Latest posts by ಅಡ್ಕತ್ತಿಮಾರುಮಾವ° (see all)
- ಜೇನು..ಜೇನು..ಜೇನು.. - November 17, 2011
- ಹಲಸಿನ ಹಣ್ಣಿನ ಮೇಳ.. - August 24, 2011
- ಭೂತವ ಕಂಡಿದಿರಾ.??? - June 22, 2011
ಅಡ್ಕತ್ತಿಮಾರಿಲಿ ಕಂಡ ಮತ್ತೂ ಕೆಲವು ಚಿತ್ರಂಗಳ ಇಲ್ಲಿ ನೇಲುಸಿದ್ದೆ.
ನೋಡಿ, ಹೇಂಗಿದ್ದು ಹೇಳಿ, ಅಭಿಪ್ರಾಯ ತಿಳುಸಿ.
~
ಅಡ್ಕತ್ತಿಮಾರು ಮಾವ°
ಅಡ್ಕತ್ತಿಮಾರು ಮಾವ°, ಪಟಂಗ ತುಂಬಾ ಚೆಂದ ಬಯಿಂದು.
ಅದರಲ್ಲಿಯೂ ಸುರುವಾಣ ಪಟ ಎನಗೆ ಕೊಶಿ ಆತು!! ಕುಜುವೆ ಒಂದು ನವಗೆ ಕಾಣ್ತನ್ನೆ, ಅದರ ಒಟ್ಟಿಂಗೆ ಇನ್ನೂ ಹೆರ ಬಪ್ಪಲೆ ಈ ಪ್ರಪಂಚಕ್ಕೆ ತೆರಕ್ಕೊಂಬಲೆ ತಯಾರಾದ ಸಣ್ಣ ಕುಜುವೆ ಹೆರ ಬರೆಕ್ಕಾದ ಮಾನಸಿಕ ಸಿದ್ಧತೆಲಿ ಇಪ್ಪ ಹಾಂಗೆ ಕಾಣ್ತು!! ಅಲ್ಲದಾ?
ಪ್ರಕೃತಿ ಎಲ್ಲದಕ್ಕೂ ಎಷ್ಟು ಲಾಯ್ಕಲ್ಲಿ ಆವರಣ ಕೊಟ್ಟು, ಎಷ್ಟು ಜಾಗ್ರತೆಲಿ ಈ ಪ್ರಪಂಚಕ್ಕೆ ತತ್ತಲ್ಲದಾ?
ತುಂಬಾ ಲಾಯ್ಕಾಯಿದು ಮಾವ°.
ಒಪ್ಪಣ್ಣ ಹೇಳಿದ ಹಾಂಗೆ ಆನುದೇ ನಿಂಗಳ ಹಳೆಕೆಮರದ ಪಟಂಗೊಕ್ಕೆ ಕಾಯ್ತಾ ಇದ್ದೆ!! ಮಳೆ ಇನ್ನೊಂದರಿ ಬಪ್ಪ ಮೊದಲು ಒಂದಾರಿ ಆ ಚಿನ್ನದ ಹಾಂಗಿಪ್ಪ ಪಟಂಗಳ ತೋರ್ಸಿಕ್ಕಿ ಮಾವ°.
ಮಾವಾ°..
ಪಟಂಗೊ ನೋಡಿ ಕೊಶಿ ಆತು.
ಒಳುದೋರಿಂಗೆ ಒಂದನೇಪಟ ಕಂಡಪ್ಪಗ – ತಾಳುತಿನ್ನೇಕು ಕಂಡತ್ತಲ್ಲದೋ?
ಬೋಸಬಾವಂಗೆ ಮೂರ್ನೇ ಪಟ ಕಂಡಪ್ಪಗ ಹಾಂಗೆ ಅನುಸಿತ್ತಡ! 😉
ಎಲ್ಲ ಪಟವೂ ಚೆಂದ ಬಯಿಂದು ಮಾವ..
ಬೈಲಿನ ನಿಜ ಪಟಂಗೊ ಮತ್ತೊಂದರಿ ಬೈಲಿಂಗೆ ಬಂತು, ಅಪುರೂಪಲ್ಲಿ!
ಇಷ್ಟು ಅಪುರೂಪ ಆಗೆಡಿ ಮಾವ..
ಹೇಳಿದಾಂಗೆ, ಗೆಂಟಿಗೆಗೂ ಅಷ್ಟೊಂದು ಸೌಂದರ್ಯ ಇದ್ದು ಹೇಳ್ತದು ಈ ಪಟ ನೋಡಿಯೇ ಅಂದಾಜಿ ಆದ್ದು!
ಕೊಶಿ ಆತು ನಿಂಗಳ ದೃಷ್ಟಿ.
ಹಳೆಕೆಮರದ ಪಟಂಗೊ ಬಕ್ಕಾ?
ಅಣ್ಣಾ ಫಟೋ ಏಲ್ಲ ಚೆ೦ದ ಬೈ೦ದು….ದೀಪಿಯ ರಜೆಲಿ ನಿನ್ಗಳಲ್ಲಿಗೆ ಗುಜ್ಜೆ ಪಲ್ಲ್ಯ ತಿ೦ಬಲೆ ಬತೆಯ
೫……….ಅರಸಿನ ಗೆ೦ಟೀಗೆ ಅಲ್ಲದ…..
ನಿಂಗಳ ಒಪ್ಪಕ್ಕೆ ಧನ್ಯವಾದಂಗ..
@ಸುಭಗ..ಹತ್ತರೆ ಹೋಗಿ ಪಟ ತೆಗೆತ್ತಿತ್ತರೆ ಬೈಲಿಲಿ ಜನ ಒಬ್ಬ ಕಮ್ಮಿ ಅಕ್ಕು..!!..೧೦ ನೆ ಪಟ ತೋಟದ ಕರೆಲಿ ಒಂದು ಮರಲ್ಲಿ ಇತ್ತ ಕಾಯಿ..ಅದರ ಸರಿಯಾದ ಹೆಸರು ಗೊಂತಿಲ್ಲೆ ಬೆಳಿ ಮರುವ ಹೇಳಿ ಅದರ ಹೇಳುತ್ತವು..
ಮಾವ, ಆನು ಒಂದಾರಿ ಅರ್ಧದಾರಿ ವರೆಗೆ ಹೋಗಿ ಬಯಿಂದೆ ಸಣ್ಣಾಗಿಪ್ಪಗ. ಅದು ‘ಪೆರಿಯೆ’ ಜೇನಹುಳುಗಳ ದಿಸೆಂದ!
ಅದಾ,ಅಪ್ರೂಪಕ್ಕೆ ಮಾವನ ಕೆಮರ ‘ಕ್ಲಿಕ್’ ಹೇಳಿತ್ತೋ? ಭಾರೀ ಲಾಯ್ಕ ಆಯಿದು.ಕುಜುವ ತಾಳುದ ಕಾನಕಲ್ಲಟೆ ಮೇಲಾರದೆ ನೆ೦ಪಾತು.ಹತ್ತನೆ ಪಟ ನಾಗಸ೦ಪಗೆ ಲಿ ಅಪ್ಪ ಕಾಯಿಯೊ ಹೇಳಿ ಸ೦ಶಯ.ಐದನೆದು ಎ೦ತ ಹೂಗು ಹೇಳಿ ಗೊ೦ತಾತಿಲ್ಲೆ.ಅದು ಯೇವ ಪಕ್ಷಿ ಮಾವ? ಕುಪ್ಪುಳುವಿನ ಹಾ೦ಗೆ ಕಾಣ್ತಿಲ್ಲೆ.
Olle photongo mava
10 pata yenthara heli gonthaydille.
ಹ್ಹಹ್ಹ..ಹತ್ತರೆ ಹೋಗಿ ತೆಗೆತ್ತಿತರೆ ಮಾವನ ಮೋರೆಯುದೇ ಪಟಲ್ಲಿಪ್ಪದರಷ್ಟು ದೊಡ್ಡ ಆವ್ತಿತು..
ಅಡ್ಕತ್ತಿಮಾರು ಮಾವ, 16ನೇ ಪಟಲ್ಲಿಪ್ಪದು ಎಂತರ ಹೇಳಿ ಎಂಗಳತ್ರೇ ಕೇಳ್ತೀರನ್ನೆ? ಇನ್ನೂ ರಜ ಹತ್ತರೆ ಹೋಗಿ ಪಟ ತೆಗೆಕಾತು. ಅಂಬಗ ಸರೀ ಗೊಂತಾವ್ತಿತ್ತು!! 😉
ಕಾನಕಲ್ಲಟೆ ಮೇಲಾರವೋ ಸಾಸಮೆಯೋ ಎಂತ ಬೇಕಾರು ಮಾಡಿ. ಮಾಂತ್ರ ಇದ; ಹೇಳಿದ್ದಿಲ್ಲೇಳಿ ಬೇಡ- ಅದರ ಬಿತ್ತು ಒಂದೂ ಬಾಕಿ ಆಗದ್ದಾಂಗೆ ಜಾಗ್ರತೆಲಿ ತೆಗದು ಇಡ್ಕೆಕ್ಕು. ಅಲ್ಲದ್ರೆ ತುರ್ಪ್ಪು ಔಟ್ಟಕ್ಕು! ತೊರಿಕ್ಕೆಯ ಮಾರಿ ಅದು!!
ಹುಳಿ ಹಿಂಡಿಂರೋ?!
ಕಾನಕಲ್ಯಟೆ ಮೇಲಾರ ಮಾದಡ್ಳೆ ಎಡಿಯದ್ದಷ್ಟು ಬೆಳದ್ದನ್ನೆಪ್ಪಾ.ಸಾಸಮೆ ಮಾಡ್ಳೆ ಬಂಡಾಡಿ ಅಜ್ಜಿಯನ್ನೇ ಕೇಳೆಕ್ಕಷ್ಟೆ.
ಕಾನಕಲಟೆಯ ಪಟ ನೋಡಿಯಪ್ಪಗ ಸಣ್ಣಾಗಿಪ್ಪಗ ಅಜ್ಜನ ಮನೆಲಿ ಕಾಯಿ ಹೆರ್ಕುಲೆ ಹೋದ್ದು ನೆ೦ಪಾತು…
೧೧. ಕಾನಕಲ್ಲಟೆಯೋ?
ಪಟಂಗೊ ಎಲ್ಲ ಭಾರೀ ಲಾಯ್ಕಾಯಿದು. ‘ಪಕ್ಷಿನೋಟ’, ಹಾತೆಗಳ ಪಟ ಅಂತೂ ಸೂಪರ್!
ಪಟಂಗೊ ಲಾಯಿಕ ಆಯಿದು.
ಇದಾ…. ಎಂಗಳಲ್ಲಿ 365 (366 ಅಲ್ಲ) ದಿನವೂ ಗುಜ್ಜೆ, ಮಾವಿನಕ್ಕಾಯಿ ಸಿಕ್ಕುತ್ತು.
ರೇಟ್ ಎಷ್ಟು ಕೇಳಿಕ್ಕೇಡಿ. ಬೇಕು, ತಿನ್ನೆಕು , ಎಡಿಗು, ಕರಗ್ಗು ಹೇಳಿ ಕಂಡತ್ತು ಕಂಡ್ರೆ ಎಷ್ಟಾದರೂ ಕೊಟ್ಟು ತಪ್ಪದೇ.
ಮೊನ್ನೆ ಒಂದು ಗುಜ್ಜೆ ತಂದೆ. ಕೆ.ಜೀ. 54/- ಕೊಟ್ಟೆ. ಒಂದು ದಿನ ತಾಳು ತೆಂಗಿನೆಣ್ಣೆ ಹಾಕಿ ಕಲಸಿ ತಿಂದ್ಯೋ. ಮರುದಿನ ಬಾಕಿ ಒಳುದ್ದರ (ತಾಳು ಅಲ್ಲ – ಗುಜ್ಜೆಯ) ಕೊರದು ಮೆಂತೆ ಅರಶಿನ ಹಾಕಿ ಮೇಲಾರ.
ಮಾವಿನಕಾಯಿ ರೇಟು ನೋಡಿದೆ. ಕೆ.ಜೀ. 80/- ಹೇಳಿ ಬರಕ್ಕೊಂಡು ಇತ್ತಿದ್ದು. ಎನಗೆ ಮೆಚ್ಚ, ಕರಗ ಹೇಳಿ ಮಡಿಕ್ಕೊಂಡೆ.
ಅಪ್ಪಪ್ಪು. ಕಳುದ ತಿಂಗಳು ನೀರುಳ್ಳಿಯ ಕ್ರಯ ನೋಡಿ ‘ನಾವು ಶುದ್ಡ ಬ್ರಾಮ್ಮರು, ನೀರುಳ್ಳಿ ಬೆಳ್ಳುಳ್ಳಿ ತಿಂಬಲಾಗ’ ಹೇಳಿ ನಿಂಗೊ ಅಪ್ಪಣೆ ಕೊಡುಸಿದ್ದೂ ನೆಂಪಿದ್ದು
ಓ ನಿಂಗಳಲ್ಲಿ ಗುಜ್ಜೆ ಆತೊ ಮಾವ, ಪಲ್ಯಕ್ಕೆ ಭಾರೀ ಲಾಯಕಾವುತ್ತಲ್ಲದೊ ? ಪಟಂಗೊ ಎಲ್ಲ ಲಾಯಕು ಬಯಿಂದು. ಆ ಒರಗದ್ದ ಹುಳು ಗೊಬ್ಬರದ ಹುಳುವೋ ಹೇಳಿ. ಒಂದು ಒಣಗಿದ ಪೇರಳೆ ಹಾಂಗೆ ಕಾಣುತ್ತಪ್ಪ. ಕಡೇಣ ಚಿತ್ರ ಕಣಜದ ಹುಳದ ಗೂಡು. ಇನ್ನು ಕತ್ಲೆ ಪ್ಪಗ ಹೊಗೆ ಹಾಕೆಕಷ್ಟೆ !
ಮತ್ತೊಂದು ಒರಗದ್ದ ಹುಳು..
ಅದು ಕಾನರಕಟ್ತೆ ಕಾಯಿ ಅಲ್ಲದೋ?
ಲಾಸ್ತಿನ ಚಿತ್ರ ಕೂಡೆಲುವಿನ ಗೂಡಿನ ಹಾಂಗೆ ಕಾಣುತ್ತು…ಹಾಂಗೆ ಇಪ್ಪದು ಎಂಗಳ ಅಡಕ್ಕೆ ಮರಲ್ಲಿ ಅಂದೊಂದರಿ ಇದ್ದಿತ್ತು..