ಸುಮಾರು ಹದಿನೈದು ವರ್ಷ ಮದಲು ಎಂಗಳ ಸೋದರಳಿಯನ ಮದುವೆ ದಿನ ಬರದ ಪದ್ಯ. ಅಂಬಗಂಬಗ ನೆಂಪಾವ್ತು. ಇದರ ನಿಂಗಳೊಟ್ಟಿಂಗೆ ಹಂಚಿಗೊಂಡ್ರೆ ಹೇಂಗೆ –
ಅನಂತನ ಮದುವೆ
ಕಳುದತ್ತು ಅನಂತನ ಮದುವೆ
ಎಂಗಳ ಸೋದರ ಅಳಿಯನ ಮದುವೆ
ಅಡ್ಯನಡ್ಕದ ಕೃಷ್ಣ ಭಾವನ
ಹೆರಿಮಗ ಅನಂತನ ಮದುವೆ ||
ಎಂಗಳ ಒಲವಿನ ತಂಗೆ ವಿಶಾಲನ
ಹೆರಿಮಗ ಅನಂತನ ಮದುವೆ
ಕಂಙಣ್ಣಾರಿನ ನಾರಾಯಣ ಭಾವನ
ಮಗಳನುರಾಧನ ಒಟ್ಟಿಂಗೆ ||
ಎಂಥಾ ಸಂಭ್ರಮ ಎಂಥಾ ಗೌಜಿ
ಮದುವೆಯ ಮಂಟಪ ಹೊಡಿ ಹಾರಿದ್ದು
ದೂರದ ಊರಿಂದ ಬಂದವು ನೆಂಟ್ರುಗೊ
ಕಲ್ಯಾಣ ಮಂಟಪ ತುಂಬಿದ್ದು ||
ಹೋಳಿಗೆ ಸೀವು ತಾಳು ಮೇಲಾರ
ಎಲ್ಲವು ಬಹುರುಚಿ ಆಗಿತ್ತು
ವೀಡಿಯೋ ಫೋಟೋ ಎಲ್ಲ ತೆಗದ್ದು
ಗೌಜಿಲಿ ಮದುವೆ ಕಳುದತ್ತು ||
ಆರೋಗ್ಯ ಸಂಪತ್ತು ಶಾಂತಿ ನೆಮ್ಮದಿ
ಸಿಕ್ಕಲಿ ಅವಕ್ಕೆ ಎಂದಿಂಗೂ
ಅಂಬಗಂಬಗ ಮದುವೆಯ ನೆಂಪು
ಒಳಿಯಲಿ ಅವಕ್ಕೆ ಮುಂದಂಗೂ ||
**
- ಹಾಸ್ಯ ತರಂಗ - September 4, 2014
- ಗೆಣವತಿಗೆ ನಮನ - August 28, 2014
- ಸುಖ ಜೀವನದ ದಾರಿ - August 21, 2014
thuma ollediddu
ಪದ್ಯ ಹಳತ್ತಾದರೂ ಭಾವನೆ ಹೊಸತ್ತು.ಒಳ್ಳೆದಾಯಿದು ಅರ್ತಿಕಜೆ ಅಣ್ಣ.
ಪದ್ಯ ರೈಸಿದ್ದು ಅರ್ತಿಕಜೆ ಮಾವ
ನಮಸ್ತೇ ಅಣ್ಣ, ಬಾರೀ ಲಾಯಕಕ್ಕೆ ಬಯಿ೦ದಣ್ಣ ಮದುವೆಯ ವರ್ಣನೆ!ಅ೦ಬಗ೦ಬಗ ನಿ೦ಗಳ ಬರಹ೦ಗೊ ಹೀ೦ಗೆ ನಮ್ಮ ಬೈಲಿಲ್ಲಿ ಬ೦ದೊ೦ಡೇ ಇರಲಿ ಹೇದು ಇತ್ಲಾ೦ಗಿ೦ದ ಕೋರಿಕೆ.ಧನ್ಯವಾದ೦ಗೊ.ಹರೇ ರಾಮ.
ಅರ್ತಿಕಜೆ ಅಣ್ಣನ ಪದ್ಯ ಲಾಯಕ್ಕಿದ್ದು. ಇನ್ನುದೆ ನಿಂಗಳ ಲೇಖನಂಗೊ ,ಪದ್ಯಂಗೊ ಬೈಲಿಂಗೆ ಬತ್ತಾ ಇರಲಿ.ಧನ್ಯವಾದಂಗೊ.