ಕಿದೂರು ಡಾಕ್ಟ್ರ ಆರಿಂಗೆ ಪರಿಚಯ ಇಲ್ಲದ್ದು, ನಿಂಗಳೇ ಹೇಳಿ.
ಒಪ್ಪಣ್ಣನ ಬೈಲಿನ ಆರಿಂಗೆ ಎಂತ ಸಂಕಟ ಬಂದರೂ ಮದಾಲು ನೆಂಪಪ್ಪದು ಈ ಡಾಕ್ಟ್ರ. ಮತ್ತೆ ವೆಂಕಟರಮಣನ.
ಕಾಸ್ರೋಡಿನ ಏವದೋ ದೊಡ್ಡ ಆಸ್ಪತ್ರೆಲಿ ಮದ್ದು ಕೊಡುದಡ. ಇವು ಕೊಟ್ಟ ಮದ್ದಿಂಗೆ ಗುಣ ಆಗದ್ದ ಜೆನವೇ ಇಲ್ಲೆಡ.
ಯೇವ ಮದ್ದಾದರೂ ಸಮ, ಇವು ಕೊಟ್ಟ ಮತ್ತೆ ರೋಗ ಇಲ್ಲೆ ಹೇಳಿಯೇ ಅರ್ಥ!
ಅದರಲ್ಲೂ ಬೋದ ತಪ್ಪುಸುದರ್ಲಿ ಎತ್ತಿದ ಕೈ ಅಡ.
ಬೋದ ತಪ್ಪುಸುದೇ ಹಾಂಗೆ, ಮೂರು ನಮುನೆ ಮದ್ದು ಇದ್ದಡ ಅವರತ್ರೆ.
ಬೆಳಿದು, ಕಂದು ಬಣ್ಣದ್ದು, ಕಪ್ಪು ಬಣ್ಣದ್ದು.
ಮಕ್ಕೊಗೆಲ್ಲ ಬೆಳಿ ಬಣ್ಣದ್ದು - ಪಾಪದ್ದು.
ಹದಾದವಕ್ಕೆ ಹದಾ ಪವರಿನ ಕಂದು ಬಣ್ಣದ್ದು,
ದೊಡ್ಡವಕ್ಕೆ ಕಪ್ಪು ಬಣ್ಣದ್ದು - ಷ್ಟ್ರೋಂಗು!
ಮೂರ್ನೇದುದೇ ಹಿಡಿಯದ್ರೆ, ಮತ್ತುದೇ ಬೋದ ತಪ್ಪದ್ರೆ - ಮತ್ತೆ ಅವು ಮಾತಾಡ್ಳೆ ಸುರು ಮಾಡುದಡ!
ಹಾಂಗೆ, ಇವರ ಕೈಲಿ ಬೋದ ತಪ್ಪದ್ದ ಜೆನವೇ ಇಲ್ಲೆ.
ಮನುಷ್ಯರ, ಮುಖ್ಯವಾಗಿ ಮಕ್ಕಳ ಆರೋಗ್ಯದ ಬಗೆಗೆ ವಿಶೇಷ ಕಾಳಜಿ.
ಇವು ಹೇಳ್ತ ಒಂದೊಂದು ಪೋಯಿಂಟುದೇ ಇಂಜೆಕ್ಷನು ಕುತ್ತಿದ ಹಾಂಗೆ ಆವುತ್ತು.
ವಿಷಯ ವಿವರುಸಿಗೋಂಡು ಹೋದರೆ ಷ್ಟೆತಸ್ಕೋಪಿಲಿ ಶಬ್ದ ಕೇಳಿದ ಹಾಂಗೆ ಆವುತ್ತು.
ವೈದ್ಯಕೀಯ ಕ್ಷೇತ್ರದ ಕೆಲವು ಸತ್ಯಂಗಳ ಹೇಳಿಯಪ್ಪಗ ದೋಡ್ಡ ಮಾತ್ರೆ ನುಂಗಿದಷ್ಟು ಕಷ್ಟ ಆವುತ್ತು,
ಕೆಲವು ಗಮ್ಮತ್ತುಗಳ ಹೇಳುವಗ ಸೆಮ್ಮದ ಕೆಂಪುಮದ್ದು ಕುಡುದ ಹಾಂಗಾವುತ್ತು.
ಒಟ್ಟಿಲಿ ಇವು ಡಾಗುಟ್ರು.
ಇವುದೇ ಒಪ್ಪಣ್ಣನ ಬೈಲಿಂಗೆ ಬಂದು ಶುದ್ದಿ ಹೇಳ್ತವು.
ನಾವೆಲ್ಲರುದೇ ಕೇಳುವೊ.
ರಜ ರಜ ಕುಷಾಲು, ರಜ ಚೀಪೆ ಮದ್ದು, ರಜ ರಜ ಮದ್ದು-ಮಾತ್ರೆ, ರಜ ರಜ ಇಂಜೆಕ್ಷನು - ಎಲ್ಲವುದೇ ಸೇರಿ ನಮ್ಮ ಕಿದೂರು ಡಾಕ್ಟ್ರ. (ವೇಲುವೈದ್ಯರ ಶಕ್ತಿಮದ್ದು ಸದ್ಯಕ್ಕೆ ಈಗ ಇವರತ್ರೆ ಮಾತ್ರ ಸ್ಟೋಕು ಇಪ್ಪದಡ.......ಲ೦ಬೋದರ ಗುಟ್ಟಿಲಿ ಹೋಗಿ ತಿ೦ದಿಕ್ಕಿ ಬತ್ತ..ನಿ೦ಗೊಗೂ ಬೇಕಾರೆ ಕೇಳಿ!!!)
ಮದ್ದು ತೆಕ್ಕೊಳಿ, ಒಪ್ಪ ಕೊಡಿ.
ಆಗದೋ?
ಮನುಷ್ಯರಲ್ಲಿ ಸಯಾಮಿ ಮಕ್ಕೊ ಹುಟ್ಟುವ ಹಾಂಗೆ ಒಂದೊಂದರಿ ಹಾವುಗಳಲ್ಲಿಯುದೇ ಅಪ್ಪ ಕ್ರಮ ಇದ್ದು, ಅಂಬಗ ಎರಡು ತಲೆ ಹಾವು ಹುಟ್ಟಿದ ಉದಾಹರಣೆ ಇದ್ದು, ಆದರೆ ಅದು ಹೆಚ್ಚು ಸಮಯ ಬದುಕ್ಕುತ್ತಿಲ್ಲೆ.
ನಿಜವಾಗಿಯುದೇ ಐದು ತಲೆಯ ಸರ್ಪ ಇಲ್ಲೆ.
adu biladwara garden li ippa concrete sarpa. laika iddu. sumaru 10-15 varsha aathu.
ಧನ್ಯವಾದಂಗೊ..ವೆಂಕಟೇಶ್ ಗೆ..ಎನಗುದೇ ವಿಚಿತ್ರ ಹೇಳಿ ಅನಿಸಿತ್ತು .ಮೈಲ್ ನೋಡಿ..
ಧನ್ಯವಾದ೦ಗ ವೆ೦ಕಟೇಶಣ್ಣ೦ಗೆ…
sariyagi helidde vekateshanna