- ಶೀರ್ಷಿಕೆ ಹಾಗೂ ಚೌಕಟ್ಟಿಲ್ಲದ್ದ ನ್ಯಾನೋ ಕಥೆಗೋ - November 6, 2010
- ಮನಸ್ಸು – ಮದ್ದು - September 21, 2010
- ಶಂಕ್ರ - July 31, 2010
ಕಥೆ-೧
ಶಂಕ್ರ ದಿನಾಗ್ಲೂ ಲೇಟಾಗಿ ಮನೆಗೆ ಬಪ್ಪದು. ಅವನ ಹೆಂಡತಿ ಬೇಗ ಬನ್ನಿ ಹೇಳಿ ಎಷ್ಟು ಸರ್ತಿ ಹೇಳಿದರೂ ಅವ ಬೇಗ ಬಾರ!. ಮದುವೆ ಆದ ಸಮಯಲ್ಲಿ ಬೇಗ ಬಂದುಗೊಂಡಿತ್ತಿದ. ಈಗ ಕೆಲಸ ಜಾಸ್ತಿ ಅಡ!
ಅವನಹತ್ರೆ ಇಪ್ಪ ಹಳತ್ತು ಬೈಕಿನ ಮಾರಿ ಹೊಸತ್ತು ತೆಗೆಯಕ್ಕು ಹೇಳಿ ಆಲೋಚನೆ ಮಾಡ್ತಾ ಇದ್ದ. ಹೆಂಡತಿ ಹೇಳಿತ್ತು “ಈಗ ಎಂತಗೆ. ಇಪ್ಪದ್ ಸಾಕು“. ಶಂಕ್ರ ಹೇಳಿದ ” ಎನಗೆ ಯಾವುದನ್ನೂ ಜಾಸ್ತಿ ಸಮಯ ಯೂಸ್ ಮಾಡಿ ಗೊಂತಿಲ್ಲೆ, ಹಳತ್ತು ಆವ್ತಾ ಇದ್ದಂಗೆ ಎಳದ್ದು ಇಡ್ಕೆಕ್ಕು“!!.
ಈಗ ಅವರ ಡೈವೋರ್ಸ್ ಕೇಸು ಕೋರ್ಟಿಲಿ ನಡೆತ್ತ ಇದ್ದು.!!!
ಕಥೆ-೨
ಚಂದ್ರಶೇಖರ ರಾವ್ ದೊಡ್ಡ ಮನಃಶಾಸ್ತ್ರಜ್ಞ, ಮತ್ತೆ ಸಲಹೆಗಾರ. ತುಂಬಾ ಜನ, ದಂಪತಿಗ ಅವರ ಹತ್ರೆ ಬಕ್ಕು ಸಲಹೆ ತೆಕ್ಕೊಂಬಲೆ. ಅವು ಹೇಳುಗು ” ನಿಂಗ ಕೆಲಸಕ್ಕಿಂತ ಫ್ಯಾಮಿಲಿಗೆ ಪ್ರಾಮುಖ್ಯತೆ ಜಾಸ್ತಿ ಕೊಡೆಕ್ಕು, ಅಂಬಗ ಎಲ್ಲಾ ಸಮಸ್ಯೆ ಪರಿಹಾರ” ಹೇಳಿ.
ಜಾಸ್ತಿ ಫೀಸು ತೆಕ್ಕೊಳ್ತಾವಿಲ್ಲೇ. ಹಾಂಗಾಗಿ ಅವಕ್ಕೆ ಕೆಲಸ ಜಾಸ್ತಿ. ದಿನಾಗ್ಲೂ ಲೇಟಕ್ಕು ಮನೆಗೆ ಬಪ್ಪಗ. ಹೆಂಡತಿ ಬೈಗು ” ನಿಂಗ ಊರಿಂಗೆ ಉಪಕಾರಿ………….!!”
ಅವಕ್ಕೆ ಈಗೀಗ ಅರ್ಥ ಆವ್ತು ಬೇರೆವಕ್ಕೆ ಹೇಳುದು ಸುಲಭ, ಅಳವಡಿಸಿಗೊಮ್ಬದು ಚೂರು ಕಷ್ಟ!!!
ಕಥೆ-೩
ಮೊನ್ನೆ ಪ್ರಕೃತಿ ದಿನಾಚರಣೆ ನಡದತ್ತು. ಪರಿಸರ ಪ್ರೇಮಿಗ ಎಲ್ಲ ಸೇರಿಗೊಂಡು ಜಾಥಾ ಎಲ್ಲಾ ಮಾಡಿದವು. ಮಾನ್ಯ ಪರಿಸರ ಮಂತ್ರಿಗ ಈ ಪರಿಸರ ನಾಶಕ್ಕೆ ಕಾರಣ ಅಪ್ಪ ಕೈಗಾರಿಕೆಗಳ ಕಡಮ್ಮೆ ಮಾಡೆಕ್ಕು ಹೇಳಿ ಹೇಳಿದವು
ಅದಾಗಿ ಎರಡು ದಿನಕ್ಕೆ ಬಂಡವಾಳ ಹೂಡಿಕೆ ಸಮಾವೇಶ ಹೇಳಿ ಮಾಡಿದವು. ಕೈಗಾರಿಕೆಗಳ ಅಭಿವೃದ್ದಿಯೇ ಈ ನಾಡಿನ ಅಭಿವೃದ್ದಿ ಹೇಳಿ ಮಂತ್ರಿಗೋ ಹೇಳಿದವು. ದೊಡ್ಡ ಸ್ಟೀಲಿನ ಕಾರ್ಖಾನೆಗೆ ಶಂಕು ಸ್ಥಾಪನೆ ಆಯ್ದು!! ರೈತರೆಲ್ಲ ಅದು ಎಂಗಳ ಸಮಾಧಿ ಹೇಳಿ ಗಲಾಟೆ ಮಾಡ್ತಾ ಇದ್ದವಡ. ಅವಕ್ಕೆ ಸೂಕ್ತ ಪರಿಹಾರ ಕೊಡ್ಲೆ ಇದ್ದು ಹೇಳಿ ಸರಕಾರ ಹೇಳಿದ್ದು!!
ಕಥೆ-೪
ಶಂಕ್ರಂಗೆ ಒಳ್ಳೆ ಕಂಪೆನಿಲಿ ಕೆಲಸ ಬೆಂಗ್ಳೂರಿಲಿ. ವೀಕೆಂಡಿಲಿ ಬೇರೆವರ ಹಾಂಗೆ ತಿರುಗುಲೆ ಹೋಗದ್ದೆ, ಅನಾಥಾಶ್ರಮ, ವೃದ್ಧಾಶ್ರಮಕ್ಕೆ ಹೋಗಿ ಅಲ್ಲಿಪ್ಪವರ ಒಟ್ಟಿನ್ಗೆ ಮಾತಾಡಿ ಸಾಂತ್ವಾನ ಹೇಳಿಯಪ್ಪಗ ಅವಂಗೆ ಒಂದು ರೀತಿ ಸಮಾಧಾನ.
ಅಂವ ಗ್ರೇಶುದು ಒಂದೊಂದು ಸರ್ತಿ, ಈ ಅಪ್ಪ ಅಮ್ಮನ ವೃದ್ಧಾಶ್ರಮಕ್ಕೆ ಸೇರ್ಸುದು ಎಷ್ಟು ಕಟುಕತನ ಹೇಳಿಗೊಂದು. ಅದಕ್ಕೆ ಅಂವಂಗೆ ಅಲ್ಲಿಪ್ಪವರ ಮೇಲೆ ಭಾರೀ ಪ್ರೀತಿ. ಆದರೆ ಇತ್ತೀಚೆಗೆ ಅವನ ಮಾಡುವೆ ಆದ ಮೇಲೆ ಅತ್ಲಾಗಿ ಹೊಪಲೆ ಆಯ್ದಿಲ್ಲೆ. ಆದರೆ ಪ್ರೀತಿ ಇತ್ತಲ್ದ??
ಹಾಂಗಾಗಿ ಅವನ ಅಬ್ಬೆ–ಅಪ್ಪನ ಅಲ್ಲಿಗೇ ಸೇರ್ಸಿದ್ದ.!!!!
ಕಥೆ-೫
ರವಿ ಡಿಪ್ಲೋಮಾ ಮಾಡಿ ಬೆಂಗ್ಳೂರಿಲಿ ಕಷ್ಟಪಟ್ಟು ಕೆಲಸಕ್ಕೆ ಸೇರಿದ. ಸಂಬಳ ಕಡಮ್ಮೆ ಆದರೂ ಫ್ರೆಂಡುಗಳ ಜೊತೇಲಿ ಹೆಂಗೋ ಸುಧಾರ್ಸಿಗೊಂಡಿತ್ತಿದ. ಅವನ ಹಾಂಗೆ ಉಷಾಂದೆ ಮೊನ್ನೆ ಮೊನ್ನೆ ಕೆಲಸಕ್ಕೆ ಅಲ್ಲಿ ಸೇರಿದ್ದು. ಒಂದೇ ಊರಿನವ್ವು ಇದಾ… ಹಾಂಗಾಗಿ ಬೇಗ ಫ್ರೆಂಡುಗಾದವು. ಮಾಮೂಲಿ ಕಥೆ, ಪ್ರೀತಿ ಹುಟ್ಟಿತ್ತು, ಇಬ್ರೂದೆ ಹೇಳಿಗೊಂಡಿದವಿಲ್ಲೆ ; ಅಂವ ಹೇಳಲಿ ಹೇಳಿ ಇದು, ಅದು ಹೇಳಲಿ ಹೇಳಿ ಇಂವ ಹಾಂಗೆ ಹೋತು …. ಆದರೆ ಒಳ್ಳೆ ಸಂಬಳದ ಕೆಲಸ ಸಿಕ್ಕಿಯಪ್ಪಗ ರವಿ ಫ್ಯಾಕ್ಟರಿ ಬಿಡುವ ಮನಸ್ಸು ಮಾಡಿದ. ಆದಿನ ಅವಿಬ್ರುದೆ ಕಾಫೀ ಡೇಲಿ , ಕಾಫೀ ಕುಡುದವು.
” ಅಂತೂ ಎನ್ನ ಎಲ್ಲಾ ಮರೆತ್ತೆ ಹೇಳಿ ಆತು ” ಉಷಾಂಗೆ ಕಣ್ತುಂಬಿ ಬಂತು
” ಛೇ ಹಾನ್ಗೆಂತ ಇಲ್ಲೇ, ನಮ್ಮ ಇಬ್ಬರ ಸಂಸಾರ ಸಾಗೆಕ್ಕು ಹೇಳಿ ಆದರೆ ಪೈಸೆ ಬೇಕಲ್ದ” ರವಿ ಉಶಾಂದು ಕೈ ಹಿಡುದು ಕೇಳಿದ, ಭರವಸೆಯ, ಒಲವಿನ ಮಹಾಪೂರವೇ ಅಲ್ಲಿ ಕಂಡತ್ತು..!!!!
ಕಥೆ-೬ (ಸದ್ಯಕ್ಕೆ ಮುಗುದತ್ತು)
ಇಪ್ಪತ್ತೈದು ಖಂಡಿ ಆಡಕ್ಕೆ ಅಪ್ಪ ದೊಡ್ಡ ಕುಳ ರಾಮ್ಭಟ್ರು ಮೊನ್ನೆ ಊರಿಂಗೆ ಹೋದಪ್ಪಗ ಸಿಕ್ಕಿತ್ತಿದವು.
” ಇದಾ ಪುಟ್ಟ. ಈ ಆಡಕ್ಕೆ ನಂಬಿರೆ ಆಗ. ನೀನು ಬೆಂಗ್ಳೂರಿಲಿ ಸೆಟ್ಲ್ ಅಪ್ಪದು ಒಳ್ಳೇದು, ಎಂಗಳ ಹಾಂಗೆ ಅಪ್ಪದು ಬೇಡ, ಭಾರೀ ಕಷ್ಟ ಇದ್ದು!!”, ಹೇಳಿದವು. ಆನು ಎಂತ ಹೇಳಿದ್ದಿಲ್ಲೇ. ಎಂತ ಕಷ್ಟ ಹೇಳಿ ಗೊಂತಾಯ್ದಿಲ್ಲೆ.!
“ಮುಂದಣ ತಿಂಗಳು ಅವರ ಮಗಳ ಮದುವೆ, ಎರಡು ಸಾವಿರ ಜನಕ್ಕೆ ಅಟ್ಟಣೆ, ಇಪ್ಪತ್ತು ಪವನು ಚಿನ್ನಡ!! ” ಅಮ್ಮ ನಿನ್ನೆ ಫೋನಿಲಿ ಹೇಳಿತ್ತು.
ಎಲ್ಲಾ ಕತೆಗಳೂ ಒಂದರಿಂದ ಒಂದು ಲಾಯಿಕಿದ್ದು ಪುಟ್ಟಬಾವ..
ತುಂಬಾ ಸಮೆಯ ಬಿಟ್ಟು ಬೈಲಿಂಗೆ ಬಂದದರ್ಲಿ ಎಂಗಳ ಕುತೂಹಲ ತಣುಶಿದಿ!!
ಕತೆಗೊ ಮುಂದುವರಿಯಲಿ…
ಪುಟ್ಟ ಭಾವ ಒಳ್ಳೆ ಕಥಗೋಕ್ಕೆ ಒಳ್ಳೆ ಒಪ್ಪ೦ಗಳೂ ಬಯಿ೦ದು.ಇನ್ನೂ ಕಥಗೊ ಬರಳಿ ಸಮಯ ನಾವು ಹೊಸ್ತಾಗಿ ಉ೦ಟು ಮಾಡ್ಲೆ ಎಡಿತ್ತಿಲ್ಲೆ ಇದ್ದದರಲ್ಲೇ ಹೊ೦ದ್ಸಿ ಬರೆಯಿ.ಒಪ್ಪ೦ಗಳೊಟ್ಟಿ೦ಗೆ.
ಸುಂದರ ಕಥೆಗೊ.
ಜಟಿಲ ವಸ್ತುಗಳ ಸರಳವಾಗಿ ಕಥೆ ಮಾಡಿ ಬೈಲಿಂಗೆ ಬಳುಸಿದ ಪುಟ್ಟಭಾವ, ಬತ್ತಳಿಕೆಲಿಪ್ಪ ಸರಳುಗೊ ಬರಲಿ ಪುಂಖಾನುಪುಂಖವಾಗಿ,ಬೈಲಿನವರ ಮನಸ್ಸಿಂಗೆ ನಾಟಲಿ,ಹೃದಯವ ತಟ್ಟಲಿ ,.
ಕತೆಗ ತುಂಬಾ ತುಂಬಾ ಲಾಯ್ಕ ಇದ್ದು….
ಕಥೆ-೬ (ಸದ್ಯಕ್ಕೆ ಮುಗುದತ್ತು)
ಸದ್ಯಕ್ಕೆ ಮುಗುದರೂ, ಇನ್ನೂ ಬತ್ತಾ ಇರಳಿ.
(ಸದ್ಯಕ್ಕೆ ಮುಗುದರೂ, ಇನ್ನೂ ಬತ್ತಾ ಇರಳಿ)
ಶರ್ಮಪ್ಪಚ್ಚಿ ಧನ್ಯವಾದ!! ಎಂಗಳ ಬತ್ತಳಿಕೆಲಿ ಇನ್ನೂ ಸುಮಾರು ಬಾಣಂಗ ಇದ್ದು (ಹೇಳಿಗೊಂಬದು!!!) ಪ್ರಯೋಗಿಸುಲೆ ಸಮಯ ಸಾಕಾವ್ತ ಇಲ್ಲೇ!! 😀 😀
ಪುಟ್ಟ ಭಾವ ಬರದ “ಪುಟ್ಟ ಪುಟ್ಟ ಕತೆಗೊ” ಒಂದೊಂದು ಸಂದೇಶಂಗಳೂ ಇದ್ದುಗೊಂಡು ಲಾಯಿಕ ಆಯಿದು.
ಈ ಸಣ್ಣ ಕಥೆಗಳ ಕಥೆಗೋ ಹೇಳಿ ಗ್ರೆಷೆಕ್ಕಾದ ಅಗತ್ಯ ಇಲ್ಲೆ ಹೇಳಿ ಎನ್ನ ಅಭಿಪ್ರಾಯ …
ಮತ್ತೆ ಎಂಥಾ ಹೇಳಿ ಗ್ರೆಷೆಕ್ಕೋ!! 😀 😀
ನ್ಯಾನೋ ಕಥೆ ಲಾಯ್ಕಿದ್ದು,ಚುಬ್ಬಣ್ಣನ ಒಪ್ಪದ ಕಥೆಯೂ ಒಪ್ಪ ಆಯಿದು.
ಕಥೆ-೭- ” ಹೀಗು ಉ೦ಟೆ” 😀 😛
———————————————-
ರವಿ ಡಿಪ್ಲೋಮಾ ಮಾಡಿ ಬೆಂಗ್ಳೂರಿಲಿ. ಉಷಾ ರಾಮ್ಭಟ್ರು ಮಗಳು. ಇಪ್ಪತ್ತೈದು ಖಂಡಿ ಆಡಕ್ಕೆ ಅಪ್ಪ ದೊಡ್ಡ ಕುಳ ರಾಮ್ಭಟ್ರು.ಒಂದೇ ಊರಿನವ್ವು ಒ೦ದೇ ಕ೦ಪನಿ ಇದಾ… ಹಾಂಗಾಗಿ ಬೇಗ ಫ್ರೆಂಡುಗಾದವು. ಮಾಮೂಲಿ ಕಥೆ, ಪ್ರೀತಿ ಹುಟ್ಟಿತ್ತು.
ಅವಿಬ್ರುದೆ ಕಾಫೀ ಡೇಲಿ, ಆ ಡೇ, ಈ ಡೇ.. ಹೇಳಿ.. ತಿರುಗಿದವದಾ….. ಲಗಾಮ್ ಹಾಕದ್ರೆ ಆಗ ಹೇಳೆ
ಅವರ ಮಗಳ ಮದುವೆ ರವಿಯೊಟ್ಟಿ೦ಗೆ- ಎರಡು ಸಾವಿರ ಜನಕ್ಕೆ ಅಟ್ಟಣೆ, ಇಪ್ಪತ್ತು ಪವನು ಚಿನ್ನ ಕೊಟ್ಟು ಮಾಡಿದವು.
ಸಮಯ ಕಳುದ ಹಾ೦ಗೆ.ಮಕ್ಕೊ ಆದಮತ್ತೆ ಹೆಂಡತಿ ಕೆಲಸ ಬಿಟ್ಟತು. ರವಿ ದಿನಾಗ್ಲೂ ಲೇಟಾಗಿ ಮನೆಗೆ ಬಪ್ಪದು. ಅವನ ಹೆಂಡತಿ ಬೇಗ ಬನ್ನಿ ಹೇಳಿ ಎಷ್ಟು ಸರ್ತಿ ಹೇಳಿದರೂ ಅವ ಬೇಗ ಬಾರ!. ಮದುವೆ ಆದ ಸಮಯಲ್ಲಿ ಬೇಗ ಬಂದುಗೊಂಡಿತ್ತಿದ. ಈಗ ಕೆಲಸ ಜಾಸ್ತಿ ಅಡ!
ಅವನಹತ್ರೆ ಇಪ್ಪ ಹಳತ್ತು ಬೈಕಿನ ಮಾರಿ ಹೊಸತ್ತು ತೆಗೆಯಕ್ಕು ಹೇಳಿ ಆಲೋಚನೆ ಮಾಡ್ತಾ ಇದ್ದ. ಹೆಂಡತಿ ಹೇಳಿತ್ತು “ಈಗ ಎಂತಗೆ. ಇಪ್ಪದ್ ಸಾಕು“. ರವಿ ಹೇಳಿದ ” ಎನಗೆ ಯಾವುದನ್ನೂ ಜಾಸ್ತಿ ಸಮಯ ಯೂಸ್ ಮಾಡಿ ಗೊಂತಿಲ್ಲೆ, ಹಳತ್ತು ಆವ್ತಾ ಇದ್ದಂಗೆ ಎಳದ್ದು ಇಡ್ಕೆಕ್ಕು“!!.
———————————————-
– 😀 😛
ಇದು ಲಾಯ್ಕಾಯ್ದು !! hahhhahha
ಏ ಚುಬ್ಬಣ್ಣ!!
ಬೆಂಗಳೂರಿನ್ಗೆ ಬಂದ ಮೇಲೆ, ಊರಿನ ಕೂಸುಗೋ ಊರಿನವರ ಇಷ್ಟ ಪಡುದು ಚೂರು ಕಷ್ಟವೇ!! ಕಥೇಲಿ ಮಾತ್ರ ಅಕ್ಕಷ್ಟೆಯೋ ಹೇಳಿ ಎನಗೆ ಸಂಶಯ!! (ಆರದ್ದಾದರೂ ಆಕ್ಷೇಪ ಇದ್ದರೆ ಕ್ಷಮಿಸಿ!!) 😀 😀
ನಿಂಗ ಕೊಟ್ಟ ಒಪ್ಪ ಭಾರೀ ಲಾಯ್ಕಾಯ್ದು!!
ಪುಟ್ಟಭಾವ.. ಆನು ಸುಮ್ಮನೆ ಕುಶಾಲಿ೦ಗೆ ನಿ೦ಗಲ ಕತೆ ರಜಾ ಬದಲ್ಸಿದ್ದು.. ಅಷ್ಟೆ.. 🙂
{… ಬೆಂಗಳೂರಿನ್ಗೆ ಬಂದ ಮೇಲೆ, ಊರಿನ ಕೂಸುಗೋ ಊರಿನವರ ಇಷ್ಟ ಪಡುದು ಚೂರು ಕಷ್ಟವೇ!! }
ಇದರ ಬಗ್ಗೆ ಜಾಸ್ತಿ ಚರ್ಚೆ ಮಾಡ್ತಿಲ್ಲೆ.. ನಿ೦ಗೊ ಹೇಳಿದ್ದು ಸತ್ಯ ಹೇಳಿ ಎಲ್ಯೊ ಒ೦ದು ಕಡೆ ಎನಗು ತೊರ್ತು…
(ಇದರ ಬಗ್ಗೆ ಜಾಸ್ತಿ ಚರ್ಚೆ ಮಾಡ್ತಿಲ್ಲೆ.. ನಿ೦ಗೊ ಹೇಳಿದ್ದು ಸತ್ಯ ಹೇಳಿ ಎಲ್ಯೊ ಒ೦ದು ಕಡೆ ಎನಗು ತೊರ್ತು…
)
ಅದು ಚೂರು ವಿವಾದಾಸ್ಪದ ವಿಷಯ ಅಲ್ಲದ?? ಮತ್ತೆ ಮಹಿಳಾ ಸಂಘಟನೆಯವು ಗಲಾಟೆ ಮಾಡಿರೆ ಕಷ್ಟ! 😀 😀
ಇರಲಿ, ನಿಂಗ ಸಹಮತ ವ್ಯಕ್ತಪಡಿಸಿದ್ದಕ್ಕೆ ಧನ್ಯವಾದ!!
ಹಾ… ಅದು ಅಪ್ಪು ಪುಟ್ಟಭಾವ.. ಮತ್ತೆ ನಮ್ಮಿಬ್ರ ಲಗಾಡಿ ತೆಗಗು… 😉
ಲಾಯ್ಕಾಯ್ದು 🙂
ಕಥೆ ಲಾ….ಯ್ಕಿದ್ದು ” ಶೀರ್ಷಿಕೆ ಬೇರೆಲ್ಲೋ ಇಪ್ಪದಾತಲ್ಲದಾ ?
ಕಾಂತಣ್ಣ ! “ಶೀರ್ಷಿಕೆ” ವಿಜಯ ಕರ್ನಾಟಕಂದ ಕದ್ದದು!!
ಕಾಪಿ ರೈಟ್ಸ್ ಇದ್ದರೆ ನಾವು ಸೋತದೆ!
ಲೈಕಾಯಿದು ಕಥೆ…
Artha poorna sanna kathegalu.. Putta bavange danyavadango…