Oppanna.com

ವೈದ್ಯೋ ನಾರಾಯಣೋ ಹರಿ:

ಬರದೋರು :   ಗಣೇಶ ಮಾವ°    on   24/10/2010    8 ಒಪ್ಪಂಗೊ

ಗಣೇಶ ಮಾವ°

 

 

“ವೈದ್ಯೋ ನಾರಾಯಣೋ ಹರಿ:” ಹೇಳಿರೆ ವೈದ್ಯರು ದೈವ ಸಮಾನರು ಹೇಳಿ ಹೇಳುವ ಅರ್ಥವ ಸೂಚಿಸುತ್ತು,ಇದು ಪೂರ್ವ ಕಾಲದ ವಾಕ್ಯ.ಪೂರ್ವ ಕಾಲಲ್ಲಿ ವೈದ್ಯರು ಪ್ರತಿಫಲಾಪೇಕ್ಷೆ ಇಲ್ಲದ್ದೆ ರಾಜಾಶ್ರಯದ ಮೂಲಕ ಜನ ಸೇವೆ ಮಾಡಿಗೊಂಡಿತ್ತವು.ಹಾಂಗಾಗಿ ಎಷ್ಟೇ ಪಾಪದವಂಗೂ ವೈದ್ಯನಲ್ಲಿಗೆ ಹೋಪಲೆ ಎಡಿಗಾಯಿಗೊಂಡಿತ್ತು..ಈ ಮೂಲಕ ಋಷಿ ಪರಂಪರೆಲಿ ಆಯುರ್ವೇದ ವೈದ್ಯ ಚಿಕಿತ್ಸೆ ಎಲ್ಲೋರಿಂಗೂ ಉಚಿತವಾಗಿ ಸಿಕ್ಕಿಗೊಂಡಿತ್ತು.

        ಮನುಷ್ಯನ ಶರೀರ ಸರಿಯಾಗಿ ಇಪ್ಪಗ ಎಷ್ಟು ಸುಂದರವಾಗಿರ್ತೋ,ರೋಗ ಬಂದಪ್ಪಗ ಅಷ್ಟೇ ಅಸಹ್ಯವಾಗಿರ್ತು.ಈ ಶರೀರ ಹೇಳುದು ಎಲುಬುಗಳ ಗೂಡು.ನೆತ್ತರು,ಮಾಂಸ,ಕಫ,ಮಲ-ಮೂತ್ರಾದಿಗ ತುಂಬಿದ ಚರ್ಮದ ಗೊಂಬೆ ಹೇಳಿ ಒಂದು ರೀತಿಲಿ ಹೇಳುಲಕ್ಕು.ಇನ್ನೊಂದು ರೀತಿಲಿ ನೋಡಿರೆ ಇಂತಹ ಶರೀರಕ್ಕೆ ಭಗವಂತ ಕೊಡುವ  ಬುದ್ಧಿ ಹೇಳುದರ ಸಮಯೋಚಿತವಾಗಿ  ಉಪಯೋಗಿಸಿಗೊಂಡಪ್ಪಗ ಆರೋಗ್ಯ ಭರಿತ ಜೀವನ ಆವ್ತು. “ಶರೀರಮಾದ್ಯಂ ಖಲು ಧರ್ಮಸಾಧನಂ” ಹೇಳಿ ಶಾಸ್ತ್ರವಾಕ್ಯ.!!!ಸಮಸ್ತ ಧರ್ಮ ಸಾಧನೆಗಳಲ್ಲಿ ಶರೀರ ರಕ್ಷಣೆ ಅತ್ಯಂತ ಮುಖ್ಯ.ಮನುಷ್ಯ ಆರೋಗ್ಯಂದ ಇದ್ದಪ್ಪಗ ಮಾತ್ರ ಎಂತಾದರೂ ಸಾಧನೆ ಮಾಡ್ಲೆ ಎಡಿಗು.ಈ ಮೂಲಕ ಎಲ್ಲಾ ಸುಖವನ್ನೂ ಅನುಭವಿಸುಲೆ ಎಡಿಗು.ಅಪಾರ ಸಂಪತ್ತು ಇದ್ದ ಮಾತ್ರಕ್ಕೆ ಶ್ರೀಮಂತ ಆವ್ತಾ ಇಲ್ಲೆ.ದೃಢವಾದ ಆರೋಗ್ಯ ಇಪ್ಪವನೇ ನಿಜವಾದ ಶ್ರೀಮಂತ.ಇಂಥಾ ಅಪರೂಪವಾದ  ಆರೋಗ್ಯವ ಕಾಪಾಡಿಕೊಡುವ ವೈದ್ಯನ ಶಾಸ್ತ್ರಲ್ಲಿ ವೈದ್ಯೋ ನಾರಾಯಣೋ ಹರಿ: ಹೇಳಿ ತುಂಬಾ ಉನ್ನತ ಮಟ್ಟಲ್ಲಿ ಗೌರವಿಸುತ್ತವು.

       ವೈದ್ಯರು ದೈವ ಸಮಾನರು ಹೇಳಿ ಹೇಳುದಕ್ಕೆ ಇನ್ನೊಂದು ಕಾರಣ ಇದ್ದು.ವೈದ್ಯ ಹೇಳಿ ಆದವು ಪುರುಷರನ್ನೂ ಸ್ತ್ರೀಯರನ್ನೂ ಸಮಾನ ಭಾವಂದ ನೋಡುದಲ್ಲದ್ದೇ,ಮಾತೃ ಹೃದಯಂದ ಮುಟ್ಟಿ ನೋಡಿಯಪ್ಪಗ ಅವರ ಅರ್ಧ ರೋಗ ಅಂಬಗಳೇ ಕಮ್ಮಿ ಆವ್ತು.ಕೆಲವೊಂದು ಗುಪ್ತರೋಗಂಗಳ ಬಗ್ಗೆ ಆಪ್ತಸಮಾಲೋಚನೆ ಮಾಡಿ ರೋಗಿಯ ಮನಸ್ಸು ಗೆಲ್ಲೆಕ್ಕಾವ್ತು.ಇದು ಅನಿವಾರ್ಯ.ಇಂಥಾ ಸಮಯಲ್ಲಿ ಹೆಮ್ಮಕ್ಕ ಸಂಕೋಚ ಪಡುವದು ಸಹಜ.ಆದರೂ ಅವರ ಭಾವನೆಗಳ ಅರ್ಥ ಮಾಡಿಗೊಂಡು ಅವಕ್ಕೆ ಮಾನಸಿಕವಾದ ಚಿಕಿತ್ಸೆ ಹಿಡಿಶಿತ್ತು  ಹೇಳಿ ದೃಢ ಆದ ಮೇಲಷ್ಟೇ ಶರೀರಕ್ಕೆ ಔಷಧಿ ಕೊಡ್ತವು.ಹೀಂಗಾದ ಕಾರಣ ಯಾವ ಸಂದರ್ಭಲ್ಲಿಯೂ ವೈದ್ಯನ ಬಗ್ಗೆ ಕೆಟ್ಟ ಯೋಚನೆ ಬಪ್ಪಲಾಗ ಹೇಳುವ ದೃಷ್ಟಿಂದ ವೈದ್ಯನ ದೈವಸಮಾನ ಹೇಳಿ ಪ್ರಾಚೀನ ಕಾಲಂದಲೂ ಗೌರವಿಸಿಗೊಂಡಿತ್ತವು.

              ವೈದ್ಯರನ್ನೂ ವೈದ್ಯವೃತ್ತಿಯನ್ನೂ ಆರುದೇ ಸಂಶಯಂದ ನೋಡುಲೆ ಆಗ 

                     ಜನಂಗ ಸಂಶಯ ಪಡುವ ಹಾಂಗೆ ವೈದ್ಯರೂ ಇಪ್ಪಲಾಗ  

ಈ ಎರಡು ವಿಷಯ  ಚಿಕಿತ್ಸೆಲಿ ಇಪ್ಪಂತಹ ಒಂದೇ ನಾಣ್ಯದ ಎರಡು ಮುಖ.ನಮ್ಮ ಪ್ರಾಚೀನ ವೈದ್ಯಶಾಸ್ತ್ರ ನಾರಾಯಣ ಸ್ವರೂಪಲ್ಲಿ ಇಪ್ಪಂತಹ “ಧನ್ವಂತರಿ” ದೇವರಿಂದ ಸುರುಮಾಡಿ ಬ್ರಹ್ಮ ದೇವರಿಂಗೆ,ಬ್ರಹ್ಮಂದ ದಕ್ಷಪ್ರಜಾಪತಿಗೆ,ದಕ್ಷನಿಂದ ಅಶ್ವಿನೀಕುಮಾರರಿಂಗೆ,ಅಲ್ಲಿಂದ ಭೂಲೋಕಕ್ಕೆ ಬಂದು ಭರದ್ವಾಜ ಮಹರ್ಷಿಗೆ,ಭರದ್ವಾಜಂದ ಆತ್ರೇಯ ಮಹರ್ಷಿಗೆ,ಇವರಿಂದ ಅಗ್ನಿವೇಶ ಮಹರ್ಷಿಗೆ ಹೀಂಗೆ ಪರಂಪರಾಗತವಾಗಿ ಬಯಿಂದು.ಈ ಅಗ್ನಿವೇಶ ಮಹರ್ಷಿ ಆಯುರ್ವೇದ ಶಾಸ್ತ್ರಲ್ಲಿ “ಅಗ್ನಿವೇಶ ತಂತ್ರ”  ಹೇಳಿ ಒಂದು ಗ್ರಂಥವ ಸುರು ಮಾಡಿದ.

ಇದರ ವಿವರಣೆ ನಮ್ಮ ಬೈಲಿಲಿ ಇಪ್ಪ ಆಯುರ್ವೇದ ವೈದ್ಯರುಗ ತಿಳಿಷೆಕ್ಕು ಹೇಳಿ ಎನ್ನ ಕೋರಿಕೆ,

    ವೈದ್ಯ ಪ್ರಾಯಲ್ಲಿ ಸಣ್ಣ ಆದರೂ,ಜಾತಿ-ಮತ ಭೇದ ಮಾಡದ್ದೆ ಗೌರವಿಸೆಕ್ಕು.ಪ್ರತಿಯೊಂದು ಊರಿಲಿಯೂ ಒಬ್ಬ ವೈದ್ಯ ಇರೆಕ್ಕು,ಹೀಂಗೆ 

ಹೇಳಿಗೊಂಡಿಪ್ಪಗ ಬಟ್ಟಮಾವ ಒಂದು ಶ್ಲೋಕ ಇದಕ್ಕೆ ಪೂರಕವಾಗಿ  ಹೇಳಿದವು.

         ಧನಿಕ ಶ್ರೋತ್ರಿಯೋ ರಾಜಾ 

         ನದೀ ವೈದ್ಯಸ್ತು ಪಂಚಮ:!   

         ಪಂಚ ಯತ್ರ ನ ವಿದ್ಯಂತೀ  

         ನ ತತ್ರ ದಿವಸಂ ವಸೇತ್ !!

8 thoughts on “ವೈದ್ಯೋ ನಾರಾಯಣೋ ಹರಿ:

  1. ಗಣೇಶ ಮಾವ…ಒಳ್ಳೆ ಬರಹ…ಗಣೇಶ ಪೆರ್ವ ಮತ್ತೆ ಶರ್ಮಪ್ಪಚ್ಚಿ ಹೇಳಿದ ವಿಶಯಕ್ಕೆ ಎನ್ನ ಸಹಮತ ಇದ್ದು….
    ಪೇಟೆಲಿ ಹಾಂಗಿಪ್ಪ ಡಾಗುಟ್ರಕ್ಕಳ ಕಾಂಬಲೆ ಸಿಕ್ಕುದು ಕ‍ಶ್ಟ….
    ಕೊಶಿ ಆತು…:)

  2. ಗಣೇಶನ ಲೇಖನ ಲಾಯಿಕ ಆಯಿದು. [ವೈದ್ಯರನ್ನೂ ವೈದ್ಯವೃತ್ತಿಯನ್ನೂ ಆರುದೇ ಸಂಶಯಂದ ನೋಡುಲೆ ಆಗ. ಜನಂಗ ಸಂಶಯ ಪಡುವ ಹಾಂಗೆ ವೈದ್ಯರೂ ಇಪ್ಪಲಾಗ]- ಸತ್ಯದ ಮಾತು.
    ಗಣೇಶ ಪೆರ್ವದವರ ಅಭಿಪ್ರಾಯಕ್ಕೆ ಎನ್ನ ಸಹಮತ ಇದ್ದು. ಪೇಟೆಲಿ ಮದ್ದಿಂಗೆ ಹೋದರೆ ಮೊದಾಲು ಕೇಳುವದೇ ಇನ್ಶೂರೆನ್ಸ್ ಇದ್ದಾ ಹೇಳಿ. ಇದ್ದರೆ ಕಮ್ಮಿಲಿ ಎರಡು ದಿನ ಆಸ್ಪತ್ರೆಲಿ ಅಡ್ಮಿಟ್ ಮಾಡಿ, ಬೇಕಾದ್ದೋ ಬೇಡದ್ದೋ, ಒಟ್ಟಾರೆ ಸ್ಕೇನ್ನಿಂಗ್, ರಕ್ತ ಪರೀಕ್ಷೆ, ಇ.ಸಿ.ಜಿ. ಎಲ್ಲಾ ಮಾಡಿ ದೊಡ್ಡ ಮೊತ್ತದ ಬಿಲ್ ಮಾಡಿ ಕಳುಸುತ್ತವು ಇದ್ದವು. ದೊಡ್ಡ ದೊಡ್ಡ ಆಸ್ಪತ್ರೆ, ಅದರಲ್ಲಿ ಹೈ ಟೆಕ್ ಉಪಕರಣಂಗೊ ಇದಕ್ಕೆಲ್ಲಾ ಹಾಕಿದ ಪೈಸೆ ಬಪ್ಪಲೆ ಬೇಕಾಗಿ ಹೀಂಗಿಪ್ಪ ನಾಟಕ ಮಾಡುವವು ಇದ್ದವು.
    ಎಲ್ಲರಿಂಗೂ ಅನ್ವಯಿಸುತ್ತು ಹೇಳುವದು ಅಲ್ಲ ಆನು. ಪ್ರಾಮಾಣಿಕವಾಗಿ ಕೆಲಸ ಮಾಡಿ, ಪೈಸೆ ಇಲ್ಲದ್ದವರ ಹತ್ರೆ ಎಂತದು ತೆಕ್ಕೊಳದ್ದೆ ಮದ್ದು ಕೊಡುವ ಡಾಕ್ಟ್ರುಗಳೂ ಇದ್ದವು. ಮೊದಲಾಣ ಕಾಲದ ಅಯುರ್ವೇದ ಪಂಡಿತಕ್ಕೊ, ಮದ್ದಿನ ಮಾರಾಟ ಮಾಡ್ಲೆ ಆಗ ಹೇಳಿ, ಎಷ್ಟು ಆತು ಕೇಳಿರೆ ಎಂತದೂ ಹೇಳವು. ಕೊಟ್ಟರೆ ಕೊಟ್ಟದರ ತೆಕ್ಕೊಂಗು.
    ಧನ್ವಂತರಿ ದೇವರ ಬಗ್ಗೆ ಒಂದು ಶ್ಲೋಕ ಹೀಂಗೆ ಇದ್ದು:
    ನಮಾಮಿ ಧನ್ವಂತರಿಮಾದಿದೇವಮ್ ಸುರಾಸುರೈರ್ವಂದಿತ ಪಾದ ಪದ್ಮಮ್ |
    ಲೋಕೇ ಜರಾರುಗ್ಭಯ ಮೃತ್ಯುನಾಶಮ್ ಧಾತಾರಮೀಶಮ್ ವಿವಿದೌಷಧೀನಾಮ್||

  3. Ganesha mava, lekahana laika aidu… ade reethi Danvantari poojeya mahatvada bagge details idre hakiddare olledittu…

  4. ಒಳ್ಳೆವಿಚಾರದ ಲೇಖನ.ಹಳ್ಳಿಗಳಲ್ಲಿ ಏಕ ಮುಲಿಕಾ ವೈದ್ಯ೦ಗೊ ಹಾ೦ಗೆ ಪರ೦ಪರೆ೦ದ ಮದ್ದು ಮಾಡ್ತವು ಪೈಸೆ ತೆಕ್ಕೋಳದ್ದೆ ಮದ್ದು ಮಾಡ್ತವು.ಬಾಕಿದ್ದವಕ್ಕೆ ಇ೦ದ್ರಾಣ ಕಾಲಲ್ಲಿ ಅದು ಸದ್ಯ ಅಕ್ಕು ಹೇಳಿ ಕಣ್ತಿಲ್ಲೆ.ಅ೦ತೂ ಬಯಲಿನ ಡಾಕ್ಟ್ರುಗಳ ಒಳ್ಳೆ ವಿಚಾರಕ್ಕೆ ಹಚ್ಹಿದ್ದಿ.Thanks a lot.ಒಪ್ಪ೦ಗಳೊಟ್ಟಿ೦ಗೆ.

  5. ನಮ್ಮ ಹಳ್ಳಿಗಳಲ್ಲಿ ಈಗಳುದೆ ದೇವರ ಹಾ೦ಗಿಪ್ಪ ವೈದ್ಯರುಗೊ ಇದ್ದವು ಹೇಳುವದೇ ದೊಡ್ಡ ಸಮಾಧಾನದ ವಿಷಯ. ಪೇಟೆಗಳಲ್ಲಿ ಹೆಚ್ಚಿನ೦ಶವೂ (ಎಲ್ಲರೂ ಅಲ್ಲ) ಈ ವೃತ್ತಿಯ ಬರೇ ಪೈಸೆ ಮಾಡ್ತ ಬಿಸಿನೆಸ್ ಆಗಿ ನೋಡ್ತಾ ಇಪ್ಪದು ಬೇಜಾರಿನ ವಿಷಯ. ಭಾರತಲ್ಲಿ ಮಾ೦ತ್ರ ಅಲ್ಲ, ಲೋಕ ಪೂರ್ತಿ ಇದೇ ಕತೆ. ಆನು ಇಪ್ಪ ದೇಶಲ್ಲಿ ೯೫% ಜನ೦ಗೊ ಹೆಲ್ತ್ ಇನ್ಶೂರೆನ್ಸ್ ಇಪ್ಪವು. ಎನ್ನ ಒಟ್ಟಿ೦ಗೆ ಕೆಲಸ ಮಾಡ್ತ ಇಬ್ರು ತಮಿಳ೦ಗೊ ಇದ್ದವು. ಇಬ್ರಿ೦ಗುದೆ ೨-೩ ವರ್ಷದ ಸಣ್ಣ ಮಕ್ಕೊ ಇದ್ದವು. ಇಬ್ರ ಕುಟು೦ಬವುದೆ ಒಟ್ಟಿ೦ಗೆ ವಾಸ ಮಾಡುವದು. ಕಳುದ ವಾರ ಈ ಎರಡು ಮಕ್ಕೊಗುದೆ ಶೀತ, ತಲೆಬೇನೆ, ಜ್ವರ ಬ೦ತು. ಇಬ್ರನ್ನುದೆ ಒಟ್ಟಿ೦ಗೆ ಒಬ್ಬನೆ ಡಾಕ್ಟ್ರ ಹತ್ತರೆ ಕರಕ್ಕೊ೦ಡು ಹೋದವು. ಒಬ್ಬ೦ಗೆ ಇನ್ಶೂರೆನ್ಸ್ ಇದ್ದು, ಮತ್ತೊಬ್ಬ೦ಗೆ ಇಲ್ಲೆ. ಇನ್ಶೂರೆನ್ಸ್ ಇಪ್ಪವ೦ಗೆ ನಮ್ಮೂರಿನ ೨೭೬೦ ರುಪಾಯಿಯ ಮದ್ದು. ಇನ್ಶೂರೆನ್ಸ್ ಇಲ್ಲದ್ದವ೦ಗೆ ೪೮೦ ರುಪಾಯಿಯ ಮದ್ದು. ಇಬ್ರು ಮಕ್ಕೊಗುದೆ ಗುಣ ಆದ್ದದು ಒ೦ದೇ ಸಮಯಲ್ಲಿ! ಇಲ್ಲಿ ಯಾವ ವಿಷಯಕ್ಕೆ ಬೇಕಾಗಿ ಆಸ್ಪತ್ರೆಗೆ ಹೋದರು ಸುರುವಿ೦ಗೆ ಕೇಳುವದು ಇನ್ಶೂರೆನ್ಸ್ ಇದ್ದಾ ಇಲ್ಲೆಯಾ ಹೇಳಿ. ಕೆಲವು ಪ್ರತ್ಯೇಕ ದುಬಾರಿ ಮದ್ದುಗಳ prescribe ಮಾಡಿದರೆ (ಟಾರ್ಗೆಟ್ ರೀಚ್ ಆಯೆಕು!) ಅ೦ಥಾ ಡಾಕ್ಟ್ರುಗೊಕ್ಕೆ ಸ್ಪೆಷಲ್ ಉಡುಗೊರೆಗೊ (ಕೆಲವು ಸರ್ತಿ ಟೂರ್ ಪೇಕೇಜುಗೊ!) ಕೂಡಾ ಸಿಕ್ಕುತ್ತು. ಇಷ್ಟೆಲ್ಲಾ ಇದ್ದರೂ ಕೆಲವು ಬಹಳ ಬಹಳ ಒಳ್ಳೆ ಡಾಕ್ಟ್ರುಗಳುದೆ ಇದ್ದವು. ಆದರೆ ಈ ವೃತ್ತಿಲಿ ಇಪ್ಪ ಒ೦ದು ದೊಡ್ಡ ಭಾಗವುದೆ ಇದರ ಪೈಸೆ ಮಾಡ್ಳೆ ಮಾ೦ತ್ರ ಇಪ್ಪ ದಾರಿಯಾಗಿ ಕಾ೦ಬಲೆ ಸುರು ಮಾಡಿದ್ದದು ಸ೦ಕಟ ತಪ್ಪ ವಿಷಯ. 🙁

  6. ಬರದ್ದು ಲಾಯ್ಕಾಯ್ದು ಬರದ ವಿಷಯವೂ ಲಾಯ್ಕಿದ್ದು 🙂 ವೈದ್ಯರ ಬಗ್ಗೆ ಜೆನಂಗೊಕ್ಕೆ ಇರೆಕ್ಕಾದ ಒಳ್ಳೆ ಅಭಿಪ್ರಾಯಕ್ಕೆ ಸರಿಯಾಗಿ ಎಲ್ಲಾ ವೈದ್ಯರುಗಳುದೇ ನಡಕ್ಕೊಳ್ಳೆಕಾದ್ದು ಅಗತ್ಯ, ಅದು ಕರ್ತವ್ಯ 🙂
    ಧನ್ಯವಾದಂಗೊ ಉತ್ತಮ ಲೇಖನಕ್ಕೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×