈಕನ್ನಾಟಿಯ ಹಾಂಗಾಯಿದು..
    ಎಲ್ಲೊರುದೇ ಇದರ ತಿಳ್ಕೊಳಲಿ..

  9. ಸಮಾಜಲ್ಲಿ ಇಪ್ಪ ಸಮಸ್ಯೆಗಳ ತುಂಬಾ ಲಾಯ್ಕಲ್ಲಿ ಕಥೆಯ ರೂಪಲ್ಲಿ ಬರದ್ದಿ 🙂 ಪೇಟೆಲಿ ಇದ್ದರೆ ಮಾಂತ್ರ ಜೀವನ ಹೇಳೀ ಗ್ರೇಶುವ ನಮ್ಮ ಜೆನಂಗಳ ಹೆಡ್ಡುತನಕ್ಕೆ ಎಂತ ಮಾಡುದು? ಕೆಟ್ಟಮೇಲೇ ಬುದ್ಧಿ ಬಪ್ಪದು ಹೆಚ್ಚಿನವಕ್ಕೆ. ಆದರೂ ಯಾವುದು ಸರಿ, ಯಾವುದು ತಪ್ಪು ಹೇಳ್ತ ವಿವೇಕ ಇರೆಕ್ಕು. ಅದೂ ಹೆಚ್ಚು ಹೆಚ್ಚು ಕಲ್ತವಕ್ಕಂತೂ ಅದೇ ರೀತಿಲಿ ಪ್ರಬುದ್ಧತೆಯೂ ಇರೆಡದ?? “ವಿದ್ಯಾ ದದಾತಿ ವಿನಯಂ” ಹೇಳಿ ಇದ್ದು, ಹಾಂಗೆಯೇ ವಿದ್ಯೆಂದಲೇ ವಿವೇಕವೂ ಬರೆಡದ?

    1. ಎಂತ ಮಾಡುದು ಸುವರ್ಣಿನಿಯಕ್ಕ!!! ಸದ್ಯದ ಮಟ್ಟಿನ್ಗೆ ವಿದ್ಯೆ ಹೇಳುದು ಬರೀ ಆಶನಕ್ಕಿಪ್ಪ ದಾರಿ ಹೇಳುವ ಪರಿಸ್ಥಿತಿ ಇದ್ದು ಅಲ್ಲದಾ???

  10. ಪೇಟೆಯ ಜೀವನಕ್ಕೆ ಒಗ್ಗಿ ಹೋದ ಕೂಸುಗೊ ಹಳ್ಳಿ ಜೀವನಕ್ಕೆ ಹೊಂದಿಗೊಂಬಲೆ ತಯಾರು ಇರ್ತವಿಲ್ಲೆ. ಅಲ್ಲಿಯಾಣ ಯಾವುದೇ ಕೆಲಸದ ಬಗ್ಗೆ ಎಂತದೂ ಅಂದಾಜು ಕೂಡಾ ಇರ್ತಿಲ್ಲೆ.
    ಲೇಖನ ಈಗಾಣ ಹಳ್ಳಿಲಿಪ್ಪ ಮಾಣಿಯಂಗಳ ಪರಿಸ್ಥಿತಿಗೆ ಹಿಡುದ ಕನ್ನಡಿ. ಒಟ್ಟಾರೆ ಒಂದು ಕೂಸು ಸಿಕ್ಕರೆ ಸಾಕು ಹೇಳುವ ಪರಿಸ್ಥಿತಿ. ಬ್ರಾಹ್ಮಣರೇ ಆಯೆಕ್ಕು ಹೇಳಿ ಕಾದರೆ ಮದುವೆ ಅಪ್ಪದೇ ಕಷ್ಟ.

    1. ಮದುವೆಯೇ ಅಂತಿಮ ಅಲ್ಲ ಹೇಳುವ ಭಾವವ ಬೆಳೆಸಿಕೊಳ್ಳೆಕ್ಕಷ್ಟೇ!!! ಒಂದು ಸಮಸ್ಯೆಯ ಪರಿಹರಿಸುಲೇ ಹೋಗಿ ಹಲವು ಸಮಸ್ಯೆಗೊಕ್ಕೆ ನಾಂದಿ ಅಪ್ಪದು ಬೇಡ ಅಲ್ಲದಾ!!!

      1. ಪುಟ್ಟ ಭಾವಾ.. ಇದು ಕಥೆ ಅಲ್ಲ ಇಂದು ಹವ್ಯಕ ಸಮಾಜಲ್ಲಿ ನಡೆವ ನಿಜ ದುರಂತ. ಬಹುಷಃ ನಮ್ಮೆಲ್ಲರ ಎದುರು ಹೀನ್ಗಿರ್ತ ಘಟನೆಗ ನಡದಿಕ್ಕು.
        ಎಲ್ಲಾ ಶಂಕರನ ಹಾಂಗಿರ್ತವಿಲ್ಲೆನ್ನೇ.ಪೇಟಗೆ ಬಂದು ಹಾಳಾದ ಮಾಣಿಯನ್ಗಳದ್ದೂ ಕಥೆ ಬೇರಿಕ್ಕನ್ನೇ.
        ಆದರೆ ಮದುವೆಯೇ ಅಂತಿಮ ಅಲ್ಲ ಹೇಳುತ್ತ ಭಾವನೆ ಸಮಸ್ಯೆಂದ ದೂರ ಓಡುವ ಪ್ರಯತ್ನ ಅಕ್ಕು.
        ಹೀನ್ಗಿರ್ತ ಘಟನೆಗೋ ಭವಿಷ್ಯಲ್ಲಿ ಕಥೆ ಆಗಿಯೇ ಒಳಿಯಲಿ , ನಿಜ ಅಪ್ಪೋದು ಬೇಡ ಹೇಳಿ ಗ್ರೆಶಿಗೊಂಡು ಕಣ್ಣಿನ ಕೊಡಿಲಿ ಇಳಿತ್ತಾ ಇಪ್ಪ ಹನಿ ನೀರಿನ ಒರೆಸುತ್ತಾ ಇದ್ದೆ.

  11. ಇದು ಕಥೆಯಲ್ಲ ಹವ್ಯಕರ ಜೀವನ ಬಾವಯ್ಯ

  12. ಈ ಕತೆಯ ಆಶಯ ಯಾರಿಂಗೆ ಮುಟ್ಟೆಕ್ಕೋ ಅವಕ್ಕೆ ಮುಟ್ಟಿದರೆ ಅಷ್ಟೇ ಸಾಕು.

    1. ಎಂಗಳ ಆಶಯವೂ ಅದೇ ಬಾವ!!!

    1. ಇದು ಖಂಡಿತವಾಗಿಯೂ ನೈಜ ಮೂಲಂಗಳ ಆಧರಿಸಿದ ಕಥೆ!!!! ಈ ರೀತಿಯ ಘಟನೆಗೊ ಮುಂದೆ ಆಗದ್ದಿರಲಿ ಹೇಳುವ ಹಾರೈಕೆ/ ಆಶಯ ನಮ್ಮದು.
      ಆದರೆ ಅದೆಲ್ಲವೂ ನಮ್ಮವರ ಮಾನಸಿಕ ಪ್ರಬುದ್ಧತೆಯ ಮೇಲೆ ನಿಂದಿದು ಹೇಳಿ ಎನ್ನ ಅಭಿಪ್ರಾಯ!!!
      ಧನ್ಯವಾದಂಗೋ

  13. ವಾಸ್ತವ ಲೇಖನವೋ ಇದು ಹೇಳ್ತಾ ಹಾಂಗೆ ಅನ್ಸುತ್ತು ಎನಗೆ.. ಅಂತೂ ದೀಪ ಬೆಣಚ್ಚು ಕೊಡ್ತು ಹೇಳಿ ಆ ಬೆಣಚ್ಚಿನ ಮುಟ್ಲೆ ಹೋದರೆ ಕೈ ಸುಡುಗು ಖಂಡಿತಾ..ಆ ಬೆಣಚ್ಚಿನ ನೋಡಿ ಅನುಭವಿಸೆಕ್ಕು.ಅತಿಯಾದರೆ ಅಮೃತವೂ ವಿಷ ಹೇಳುವ ಗಾದೆ ಸ್ಪಷ್ಟ ಅಲ್ದೋ ಪುಟ್ಟ ಬಾವಾ??

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×