Oppanna.com

ಅನುಶ್ರೀಯ ಅನುದನಿ ಬೈಲಿಲಿ ಬರಳಿ!!

ಬರದೋರು :   ಶುದ್ದಿಕ್ಕಾರ°    on   12/02/2011    10 ಒಪ್ಪಂಗೊ

ಬೈಲಿನ ಹೆರಿಯೋರಲ್ಲಿ ಒಬ್ಬರಾದ ಬಂಡಾಡಿಅಜ್ಜಿಯ ಅರಡಿಗಲ್ಲದೋ ನಿಂಗೊಗೆ?
ಗೊಂತಿಪ್ಪಲೇ ಬೇಕು!
ಪ್ರಾಯ ಆಗಿ ಬಂಙ ಆವುತ್ತರೂ, ಎಡಕ್ಕೆಡಕ್ಕಿಲಿ ಬೈಲಿಂಗೆ ಬಂದು, ಪುಳ್ಳರುಗಳ ಕ್ಷೇಮಸಮಾಚಾರ ವಿಚಾರುಸಿಗೊಂಡು ಹೋವುತ್ತದು ಇದ್ದೇ ಇದ್ದು!
ಕೊಶಿ ಆದವರ ಬೆನ್ನು ತಟ್ಟಿ, ಬಿಂಗಿಮಾಡಿದವರ ಬೆನ್ನಿಂಗೆ ತಟ್ಟಿ, ನಮ್ಮ ಸಂಸ್ಕೃತಿ, ಹಳೆ ಕ್ರಮಂಗೊ, ಅಡಿಗೆಗೊ, ಹೂಗುಕಟ್ಟುದು, ಹೂಗು ಕೊಯಿತ್ತದು – ಹೀಂಗೆ ನಾನಾ ವಿಧದ ವಿಶೇಷತೆಗೊ ಬಂಡಾಡಿ ಅಜ್ಜಿದು!
ಅಜ್ಜಿಯೇ ಅಷ್ಟು ಉಮೇದಿಲಿ ಬರೇಕಾರೆ ಪುಳ್ಳಿಗೆ ಎಷ್ಟಿರೆಡ!!
ಅಪ್ಪು, ಪುಳ್ಳಿಯೂ ಬರೆಯಲಿ ಹೇಳ್ತ ಆಶೆ ಬೈಲಿನೋರದ್ದು.

ಈ ಪುಳ್ಳಿಯ ಹೆಸರು ಅನುಶ್ರೀ!
ಗೋತ್ರ, ಪ್ರವರ ಎಲ್ಲ ನವಗರಡಿಯ, ಆದರೆ ಲಕ್ಕಪ್ಪಕೋಡಿಯೋರು, ಈಗ ಉಪ್ರಂಗಡಿ ಹತ್ತರೆ ಒಳದಿಕೆ ಎಲ್ಲಿಯೋ ಇಪ್ಪದಡ.
ಪ್ರಸ್ತುತ ಕೊಡೆಯಾಲದ ವಿಶ್ವವಿದ್ಯಾಲಯಲ್ಲಿ ಕಂಪ್ಲೀಟರು ಯಮ್ಮೆಸ್ಸಿ ಕಲ್ತುಗೊಂಡು ಉಶಾರಿ ಕೂಸು ಆಗೆಂಡು ಇದ್ದು!
ಕಂಪ್ಲೀಟರೇ ಕಲಿತ್ತ ಕಾರಣ ಅದರ ಒಳ-ಹೆರ ಎಲ್ಲ ಅರಡಿಗು. ಇಂಟರುನೆಟ್ಟುದೇ ಅರಡಿಗು, ಇನ್ನೊಬ್ಬಂಗೆ ಹೇಳಿಕೊಡ್ತಷ್ಟುದೇ!

ಈ ಕೂಸು ಬರೇ ಓದಲೆ ಮಾಂತ್ರ ಉಶಾರಿ ಹೇಳಿ ಗ್ರೇಶಿಕ್ಕೆಡಿ – ಭಾಷಣ, ಪ್ರಬಂಧ, ರಸಪ್ರಶ್ನೆ, ಬರವಣಿಗೆ, ಸಾಹಿತ್ಯ, ಆಕಾಶವಾಣಿಲಿ ಕಾರ್ಯಕ್ರಮ ನಿರೂಪಣೆ, ಮಾಷ್ಟ್ರುಮಾವನ ಚೋಕಿನ ಡಬ್ಬಿಂದ ಚೋಕು ತೆಗದು ಗೊಂಬೆ ಮಾಡ್ತದು, ಚೆಂದಚೆಂದದ ಗ್ರೀಟಿಂಗು ಮಾಡ್ತದು – ಹೀಂಗೆ ನಾನಾ ನಮುನೆಯ ಆಸಗ್ತಿಯ ಕ್ಷೇತ್ರಂಗೊ ಇದ್ದು ಈ ಕೂಸಿಂಗೆ.
ನವಗೆ ಕೊಶೀ ಅಪ್ಪದು ಅದರ ಬಹುರೂಪತೆ ಕಂಡು.
ಅಜ್ಜಿ ಒಂದೊಂದರಿ ಪರಂಚುಲಿದ್ದು ಈ ಕೂಸಿನ ಹರಗಾಣ ಕಂಡು; ಅಜ್ಜಿ ಪರಂಚುದು ಪ್ರೀತಿಲಿ ಅಲ್ಲದೋ! 😉

ಕಲಿತ್ತದರ ಎಡಕ್ಕಿಲಿ ಅಷ್ಟು ಅಂಬೆರ್ಪು ಇದ್ದರೂ, ಬೈಲಿನ ಮೇಗೆ ಒಳ್ಳೆತ ಪ್ರೀತಿ, ಅಭಿಮಾನ.
ಹಾಂಗಾಗಿ ನಿತ್ಯ ಬೈಲಿಂಗೆ ಬಕ್ಕು, ಹೂಗು ಕೊಯಿವಲೆ ಆದರೂ!
ಶುದ್ದಿ ಹೇಳುವಿರಾ ಅಕ್ಕಾ- ಹೇಳಿ ಕೇಳಿದೆ.
ಸಂತೋಷಲ್ಲಿ ಒಪ್ಪಿಗೊಂಡವು.

ಅನುಶ್ರೀ ಸದ್ಯಲ್ಲೇ ಬೈಲಿಲಿ ಶುದ್ದಿ ಹೇಳುಲೆ ಸುರುಮಾಡ್ತವು.
ಅವಕ್ಕೆ ಕಂಡ ಸಾಮಾಜಿಕ ವಿಚಾರಂಗೊ, ಚಿಂತನೆಗೊ ಅದರ್ಲಿ ಇಕ್ಕು.
ಎಲ್ಲೋರುದೇ ಓದಿ, ಶುದ್ದಿಗೆ ಒಪ್ಪಕೊಡಿ!

ಓದುತ್ತ ಉಶಾರಿಕೂಸು ಇನ್ನುದೇ ಉಶಾರಿ ಅಪ್ಪ ಹಾಂಗೆ ಮಾಡುವೊ.

ಅನುಶ್ರೀ ಅಕ್ಕಾ.. ನಿಂಗೊಗೆ ಸ್ವಾಗತಮ್!
~
ಒಪ್ಪಣ್ಣ

ಅನುಶ್ರೀ ಅವರ (ಕನ್ನಡದ ಪ್ರಪ್ರಥಮ) ಮಾತಿನ ಬ್ಲೋಗು : http://anuswara.blogspot.com
ನೆರೆಕರೆ ಪುಟ: https://oppanna.com/nerekare/anu-bandady/
ಮೋರೆಪುಟದ ಸಂಕೊಲೆ: http://www.facebook.com/Anushree.Bandady

ಇವು ಬರದ ಶುದ್ದಿಗೊ ಸದ್ಯಲ್ಲೇ ಬತ್ತು.
ಕಾದೊಂಡಿರಿ.
~
ಗುರಿಕ್ಕಾರ°

10 thoughts on “ಅನುಶ್ರೀಯ ಅನುದನಿ ಬೈಲಿಲಿ ಬರಳಿ!!

  1. ಬಂಡಾಡಿ ಪುಳ್ಳಿಯ ಪರಿಚಯ ಮಾಡಿಕೊಟ್ಟದು ಲಾಯಕಾಯಿದು. ಪುಳ್ಳಿಯ ಸ್ವರ ಬೈಲಿಲ್ಲಿಯೂ ಕೇಳಿ ಬರಳಿ. ಸ್ವಾಗತ.
    ಅಜ್ಜಿ-ಪುಳ್ಳಿಯರ ಜೋಡಿ ಬೈಲಿಲ್ಲಿ ರೈಸಲಿ.

    1. ನಮ್ಮ ಬಯಲಿಲ್ಲಿ ನವರತ್ನದ ಗಣಿಗಳ ಗುರುತಿಸಿ ಕರಕ್ಕೊ೦ಡು ಬ೦ದು ಪರಿಚಯ ಮಾಡ್ಸಿದಕ್ಕೆ ತು೦ಬಾ ಕೊಶಿಯಾತು. ಇ೦ಥ ಪ್ರತಿಭಾನ್ವಿತೆ ಬ೦ಡಾಡಿಯ ನಮ್ಮ ಪುಟ್ಟಕ್ಕ೦ಗೆ ಸ್ವಾಗತ. ಆದಷ್ಟು ನಿನ್ನ ದನಿ ಇಲ್ಲಿ ಪ್ರತಿಧ್ವನಿಸಲಿ. ಈ ಹಾದಿಲಿ ಈ ಕಾರ್ಯ ಬಾಳ ಲಾಯ್ಕಿನ ಕೆಲಸ. ಸುದ್ದಿಗಾರ೦ಗೆ ಧನ್ಯವಾದ೦ಗೊ. ಹರೇರಾಮ.

  2. ಒಪ್ಪಣ್ಣ ನಮ್ಮ ಬೈಲಿನ ಒಬ್ಬ ಪ್ರತಿಭಾನ್ವಿತೆಯ ತುಂಬಾ ಲಾಯ್ಕಲ್ಲಿ ಪರಿಚಯ ಮಾಡಿದ್ದ°. ನಿಜವಾಗಿಯೂ ಎಲ್ಲಾ ಕೆಲಸಲ್ಲಿ ಉಶಾರಿನ ಕೂಸು. ಕೆಲಸ ಅಪ್ಪದು ಮಾತ್ರವೇ ಕಾಂಗಷ್ಟೆ!! ಮಾಡುದು ಕಾಣ!!! ಹಾಂಗಿಪ್ಪ ಕೆಲಸ ಬಂಡಾಡಿ ಅಜ್ಜಿಯ ಪುಳ್ಳಿದು!!! ಬೈಲಿಂಗೆ ಎಲ್ಲೋರೂ ಬರೆಕ್ಕಾದರೆ ಮೊದಲೇ ಬಂದು ಜಾಲು ಉಡುಗಿ, ರಂಗೋಲಿ ಬರದಿಕ್ಕಿ ಹೋಕು. ಪ್ರಾಯ ಸಣ್ಣ ಆದರೂ, ಒಪ್ಪಕ್ಕಂದ ಹಿಡುದು ಗುರಿಕ್ಕಾರ್ರ ವರೆಗೆ ಎಲ್ಲೋರ ಕೆಲಸಲ್ಲಿ ಸಕಾಯ ಮಾಡುಗು!! ಹೆಮ್ಮೆ ಇದ್ದು ಈ ಕೂಸಿನ ಬಗ್ಗೆ!! ಉಜ್ವಲ ಭವಿಷ್ಯವೂ ಇದ್ದು.

    ಅನು,
    ನೀನು ಬೈಲಿನ ನೆರೆಕರೆಲಿ ಇಪ್ಪದು ಹತ್ತರೆ ಎರಡು ವರ್ಷ ಆವುತ್ತಾ ಬಂತು. ಬರದೋರ ಶುದ್ದಿಗೆ ಒಪ್ಪ ಕೊಡ್ತಾ ಎಲ್ಲೋರ ಬೆಳೆಶುತ್ತಾ ಬಂದೆ. ಈಗ ನಿನ್ನ ಶುದ್ದಿ ಬತ್ತಾ ಇಪ್ಪದು ತುಂಬಾ ಕೊಶಿ ಆವುತ್ತದಾ. ನಿನ್ನ ಸ್ವರದ ಹಾಂಗೇ ಇಪ್ಪ ಮಧುರ ಶುದ್ದಿಗೆ ಕಾಯ್ತಾ ಇದ್ದೆಯಾ°. ಅಜ್ಜಿಯ ಗುಣ ಪೂರ ಪುಳ್ಳಿಲೂ ಬತ್ತನ್ನೆ!! ಹಾಂಗೆ ಒಪ್ಪ ಒಪ್ಪ ಶುದ್ದಿಗೊ ಬರಳಿ ಹೇಳಿ ಹಾರಯಿಕೆ.
    ಉತ್ತಮ ನಾಳೆಗೊ ನಿನಗೆ ಸಿಕ್ಕಲಿ. ಶುದ್ದಿಕ್ಕಾರಳಾಗಿ ನಿನಗೆ ಸ್ವಾಗತ…

  3. ಅನುದನಿಗೆ ಅವಕಾಶ ಕೊಟ್ಟು, ಬೈಲಿಂಗೆ ಸ್ವಾಗತ್ಸಿದ ಎಲ್ಲೊರಿಂಗೂ ಧನ್ಯವಾದಂಗೊ. 🙂

  4. ಅನುಶ್ರೀ ಅಕ್ಕನ ಅನುದನಿ ಆದಷ್ಟು ಬೇಗ ಸುರುವಾಗಲಿ. ಹಾರೈಕಗೊ!

  5. ಅಜ್ಜಿಯ ಅಡಿಗೆಗೆ ಪುಳ್ಳಿಯ ಒಗ್ಗರಣೆಯೋ? ಬರಳಿ ಬೈಲಿ೦ಗೆ ಹೊಸ ಚಿ೦ತನೆಗೊ.ಸ್ವಾಗತ.

  6. ಸುಸ್ವಾಗತ “ಅನುಶ್ರೀ”
    ಲೇಖನಂಗಳ ನಿರೀಕ್ಷೆಲಿ ಇದ್ದೆ.

Comments are closed.

ಒಪ್ಪಣ್ಣ
ದೇವಸ್ಯ ಮಾಣಿ
ಕಾವಿನಮೂಲೆ ಮಾಣಿ
ಅಕ್ಷರ°
ಅನಿತಾ ನರೇಶ್, ಮಂಚಿ
ಅನು ಉಡುಪುಮೂಲೆ
ಎಬಿ ಭಾವ
ಬಂಡಾಡಿ ಅಜ್ಜಿ
ಬಟ್ಟಮಾವ°
ಪುಣಚ ಡಾಕ್ಟ್ರು
ಮಾಲಕ್ಕ°
ಬೋಸ ಬಾವ
ಒಪ್ಪಣ್ಣ
Menu
×