- ದಿಡೀರ್ ಪರಂಗಿ ಕಾಯಿ(ಅನನಾಸ್)ಉಪ್ಪಿನಕಾಯಿ - March 8, 2013
- ಕರ್ನಾಟಕ ಮತದಾರ ಪಟ್ಟಿಗೆ ಹೆಸರು ಸೇರ್ಸುದು ಹೇಂಗೆ? - October 8, 2012
- ಹವ್ಯಕ ಪುಸ್ತಕಂಗಳ ಲೋಕಾರ್ಪಣೆ - August 26, 2012
ನವಗೆ ನಿತ್ಯ ತಿರುಗುತ್ತ ಕೆಲಸ ಇದಾ! ಈಗ ರಾಜಕೀಯ ಚಟುವಟಿಕೆ ಜೋರಾದರೆ ನಮ್ಮ ಕೆಲಸವೂ ಜೋರಾವುತ್ತು. ನಾವು ಯೇವ ರಾಜಕೀಯ ಪಕ್ಷಲ್ಲಿಲ್ಲೆ, ಅವರ ಶುದ್ದಿಗ ನವಗೆ ಬೇಕನ್ನೆ!! ಓ.. ಮೊನ್ನೆ ಕೊಡೆಯಾಲಲ್ಲಿ ತಿರುಗಾಟಲ್ಲಿತ್ತು, ಕುಂಟಾಂಗಿಲ ಭಾವನೂ ಇತ್ತಿದ್ದ°. ಮತ್ತೆ ನೆಗೆಮಾಣಿಯೂ ಬೋಚನೂ ಪರೀಕ್ಷೆಗೆ ಓದುತ್ತ ಲೆಕ್ಕಲ್ಲಿ ಬೈಂದವಿಲ್ಲೆ. ವೇಣಿ ಅಕ್ಕನ ಮನೆ ಎದುರಂದಲೇ ಹೋಪಗ ಒಂದರಿ ಮೆಟ್ಟುಕಲ್ಲು ಹತ್ತಿತ್ತು! ಹೊಟ್ಟೆ ದಿನಿಗೇಳಿಗೊಂಡಿತ್ತಿದಾ!!! 😉
ವೇಣಿ ಅಕ್ಕ° ತಂಪು ಜೂಸು ಕೊಟ್ಟು ತಂಪು ಮಾಡಿದವು, ಒಂದರಿಯಂಗೆ! ಬೈಲಿಂಗೆ ತಂದ ಅಮೃತಫಲವೂ ಇತ್ತು, ತಟ್ಟೆಲಿ.. ಎದುರು ಮಡಿಗಿದ್ದದರ ಕಾಲಿ ಮಾಡಿ ಆತು. ವೇಣಿಅಕ್ಕ° ಎಂತದೋ ತಯಾರಿಲಿ ಇತ್ತಿದ್ದವು. ಬೈಲಿಂಗೆ ಹೊಸರುಚಿಯೋ ಕೇಳಿತ್ತು. ಅಂಬಗ ಹೇಳಿದವು, ಅವರ ಪುತ್ತೂರಿನ ಅಕ್ಕನಲ್ಲಿಂದ ಸುಮಾರು ಪರಂಗಿ ಕಾಯಿಗ ಬಯಿಂದಡ್ಡ! ಕೆಲವು ಬಗೆ ಹೊಸರುಚಿಗಳ ಮಾಡಿ, ಪಟ ತೆಗದು ಮಡಗಿ ಆಯಿದಡ್ಡ! ಈಗ ಪರಂಗಿಕಾಯಿ ಉಪ್ಪಿನ ಕಾಯಿ ಮಾಡುದು ಹೇಳಿದವು. ಬಾಕಿ ಸುಮಾರು ಉಪ್ಪಿನಕಾಯಿಗಳ ಹೆಸರು ಕೇಳಿ ಗೊಂತಿದ್ದಿದಾ, ಇದೆಂತರ ಹೊಸತ್ತಪ್ಪಾ ಹೇಳಿ ಅವರ ಹತ್ರೆ ಹೇಂಗೆ ಮಾಡುದು ಹೇಳಿ ಕೇಳಿತ್ತು. ಅಂಬಗ ಮಾಡ್ತ ಕ್ರಮ ಕೊಟ್ಟವು.
ಬೇಕಾದ ಸಾಮಾನುಗೊ:
ಹದಾ ಬೆಳೆದ ಪರಂಗಿಕಾಯಿ
ಉಪ್ಪು
ಹೊರಡಿಗೆ ಬೇಕಾದಸ್ಟು ಮೆಣ್ಸು, ಅರಶಿನ, ಸಾಸಿವೆ
ಮಾಡುತ್ತ ಕ್ರಮ:
ಪರಂಗಿಕಾಯಿಯ ಚೋಲಿ ತೆಗದು ಕೊರದು ಗೂಂಜು ತೆಗೆಯೆಕ್ಕು. ಮತ್ತೆ ಸಣ್ಣಕೆ(ಸೌತೆಕಾಯಿ ಉಪ್ಪಿನಕಾಯಿಗೆ ಕೊರವ ಹಾಂಗೆ) ಕೊರೆಯೆಕ್ಕು.
ಅದಕ್ಕೆ ಉಪ್ಪು ಹಾಕಿ ನಾಕರಿಂದ ಎಂಟು ಗಂಟೆ ಮಡಗೆಕ್ಕು.
ನಂತರ ಮೆಣ್ಸು ಅರಶಿನ ಸಾಸಿವೆ ಕಡದು ಮಾಡಿದ ಹೊರಡಿಯ ಹಾಕಿ ಕಲಸಿದರೆ ಪರಂಗಿಕಾಯಿ ಉಪ್ಪಿನಕಾಯಿ ತಯಾರಿ ಆವ್ತು.
ನಿಂಗಳೂ ಮಾಡಿ ಹೇಂಗೆ ಆಯಿದು ಹೇಳಿ ಹೇಳಿಕ್ಕಿ ಆತೋ!
ವೇಣಿಅಕ್ಕನಲ್ಲಿಂದ ಉಪ್ಪಿನಕಾಯಿ ಒಂದು ಬಾಟ್ಲಿ ತೆಕ್ಕೊಂಡೇ ಹೆರಟಿದು. ನಿಂಗಳಲ್ಲಿ ಮಾಡಿದರೆ ಒಂದು ಕೂಕಿಲು ಹಾಕಿಕ್ಕಿ ಆತೋ? ಆನೂ, ಕುಂಟಾಂಗಿಲ ಭಾವನೂ ಬತ್ತೆಯ°.
ಚಿತ್ರಂಗೊ..
ಸದ್ಯ, ನಿಂಗಳೂ ಮಾಡಿ ಹೇಂಗೆ ಆಯಿದು ಹೇಳಿ ,ಎನಗೂ ಕೊಟ್ಟಿಕ್ಕಿ ಆತೋ! ಹೇಳಿದ್ದಿಲ್ಲೆನ್ನೇ..
ಇದು ನಳಪಾಕವೋ ಹೇ೦ಗೆ?
“ಬೇಕಾದ ಸಾಮಾನುಗೊ:
ಹದಾ ಬೆಳೆದ ಪರಂಗಿಕಾಯಿ
ಉಪ್ಪು
ಹೊರಡಿಗೆ ಬೇಕಾದಸ್ಟು ಮೆಣ್ಸು, ಅರಶಿನ, ಸಾಸಿವೆ ” ಎಲ್ಲವೂ ಸರಿ,ಆದರೆ ಎಷ್ಟೆಷ್ಟು? ನಿ೦ಗೊಗೆ ಬೇಕಾಷ್ಟು ಹೇಳಿಕ್ಕೆಡ ಭಾವ,ಎ೦ಗಳೂ ಪೆ೦ಗ ಆಗಿ ಹೋಕು..
ಯೇ ಪೆಂಗಣ್ಣೋ.. ಪರಂಗಿಕಾಯಿ ಇದ್ದರೆ ‘ಧಿಡೀರ್ ಉಪ್ಪಿನಕಾಯಿ’ ಮಾಡ್ಲಕ್ಕು.
ಆದರೆ ‘ಧಿಡೀರ್ ಪರಂಗಿಕಾಯಿ’ ಮಾಡುಸ್ಸು ಹೇಂಗೆ?!!
ಇದಕ್ಕೆ ಏನಾರು ಕೆಣಿ ಇದ್ದರೆ ಹೇಳಿ.
ಗೋಣಿ ಕಟ್ಟಿರೂ ಹಾಳೆಮೂಡೆ ಕಟ್ಟಿರೂ ನಿಂಗೊಗೆ ಹಂದಿಗೊ ಒಳುಶಿ ಬೇಕನ್ನೆ ಪರಂಗಿಕಾಯಿಯ? ಹಾಂ..ಗೆ ಬೆಳೆತ್ತಾ ಬಂತು ಹೇಳಿ ಅಪ್ಪಗ ಹಂದಿಗೊ ಬಂದು ಮನಾರ ಮಾಡಿ ಹೋವ್ತವತ್ಲಾಗಿ; ಪೊ!! 🙁
ಎಲಾ… ಈ ಅಂಬೆರ್ಪಿನ ಎಡಕ್ಕಿಲ್ಲಿ ನಿಂಗೊ ಅಲ್ಲಿಗೆ ಎತ್ತಿದ್ದು ಸಾಕನ್ನೆಪ್ಪ!
ಓಯ್.. ನಿಂಗೊ 4 ಪರಂಗಿಚಕ್ಕೆ ತೆಕ್ಕೊಂಡು ಇತ್ತೆ ಬನ್ನಿ ಹೇದು. 2 ಜೂಸು ಮಾಡುವೋ, ಮತ್ತಿಪ್ಪದು ಉಪ್ಪನಕಾಯಿ ಮಾಡುವೊ. ಕರಡಿಗೆ ಇಲ್ಲಿ ಇದ್ದು.
ಓಯ್… ಹಲಸಿನ ಹಣ್ಣು ಸುರುವಪ್ಪಲಾತಿಲ್ಯೋ. ಹೋದವರುಷ ಅಜ್ಜಕ್ಕಾನ ಭಾವ ಹೊತ್ತೊಂಡು ಹೋದ್ದು ನೆಂಪಿದ್ದನ್ನೆ
ಇದು ಪಷ್ಟಾತು.
ಪುತ್ತೂರು – ಸುಳ್ಯ ಮಾರ್ಗ ಅಗಲ ಮಾಡ್ತ ಹೆಸರಿಲಿ ಮಾವಿನ ಮರಂಗಳ ಕಡುದು ಇಡ್ಕಿದ್ದವು. ನವಗೆ ಅರ್ಜೆಂಟ್ ಉಪ್ಪಿನಕಾಯಿ ಬೇಕಪ್ಪಗ ಮೆಡಿ ಇಲ್ಲೆ ಹೇಳ್ತವು – ಬೈಲಿಲಿ ಮದುವೆ, ಉಪ್ನಾನ ಜೆಂಬ್ರಂಗ ಶುರುವಕ್ಕಿದಾ .ಇನ್ನು ಫರಂಗಿ ಕಾಯಿ ಕೊರವದು, ಹೆದರ್ಲಿಲ್ಲೆ.