Oppanna.com

ಕರಿಮಣಿ ಮಾಲೆ ಕಥಾ ಸಂಕಲನ

ಬರದೋರು :   ಶರ್ಮಪ್ಪಚ್ಚಿ    on   25/10/2020    0 ಒಪ್ಪಂಗೊ

ಭಾಷೆ ಒಳಿಯೆಕ್ಕಾದರೆ, ಅದರ ಸಾಹಿತ್ಯಕ್ಷೇತ್ರಲ್ಲಿಯೂ ಸಾಕಷ್ಟು ಕೃಷಿ ಆಯೆಕ್ಕು. ಹವ್ಯಕರಲ್ಲಿ ಹಲವಾರು ಜೆನಂಗೊ ಹವ್ಯಕ ಸಾಹಿತ್ಯಕೃಷಿ ಮಾಡ್ತಾ ಇದ್ದವು. ಅದರಲ್ಲಿ ಅಗ್ರಗಣ್ಯ ಸಾಲಿಲ್ಲಿ ನಿಂಬವು ನಮ್ಮ ಗಡಿನಾಡಿಲ್ಲಿ ಇಪ್ಪ ಪ್ರಸನ್ನಾ ವಿ ಚೆಕ್ಕೆಮನೆ. ಹವ್ಯಕ ಭಾಶೆಲಿಯೇ ನೆಡೆಶುತ್ತಾ ಇಪ್ಪ ಕೊಡಗಿನ ಗೌರಮ್ಮ ಕತಾ ಸ್ಪರ್ದೆ, ಒಪ್ಪಣ್ಣ ನೆರೆಕರೆ ಪ್ರತಿಷ್ಠಾನ ಕತಾಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಮತ್ತೆ ಬಹುಮಾನ ತೆಕ್ಕೊಂಡದು ಮಾತ್ರವಲ್ಲದ್ದೆ ಕನ್ನಡದ ಪ್ರಸಿದ್ಧ ವಾರಪತ್ರಿಕೆ ತರಂಗಲ್ಲಿ ಇವರ ಕತೆಗೊ ಸ್ವೀಕಾರ ಆಗಿ ಪ್ರಕಟ ಆದ್ದೂ, ಹಲವಾರು ನಿಯತಕಾಲಿಕಂಗಳಲ್ಲಿ, ವಿಶೇಷಾಂಕಂಗಳಲ್ಲಿ ಕತೆ, ಕವನ, ಲೇಖನಂಗೊ ಪ್ರಕಟವಾದ್ದೂ ಇವರ ಪ್ರತಿಭೆಗೆ ಸಾಕ್ಷಿ. ಇದೀಗ ಇಪ್ಪತ್ತೆರಡು ಹವ್ಯಕ ಕತೆಗಳ “ಕರಿಮಣಿ ಮಾಲೆ” ಹೇಳ್ತ ಹೆಸರಿಲ್ಲಿ ಒಂದು ಸಂಕಲನವ ಮಾಡಿ ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಯವರ ಮೂಲಕ ಲೋಕಾರ್ಪಣೆ ಮಾಡಿದ್ದವು ಹೇಳುವದು ತುಂಬಾ ಸಂತೋಷದ ವಿಶಯ.  ಮಾಂಗಲ್ಯದ ಸಂಕೇತವಾಗಿಪ್ಪ ಕರಿಮಣಿಮಾಲೆಲಿ ಕರಿಮಣಿಯ ಪೋಣಿಸಿದ ಹಾಂಗೆ ಇಲ್ಲಿ ನಮ್ಮ ಸಂಸ್ಕೃತಿಯ ಬಿಂಬಿಸುವ ಕತೆಗಳ ಚೆಂದಕೆ ಪೋಣಿಸಿ ಕೊಟ್ಟಿದವು.

ಪ್ರತಿಯೊಂದು ಕತೆಗಳ ಸ್ವರೂಪ, ಹಂದರ ಬೇರೆ ಬೇರೆ ಆದರೂ ಹವ್ಯಕರ ಮನೆಮನೆಗಳಲ್ಲಿ ನೆಡವಂಥ ಘಟನೆಗೊಕ್ಕೆ ಕತೆಯ ರೂಪ ಕೊಟ್ಟು ನವಗೆ ಒದಗಿಸಿಕೊಡುವಲ್ಲಿ ಲೇಖಕಿ ಸಫಲರಾಯಿದವು.

ಪ್ರಸಿದ್ಧ ಸಾಹಿತಿ ಹಾಂಗೂ ಶಿಕ್ಷಣ ತಜ್ಞರಾದ ಶ್ರೀ ವಿ.ಬಿ.ಕುಳಮರ್ವ ಅವು ಈ ಪುಸ್ತಕದ ಬೆನ್ನುಡಿಲಿ ಹೀಂಗೆ ಹೇಳಿದ್ದವು:-

“ವೈವಿಧ್ಯಮಯವಾದ ೨೨ ಕಥೆಗಳ ಒಂದು ಗೊಂಚಲು ಈ “ಕರಿಮಣಿ ಮಾಲೆ” ಇಲ್ಲಿ ಸೋದರ ಭಾಷೆಯಾದ ಮಲಯಾಳದ ಕಂಪೂ ರಜ ಇದ್ದು. ಇಲ್ಲಿಪ್ಪ ಕಥೆಗಳ ಹೂರಣ ವಿಶಿಷ್ಟವಾಗಿದ್ದು. ಇಲ್ಲಿ ಸರಸ-ವಿರಸಗಳ ರಸಪಾಕವೂ ಇದ್ದು. ಪ್ರೀತಿ ಪ್ರೇಮಗಳ ಕಾವುದೇ ರಜ ಕಂಡುಬತ್ತು. ಪೌರಾಣಿಕ ಕಲ್ಪನೆಗಳೂ ಇದ್ದು. ಕೌಟುಂಬಿಕ ವಿಚಾರಂಗಳ ಕೈಗನ್ನಡಿಯಾಗಿಯೂ ಕೆಲವಿದ್ದು. ಎಲ್ಲಾ ಶೀರ್ಷಿಕೆಗಳೂ ಕಥೆಗೊಕ್ಕೆ ಸರಿಯಾಗಿ ಹೊಂದಿಕೆಯಾವುತ್ತು. ನಮ್ಮ ಪ್ರಸನ್ನ ಈಗ ಒಳ್ಳೆ ಪ್ರೌಢಶೈಲಿಯ ಕಥೆಗಾರ್ತಿ ಹೇಳುವದು ಪ್ರತಿಯೊಂದು ಕಥೆಲಿಯೂ ಗೊಂತಾವುತ್ತು.”

ಇದೀಗ ಈ ಪುಸ್ತಕ ನವಗೆ ಲಭ್ಯವಿದ್ದು, ಇದರ ಕೊಂಡು ಓದಿ, ಪ್ರೋತ್ಸಾಹಿಸಿವೊ°.

ಹವ್ಯಕ ಸಾಹಿತ್ಯ ಕ್ಷೇತ್ರಲ್ಲಿ ಅವು ಇನ್ನೂದೆ ಹೆಚ್ಚು ಹೆಚ್ಚು ಕೃಷಿ ಮಾಡುತ್ತ ಹಾಂಗೆ ಆಗಲಿ ಹೇಳುವದು ನಮ್ಮ ಆಶಯ.

ಪುಸ್ತಕದ ಹೆಸರು: ಕರಿಮಣಿಮಾಲೆ
ಲೇಖಕಿ: ಪ್ರಸನ್ನಾ ವಿ ಚೆಕ್ಕೆಮನೆ
ಪುಟಂಗೊ: ೧೮೮
ಮುಖಬೆಲೆ: ರೂ ೧೫೦/=
ಪುಸ್ತಕ ಬೇಕಾದವಕ್ಕೆ ಮಂಗಳೂರು ನಂತೂರಿನ ಶ್ರೀ ಭಾರತೀ ಕಾಲೇಜಿನ “ಗ್ರಾಮರಾಜ್ಯ” ಮಳಿಗೆಲಿ ಸಿಕ್ಕುತ್ತು.
ಅಥವಾ ಲೇಖಕಿಯ ಈ ಕೆಳಾಣ ಮೊಬೈಲ್ ಮೂಲಕ ಸಂಪರ್ಕ ಮಾಡಲಕ್ಕು
9897840607, 8547564532, 9633618144

ಶರ್ಮಪ್ಪಚ್ಚಿ
Latest posts by ಶರ್ಮಪ್ಪಚ್ಚಿ (see all)
ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×