ಹ್ಮ್, ಗಣೇಶಮಾವನ ಗೊಂತಿದ್ದಲ್ದ?ಅದಾ, ಬೈಲಕರೆಲಿ ಮನೆ! ನಿಂಗೊಗೆ ಅವರ ಗೊಂತಿಲ್ಲದ್ರೂ ಅವಕ್ಕೆ ನಿಂಗಳ ಗೊಂತಿರ್ತು!
ಅವಕ್ಕೆ ಎಲ್ಲವುದೇ ಅರಡಿಗು.ಬೈಕ್ಕು ಬಿಡ್ಳೆ ಅರಡಿಗು, ಕಾರು ತಿರುಗುಸುಲೆ ಅರಡಿಗು, ಕೊದಿಲು ಮೇಲಾರ ಮಾಡ್ಳೆ ಅರಡಿಗು, ಅದರ ಉಂಬಲೂ ಎಡಿಗು!ಕರವಲೂ ಅರಡಿಗು, ಕೆಮ್ಕಕ್ಕೆ ಅಡಕ್ಕೆ ಹಾಕಲೂ ಅರಡಿಗು, ಬೆಂಗುಳೂರಿಂಗೆ ಹೋಗಿ ಬೇಕಾದ ಕೆಲಸ ಮಾಡಿಗೊಂಡು ಬಪ್ಪಲೂ ಅರಡಿಗು, ಪೂಜೆ-ಮಂತ್ರಂಗಳೂ ಅರಡಿಗು, ಮದುವೆ ಮಾಡುಸುಲೂ ಅರಡಿಗು, ಪೋನಿಲಿ ಇಂಗ್ಳೀಶಿಲಿ ಮಾತಾಡಲೂ ಅರಡಿಗು,ಕವುಡೆ ತಿರುಗುಸುಲೆ ಅರಡಿಗು, ಜಾತಕ ಬರವಲುದೇ ಅರಡಿಗು, ಪೇಂಟು ಹಾಯ್ಕೊಂಡು ಕಂಪ್ಯೂಟರು ಕುಟ್ಟುಲೂ ಅರಡಿಗು! ಮನೆಲಿಪ್ಪಗ ಅಡಕ್ಕೆ ಅಗುಕ್ಕೊಂಡು ಎಲೆ ತಿಂಬಲೂ ಅರಡಿಗು, ಪೇಟಗೆ ಹೋಪಗ ಪೌಡ್ರು ಹಾಕಲೂ ಅರಡಿಗು!!
ಸಾಮಾನ್ಯವಾಗಿ ಮನುಶ್ಯ ಒಬ್ಬಂಗೆ ಎಂತೆಲ್ಲ ಬೇಕೋ -ಅದೆಲ್ಲ ಅರಡಿಗು!ಅವು ಒಬ್ಬ ಇದ್ದರೆ ಹತ್ತು ಜೆನ ಇದ್ದ ಗುಣ ಹೇಳಿ ಮಾಷ್ಟ್ರಮನೆ ಅತ್ತೆ ಯೇವತ್ತೂ ಹೇಳುಗು.ಸದ್ಯ ಕಳುದೊರಿಷ ಮಾನಸ ಸರೋವರ ಕೈಲಾಸ ಪರ್ವತ ಎಲ್ಲ ತಿರುಗಿಕ್ಕಿ ಬಯಿಂದವು. ಬಂದ ಶುದ್ದಿಯ ಅವರ ಬ್ಲೋಗಿಲಿ ಬರದ್ದವು.ಅವು ಒಪ್ಪಣ್ಣನ ಬೈಲಿಲಿ ತುಂಬ ಮೊದಲಿಂದಲೇ ಇಪ್ಪವು.
’ಶುದ್ದಿ ಹೇಳ್ತಿರೋ’ ಕೇಳಿಯಪ್ಪಗ ಸಂತೋಷಲ್ಲಿ “ಅಕ್ಕು ಒಪ್ಪಣ್ಣೋ” ಹೇಳಿದವು. ಅವರನ್ನುದೇ ಅವರ ಮನೆಲಿ ಒಪ್ಪಣ್ಣ ಹೇಳಿಯೇ ದಿನಿಗೆಳುದು ಇದಾ, ಅವರಿಂದ ಹೆರಿಯೋರು!ಅವಕ್ಕೆ ‘ಎಂತರ ಬರೇಕಪ್ಪಾ’ ಹೇಳಿ ದೊಡಾ ಕನುಪ್ಯೂಸು. ಎಲ್ಲಾ ಅರಡಿಗಾದವಕ್ಕೆ ಈ ನಮುನೆ ಬಪ್ಪದು ಸಹಜ. ಅದಕ್ಕೆ ಅಜ್ಜಕಾನ ಬಾವ ಹೇಳಿದ°, ‘ನಿಂಗೊ ಮಂತ್ರಂಗಳ ಬಗ್ಗೆ ಶುರುಮಾಡಿ ಗಣೇಶಪ್ಪಚ್ಚಿ’.
ಹಾಂಗೆ ಕೆಲವೆಲ್ಲ ಮಂತ್ರಂಗಳ ಬಗ್ಗೆಯೋ, ಜ್ಯೋತಿಷ್ಯದ ಬಗ್ಗೆಯೋ, ಪೂಜೆ ಮಾಡ್ತ ವಿಧಾನದ ಬಗ್ಗೆಯೋ ಮತ್ತೊ ಶುದ್ದಿ ಹೇಳ್ತವಡ. ಅದರ ಒಟ್ಟಿಂಗೆ ಬೇರೆ ಶುದ್ದಿಗಳೂ ಹೇಳುಗು, ಅದು ಕುಶಾಲಿಂಗೆ!
ಸಂಸ್ಕೃತ ಮಂತ್ರಂಗಳ ಒಟ್ಟೊಟ್ಟಿಂಗೆ ಹವ್ಯಕ ಅರ್ತಂಗೊ- ಪ್ರಯೋಗಂಗೊ – ವಿವರಣೆಗೊ ಹೇಳ್ತಾ ಹೋವುತ್ತವು. ಇವರ ಒಟ್ಟಿಂಗೆ ಬಟ್ಟಮಾವಂದೇ ಸೇರ್ತವಡ- ಪ್ರತಿತೆಗವಲೆ.ಅವು ಬರದ್ದರ ಓದಿ, ಮನನ ಮಾಡಿಗೊಂಬೊ°. ಮದೂರಿಲಿಯೋ, ಕೋಟೆಲಿಯೋ – ಮಣ್ಣ ವಸಂತ ವೇದಪಾಟಶಾಲೆಲಿ ಕಲ್ತ ಮಂತ್ರಂಗಳ ಮತ್ತೊಂದರಿ ನೆಂಪುಮಾಡಿಗೊಂಬ°.
ಅವು ಬರದ್ದರ ನಾಕು ಜೆನಕ್ಕೆ ಹೇಳಿ. ಅವಕ್ಕುದೇ ಒಪ್ಪ ಕೊಡಿ.
ಆತೋ?ಏ°?
ಈ ಬಯಲಿಲಿ ಇಪ್ಪ ಎಲ್ಲೋರಿನ್ಗೂ ಗಣೇಶನ ಹಬ್ಬದ ಶುಭಾಶಯನ್ಗೋ
ವಿಘ್ನ ನಿವಾರಕನಾದ ಶ್ರೀ ಮಹಾಗನಪತಿ ಯು ಎಲ್ಲೋರಿನ್ಗೂ ಮಂಗಳವನ್ನುನ್ತುಮಾಡ್ಲಿ.
ವಿಘ್ನೇಶ್ವರಃ ಸರ್ವಾನ್ ಪಾತು |
ಹಿಂದೆ ಯಾರೋ ಯನಗೆ ಈ ಗಣಪತಿ ಫೋಟೋ ಕಳ್ಸಿಕ್ಕಿಯಾ ಇದ್ರ ೧೫ ಜನ್ರಿಗೆ ಕಳಸಿ
ಒಳ್ಳೇ ದಾಗ್ತು ಇಲ್ಲಗದ್ರೆ ತೊಂದ್ರೆ ಹೇಳಿದ್ವಾಗಿತ್ತು. ” ಶುಭಾಶಯ ” ಬರುದು ಹೀಂಗಲ್ದಾ ? ಮುಳಿಯ ರಾಘಣ್ಣ
ಬೈಲಿನ ಎಲ್ಲಾ ಬಂಧುಗೊಕ್ಕೂ ಚೌತಿಯ ಶುಭಾಷಯ.
ಚಾಮಿ ಗೆಣಪ್ಪಣ್ಣ ಎಲ್ಲಾ ವಿಘ್ನಂಗಳ ದೂರ ಮಾಡಿ ಸಂತೋಷ ಸಮ್ರದ್ಧಿ ತರಲಿ ಹೇಳಿ ಪ್ರಾರ್ಥಿಸುವ.
ಈ ಪಟ ಪೂನಾದ ಪ್ರಸಿದ್ಧ ದಗಡು ಸೇತ್ ಹಲವಾಯಿ ವರುಷವೂ ಪೂಜಿಸುತ್ತಾ ಗೆಣಪ್ಪಣ್ಣನೋ?ಒಪ್ಪಣ್ಣನೆ ಹೇಳೆಕ್ಕಷ್ಟೇ,ಪೂಜೆಯೆಡಕ್ಕಿಲಿ.
ಓ… ಗಣಪತಿ ಚಾಮಿ ಕಣ್ಣು ಒಡದು ಮುಚ್ಚಿ ಮಾಡ್ತದು ಎಂತಕೆ??
ಎರಡು ಕಣ್ಣೂ ಮುಚ್ಚಿ ತೆಗದು ಮಾಡ್ತ… ಒಂದೇ ಕಣ್ಣು ಮುಚ್ಚಿ ತೆಗದು ಮಾಡ್ತಿತರೆ ಆನು ಹೇಳ್ತಿತೆ ಎಂತಕೆ ಹೇಳಿ.. ಅವ ಬ್ರಹ್ಮಾಚಾರಿ ಅಲ್ಲದೋ! 😉