ಗೆಣವತಿ ಹಬ್ಬದ ನಾಕು ದಿನ ಮದಲೇ ಬೈಲಿಲಿ ಹಬ್ಬಕ್ಕೆ ತಯಾರಿ ಸುರುವಾವ್ತು. ಹಾಂಗೆ ನಮ್ಮ ಬೈಲಿಲ್ಯೂ ಎಂತ ಆವ್ತಾ ಇದ್ದು ಹೇದು ನೋಡ್ಯೊಂಡು ಹೋಗಿಯೊಂಡಿಪ್ಪಗ ಚಕ್ಕುಲಿ ಉಂಡ್ಳಕ್ಕಾಲು ಹೇದು ಅಲ್ಪಬಗೆ ಆಗ್ಯೊಂಡಿಪ್ಪದು ಕಂಡತ್ತು.
ಹಾಂಗೆ ಮುಂದೆ ಹೋಗಿ ಅರ್ತಿಕಜೆ ಜಾಲಕರೆಲಿ ಕೂಡಿ ಹೋಪಗ ಒಂದರಿ ಮೇಗತ್ತಿ ಅರ್ತಿಕಜೆ ಮಾವನನ್ನೂ ಮಾತಾಡಿಸಿದಾಂಗೆ ಆತು, ಮಳಗೆ ಬೆಚ್ಚಂಗೆ ಒಂದ್ಲಾಸು ಕಾಪಿಯೂ ಕುಡುದಾಂಗೆ ಆತು ಹೇದು ಅರ್ತಿಕಜೆ ಮಾವನ ಮನೆಯೊಳ ಹೊಕ್ಕಿತ್ತು ನಾವು. ಮಾವನಲ್ಲಿ ಎಂತಾವ್ತಾ ಇದ್ದು ನೋಡುವಾಗ ಅರ್ತಿಕಜೆ ಅತ್ತೆ ಒಳ ಎಂಸೋ ಪಾತ್ರಲ್ಲಿ ಹಿಟ್ಟುಕಲಸುಸ್ಸು ಕಂಡತ್ತು. ಅರ್ತಿಕಜೆ ಮಾವ° ಮೇಜಿಬುಡಲ್ಲಿ ಎಂಸೋ ಬರಕ್ಕೊಂಡು ಇಪ್ಪದು ಕಂಡತ್ತು. ಅತ್ತೆ ಚಾಯವುದೇ ಕದಳಿ ಬಾಳೆಣ್ಣು ತಟ್ಟೆಯುದೇ ತದ್ದು ಮಡಿಗಿಯಪ್ಪಗ ಎರಡು ಬಾಳೆಣ್ಣು ಸೊಲುದು ಮದಾಲು ಒಳಮಾಡಿ ಬೆಶಿ ಬೆಶಿ ಕಾಪಿ ಊಪಿ ಊಪಿ ಕುಡಿವಾಗ ಮಾವ° ಎಂಸರ ಬರೆತ್ತ ಇಪ್ಪದು ಹೇದು ಓಂಗಿ ನೋಡಿತ್ತು ನಾವು. ಅವ್ವುದೇ ಚೌತಿ ತಯಾರಿಲೇ ಇತ್ತಿದ್ದವು. ಚೌತಿದಿನ ಮಾವನ ಕೊಂಗಾಟದ ಸೊಸಗೆ ಹಾಡ್ಳೆ ಹೇದು ಗೆಣವತಿ ಚಾಮಿ ಬಗ್ಗೆ ಪದ್ಯ ಬರವದು ಕಂಡತ್ತು. ಅವು ಬರದು ಮುಗಿವನ್ನಾರ ಊರ ವೊರ್ತಮಾನ ಮಾತಾಡ್ಯೊಂಡು ಕಾದು ಕೂದು ಅವ್ವು ಬರದ ಪದ್ಯದ ಒಂದು ನಕಲು ಬೈಲಿಂಗೆ ಬೇಡ್ಯೊಂಡು ಹೆರಟತ್ತು ನಾವು.
ಗೆಣವತಿ ಚಾಮಿ ಎಲ್ಲೊರಿಂಗು ನಿರ್ವಿಘ್ನವ ಕರುಣಿಸಿ ಎಲ್ಲೋರಿಂಗೂ ಒಪ್ಪ ಬುದ್ಧಿ ಕೊಡಲಿ ಹೇದು ನಾವುದೇ ಮಾವ° ಬರದ ಪದ್ಯವ ಬೈಲಿಲಿ ಹಾಡುವೊ ಆಗದ
ಗುರಿಕ್ಕಾರ°
~~
ರಚನೆ : ಅರ್ತಿಕಜೆ ಮಾವ°
ರಾಗ – ದೇಶ್, ತಾಳ – ಆದಿ
ಆನೆ ಮೋರೆಯ ಗೆಣಪತಿಯೆ
ವಿಘ್ನವ ಕಳೆವ ಗುಣನಿಧಿಯೆ ||ಪ||
ಕೈಗಳ ಮುಗುದೆ ತಲೆಬಗ್ಗುಸಿದೆ
ಮನಸಿಲಿ ನಿನ್ನ ಹೆಸರಿನ ನೆನೆಸಿದೆ
ಶ್ರದ್ಧೆಲಿ ನಿನ್ನ ಪೂಜೆಯಮಾಡಿದೆ
ಮನದಿಷ್ಟ ಸಲುಸು ನಿನ್ನನ್ನೆ ಬೇಡಿದೆ ||೧||
ಭಕ್ತಿಲಿ ನಿನ್ನ ಪದ್ಯವ ಹಾಡಿದೆ
ಕನಸಿಲಿ ನಿನ್ನ ನಿಜರೂಪವ ನೋಡಿದೆ
ಬಾಯ್ತುಂಬ ನಿನ್ನ ಮಹಿಮೆ ಕೊಂಡಾಡಿದೆ
ಪಾದಕ್ಕೆ ಹೂಗಿನ ಅರ್ಚನೆ ಮಾಡಿದೆ ||೨||
ಗೆಣವತಿ ಮಾಡೆನ್ನ ಮನಸಿನ ಶುದ್ಧಿ
ಆಗಲಿ ಬಾಳಿಲಿ ಸಂತೋಷ ವೃದ್ಧಿ
ಮಾಡು ನೀ ಭಕ್ತರ ವಂಶಾಭಿವೃದ್ಧಿ
ಸನ್ಮಾರ್ಗ ತೋರುಸು ಬುದ್ಧಿಯತಿದ್ದಿ ||೩||
ಚೌತಿಯ ದಿನ ಬಂದು ಅನುಗ್ರಹ ಮಾಡು
ಚಕ್ಕುಲಿ ಮೋದಕ ತಿನ್ನೆಕು ನೋಡು
ಸಂಕಟಂಗಳ ಎಲ್ಲ ನೀ ದೂರ ಮಾಡು
ನಿತ್ಯವು ಶಾಂತಿ ನೆಮ್ಮದಿ ನೀಡು ||೪||
ಮದಾಲು ನಿನ್ನ ಪೂಜೆ ಮಾಡ್ತವು ದೇವನೆ
ಕುಮಾರ ಸುಬ್ರಹ್ಮಣ್ಯನ ಅಣ್ಣನೆ
ಕೈಲಿ ಪಾಶಾಂಕುಶ ಹಿಡುಕ್ಕೊಂಡ ಗೆಣಪನೆ
ಶ್ರೀಕೃಷ್ಣನುತ ಪಾರ್ವತಿ ದೇವಿಯಮಗನೆ ||೫||
***
- ಹಾಸ್ಯ ತರಂಗ - September 4, 2014
- ಗೆಣವತಿಗೆ ನಮನ - August 28, 2014
- ಸುಖ ಜೀವನದ ದಾರಿ - August 21, 2014
ಹಬ್ಬದ ಗೌಜಿ ಜೋರಾಗಿ ಮಾಡಿದ್ದಿ ಹೇದು ಕಾಣ್ತು.ಶಾಕ ಪಾಕ೦ಗಳ ವಿವರಣೆ ಓದಿಯಪ್ಪಗ ನಾಲಗೆಲಿ ನೀರು ಬತ್ತಾ ಇದ್ದು.ಎ೦ತ ಮಾಡ್ವದು ತಿನ್ನೆಕು ಹೇದು ಆಸೆ ಆವುತ್ತಿದಾ! ಆದರೆ ಏವದಕ್ಕೂ ಯೋಗ ಬೇಕನ್ನೆ.“ಬಯಸಿದ್ದು ಸಿಕ್ಕ;ಬಗದದು ತಪ್ಪ.” ಹೇದೇ ಗಾದೆ ಇದನ್ನೇ ! ಪದ್ಯ೦ಗೊ ಲಾಯ್ಕ ಆಯಿದು.ಅಭಿನ೦ದನಗೊ.
ಹಬ್ಬದ ಮುನ್ನಾಣ ದಿನ ತೆಗೆದ ಚಿತ್ರ ಒಪ್ಪ ಇದ್ದು. ಹಬ್ಬದ ಮತ್ತಾಣದ್ದು ಆದರೆ ಹೊಟ್ಟೆ ಸುತ್ತ ಬಿಗಿದು ಕಟ್ಟಕ್ಕಲ್ಲದೋ ?.ಅದು ಎ೦ತದೋ ಎನೋ ಆ ಭೂಷಣವ ಹೆಚ್ಚಿನ ಕಡೆ ಕಾಣುತ್ತಿಲ್ಲೆ?ಈ ಬಗ್ಗೆ ಸತ್ಯ್ ಣ್ಣ0ಗೆ ಅ೦ದಾಜಿಪ್ಪಲೂ ಸಾಕು.?