ಬೈಲಿನ ಓದುಗರಿಂಗೆ ಆತ್ಮೀಯ ವಂದನೆಗೊ.
ಶ್ರೀಮತಿ ಪ್ರಸನ್ನಾ ವಿ ಚೆಕ್ಕೆಮನೆ ಇವು ಬರದು ಇಲ್ಲಿ ಪ್ರಕಟ ಆವ್ತಾ ಇಪ್ಪ “ಸ್ವಯಂವರ” ಕಾದಂಬರಿಯ ನಿಂಗೊ ಎಲ್ಲರೂ ಓದುತ್ತಾ ಇದ್ದೀರಿ, ಹಾಂಗೇ ಒಳ್ಳೆಯ ಅಬಿಪ್ರಾಯಂಗಳ ಇಲ್ಲಿ ಹಂಚುತ್ತಾ ಇದ್ದೀರಿ. ವೈಯಕ್ತಿಕವಾಗಿ ಅವಕ್ಕೆಯೂ ನಿಂಗಳ ಅಭಿಪ್ರಾಯವ ತಿಳುಶುತ್ತಾ ಅವರ ಬರವಣಿಗೆಗೆ ಪ್ರೋತ್ಸಾಹ ಕೊಡ್ತಾ ಇದ್ದೀರಿ ಹೇಳುವದು ಸಂತೋಷದ ವಿಶಯ.
ಪ್ರತಿಯೊಂದು ಕಂತು ಅಂತ್ಯ ಅಪ್ಪಗ ಒಂದು ಕುತೂಹಲ ಘಟ್ಟಲ್ಲಿ ತಂದು ನಿಲ್ಲುಸುವ ಅವರ ಕಥಾ ನಿರೂಪಣೆಯ ಶೈಲಿ ವ್ಶಿಷ್ಟವಾದ್ದದು.
ಕತೆಲಿ ಮುಂದೆ ಎಂತ ಆವ್ತು, ಸುಖಾಂತ್ಯಲ್ಲಿ ಮುಗಿತ್ತೋ, ಸುದೀಪ ಆರ ಮದುವೆ ಆವ್ತ, ಸುಶೀಲ ಎಂತ ಮಾಡ್ತಾ ಇದ್ದು, ಅದರ ಮಕ್ಕೊ ಎಂತ ಮಾಡ್ತಾ ಇದ್ದವು ಇತ್ಯಾದಿ ಕುತೂಹಲಂಗೊಕ್ಕೆ ಒಂದು ಅಂತ್ಯ ಇನುಕೆಲವೇ ದಿನಂಗಳಲ್ಲಿ ಗೊಂತಕ್ಕು ಹೇಳಿ ಅವು ತಿಳುಶಿದ್ದವು.
ಕತೆಯ ಓದುತ್ತಾ ನಿಂಗಳ ಅಬಿಪ್ರಾಯಂಗಳ ತಿಳುಶಿ ಅವಕ್ಕೆ ಪ್ರೋತ್ಸಾಹ ಕೊಟ್ಟು, ಇನ್ನಷ್ಟು ಕತೆಗೊ ಅವರಿಂದ ನಿರೂಪಣೆ ಆಗಲಿ ಹೇಳಿ ಹಾರೈಸುವೊ°
ಶ್ರೀಕೃಷ್ಣ ಶರ್ಮ ಹಳೆಮನೆ
- ಅವನೀಶ- SSLC 99.68% - May 20, 2023
- ಕಣ್ಣಾಮುಚ್ಚೇ ಕಾಡಾಗೂಡೇ - August 3, 2021
- ಮರಳಿ ಗೂಡಿಗೆ - May 31, 2021
ಪ್ರಸನ್ನಕ್ಕ ಬರದ ಸ್ವಯಂವರ ಹವ್ಯಕ ಧಾರಾವಾಹಿಯ ಪ್ರತಿವಾರವೂ ಕಾದುಕೂದು ಬಹಳ ಕುತೂಹಲಲ್ಲಿ ಓದೆಂಡಿದ್ದವರಲ್ಲಿ ಆನೂ ಒಬ್ಬ. ಪ್ರತಿ ಕಂತಿಲ್ಲಿಯುದೆ ಮುಂದೆ ಎಂತ ಆವ್ತು ಎಂತ ಅವ್ತು ಹೇಳುವ ಕುತೂಹಲ ಹುಟ್ಟುಸಿದ ಕತೆ. ಈಗಾಣ ಕೆಲವು ಕೂಸುಗಳ ಮನಸ್ಥಿತಿಗೆ ಕನ್ನಾಟಿ ಹಿಡುದ ಕತೆ. ಒಳ್ಳೆಸಂದೇಶ ಕೊಟ್ಡ ಕತೆ. ಓದದ್ದವು ಎಲ್ಲೋರೂ ಓದೆಕಾದ ಕತೆ. ಕೊನೆಯ ಕಂತಿನ ನಿರೀಕ್ಷೆಲಿ ಇದ್ದೆ.
Shubha haraike @ prasanna chekkemane… Vishista reetili pada prayoga madi odugara manaseladdi. Heenge innu hechechu havyaka kathe kadambari rachisi namma baasheya olishekkuli enna manavi. Swayamvara kaadambari olle reethili moodi baindu.. kathege ondu adbhuta sukaantya kodtili nambida ningala abhimaani.. 🙏