Oppanna.com

ಅನ್ನಂ ಬ್ರಹ್ಮೇತಿ ವ್ಯಜಾನಾತ್ …..

ಬರದೋರು :   ವೇಣೂರಣ್ಣ    on   17/07/2010    15 ಒಪ್ಪಂಗೊ

ವೇಣೂರಣ್ಣ

ಅಶನ-ವಸನ- ವಸತಿ ಇದು ಎಲ್ಲೋರ ಪ್ರಾಥಮಿಕ ಅವಶ್ಯಕತೆ . ಮನುಷ್ಯನ ಜಠರಾಗ್ನಿಗೆ   ಯಾ ಪ್ರಾಣಾಗ್ನಿಗೆ  ಆಹುತಿ ಆಶನವೆ. ಇಲ್ಲಿ ಅಶನ ಹೇಳ್ತದ್ದು ನಾವು ಸೇವಿಸುವ ಎಲ್ಲ ಆಹಾರ ಪ್ರಕಾರಂಗೊಕ್ಕು ಸಂಕೀರ್ಣ ಪದವಾಗಿ ಉಪಯೋಗಿಸಿದ್ದು . ಇದರಲ್ಲಿ ನಾವು ಉಂಬ ಕೊಶಿಯಕ್ಕಿ ಅನ್ನಂದ ಹಿಡುದು ಪುಟ್ಟ ತಿಂತ ಕುರ್ ಕುರೆ ಕುರೇ ವರೆಗೆ  ಎಲ್ಲವೂ ಸೇರ್ತು !
***
ಹೇಳಿದ ಹಾಂಗೆ
ಮೊನ್ನೆ ಒಂದು ಜೆಂಬಾರಕ್ಕೆ ಹೊಯೆಕ್ಕಾದ ಅನಿವಾರ್ಯತೆ ಬಂತು.
ಅತೀ ಹತ್ತರಾಣ ಆಪ್ತ ಗೆಳೆಯನ ತಂಗೆ ಮಾತ್ರವಲ್ಲ ಎಂಗಳ ಗೆಳೆಯರ ಬಳಗಕ್ಕೆಲ್ಲ ಕೊಂಡಾಟದ ತಂಗೆಯ ಮದುವೆ .  ಹಾಂಗೆ ಮುನಾಣ ದಿನವೇ ಹಾಲ್ ಗೆ ಹೋಗಿ ಟಾ೦ಬು ಹಾಕಿದ್ದು . ಅಲ್ಲಿ ಅಪ್ಪಚ್ಚಿ ಚಿಕ್ಕಮ್ಮದ್ರ ಗೌಜಿಯೋ ಗೌಜಿ . ನಮ್ಮ ತೆಂಕಮಲೆ ಬಾಲಣ್ಣ ಇದ್ದನ್ನೇ ಅವನದೇ ಅಡುಗೆ . ಅವಂಗೆ ಸೀಸನ್ ಇಪ್ಪಗ ಅಡುಗೆ ಮಾಡುದು ಇಲ್ಲದ್ರೆ  ಹವ್ಯಾಸಿ ವೃತ್ತಿಪರ! ಭಾಗವತಿಕೆಯೂ  ಮಾಡ್ತ.( ಹೇಳಿರೆ ಕವರು ತೆಕ್ಕೊಂಡು ಪದ ಹೇಳ್ತ  ) . ಅತ್ತಾಳದ ಪೂಜೆ ಕಳುದು ಬೆಂದಿಗೆ ಕೊರವಗ ನಾಳಂಗೆ ಎಷ್ಟು ತರಕಾರಿ ಕೊಚ್ಚೆಕ್ಕು  ಹೇಳಿ ಎಂಗೋ ಬಾಲಣ್ಣ ನ   ಹತ್ರೆ ಕೇಳಿಯಪ್ಪಗ  ಅವ ದೊಡ್ಡ ಹೆಡಗೆ ತಂದು ಇದರಲ್ಲಿ ಒಂದೊಂದು ಹೆಡಗೆ ಸಾಕು ಹೇಳಿದ .
“ಉದಿಯಪ್ಪಗ ತಿಂಡಿಗೆ ಎಂತ?”
“ಇಡ್ಲಿ ಸಾಂಬಾರ್ “.
ಸರಿ
ಹೇಳಿ ಎಂಗೋ ಅದಕ್ಕೆ ಬೇಕಾದ ಅನಿಲ -ಜನಕನ (ಬಟಾಟೆ ) ಕೊರದಿಕ್ಕಿ , ಊಟ ಮಾಡಿ ಮನುಗಿದೆಯೋ . ಬಾಲಣ್ಣ ಇರುಳು ಹೋಳಿಗೆ ಮಾಡಿಕ್ಕಿ ಅರ್ಧ ಗಂಟೆ ತಲೆ ಅಡ್ಡ ಹಾಕಿದ್ದನೋ ಗೊಂತಿಲ್ಲೇ  ಎಂಗೋ ಏಳುವಾಗ ಇಡ್ಲಿ ಹಿಟ್ಟಿನ ಎರವ ಏರ್ಪಾಡಿಲ್ಲಿತ್ತಿದ್ದ.
ಮರದಿನ ಎಲ್ಲ ಎದ್ದು ತಯಾರಾಗ್ಯಪ್ಪಗ   ದಿಬ್ಬಣ  ಬಂತು .
ಮೂರು ಜೀಪುದೆ ಒಂದು ಮೆಟಡೋರ್ ಲಿ ಒಟ್ಟು ೩೮ ಜೆನ ಬಂದವು. ಎಂಗೋ ಗ್ರೆಶಿದೆಯೋ ಬಹುಶ ಇನ್ನೊಂದು ಟ್ರಿಪ್ ನಿಧಾನಕ್ಕೆ ಬಕ್ಕು ಹೇಳಿ. ಏಕೆ ಹೇಳಿರೆ ದಿಬ್ಬಣಕ್ಕೆ ೨೦೦ ಜನ ಬತ್ತವು ಹೇಳಿ ಮೊದಲೇ ಅಪ್ಪಣೆ ಆಗಿತ್ತಿದ್ದು . ಬಾಲಣ್ಣ ೩೦೦  ಜೆನಕ್ಕಪ್ಪಷ್ಟು ಇಡ್ಲಿ ಹಿಟ್ಟು ತಯಾರು ಮಾಡಿದ್ದ . ೧೦೦ ಜೆನಕ್ಕಪ್ಪಷ್ಟು ಬೇಶಿ ಮಡುಗಿತ್ತಿದ್ದ.  ಬಂದವು  ೩೮ ಜೆನ ಮನೆಯವ್ವು ಮತ್ತೆ ನೆಂಟರಿಷ್ಟರು ೩೦-೩೫ ಜನ ಎಲ್ಲ ಕೂದು ತಿಂಡಿ ತಿಂದಾತು . ಆಮೇಲೆ ತಿಂಡಿ ತಿಮ್ಬಲೇ ಜೆನ ಇಲ್ಲೆ . ಹನ್ನೊಂದುವರೆ ಗಂಟೆಯ ವರೆಗೆ ಬಂದವಕ್ಕೆಲ್ಲ ತಿಂಡಿ ಕಾಪಿ ಸಪ್ಲಯ್ ಮಾಡಿದ್ದರೂ ಮತ್ತೂ  ೧೫೦ ಜೆನಕ್ಕಪ್ಪಷ್ಟು ಇಡ್ಲಿ ಹಾಂಗೆ ಬಾಕಿ.
ಕೆಳಾಣ ಮನೆ ಭಾವ  ಎನ್ನತ್ರೆ ಬಂದು ಹೇಳಿದ
” ಇನ್ನು ಕೊಡುದು ಬೇಡ ಎಂತ ಬಂದವು ಉ೦ಬಲೆ ಇಲ್ಯ ?”
“ಅಪ್ಪು”  ಹೇಳಿ ಗೋಣು ಆಡ್ಸಿದೆ   .
ಇದರ ಇನ್ನೆಂತ ಮಾಡುದು ಭಾವ ಹೇಳಿ ಸತ್ಯ ಭಾವ ಕೇಳಿದ .
“ಇನ್ನಾರು ತಿಂತವು?” ಆಳುಗೊಕ್ಕೆ ಕೊಡುದು  ಹೇಳಿ ಕೆಳಾಣ ಮನೆ ಭಾವ  ಹೇಳಿದ
“ಇಷ್ಟೊಂದು ಇಡ್ಲಿಯ ಆಳುಗೋ ಕೊಂಡೋವ್ತವ ? ” ಕಣ್ಣರಳಿಸಿ ಪುಟ್ಟಕ್ಕ ಕೇಳಿತ್ತು . ಅಲ್ಲಿ ಇತ್ತದೆ ೫-೬ ಜೆನ ಆಳುಗೋ.
ಮದ್ಯಾನ ಊಟಕ್ಕೆ ೭೫೦ ಜೆನಕ್ಕೆ ತಯಾರಾವ್ತಾ ಇದ್ದು . ಹಾಲ್ ಒಳ ಇಣುಕಿ ನೋಡಿರೆ ಮುನ್ನುರೋ -ಮುನ್ನುರೈವತ್ತು ಜೆನ ಇದ್ದವಷ್ಟೇ .
ಆಗಲೇ ಪಳ್ಳಿ೦ದ  “ಅಲ್ಲಾಹೋ ಅಕ್ಬರ್ ” ಕೇಳ್ತಾ ಇದ್ದು . ಗಂಟೆ  ಹನ್ನೆರಡೂವರೆ ಅಯಿದು
ಇನ್ನು ಎಷ್ಟು ಹೇಳಿರೂ ನೂರು ಜೆನ ಬಕ್ಕಷ್ಟೇ . ಅಲ್ಲದ್ದೆ ಒಳ್ಳೆ ಮುಹೂರ್ತ ಆ ದಿನ.  ಕಟ್ಟಿದ ಮನೆ ಬಿಡದ್ದೆ ಜೆಂಬರಂಗೋ  !
ಈ ಕೆಲಸದವಕ್ಕೆ ಇಂದು ಬೇಕಾದಷ್ಟು ಸಾಂಬಾರು , ನೇಂದ್ರ ಬಾಳೆ ಹಣ್ಣು ಪ್ರಥಮ , ಅಶನ ಕೊಂಡೋಪಲೆ ಸಿಕ್ಕುತ್ತು   ಇನ್ನು ಈ ಇಡ್ಲಿಯ ಎಂತ ಮಾಡ್ತವು ? ಹೇಳಿ ಪುಟ್ಟಕ್ಕನ ಲೆಕ್ಕಾಚಾರ !
“ಛೆ ! ಎಷ್ಟು ಒಳ್ಳೆ ಮಲ್ಲಿಗೆ ಹೂಗಿನ ಹಾಂಗಿಪ್ಪ ಇಡ್ಲಿ ” ಹೇಳಿ ಬಾಮಿಮೂಲೆ ದೊಡ್ಡಮ್ಮ ಸಂಕಟ ಪಟ್ಟವು !
ವಿಷಯ ಅಪ್ಪು . ಇನ್ನು ಇದರ ಆರೂ ಕೊಂಡೋಗದ್ರೆ ಗುಂಡಿಗೆ ಹಾಕಿ ಮುಚ್ಚುದೆ ಹೇಳಿ ಬಾಲಣ್ಣ ನ ಅಸಿಸ್ಟೆಂಟ್  ಜಿಲೇಬಿ ಮಾಲಿಂಗಜ್ಜನ   ಮಗಂದೇ ಹೇಳಿದ.
ಮದುವೆ ಕಳಾತು.
ಸುಮಾರು ಎಲ್ಲ ಸೇರಿ   ನಾಲ್ನೂರೈವತ್ತು ಜೆನ ಉಂಡಿಕ್ಕಿ ಹೋದವು .
ಇನ್ನು ಇರುಳಿಂಗೆ ಇಪ್ಪದರ ತೆಗದು ಮಡುಗಿಕ್ಕಿ ಒಳುದ್ದರ ಆಳುಗೊಕ್ಕೆ ಕೊಟ್ಟು ಕಳ್ಸಿಯೂ ಆತು.
ಸುಮಾರು ಸುಮಾರು ೨೦೦ ಜೆನ ಉಂಬಷ್ಟರ ಹೊಟ್ಟೆ ಸಂಕಟ ಪಟ್ಟು ಇಡ್ಕಿಯೂ ಆತು.
ಸಟ್ಟು ಮುಡಿ ಎಲ್ಲ ಗೌಜಿಲಿ ಕಳುದತ್ತು . ಏನ೦ಕೋಡ್ಲು  ಭಾವನ ವೀಡಿಯೋ ಕೂಡ ಲಾಯಿಕ  ಬಂತು .

***
ಮರದಿನ  ಎಂಗಳ ಊರಿನ ಜೆನ ಪ್ರಪ್ರಥಮ ಬಾರಿಗೆ ಜಿಲ್ಲಾ ಪಂಚಾಯತ್    ಅಧ್ಯಕ್ಷ ಸ್ಥಾನ ಗೆದ್ದ ಲೆಕ್ಕಲ್ಲಿ ಪುರ ಪ್ರವೇಶ ಮತ್ತು ಸಮ್ಮಾನ ಕಾರ್ಯಕ್ರಮ …
ಕಾರ್ಯಕ್ರಮ ಆದಮೇಲೆ ಭೂರಿ ಭೋಜನ …
ಬಂದವೆಲ್ಲ ಊಟ ಮಾಡಿದವು .. ಪಲಾವ್ ಮಾಡಿದ್ದಕ್ಕೆ “ಉಪ್ಪು ” ವಿಪರೀತ ಆಗಿ ಬಾಯಿಗೆ ಮಡುಗುಲೆಡಿಯದ್ದೆ ಅದರ ಹಾಕೆಂಡವೆಲ್ಲ   ಇಡ್ಕಿದ್ದೆ..
ತಟ್ಟೆಲಿ ಒಬ್ಬೊಬ್ಬ ಒಂದೊಂದು ಮುಷ್ಠಿ ಬಿಟ್ಟರೂ ಹತ್ತರೆ ಹತ್ತರೆ ನಾಲ್ಕು ಸಾವಿರ ಜನ ಆಯಿದು
ಹಾಂಗಾರೆ ಎಷ್ಟು ಇದ್ಕಿಕ್ಕು ಹೇಳಿ ನಿಂಗಳೇ ಲೆಕ್ಕ ಹಾಕಿ !
***
ಹಾಂಗೆ ಇರುಳಪ್ಪಗ  ಟಿ.ವಿಲಿ   ಚಂಡಮಾರುತ ಬಂದು ಮನೆ ಮಟ ಕಳಕ್ಕೊಂಡವು ಒಂದು ತುತ್ತು ಆಶನಕ್ಕಾಗಿ ಹಪಹಪಿಸುದರ  tv9 ವು  ತಿರುಗಿಸಿ ತಿರುಗಿಸಿ ತೋರ್ಸಿ  “ಆಹಾರ ಮಂತ್ರಿ ನಾಪತ್ತೆಯಾಗಿದ್ದಾರೆ ? ಕೂಡಲೇ ರಾಜಿನಾಮೆ ಕೊಡಬೇಕು !” ಇತ್ಯಾದಿ  ಅಪ್ಪಣೆ ಕೊಡುಸುಲೆ ಸುರು ಮಾಡಿಯಪ್ಪಗ “ಬುದ್ದಿ ಜೀವಿಗೋ” ಹೇಳುತ್ತ ನಾಲ್ಕು ಜೆನ ಎ.ಸಿ. ರೂಮಿಲ್ಲಿ ಕೂದೊಂಡು ಪರಿಹಾರ ವಿತರಣೆ  ಬಗ್ಗೆ ಚರ್ಚೆ ಮಾಡ್ಲೆ ಸುರು !
“ನಿಜವಾಗಿಯೂ ಪರಿಹಾರ ಜನರನ್ನು ತಲುಪುತ್ತೆ ಅಂತೀರಾ?” ಹೇಳಿ.
ಛೆ! ಇದೆಂತ ಕರ್ಮ ಹೇಳಿ ಇನ್ನೊಂದು ಚಾನೆಲ್ ಗೆ ಬದಲಾಯಿಸಿ ನೋಡಿರೆ ” ಪರಿಹಾರ ವಿತರಣಾ ನಿರ್ದೇಶಕ ಸ್ಥಾನಕ್ಕೆ ಪೈಪೋಟಿ !” ಹೇಳಿ ಹೇಳುಲೇ ಸುರು ಮಾಡಿದವು .
ನವಗೆ ಗೊಂತಿದ್ದನ್ನೇ ಎಂತಗೆ ಆ ಪಟ್ಟಕ್ಕೆ ಅಷ್ಟು ಪೈಪೋಟಿ ಹೇಳಿ !
ಊಟದ ಬಾಳೆ
ಊಟದ ಬಾಳೆ
ಇಲ್ಲಿ ಒಂದು ಗೋಣಿ ಕೊಟ್ಟರೆ ಅಲ್ಲಿಗೆತ್ತುದು ಒಂದು ತೊಟ್ಟೆ ಮಾತ್ರ !
ಒಳುದ್ದರ “ಗುಳುಂ” ಮಾಡ್ಲೆ  ರಣ ಹದ್ದುಗಳ ಹಾಂಗೆ ಕಾವದು!
ಮೇರಾ ಭಾರತ್ ಮಹಾನ್
****
ನಮ್ಮ ದೇಶಲ್ಲಿ ಒಂದು ಹೊತ್ತು ಊಟಕ್ಕೆ ಗತಿ ಇಲ್ಲದ್ದವು ಎಷ್ಟೋ ಜನ ಇದ್ದವು. ನಾವು ಓದಿದ ಹಾಂಗೆ ಎಷ್ಟೋ ಜೆನ ಮಹಾ ವಿದ್ವಾಂಸರೆಲ್ಲ ವಾರಾನ್ನ ( ವಾರದ ಒಂದೊಂದು ದಿನ ಒಬ್ಬೊಬ್ಬ ದಾನಿಯ ಮನೇಲಿ ಹೋಗಿ ಉಂಡಿಕ್ಕಿ ಬಪ್ಪದು. ಆ ಕಾಲಲ್ಲಿ ಪುಣ್ಯಾತ್ಮರು ಕನಿಕರಂದ ಊಟ ಹಾಕ್ಯೊಂಡಿತ್ತವು.   ) ಮಾಡಿ ವಿದ್ಯೆ ಕಲ್ತು ದೊಡ್ಡ ಆದವು. ಕಠಿಣ ಸಾಧನೆ ಮಾಡಿ ಮೇಲೆ ಬಂದವು.
ಎಷ್ಟೋ ಸಮಾರಂಭಗಳಲ್ಲಿ ನಾವು ಅಡುಗೆ ಮಾಡಿದ್ದರ ಹಾಳು ಮಾಡುದು ಕಾಣುತ್ತು .   ಕೆಲವು ಜೆಮ್ಬಾರಂಗಳಲ್ಲಿ ವ್ಯಕ್ತಿ  ಪ್ರತಿಷ್ಠೆ ಮೆರೆಸುಲೆ ನಾನಾ ಅಡುಗೆ ಮಾಡಿ (ಉಂಡರೆ ತೊಂದರೆ ಇಲ್ಲೆ ) ಹಾಳು ಮಾಡುದರ ಕಾಂಬಗ ಸಂಕಟ ಅವುತ್ತು.
ಈಗಾಗಲೇ ಅಶನದ ಉತ್ಪಾದನೆಗಿಂತ ಬೇಡಿಕೆ ಜಾಸ್ತಿ ಆಗಿ ಅಕ್ಕಿಯ ಬೆಲೆ ಆಕಾಶಕ್ಕೆ ಎತ್ತುತ್ತಾ ಇದ್ದು.
ಇದರ ಹತೋಟಿಗೆ ತರೆಕ್ಕಾರೆ ನಾವೆಂತ ಮಾಡೆಕ್ಕು ?
ನಾವು ನಮ್ಮ ಆಹಾರ ಪದ್ಧತಿಯ ಸುಧಾರಿಸಿಕೊಳ್ಳೆಕು.
ಸಣ್ಣ ಮಕ್ಕೊಗೆ ಅವು ತಿಂಬ ತಿಂಡಿಯ ಬಗ್ಗೆ ಸರಿಯಾದ ಜ್ಞಾನ ಮೂಡಿಸುವ ಜವಾಬ್ಧಾರಿ ಅಪ್ಪ -ಅಮ್ಮಂದಿರಿಂಗೆ ಇದ್ದು .
ಕೆಲವೊಂದು ಹಾನಿಕಾರಕ ವಸ್ತುಗಳ ಬಳಕೆ ಯಾ ಅದಕ್ಕೆ ಮಾರು ಹೋಪ ಬಗ್ಗೆ ಕೂಡ ಗಮನ ಬೇಕು.
ಅನ್ನಪೂರ್ಣೆ ಅಮ್ಮನೋರ  ಭಕ್ತಿಲ್ಲಿ ಪೂಜಿಸುವ ನಾವು ಆದಷ್ಟು ಆಹಾರ ಪೋಲಾಗದ್ದ ಹಾಂಗೆ ನೋಡಿಗೊಂಬ  ಮಹತ್ವದ ಜವಾಬ್ಧಾರಿ ಪ್ರಜ್ನಾವಂತರಾದ ನವಗೆಲ್ಲ ಇರೆಕ್ಕು.  ನಾವು ಹಾಳು ಮಾಡುದರ ಕನಿಷ್ಠ ಭಾಗ ಆದರೂ ಅವಶ್ಯಕತೆ ಇಪ್ಪವಕ್ಕೆ ಕೊಟ್ಟರೆ ? ಬದುಕು ಹಸನಕ್ಕಲ್ಲದ?
ಅದಕ್ಕಾಗಿಯೇ ನಮ್ಮ ಹಿರಿಯೋರು ಭೃಗು ವಾರುಣಿ ಸಂವಾದಲ್ಲಿ ಹೇಳಿದ್ದು
ಅನ್ನಂ ಬ್ರಹ್ಮೇತಿ ವ್ಯಜಾನಾತ್ .. ಅನ್ನಾದೇವ ಖಲ್ವಿದಾನಿ ಭೂತಾನಿ ಜಾಯಂತೆ …
(ಅನ್ನವನ್ನು ಬ್ರಹ್ಮನೆಂದು ತಿಳಿದನು. ಅನ್ನದಿಂದಲೇ ಈ ಜಗತ್ತಿನ ಜೀವಿಗಳು ಬದುಕುತ್ತವೆಯಲ್ಲವೇ ? )
ಅವು ತಮ್ಮ ಆತ್ಮ ಜ್ಞಾನಕ್ಕಾಗಿ ತಪಸ್ಸು ಮಾಡಿ ವಿಷಯ ತಿಳ್ಕೊಂಡು ನವಗೆಲ್ಲ ದಾರಿ ತೋರ್ಸಿದ್ದು ಮೊದಲ ಹೆಜ್ಜೆಯಾದರೋ ಜೀವಿಗಳ ಜೀವನ ಸುಖಮಯವಾಗಿರೆಕ್ಕಾರೆ ಅನ್ನ ಬಹಳ ಮುಖ್ಯ
ಅಲ್ಲದ?

15 thoughts on “ಅನ್ನಂ ಬ್ರಹ್ಮೇತಿ ವ್ಯಜಾನಾತ್ …..

  1. ಅವಲಕ್ಕಿ, ಸಜ್ಜಿಗೆ, ಬಾಳೆ ಹಣ್ಣು-ಇದಕ್ಕೆ ಎಂಗೊ ಕೋಂಕ್ರ‍ೀಟ್ ಮಿಕ್ಸ್ ಚರ್ ಹೇಳಿಂಡು ಇತ್ತಿದ್ದೆಯೊ

    1. { ಕೋಂಕ್ರ‍ೀಟ್ }
      ನೆಗೆಗಾರಂಗೂ ಅದೇವದೋ ಊರಿನ ಹೆಸರಿನಾಂಗೆ ಅನುಸಿ ಹೋತು ಒಂದರಿ.. 🙂

  2. ತಿಂಡಿಗೆ ಅವಲಕ್ಕಿ ಸಜ್ಜಿಗೆ ಮಾಡಿಯೊಂಡಿಪ್ಪಗ ಈ ಸಮಸ್ಯೆ ಇತ್ತಿಲ್ಲೆ ಹೇಳಿ ಆಚಕರೆ ಮಾವ ಹೇಳುದಿದ್ದು. ರಜ್ಜ ಒಂದು ಅಂದಾಜಿಗೆ ಕಲಸಿ ಮಡುಗಿರೆ, ಮತ್ತೆ ಹೆಚ್ಚು ಜೆನ ಬಂದರೆ ಮತ್ತೆ ಬೇಕಾದಷ್ಟು ತಯಾರುಸುವದು. ತಯಾರು ಮಾಡ್ಲೆ ಕಷ್ಟ ಇಲ್ಲೆ ಅದ!
    ಈಗ ಅದು ಆರಿಂಗೂ ಬೇಡ ಎಂತಕೆ ಹೇಳಿರೆ ಮೆಚ್ಚುತ್ತಿಲ್ಲೆ ಅಡ, ತಿಂದರೆ ಕಷ್ಟ ಆವ್ತಡ….. ಹಾಂಗಾಗಿ ಇಡ್ಲಿ ಸಾಂಬಾರು ಚಾಲ್ತಿಗೆ ಬಂದದು. ಇದು ಅಷ್ಟು ಸುಲಭಲ್ಲಿ ಆವ್ತಿಲ್ಲೆ ಅನ್ನೆ! ಮೊದಲೇ ಇಂತಿಷ್ಟು ಹೇಳಿ ಮಾಡಿ ಮಾಡುಗೆಡದೋ!
    ಈಗ ಇದರ ಬದಲು ಬೇರೆ ಎಂತಾರು ಸರಳವಾಗಿ ಮಾಡ್ಲೆಡಿವ (ರುಚಿಕರ) ತಿಂಡಿಯ ಆರಾರು ಸುರು ಮಾಡಿರೆ ಮತ್ತೆ ಎಲ್ಲೋರು ಅನುಸರಿಸುಗು, ಅಪ್ಪೋ? ಅಲ್ಲದೋ?

    1. ಅಪ್ಪು ಮಹೇಶ ! ಅವಲಕ್ಕಿ ಸಜ್ಜಿಗೆ ಆದರೆ ಈ ತೊಂದರೆ ಇಲ್ಲೇ .
      ಅದಕ್ಕೆ ಪೆರಡಾಲಲ್ಲಿ ನಾವು ವೇದ ಪಾಠ ಕಲ್ತೊಂಡಿಪ್ಪಗ ಉದಯಣ್ಣ ಅದನ್ನೇ ಸಮಾರೋಪಕ್ಕೆ ಮಾಡಿಗೊಂಡಿತ್ತದು. 😀

  3. ವೇಣೂರಣ್ಣ,
    “ಅನ್ನಂ ಬಹು ಕುರ್ವೀತ” ಹೇಳಿ ಉಪನಿಷತ್ತು ಹೇಳ್ತು ಹೇಳಿ ಹೆಚ್ಚು ಅಡುಗೆ ಮಾಡುದಡ !!

  4. ಎಂತದೆ ಆದರೂ ಇಂದು ಜಂಬ್ರಲ್ಲಿ ಅಡಿಗೆ ಮಾಡಿ ಇಡ್ಕುದು ಸಾಮಾನ್ಯ ಆಯಿದು.ಆನು ಇಷ್ಟರ ವರೆಗೆ ನೋಡಿದ ಹಾಂಗೆ ನಮ್ಮ ಜಾತಿಲಿ ನಿಜವಾಗಿ ಹಶು ಇಪ್ಪವು ಇಲ್ಲೆ,ಹೇಳ್ರೆ ಮನೇಲಿ ಊಟ ಇಲ್ಲದ್ದೆ ಜೆಂಬಾರಲ್ಲಿಯಾದರೂ ಹೊಟ್ಟೆ ತುಂಬಾ ಉಂಬೋ° ಹೇಳುವ ಪ್ರಸಂಗ ಇಂದು ಇಲ್ಲೆ.ಹಾಂಗಾಗಿ ಸುಮ್ಮನೆ ನಮ್ಮ ಪ್ರತಿಷ್ಠೆಗೆ ಅಡಿಗೆ ಮಾಡುಸುದರ ನಿಲ್ಲುಸೆಕ್ಕು.ಅದಲ್ಲದ್ದೆ ಈಗೀಗ ಸಕ್ಕರೆ ಕಾಯಿಲೆಯುದೆ ಬಿಪಿಯುದೆ ಜಾಸ್ತಿ ಆಯಿಗೊಂಡಿಪ್ಪ ಕಾರಣ ತಿಂಬ ಯೋಗ್ಯತೆ ಅಥವಾ ಕಾಯಿಲೆ ಇಲ್ಲದ್ದರೂ ಜಾಗ್ರತೆ ಮಾಡೇಕ್ಕಾದವೇ ಆದ ಕಾರಣವೂ ನಾವು ಸರಳವಾದ ಅಡಿಗೆ ಮಾಡೆಕ್ಕಾದದ್ದು ಅಗತ್ಯ.

  5. ಈಗ ಜೆ೦ಬ್ರದ ಸಮಯಲ್ಲಿ ಒ೦ದೇ ದಿನ ಹಲವು ಅನುಪ್ಪತ್ಯ೦ಗೊ ಇರ್ತು! ಹಾ೦ಗಾಗಿ ಗ್ರೇಶಿದಷ್ಟು ಜೆನ ಆವುತ್ತಿಲ್ಲೆದಾ !ಮತ್ತೆ ಅಷ್ಟು ಹಾಳಿತಕ್ಕೆ ಬೆ೦ದಿ, ಮೇಲಾರ ಮಾಡ್ಲಾವುತ್ತೋ. ಅಶನವ ಜೆನೆ ನೋಡಿ ಮಾಡ್ತವು..ಹಾ೦ಗಾಗಿ ಹನಿಯ ಒಳಿಗು..ಆದರೆ ಹಾಳು ಮಾಡ್ಲಾಗಪ್ಪಾ…ಬೇಕಾದವಕ್ಕೆ ಕೊಡೆಕು..ಇತ್ತೀಚೆಗೆ ಬೆ೦ಗಳೂರಿನ೦ತ ಪೇಟೆಲಿ ಫೋನು ಮಾಡಿರೆ ಬ೦ದು ತೆಕ್ಕೊ೦ಬ ಸೇವಾ ಸ೦ಸ್ಥೆಗೊ ಇದ್ದು ಹೇಳಿ ಕೇಳಿದ್ದೆ..
    ಅಣ್ಣಾ..ಇದು ಏವ ಹೊಡೆಯಾಣ ಊಟದ ಬಾಳೆಯೋ.ಬಳುಸಿದ ಕ್ರಮ ನಮ್ಮತ್ಲಾಣದ್ದರ ಹಾ೦ಗೆ ಕಾಣ್ತಿಲ್ಲೆ..ನಮ್ಮದೇ ಕ್ರಮ-ಬಾಳೆ ಮಡುಗಲೆ, ಬಡುಸಲೆ ಇದ್ದನ್ನೆ.

    1. ಇದು ಗಟ್ಟದ ಮೇಲಾಣ ಬಾಳೆ ಎಲೆ ಊಟ . ಬೇರೆ ಪಟ ಗಡಿಬಿಡಿಲಿ ಸಿಕ್ಕಿದ್ದಿಲ್ಲೇ 😀 ಹಾಂಗೆ ಇದನ್ನೇ ಹಾಕಿದ್ದು .

        1. ಅದಾ.. ಓ ನೆಗೆ ಬಾವ ಆನು ಕೇಳಿದ್ದು ಹಾಂಗೆ ಅಲ್ಲ.. ಮೊನ್ನೆ ಬೈಕಿಂದ ಬಿದ್ದ ನಮ್ಮ ಗುಣಾಜೆ ಮಾಣಿಗೆ ಬಳುಸಿದ್ದೋ ಕೇಳಿದ್ದು..

  6. ಜೆಂಬಾರಂಗಳಲ್ಲಿ ಆಹಾರ ಹಾಳು ಅಪ್ಪದರ ಬಗ್ಗೆ ಬರದ್ದು ಚಿಂತನೆಗೆ ಎಡೆ ಮಾಡುವ ವಿಚಾರವನ್ನೇ.
    ಹೆರ ದೇಶಂಗಳಲ್ಲಿ ಎಂತಾರೂ function ಮಾಡುವಾಗ ಹೇಳಿಕೆ ಕಾಗದಲ್ಲಿ RSVP ಹೇಳಿ ಹಾಕುತ್ತವು. ಇದರ ಸಾಮಾನ್ಯ ಅರ್ಥ “ಆದಷ್ಟು ಬೇಗ ಉತ್ತರ ಕೊಡಿ”.
    ಹೇಳಿಕೆ ಸಿಕ್ಕಿದವ, ಬಪಲೆ ಎಡಿತ್ತೋ ಇಲ್ಲೆಯೋ, ಮತ್ತೆ ಎಷ್ಟು ಜೆನಂಗೊ ಬತ್ತೆಯೊ ಹೇಳಿ ತಿಳುಸುತ್ತ.
    ಉದ್ದೇಶ, ಮನೆ ಯಜಮಾನಂಗೆ (organiser) ವ್ಯವಸ್ತೆ ಮಾಡುವಾಗ ಎಷ್ಟು ಜೆನಂಗೊಕ್ಕೆ ಮಾಡೆಕ್ಕು ಹೇಳಿ ಗೊಂತಾವುತ್ತು. ಅದಕ್ಕೆ ತಕ್ಕ ಏರ್ಪಾಡು ಮಾಡುತ್ತ.
    ನಮ್ಮಲ್ಲಿ ಈ ಕ್ರಮ ಬಪ್ಪಲೆ ಸಾಧ್ಯ ಇಲ್ಲೆ. ಹೇಳಿಕೆ ಕೊಡುವದು ಎಲ್ಲರೂ ಬರೆಕು ಹೇಳಿಯೇ. ಹೇಳಿಕೆ ಕೊಟ್ಟಿಕ್ಕಿ ನಿಂಗೊ ಎಷ್ಟು ಜೆನ ಬತ್ತಿ ಹೇಳಿ ಕೇಳುವದು ಸರಿ ಅವ್ತಿಲ್ಲೆ.
    ಆದರೂ ಮದುವೆ ಬದ್ಧ ದಿನ ಮಾತಾಡುವಾಗ “ನಿಂಗಳ ಕಡೆಂದ ಎಷ್ಟು ಜೆನ ಕಾಫಿಗೆ, ಊಟಕ್ಕೆ ಎಷ್ಟು ಜೆನ ಅಕ್ಕು” ಹೇಳಿ ಕೇಳ್ತ ಕ್ರಮ ಇದ್ದು.
    ಹೇಳಿಕೆ ಕೊಟ್ಟ ಲೆಕ್ಕಲ್ಲಿ ಅಡಿಗೆ ಮಾಡದ್ರೆ ಮರ್ಯಾದೆ ಹೋಪ ಪ್ರಶ್ನೆ.
    ಇದರಿಂದಾಗಿ ಜೆಂಬಾರಂಗಳಲ್ಲಿ ಜಾನ್ಸಿದಷ್ಟು ಜೆನ ಆಗದ್ದೆ ಮಾಡಿದ್ದೆಲ್ಲಾ ಹಾಳಪ್ಪದೇ ಹೆಚ್ಚು. ಇದರ ಹೇಂಗೆ ಕಮ್ಮಿ ಮಾಡ್ಲೆ ಎಡಿಗು ಹೇಳಿ ಚಿಂತಿಸೆಕ್ಕಾದ ವಿಶಯ.
    ಪೇಟೆಗಳಲ್ಲಿ ಒಳುದ್ದರ ಯಾವುದಾರೂ ಆಶ್ರಮಂಗೊಕ್ಕೆ ಆದಷ್ಟು ಬೇಗ ತಲುಪಿಸುವವು ಇದ್ದವು.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×