ಹವ್ಯಕ ಮುಕ್ತಕಂಗೊ
ಸಭೆಲಿ ಭಾಷಣ ಬೇಕು ಮೈಗೆ ಭೂಷಣ ಬೇಕು
ಊಟಕ್ಕೆ ಉಪ್ಪಿನಕಾಯಿ ಬೇಕು ನೋಟಕ್ಕೆ ಚೆಂದವು ಬೇಕು
ಮಾತಿಲಿ ಹಾಸ್ಯ ಸೇರಿರೆಕು ಮುದ್ದುತಮ್ಮ ||
ಮಂತ್ರಿಗೆ ಪದವಿಯೆ ಭೂಷಣ ಸನ್ಯಾಸಿಗೆ ಕಾವಿಯೆ ಭೂಷಣ
ಮಕ್ಕೊಗೆ ನೆಗೆಯೆ ಭೂಷಣ ಹೆಮ್ಮಕ್ಕೊಗೆ ಶೀಲವೆ ಭೂಷಣ
ಗೆಂಡುಮಕ್ಕೊಗೆ ಧೈರ್ಯವೆ ಭೂಷಣ ಮುದ್ದುತಮ್ಮ ||
ಕೆಲವರ ನೋಡಿಕಲಿ ಕೆಲವರ ಮಾಡಿಕಲಿ
ಕೆಲವರ ಕೇಳಿಕಲಿ ಕೆಲವರ ಓದಿಕಲಿ
ಅಲ್ಲದ್ದೆ ಬಾರ ಲೋಕಜ್ಞಾನ ಮುದ್ದುತಮ್ಮ ||
ಆರಾರೊ ಬಂದವು ಆರಾರೊ ಹೋದವು
ಆರಾರೊ ಏರಿದವು ಆರಾರೊ ಇಳುದವು
ಏರಿಳಿತ ಎಂದಿಂಗು ಇಕ್ಕು ಮುದ್ದುತಮ್ಮ ||
ಬೆಶಿಲುಮಳೆಬಪ್ಪಗ ಮಾಡಡಿಯು ಕಾಯುಗು
ಕಷ್ಟನಷ್ಟವು ಸೋಲು ಅತಿದುಃಖ ಬಪ್ಪಗ
ಶಾಂತಿ ಸಹನೆಯು ಬೇಕು ಮುದ್ದುತಮ್ಮ ||
**
Latest posts by ಅರ್ತಿಕಜೆ ಮಾವ° (see all)
- ಹಾಸ್ಯ ತರಂಗ - September 4, 2014
- ಗೆಣವತಿಗೆ ನಮನ - August 28, 2014
- ಸುಖ ಜೀವನದ ದಾರಿ - August 21, 2014
ಶ್ರೀಮಂತವೇ ಸೈ ! ನಮ್ಮಬ್ಬೆ ಭಾಷೆ
ಒಳುಶೆಕ್ಕು ನಾವಿದರ ಸೇರಿ ಬೆಳಶೆಕ್ಕು/
ಒಪ್ಪಣ್ನ ಒಪ್ಪಕ್ಕ ಎಲ್ಲೋರು ಹೇಳುವುದು
ಬೈಲಿಂಗೆ ” ಅರ್ತಿಕಜೆ ” ಅಣ್ನ ಬೇಕು/
ಎನ್ನ ಭಾವನೋರು ಡಾ. ಎಮ್.ಬಿ.ಮರಕಿಣಿಗೆ ನಿಂಗೊ ಬೈಲಿಲಿ ಮುಕ್ಥಕಂಗಳ ಬರದ ಬಗ್ಗೆ ಹೇಳಿದೆ. ಅವಕ್ಕೆ ತುಂಬಾ ಖುಶಿ ಆತು. ಅವರ ಹತ್ತರೆ ಕೆಲವು ಹವ್ಯಕ ಗಾದೆಗೊ ಇದ್ದು ಹೇಳಿದವು. ಅವಕ್ಕುದೆ ಬೈಲಿಲಿ ಬರವ ಆಸೆ ಇದ್ದು, ಆದರೆ ಒತ್ತು ಪೂಜಾರಿ ಇಲ್ಲದ್ದೆ ಅವಕ್ಕುದೇ ಬರವಲೆ ಎದಿತ್ತಿಲ್ಲೆ !!!…ಅವರ ಶ್ರೀಮತಿ ದಿ. ಡಾ. ಸಬಿತಾ ಮರಕಿಣಿ ಬರದ ಲೇಖನ/ ಕಥೆಗಳನ್ನೂ ಬೈಲಿಲಿ ಹಾಕುವೆ ಇಂಗಿತ ವ್ಯಕ್ತ ಪದಿಸಿದ್ದವು. ನಿ<ಗೊಗೆ ಗೊಂತಿಕ್ಕು, ಸಬಿತಾ ಮರಕಿಣಿ ಎರಡು ಹವಿಗನ್ನದ ಕಾದಂಬರಿ ಬರದ್ದವು. ಆಸಕ್ತರು ಡಾ. ಎಮ್.ಬಿ.ಮರಕಿಣಿಯ ಮೊ. ನಂ. ೦೯೮೪೫೨೭೭೯೭೭ ಗೆ (09845277977) ಸಂಪರ್ಕಿಸುಲಕ್ಕು..
ಅರ್ತಿಕಜೆ ಶ್ರೀಕೃಷ್ಣಣ್ಣ,ಕಯಿ ಮುಗುದು ನಿ೦ಗೊಗೆ ನಮಸ್ಕಾರದ ಒಟ್ಟಿ೦ಗೆ ಬಹಳ ಸ೦ತೋಷಲ್ಲಿ ಅಭಿನ೦ದನಗೊ.ಬೈಲಿ೦ಗೆ ನಿ೦ಗಳ ಆಗಮನ ಆದ್ದದು ಅದಮ್ಯ ಕೊಶಿ ಕೊಟ್ಟತ್ತು.ಅದರ ಮಾತಿಲ್ಲಿ ಮಣ್ಣೊ ವಿವರ್ಸಲೆಡಿಯ ಮಿನಿಯ.ಲಾಯಕಿನ ಪಾಚ ಉ೦ಡಷ್ಟು ಹೇಳುವನೋ?ಅದಕ್ಕಿ೦ತಲೂ ಹೆಚ್ಚು!ಅನುಭವದ ಸವಿಯ ವ್ಯಕ್ತಪಡ್ಸುವಲೆ ಸಾಧ್ಯವೋ!“ಹೇಳಿದರೆ ಹಾಳಾಗುವುದೊ ಅನುಭವದ ಸವಿಯು.ಹೇಳದಿರೆ ತಾಳಲಾರನೊ ಕವಿಯು.”ಹೇದು ರಾಷ್ಟ್ರಕವಿ ಕುವೆ೦ಪು ಅವರ ಪಕ್ಷಿಕಾಶಿ ಕವನ ಸ೦ಕಲನದ “ಉಭಯ ಸ೦ಕಟ” ಹೇಳುವ ಕವನಲ್ಲಿ ಹೇಳಿದ್ದದು ನೆ೦ಪಾವುತ್ತಿದ.ಆದರೆ ಆನು ಅ೦ಥ ಕವಿಯೂ ಅಲ್ಲ.ಆನೊಬ್ಬ ಹೃದಯ ಕವಿ ಎನ್ನ ಕವಿತಗೊ ಏನಿದ್ದರೂ ಎನ್ನೊಳವೆ ಹುಟ್ಟಿ ಮರೆಯಾವುತ್ತು.ಮತ್ತೆ ಈಗ ಎನ್ನ ಭಾವನಗಳ ಹೇ೦ಗೆ ಬಿಡಿಸಿ ಹೇಳಲಿಯಣ್ಣಾ!ಅ೦ತೂ ನಿ೦ಗೆ ನಮ್ಮ ಬೈಲಿ೦ಗೆ ಪಾದಾರ್ಪಣೆ ಮಾಡಿದಿರನ್ನೆ.ಈ ಸ೦ತೋಷಕ್ಕೆ ಎಡೆಮಾಡಿ ಕೊಟ್ಟ ನಮ್ಮ ಚೆನ್ನೈ ಭಾವನ ಮರವಲೆಡಿಗೊ? ಅಸಾಧ್ಯ!ಅಸಾಧ್ಯ!ನಿ೦ಗಳ ಒಟ್ಟೈಗೆ ಅವಕ್ಕೂ ಹೃತ್ಪೂರ್ವಕ ಧನ್ಯವಾದ೦ಗೊ.ಹರೇರಾಮ.
ಎಲ್ಲೋರಿಂಗೂ ಸಾದರ ನಮಸ್ಕಾರ.
ಎನಗಿಲ್ಲಿ ಬರೇಕ್ಕಾರೆ ಒತ್ತು ಪೂಜಾರಿ ಒಬ್ಬ° ಇಲ್ಲದ್ದೆ ಎಡಿತ್ತಿಲ್ಲೆ. ಎನ್ನದೆಂತಿದ್ದರೂ ಕಾಗದ, ಪುಸ್ತಕ, ಪೆನ್ನು – ಇಷ್ಟ್ರಲ್ಲೇ ನಿವೃತ್ತಿ. ಅಂದರೂ ಬೈಲ ಬಾಗಿಲು ಬಿಡುಸಿ ಒಳ ಇಣ್ಕಿ ನೋಡುವಷ್ಟು ಗೊಂತುಮಾಡಿಗೊಂಡಿದೆ ಈಗಂಗೆ. ಹಾಂಗಾಗಿ ಈ ಹಿಂದಾಣ ಭಾಗಂಗಳನ್ನೂ ಸೇರ್ಸಿಗೊಂಡು ಎನ್ನ ಪ್ರತಿಒಪ್ಪ ಬರೆತ್ತಾ ಇದ್ದೆ ಇಲ್ಲಿ. ಸಹೃದಯಿಗಳಾದ ನಿಂಗೊ ಅರ್ಥಮಾಡಿಗೊಂಬಿ ಹೇಳಿ ಗ್ರೇಶುತ್ತೆ.
ಬೈಲಿಂಗೆ ಎನ್ನ ಗುರ್ತ ಮಾಡ್ಸಿದ ಚೆನ್ನೈಭಾವಂಗೆ ಮದಾಲು ಎನ್ನ ಹಾರ್ದಿಕ ಕೃತಜ್ಞತೆಗೊ. ಅವರ ಪ್ರೋತ್ಸಾಹ, ಸಕಾಯ, ಸಹಕಾರ ಇಲ್ಲದ್ರೆ ಆನಿಲ್ಲಿಗೆ ಬಪ್ಪಲಿತ್ತಿಲ್ಲೆ. ಇತ್ತೀಚಿಗೆ ಅವಿಲ್ಲಿ ಎನ್ನ ‘ಹವಿಗನ್ನಡ ಗಾದೆಗಳು’ ಹೇಳ್ತ ಪುಸ್ತಕವ ಬಹು ಲಾಯಕಲ್ಲಿ ಪರಿಚಯ ಮಾಡಿಕೊಟ್ಟಿದವು.
ಇವೆಲ್ಲಕ್ಕೂ ಮೂಲ ಕಾರಣ ಉಡುಪುಮೂಲೆ ಅಪ್ಪಚ್ಚಿಯೆ. ಎರಡು ವರ್ಷ ಮದಲು ಒಂದರಿ ಅವು ಎನ್ನ ಅವರ ಮನಗೆ ಕರಕ್ಕೊಂಡು ಹೋಗಿತ್ತಿದ್ದವು. ಅಂಬಗ ಅಲ್ಲಿ ಅವ್ವು ಒಪ್ಪಣ್ಣ ಬೈಲಿನ ಬಗ್ಗೆ ಪ್ರಸ್ತಾಪ ಮಾಡಿತ್ತಿದ್ದವು. “ನಿಂಗಳುದೆ ಬೈಲಿಂಗೆ ಬರೇಕ್ಕು” ಹೇಳಿ ಒತ್ತಾಯ ಮಾಡಿತ್ತಿದ್ದವು. ಕಂಪ್ಯೂಟರಿನ ಗಂಧ-ಗಾಳಿ ಅರಡಿಯದ್ದ ಕಾರಣ ‘ಇದು ಎನ್ನಂದ ಹಾಯದ ವಿಶ್ಯ’ ಹೇಳಿ ಜಾಂನ್ಸಿಗೊಂಡು ಆನದರ ‘ಆತು ನೋಡುವೋ’ ಹೇಳಿ ಜಾರಿಕ್ಕಿ ಉದಾಸನ ಮಾಡಿದೆ. ಕಳುದ ವರುಷ ಒಂದಿನ ಉದಿಯಪ್ಪಗ ಇದ್ದಕ್ಕಿದ್ದಾಂಗೆ ಚೆನ್ನೈಭಾವ ಎಂಗಳ ಮನಗೆ ಬಂದವು ಒಪ್ಪಣ್ಣನ ಒಪ್ಪಂಗೊ – ‘ಒಂದೆಲಗ’ ಪುಸ್ತಕವ ಎನ್ನ ಕೈಲಿ ಮಡಿಗಿದವು. ಪುಸ್ತಕವ ಬಿಡುಸಿ ನೋಡಿಯಪ್ಪಗ ಎನಗೆ ಸಂತೋಷವೂ ಆಶ್ಚರ್ಯವೂ ಒಟ್ಟಿಂಗೆ ಆತು. ನಮ್ಮ ಅಬ್ಬೆ ಭಾಷೆಲಿ ಹೀಂಗಿಪ್ಪ ಒಂದು ಪುಸ್ತಕ ಬೈಂದನ್ನೆ! ಹೇಳಿ ಆಶ್ಚರ್ಯ. ಹವ್ಯಕ ಭಾಷೆಲಿ ತೆರೆಮರೆಲಿ ಬರವವು ಹಲವು ಜೆನಂಗೊ ಇದ್ದವು ಹೇಳಿ ಸಂತೋಷ. ಒಪ್ಪಣ್ಣನ ಒಪ್ಪಂಗೊ ಪುಸ್ತಕಲ್ಲಿ ಉಪಯುಕ್ತವಾದ ಹವ್ಯಕ ಭಾಷೆ, ಸಾಹಿತ್ಯ, ಸಂಸ್ಕೃತಿ, ಆಚಾರ-ವಿಚಾರ ಮುಂತಾದ ಹಲವು ವಿಷಯಂಗೊಕ್ಕೆ ಸಂಬಂಧಿಸಿದ ಲೇಖನಂಗಳ ಕಂಡು ಕೊಶಿ ಆತು. ಬೈಲಿಂಗೆ ಒಪ್ಪಣ್ಣ ಬೆನ್ನೆಲುಬು ಇದ್ದಾಂಗೆ ಹೇಳ್ವದು ಗೊಂತಾತು.
ಚೆನ್ನೈಭಾವ° ಮನ್ನೆ ಆನುದೆ ಭರಣ್ಯ ಹರಿಕೃಷ್ಣಣ್ಣಂದೆ 2005ರಲ್ಲಿ ಸಂಪಾದಿಸಿ ಹವ್ಯಕ ಮಹಾಸಭೆ ಬೆಂಗಳೂರು ಪ್ರಕಟಮಾಡಿದ ಹವ್ಯಕ ಪಡೆನುಡಿ ಕೋಶ – ‘ನುಡಿ ಸಂಸ್ಕೃತಿ’ಯ ಬೈಲಿಂಗೆ ಪರಿಚಯ ಮಾಡ್ಸಿದ್ದವು ‘ಹವ್ಯಕ ಭಾಷೆ ಸಾಹಿತ್ಯಕ್ಕೆ ಪ್ರೋತ್ಸಾಹ ಕೊಡೆಕು’ ಹೇಳ್ವ ಎನ್ನ ಅಭಿಪ್ರಾಯ ಲೇಖನವ ಇಲ್ಲಿ ನಿಂಗಳೆದುರೆ ಮಡಿಗಿದ್ದವು. ಎನ್ನ ಬಗ್ಗೆ, ಎನ್ನ ಕೃತಿಗಳ ಬಗ್ಗೆ ತಕ್ಕಮಟ್ಟಿಂಗೆ ನಿಂಗೊಗೆ ಗೊಂತಾಗಿಕ್ಕು ಹೇಳಿ ಗ್ರೇಶುತ್ತೆ. ಇದು ನಮ್ಮ ಅಬ್ಬೆ ಭಾಷೆಗೆ ಎನ್ನ ಒಂದು ಅಳಿಲಸೇವೆ ಮಾಂತ್ರ. ಬೈಲನೆಂಟ್ರುಗೊ ಆದ ನಿಂಗೊ ಈ ಬಗ್ಗೆ ಸಂತೋಷ ಮೆಚ್ಚುಗೆ ತಿಳುಶುತ್ತಾ ಇದ್ದಿ. ಸಲಹೆ ಸೂಚನೆ ಮಾರ್ಗದರ್ಶನ ನೀಡುತ್ತಾ ಇದ್ದಿ. ನಿಂಗಳೆಲ್ಲೋರ ಅಭಿಪ್ರಾಯ, ಸೂಚನೆ, ಸಲಹೆ, ಪ್ರತಿಕ್ರಿಯೆಗಳ ಆನು ಬಹಳ ಸಂತೋಷಲ್ಲಿ ಸ್ವೀಕಾರ ಮಾಡುತ್ತೆ. ನಿಂಗೊಗೆಲ್ಲರಿಂಗೂ ಎನ್ನ ಕೃತಜ್ಞತೆಗೊ, ನಮಸ್ಕಾರಂಗೊ.
ಆನು ಸಂಗ್ರಹಿಸಿ ಪ್ರಕಟಣೆ ಆದ ‘ಹವ್ಯಕ ಗಾದೆಗಳು’ – ಆ ಗಾದೆಗೊಕ್ಕೆ ಬೇರೆ ಬೇರೆ ಊರಿಲ್ಲಿ ಪಾಠಾಂತರ (ವ್ಯತ್ಯಾಸ) ಇಪ್ಪಲೂ ಸಾಕು. ಗಾದೆಗೊ ಆಡುಬಾಷೆಲಿ ಇಪ್ಪಕಾರಣ ಬೇರೆ ಬೇರೆ ಕಡೆಲಿ ಬೇರೆ ಬೇರೆ ರೀತಿಲಿ ಇಪ್ಪಲೂ ಸಾಕು. ತಿಳುದೋರು ಇದರ ಗಮನುಸೆಕು ಹೇದು ಕೇಳಿಗೊಳ್ತೆ. ಎನ್ನದೇ ಸರಿ ಹೇಳ್ತ ಹಠ ಇಲ್ಲೆ.
ಎನ್ನ ಬೈಲಿಂಗೆ ಇಳುಶಿದ ನಮ್ಮ ಚೆನ್ನೈಭಾವಂಗೆ, ಪ್ರತಿಕ್ರಿಯೆ, ಸಂತೋಷ, ಮೆಚ್ಚುಗೆ ವ್ಯಕ್ತಪಡಿಸಿದ, ಸಲಹೆ-ಸೂಚನೆ ಕೊಟ್ಟ ರಘು ಮುಳಿಯ, ಪವನಜ ಮಾವ°, ವಿಜಯತ್ತೆ, ಬಾಲ ಮಧುರಕಾನನ, ಉಡುಪುಮೂಲೆ ಅಪ್ಪಚ್ಚಿ, ಎಸ್. ಕೆ. ಗೋಪಾಲಣ್ಣ, ಡಾ. ಲಕ್ಷ್ಮೀ ಜಿ ಪ್ರಸಾದ್, ಸುಭಾಶಿಣಿ ಹಿರಣ್ಯ, ತೆಕ್ಕುಂಜ ಕುಮಾರ ಮಾವ°, ಕೆ. ವೆಂಕಟರಮಣಣ್ಣ, ಶರ್ಮಪ್ಪಚ್ಚಿ, ಪಾರ್ವತಿ ಮರಕಿಣಿ ಮದಲಾದ ಸಮಸ್ತ ಬೈಲ ಅಕ್ಕ°, ಭಾವ° ನೆಂಟ್ರುಗೊಕ್ಕೆ ಎನ್ನ ಹಾರ್ದಿಕ ಕೃತಜ್ಞತೆಗೊ.
ನಾವೆಲ್ಲ ಸೇರಿ ನಮ್ಮ ಹವ್ಯಕ ಭಾಷೆಯ, ಸಾಹಿತ್ಯವ ಒಳುಶಲೆ ಬೆಳುಶಲೆ ನಮ್ಮಿಂದ ಎಡಿಗಾದ ಸಕಾಯ, ಸಹಕಾರ, ಪ್ರಯತ್ನವ ಮಾಡುವೊ° ಆಗದ? . ಹರೇ ರಾಮ.
ಮುಕ್ತಕಂಗೊ ಲಾಯಿಕಿದ್ದು..
[“………ಏರಿಳಿತ ಎಂದಿಂಗು ಇಕ್ಕು ಮುದ್ದುತಮ್ಮ ||”
“………ಶಾಂತಿ ಸಹನೆಯು ಬೇಕು ಮುದ್ದುತಮ್ಮ ||] ಗಾದೆ ಮಾತಿನ ಹಾ೦ಗೆ ಮರವಲಾಗದ್ದ ಸಾಲುಗೊ!ಮುಕ್ತಕ೦ಗೊಬಹಳ ಮೆಚ್ಚಿಗೆ ಆತು.ಅಭಿನ೦ದನಗೊ.