Oppanna.com

ಆನಡ್ಕ ಜಲಪಾತ – ಧಾರೆ 1

ಬರದೋರು :   ರಾಮಚಂದ್ರ ಮಾವ°    on   11/02/2013    7 ಒಪ್ಪಂಗೊ

ರಾಮಚಂದ್ರ ಮಾವ°
Latest posts by ರಾಮಚಂದ್ರ ಮಾವ° (see all)

ಬೈಲಿನೋರಿಂಗೆ ನಮಸ್ಕಾರ.
ಹೊಸನೆಂಟ್ರು ರಾಮಚಂದ್ರಮಾವನ ಪರಿಚಯ ಮಾಡಿಗೊಂಬನೋ?
ಮೂಲತಃ ಅಡ್ಯ°ಡ್ಕದೋರು ಆದರೂ – ಗಟ್ಟದ ಮೇಗೆ ಕೆಲಸ ಮಾಡಿ, ಈಗ ಪ್ರಸ್ತುತ ಉಡುಪಿಲಿ ನಿವೃತ್ತ ಜೀವನ ನೆಡೆಶಿಂಡಿದ್ದವು. ಬರವಣಿಗೆ ಹವ್ಯಾಸ ಮದಲೇ ಇದ್ದು.
ಮಕ್ಕಳೂ ಸಂಸಾರಿಯಾದ ಮೇಗೆ, ಪುರುಸೋತಿಲಿ ಒಂದಿನ ಕಾಲುನೀಡಿ ಕೂದುಗೊಂಡಿದ್ದಿಪ್ಪಾಗ, ಏನಂಕೂಡ್ಳು ಕಿಶೋರಣ್ಣಂಗೆ ಕಂಡು “ಯೇ ಮಾವಾ, ನಿಂಗೊ ಒಂದರಿ ಬೈಲಿಂಗೆ ಬನ್ನಿ” ಹೇದು ಕರಕ್ಕೊಂಡು ಬಂದ°!
ನಾವೆಲ್ಲೋರುದೇ ಸ್ವಾಗತ ಮಾಡುವೊ, ರಾಮಚಂದ್ರ ಮಾವನ ಶುದ್ದಿಗಳ ಕೇಳುವೊ, ಇನ್ನೂ ಹೆಚ್ಚು ಶುದ್ದಿಗಳ ಹೇಳುಲೆ ಪ್ರೋತ್ಸಾಹಿಸುವೊ.
ಅಮೂಲ್ಯ ಶುದ್ದಿಗಳ ಬೈಲಿಂಗೆ ಕೊಡ್ತ ರಾಮಚಂದ್ರಮಾವಂಗೂ, ಅವರ ಬೈಲಿಂಗೆ ಬಪ್ಪ ಹಾಂಗೆ ಮಾಡಿದ ಏನಂಕೂಡ್ಳಣ್ಣಂಗೂ ಅನಂತ ವಂದನೆಗೊ.

ಮಾವಾ, ಬನ್ನಿ – ಇದು ನಮ್ಮದೇ ಬೈಲು.
ಅಪ್ಪಚ್ಚಿ, ಚಿಕ್ಕಮ್ಮ, ಅಣ್ಣ, ತಂಗೆ, ಭಾವ, ಮಾವ – ಎಲ್ಲೋರುದೇ ಇದ್ದವು.
ನಿಂಗಳೂ “ರಾಮಚಂದ್ರ ಮಾವ°”ಆಗಿ ನಿಂಗಳ ಶುದ್ದಿ ಹೇಳಿ.
ಹರೇರಾಮ
~
ಬೈಲಿನ ಪರವಾಗಿ

ರಾಮಚಂದ್ರಮಾವನ ಗುರ್ತ-ಪರಿಚಯ:
ಇಪ್ಪ ಹೆಸರು: ಎ ರಾಮಚಂದ್ರ ಭಟ್

ಒಪ್ಪ ಹೆಸರು: ರಾಮಚಂದ್ರ ಮಾವ°
ಗುರ್ತ: ಹುಟ್ಟಿದ್ದು ಸ್ವಾತಂತ್ರ್ಯ ಬಪ್ಪಂದ ಮೊದಲು. ಅಂಬಗಾಣ  ‘ಬೆಲ್ಟ್ ಏರಿಯ ’ ಅಡ್ಯನಡ್ಕಲ್ಲಿ. (ಆದರೆ ಅನು ಇಂದಿಂಗೂ ಬೆಲ್ಟ್ ಕಟ್ಟುತ್ತಿಲ್ಲೆ)!
ಕಲಿವಲೆ ಹೇಳಿ ಊರು ಬಿಟ್ಟೋನು ಮತ್ತೆ ಊರಿನ ಬಿಟ್ಟೇ ಬಿಟ್ಟೆ. ಜೀವ ವಿಮಾ ನಿಗಮಲ್ಲಿ ಕೆಲಸಕ್ಕೆ ಸೇರಿ ಕೊಂಕಣ ಬಿಟ್ಟು ಮೈಲಾರ ಎಲ್ಲಾ ಸುತ್ತಿ ಮತ್ತೆ ಕೊಂಕಣಕ್ಕೇ ಬಂದೆ.
ಇದರ ಮದ್ಯೆ ಮದುವೆ ಆಗಿ ಮಕ್ಕೊ ಕಲ್ತು ಅವರ ಕಾಲ ಮೇಲೇ ಇದ್ದವು! ಕೆಲಸಂದ ನಿವೃತ್ತಿ ಆದಮೇಲೆ ನೆಮ್ಮದಿ ಜೀವನ. ಕೃಷ್ಣನ ಉಡುಪಿ ಹತ್ತರೇ ಎನ್ನದು ಬಿಡಾರ.
ಈಗಂತೂ ಎನಗೆ ತುಂಬ ಪುರುಸೊತ್ತು. ಹಾಂಗಾಗಿ ಬೇಕಾದ್ದರ ಓದುದು, ಕೇಳುದು, ನೋಡುದು, ಬೇಕಾದಲ್ಲಿಗೆ ಹೋಪದು.
ಹಾಂಗೇ ಬರೆಯಕ್ಕು ಹೇಳಿ ಕಂಡರೆ ಬರವದು!

ಮಿಂಚಂಚೆ: aramachandrabhat@gmail.com
ಫೋನು:08202532259

ಆನಡ್ಕ ಜಲಪಾತ: – ಭಾಗ 01

ಕರಾವಳಿಯ ಪೇಪರೊಂದಲ್ಲಿ ಹಿಂದೆ ಒಂನ್ಸತ್ತಿ ‘ಕುಗ್ರಾಮ’ ಗುರುತಿಸಿ ಶೀರ್ಷಿಕೆ ಯಡಿ ಪ್ರಕಟ ಆದ್ದು  ‘ದಿಡುಪೆ’. ಬರೇ ಕುಗ್ರಾಮ ಹೇಳಿ ಶಿರೋನಾಮೆ ಓದಿ ಉದಾಸೀನಂದ ಪುಟ ಮಡಿಸಿದ್ದೆ.
ಎಲ್ಲಿ, ಎಂತಗೆ ಹೇಳುವ ಯಾವ ದೊಡ್ಡ ಆಸಕ್ತಿ ಇಲ್ಲದ್ದೆ ಪೇಪರು ಮೂಲೆಗೆ ಇಡಿಕಿದ್ದೆ. ಮುಂದೆ ಒಂದು ದಿನ ಆ ದಿಡುಪೆಗೇ ಆನು ಹೋಪಲಿಕ್ಕು ಹೇಳುವ ಅಂದಾಜೇನಾದರೂ ತಲೆಯ ಮೂಲೆಲೆಲ್ಲಿಯಾದರೂ ಸಣ್ಣಕ್ಕಾದರೂ ಇದ್ದಿದ್ದರೆ ಲೇಖನ ಸರೀ ಓದಿ, ಚೆಂದಕ್ಕೆ ಪೇಪರು ಮಡ್ಚಿ ಜಾಗ್ರೆತೆಲಿ ಮಡುಗುತ್ತಿದ್ದೆನೋ ಏನೋ!
ಅಂತೂ ಅಂದು ಪೇಪರು ಮೂಲೆಗೆ ಇಡ್ಕಿದ ನಂತರ ದಿಡುಪೆಯ ಮರತ್ತೇ ಬಿಟ್ಟಿತ್ತಿದ್ದೆ. ಮುಂದೆ ಕೇಳಿದ್ದೇ ಶಂಕರಣ್ಣ ಕಾಂಬಲೆ ಸಿಕ್ಕಿದ ಮೇಲೆ.

ರಾಮಚಂದ್ರ ಮಾವ - ಅತ್ತೆ! ನೆಮ್ಮದಿಯ ನಿವೃತ್ತ ಜೀವನಲ್ಲಿ
ರಾಮಚಂದ್ರ ಮಾವ – ಅತ್ತೆ! ನೆಮ್ಮದಿಯ ನಿವೃತ್ತ ಜೀವನಲ್ಲಿ

ಈಗೆಲ್ಲಾ ಕಾಂಬಲೇ ಅಪ್ರೂಪದ ‘ಮುಡಿ’ ಕರಾವಳಿದೇ ವಿಶೇ‌ಷ.
ಪ್ಲಾಸ್ಟಿಕ್ ಗೋಣಿಲೇ ಅಕ್ಕಿ ತುಂಬಿ ಬಪ್ಪಾಗ ‘ಮುಡಿ’ ಹೇಳಿದರೆ ಎಂತಾ ಹೇಳಿ ವರ್ಣನೆ ಮಾಡುದು? ವರ್ಣನೆ ಮಾಡಿದರೆ ಎಷ್ಟು ಜನರ ತಲೆಗೆ ಹೋಕು?
ಆದರುದೆ ಮುಡಿಯ ಸುತ್ತ ಬೆಳುಲಿಂದ ಮಾಡಿದ ಬಳ್ಳಿ ಇದ್ದು ಹೇಳಿ, ಮುಡಿ ಹೇಳಿದರೆ ಅಕ್ಕಿ ಮುಡಿ ಹೆಮ್ಮಕ್ಕಳ ಜೊಟ್ಟು ಅಲ್ಲ ಹೇಳಿ ಅ‌ಷ್ಟಕ್ಕೆ ನಿಲ್ಸುತ್ತೆ.

ಆದರೆ ಸಂಬಂದಂಗಳ ಹುಡುಕ್ಕುವಲ್ಲಿ, ಜೋಡ್ಸುವಲ್ಲಿ ಬೇಡ ಹೇಳಿದರುದೆ ಮುಡಿದೇ ಉಪಮೆ. ಮುಡಿಯ ಬಳ್ಳಿ ಬಿಚ್ಚುತ್ತಾ ಹೋದ ಹಾಂಗೆ ಒಳಾಣ ಅಕ್ಕಿ ಹತ್ತರೆ ಹತ್ತರೆ ಆವುತ್ತು.
ಹಾಂಗೇ ಎಲ್ಲಿಯಾದರು ಕಾಂಬಲೆ ಸಿಕ್ಕಿದ ಜನವ ಮಾತಾಡ್ಸ್ತ , ವಿಚಾರ್‍ಸ್ತ ಹೋದಹಾಂಗೆ ಜೆಡಕ್ಕು ಬಿಚ್ಚಿ ದೂರಾಣ ಜನ ಹತ್ತರಾಣೋನೇ ಅವುತ್ತ.  ಹಾಂಗೆ ನೋಡಿ ಈ ಶಂಕರಣ್ಣಂದು ಸಂಬಂಧ, ಮುಡಿಯ ಬಳ್ಳಿಯ ಜಡಕ್ಕು ಬಿಚ್ಚುವಾಗ ಆದ್ದು!

ಸಂಬಂದ ಹೇಳಿ ಆದ ಮೇಲೆ ಉಪಚಾರಕ್ಕಾದರೂ ಹೇಳಿಗೊಂಬದು ‘ಎಂಗಳಲ್ಲಿಗೆ ಬನ್ನಿ’ ‘ಎಂಗಳಲ್ಲಿಗೆ ಬನ್ನಿ’. ‘ಖಂಡಿತಾ ಬತ್ತೆ ಈಗ ಪುರುಸೊತ್ತಿಲ್ಲೆ ’ ಅಥವಾ ‘ನಾಡಿದ್ದು ಆನು ಇರ್‍ತಿಲ್ಲೆ. ’ ಹೇಳಿ ಮತ್ತೆ ಜಾರಿಗೊಂಬದು!
ಶಂಕರಣ್ಣ ಮಾತ್ರ ಬರೇ ಪೊಟ್ಟು ಉಪಚಾರಕ್ಕೆ ನಿಂಬ ಜನ ಅಲ್ಲ. ಮತ್ತೆ ಎಲ್ಲಿ ಕಾಂಬಲೆ ಸಿಕ್ಕಿದರೂ ‘ಎಂಗಳಲ್ಲಿಗೆ ಬಯಿಂದೇ ಇಲ್ಲಿ, ನಿಂಗಳ ಮಾತು ಮಾತಿಲೇ ನಿಂದತ್ತನ್ನೇ ’ ಹೇಳಿ ನೆಗೆಮಾಡಿಕೊಂಡೇ ಮಾತು ಸುರು ಮಾಡುಗು.
ಒಂದ್ಸರ್‍ತಿ ಮಾತ್ರ ಬಿಡದ್ದೆ ‘ ಎನ್ನ ಮನೆ ದಿಡುಪೆಗೆ ಹತ್ರವೋ ಹೇಳಿ ಹೆದರಿಕೆಯೋ?’ ಹೇಳಿ ಹೇಳಿದಾಗ ‘ಹಾಂಗೆಂತ ಇಲ್ಲೆ. ನಿಂಗಳ ಮನೆ ದಿಡುಪೆ ಹತ್ರ ಹೇಳಿ ಗೊಂತಾದ್ದೇ ಈಗ! ’ ಹೇಳ್ದೆ.

ಮನಸ್ಸಿಲಿ ಕಂಡತ್ತು ‘ ಈ ಶಂಕರಣ್ಣಂಗೆ ಅವಂದೇ ತೋಟ, ಕೃಷಿ ಇದ್ದು. ಎನಗಾದರೋ ಆ ಮೂಲೆಲಿ ನೆಳವು ಬಡಿವದಷ್ಟೇ ಕೆಲಸ. ಹೊತ್ತು ಹೋಯಕ್ಕನ್ನೆ! ’ ಶಂಕರಣ್ಣ ಬಡಪ್ಪೆಟ್ಟಿಂಗೆ ಬಿಡುವ ಜನ ಅಲ್ಲ. ಮತ್ತೆ ಬೇರೆವರ ತಲೆಲಿ ಎಂತ ನಡೆತ್ತು ಹೇಳಿ ಗೊಂತಾವುತ್ತೋ ಏನೋ.
ಹೇಳಿಯೇ ಬಿಟ್ಟ ‘”ದಿಡುಪೆ ಹೇಳ್ದ ಕೂಡ್ಳೆ ನಿಂಗಳ ಎದೆಲಿ ಅವಲಕ್ಕಿ ಕುಟ್ಟುಲೆ ಸುರು ಅತೋ ಏನೋ. ಆ ಊರು ಹಾಂಗೆತಿಲ್ಲೆ. ಆನೇ ನೋಡಿ, ಅಲ್ಲಿಗೆ ಹೋಗಿ ಆಸ್ತಿ ಮಾಡಿ ಕಾಡು ಗುಡ್ಡೆಯ ಮದ್ಯೆ ನೆಮ್ಮದಿಲೇ ಇದ್ದೆ.
ಇನ್ನು ನಿಂಗೊಗೆ ಚೆಂದದ ಜಲಪಾತ, ಕಸ್ತಲೆ ಕರ್ಗಾಣದ ಕಾಡು, ಹತ್ತುಲೆ ದಮ್ಮು ಕಟ್ಟುವ‌ಷ್ಟು ಎತ್ತರದ ಗುಡ್ಡೆ , ವ‌ರ್ಷ ಇಡೀ ನೀರಿದ್ದು  ಗಂಭೀರಲ್ಲಿ ಹರಿವ ಹೊಳೆ – ಎಲ್ಲಾ ಕಾಂಬಲಕ್ಕು. ಬನ್ನಿ ನಿಂಗೊಗೆಲ್ಲಾ ತೋರ್‍ಸ್ತೆಷ್ಟು” ಹೇಳಿಯಪ್ಪಗ ಎನ್ನಂತ ಪೇಟೆ ಕುಳಕ್ಕೆ ಅನಿಸಿದ್ದು “ಶಂಕರಣ್ಣ ಸ್ವರ್ಗಲ್ಲೇ ಇದ್ದನೋ!?” ಹೇಳಿ.
ಹೀಂಗಾಗಿ ಅವನ ಹೇಳಿಕೆಯ ಬೇಡ ಹೇಳುವ ಮನಸ್ಸಾಗದ್ದೆ ಮೊಬೈಲು ನಂಬ್ರ ತೆಕ್ಕೊಂಡೆ. ‘ನಿಂಗೊಗೆ ಫೋನು ಮಾಡಿಯೇ ಬತ್ತೆ. ’ ಹೇಳಿದೆ.. (ಸಶೇಷ)

ಮುಂದೆ >>
ಬಪ್ಪವಾರ ಕಾದುನೋಡಿ…

7 thoughts on “ಆನಡ್ಕ ಜಲಪಾತ – ಧಾರೆ 1

  1. ಧಾರೆ ಕುತೂಹಲದ ಘಟ್ಟಲ್ಲಿ ನಿಂದಿದು..ಕಾದು ನೋಡುವೊ..
    ರಾಮಚಂದ್ರ ಮಾವಂಗೆ ಸ್ವಾಗತ.

  2. ರಾಮಚ೦ದ್ರ ಮಾವ೦ಗೆ ಆತ್ಮೀಯ ಸ್ವಾಗತ ..
    ಆಹ್! ಆನು ಸರಿಯಾದ ಸಮಯಕ್ಕೆ ಬೈ೦ದೆ. ಎರಡನೇ ಕ೦ತಿಗೆ ಕಾಯುವ ಕೆಲಸ ಇಲ್ಲೆನ್ನೆ ಯೆನಗೆ. ಇದಾ ಇಲ್ಲೇ ಎರಡು ಇ೦ಚು ಹತ್ತಿರದಲ್ಲಿದ್ದು ಎರಡನೇ ಕ೦ತು.
    ಶೈಲಿ ಲಾಯಕ್ಕ ಆಯ್ದು ಮಾವಾ..

  3. ಶ್ಶೋ.. ಇನ್ನಾಣ ಕ೦ತಿ೦ಗೆ ಕಾದು ಕೂಪದು ಎಷ್ಟು ದಿನ ಆತು!!!
    ಬರವಣಿಗೆಯ ಶೈಲಿ ಭಾರೀ ಲಾಯಿಕಿದ್ದು ಮಾವಾ..

  4. ರಾಮಚಂದ್ರ ಮಾವಂಗೆ ಸ್ವಾಗತ. ಬರಹದ ಶೈಲಿ ತುಂಬಾ ಲಾಯಕಿದ್ದು. ಓಹ್, ಪಚ್ಚೆ ಕಾಡು, ಗುಡ್ಡೆ, ಜಲಪಾತ, ಹೊಳೆ . . ದಿಡುಪೆಯ ಕಣ್ಣಾರೆ ಕಾಣೆಕು ಹೇಳಿ ಆಶೆ ಆವ್ತಾ ಇದ್ದು. ಬರಳಿ ಇನ್ನಾಣ ಕಂತು ಬೇಗನೆ.

  5. ರಾಮಚಂದ್ರ ಮಾವಂಗೆ ಬೈಲಿಂಗೆ ಆತ್ಮೀಯ ಸ್ವಾಗತ. ನಮ್ಮೂರ ಬಿಟ್ರೂ ನಮ್ಮೂರ ಹೆಮ್ಮೆಲಿ ಸ್ಮರಿಸಿಗೊಂಬ ನಮ್ಮ ಹಿರಿಯರ ಸ್ಥಾನಲ್ಲಿ ನಿಂಬ ಮಾವನ ಬೈಲಿಲಿ ಪರಿಚಯ ಆದ್ದು ಕೊಶಿ ಆತು.
    ಮುಡಿಯ ವರ್ಣನೆ ಸೊಗಸಾಯ್ದು. ಇನ್ನು ಮಾವನೊಟ್ಟಿಂಗೆ ದಿಡುಪೆಗೆ ಹೋಯೇಕು.

    ಹೇಳಿದಾಂಗೆ ಈ ಮಾವಂಗೆ ಈಗ ಬೈಲಿಂಗೇದು ಒಂದು ಹೆಸರು ಆಗೇಡದೋ.

  6. ರಾಮಚ೦ದ್ರ ಮಾವ೦ಗೆ ಆತ್ಮೀಯ ಸ್ವಾಗತ.
    ಎಪ್ಪತ್ತರ ದಶಕದ ಅಕೇರಿಗೋ ಅಲ್ಲ ಎ೦ಭತ್ತರ ಶುರೂವಿ೦ಗೋ ‘ಉದಯವಾಣಿ’ಲಿ ‘ದಿಡುಪೆ ಕುಗ್ರಾಮ’ ದೊಡ್ಡ ಶುದ್ದಿ ಆಗಿತ್ತು.ಈಗ ನಿ೦ಗೊ ಅಲ್ಯಾಣ ಶುದ್ದಿ ಹೇಳಿರೆ ಬೈಲಿನ ನೆ೦ಟ್ರಿ೦ಗೂ ಅಲ್ಯಾಣ ಪರಿಚಯ ಅಕ್ಕು.
    ಉಪಮೆ,ಗಾದೆಗೊ ಕೊಶಿ ಕೊಟ್ಟತ್ತು ಮಾವ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×